ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ರಘುನಂದನ ರವರ ಬ್ಲಾಗ್

ನೀರಿನ ಮುಂದೆ ನಾವ್ಯಾರು? - ಭಾಗ ಎರಡು

April 7, 2006 - 9:49pm — ರಘುನಂದನ

(ಮೊದಲನೆ ಭಾಗವನ್ನು ಓದಿರದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿರಿ http://sampada.net/node/1412)

ಕೈ ಸೋಲಲು ಆರಂಭವಾಯ್ತು, ಒಂದೇ ಒಂದು ಅರೆಚಣ (fraction of a second?) ನಿಂತರೆ ಇನ್ನೊಂದಿಷ್ಟು ಜೋರಾಗಿ ಕೈಬೀಸಬಹುದು ಎನ್ನಿಸಿ ಕಾಲು ನೆಲಕ್ಕಿಡಲು ಪ್ರಯತ್ನಿಸಿದೆ ಎದೆ ಝಲ್ಲೆಂದಿತು! ನೆಲವೇ ತಾಕುತ್ತಿಲ್ಲ ಕಾಲಿಗೆ! ಮಾತ್ರವಲ್ಲ ಅಷ್ಟು ಮಾತ್ರದ ಈಜನ್ನು ನಿಲ್ಲಿಸಿದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಇನ್ನೆಲ್ಲಿಗೋ ಹೋಗತೊಡಗಿದೆ. "ಮುಗೀತಲೆ ಮಗನೆ ನಿನ್ ವ್ಯವಹಾರ!" ಅಂತ ಮನಸ್ಸಿನಲ್ಲಿ ಅಂದುಕೊಂಡೆ, ಆದ್ರೂ ಜೀವದಾಸೆಯಿತ್ತಲ್ಲ? ನೋಡೋಣ ಅಂದುಕೊಂಡು ಕೈ ಎಳೆದೆಳೆದು ಹೆಣಗಾಡಿದೆ. ಏನು ಪ್ರಯೋಜನ ಸುಮ್ಮನೆ ಇನ್ನೊಂದಿಷ್ಟು ಆಯಾಸ ಹೆಚ್ಚಿತಷ್ಟೆ. ನನ್ನ ಸ್ನೇಹಿತರಿಗೆ ಇದ್ಯಾವುದರ ಪರಿವೆಯೇ ಇಲ್ಲ. ಅವರ ಪಾಡಿಗೆ ಅವರು ಇನ್ನೊಂದು ದಡದಲ್ಲಿ ಕಲ್ಲಂಗಡಿ ಹಣ್ಣನ್ನು ಮೆಲ್ಲುವುದರಲ್ಲಿ ಮಗ್ನರು Sad ಈಚೆಯ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಕೆಲವು ಹೆಂಗಸರೂ, ಚಡ್ಡಿಯನ್ನೋ ಇನ್ನೇನನ್ನೊ ಹಿಂಡುತ್ತಲೋ, ಬೀಡಿ ಸೇದುತ್ತಲೋ ನಿಂತಿದ್ದ ಕೆಲ ಗಂಡಸರೂ ನನ್ನ ಪರಿಸ್ಥಿತಿಯನ್ನು ಗರಬಡಿದವರ ತರಹ ನಿಂತು ನೋಡ್ತಾ ಇದ್ದಾರೆ. ಅವರಲ್ಲಿ ಕೆಲವರು ಒಳ್ಳೆಯ ಈಜುಪಟುಗಳು ಎಂಬುದು ನನಗೆ ಅಂತಹ ಸಾಯುವ ಪರಿಸ್ಥಿತಿಯಲ್ಲಿಯೂ ತಿಳಿಯಿತು. ಆದರೆ ಅವರೇ ನನ್ನನ್ನು ನೋಡಿ ಮುಗಿದ ಕಥೆ ಅಂತ ಅಂದುಕೊಳ್ಳುತ್ತಿದ್ದುದು (ಅಥವಾ ನನಗೆ ಹಾಗನ್ನಿಸಿದ್ದುದು) ನನ್ನನ್ನು ಇನ್ನಷ್ಟು ನಿರ್ವಿಣ್ಣನನ್ನಾಗಿಸಿತು. ಈ ಮಧ್ಯೆ ನೀರಿನ ಹೊಡೆತದಿಂದ ಪಾರಾಗಲು ಕೊನೆಯ ಬಾರಿ ಕೈಬೀಸಿದರಾಯ್ತು ಅಂದುಕೊಂಡೆ ಆದರೆ ಕೈಯೆತ್ತಲು ಆಗಲೇ ಇಲ್ಲ. ನೀರಿನೊಂದಿಗೆ ಕೊಚ್ಚಿಹೋಗಲು ನಾನೇ ಇನ್ನೊಂದಿಷ್ಟು ಪ್ರಯತ್ನ ಮಾಡಿದಂತಾಯ್ತು. "ಸತ್ತೇ ಹೋದರಾಯ್ತು ಬಿಡು" ಅಂದುಕೊಂಡೆ. ಆದರೆ ಕೊನೆಕ್ಷಣ ಅದೆಲ್ಲಿಂದ ಪ್ರೇರಣೆಯಾಯ್ತೋ ಏನೋ ಗೊತ್ತಿಲ್ಲ "ಜೈ ಭಜರಂಗಬಲಿ" ಎಂದು ನೀರಿನಲ್ಲಿ ಕೈ ಎಳೆದು ಹಾಕಿದೆ. ಅಷ್ಟೆ! ಯಾರೋ ನನ್ನನ್ನು ಬಲವಾಗಿ ದಡದೆಡೆಗೆ ನೂಕಿದಂತಾಯ್ತು. ಇನ್ನೊಮ್ಮೆ "ಜೈ ಭಜರಂಗಬಲಿ" ಎಂದೆ ಈ ಬಾರಿ ಇನ್ನಷ್ಟು ವೇಗದೊಂದಿಗೆ ಮುಂದೆ ಬಂದೆ. ನೋಡೋಣ ಎಂದು ಕಾಲಿಟ್ಟರೆ ನುಣುಪಾದಕಲ್ಲುರಾಶಿ ಸಿಕ್ಕೇ ಬಿಟ್ಟಿತು! ಮಾತ್ರವಲ್ಲ ಪ್ರವಾಹದ ವೇಗ ಗಣನೀಯವಾಗಿ ಕಮ್ಮಿಯಿರುವ ಜಾಗಕ್ಕೆ ಬಂದುಬಿಟ್ಟಿದ್ದೇನೆ. ಸಾಕಪ್ಪ ಸಾಕು ಎನಿಸಿ ಈಜು ನಿಲ್ಲಿಸಿ ನಡೆದುಕೊಂಡು ಬಂದು ದಡಮುಟ್ಟಿ ಹತ್ತು ನಿಮಿಷ ಕೂತುಕೊಂಡೆ. ಸ್ವಲ್ಪ ಸಮಯದ ನಂತರ ನನ್ನ ಸ್ನೇಹಿತರು ಸಹ ಒಬ್ಬೊಬ್ಬರಾಗಿ ಬಂದರು. ಎಲ್ಲರಿಗೂ ನೀರು ಸ್ವಲ್ಪ ಸ್ವಲ್ಪ ತನ್ನ ಆರ್ಭಟವನ್ನು ತೋರಿಸಿಯೇ ಬಿಟ್ಟಿತ್ತು. ಒಬ್ಬ "ಏನ್ಲೇ ನೀರು ಇದ್ಕಿದ್ದಂಗೆ ಜಾಸ್ತಿ ಆಗೇತೀ?" ಅಂದರೆ ಇನ್ನೊಬ್ಬ "ನೀನೇನ್ಲೆ ಇದ್ಕಿದ್ದಂಗೆ ಬಂದ್ಯಲ? ನೀರಿತ್ತೇನs ಆವಾಗs" ಅಂತ ಅನ್ನುವವ. ಇನ್ನೊಬ್ಬನಂತೂ "ಲೇ ನಿಂಗೇನೂ ಆಗಿಲ್ಲೇನು? ನಾನಂತ್ರೂ ಸೆಳುವಿನಾಗೆ ಸಿಕ್ಕೊಂಡೇ ಬಿಟ್ಟಿದ್ನ್ಯಲೇ, ಹೆಂಗೋ ಬಚಾವಾದೆ ನೋಡು" ಅಂದ. ಅವರ್ಯಾರಿಗೂ ಫಜೀತಿಗೀಡಾಗಿದ್ದ ನನ್ನ ಅವಸ್ಥೆ ಗೊತ್ತಾಗಿರಲೇ ಇಲ್ಲ. ನನಗೆ ದೇವರ ಶಕ್ತಿಯ ಪರಿಚಯವಾಯ್ತೋ ಇಲ್ವೋ ಅವನ ನಾಮದ ಬಲವಂತೂ ಗೊತ್ತಾಯ್ತು.

ಮನೆಯ ದಾರಿ ಹಿಡಿದ ನಾವೆಲ್ಲ ದಾರಿಯಲ್ಲೇ ಯಾರದೋ ಮರದಿಂದ ಅರ್ಧಮರ್ಧ ಹಣ್ಣಾದಂತಿದ್ದ ಪಪ್ಪಾಯಿಕಾಯಿ ಕಿತ್ತು ಗಪಗಪನೆ ತಿಂದೆವು. ಅದರಿಂದ ಒಸರಿದ ಹಾಲು ತನ್ನ ಪರಿಣಾಮ ತೋರಿ ನಾಲಿಗೆ, ತುಟಿಯೆಲ್ಲ ಒಡೆದು ಉರಿಯತೊಡಗಿತು. ಎಲ್ಲರಿಗೂ ಸಿಕ್ಕಾಪಟ್ಟೆ ಸುಸ್ತಾಗಿಹೋಗಿದ್ದರಿಂದ ಅದು ಹಣ್ಣೋ, ಕಾಯೋ ಅಥವ ಎರಡರ ಮಧ್ಯದ ಸ್ಥಿತಿಯ ದೋರಗಾಯೋ ಎಂದು ನೋಡುವ ವಿವೇಚನೆಯನ್ನೇ ಕಳೆದುಕೊಂಡಿದ್ದೆವು.

ರಾತ್ರಿ ನಾನು ನದಿಯಲ್ಲಿನ ಘಟನೆಯನ್ನೇ ನೆನೆದು ನೆನೆದು "ಶಿವ್ರಾತ್ರಿಬಂಡಿಗೆ ಹೋಗಿ ತಲೆ ಹೊಡ್ಕೊಂಡಿದ್ರ ನನ್ಕಥಿ ಮುಗದ ಹೋಗಿರsದು, ಸುಳ್ಯಾಗ ಸಿಕ್ಕೊಂಡಿದ್ರ ಅದು ನನ್ನs ತಿರ್ಗೀಸಿ ತಿರ್ಗೀಸಿ ಒಗದಿರ್ತಿತ್ತು. ಇನ್ಮ್ಯಾಲೆ ಸತ್ರೂ (!?) ನದೀಗೆ ಹೋಗಬಾರದು" ಅಂತ ಏನೇನೋ ಶಪಥಗಳನ್ನು ಮಾಡಿದೆ. ಮತ್ತೆ ಮಾರನೇ ದಿನ ಯಥಾ ಪ್ರಕಾರ ನಮ್ಮ ಸ್ನೇಹಿತರು ಮನೆ ಮುಂದೆ ಬಂದು ನಿಂತರು, ನಮ್ಮಮ್ಮ "ನಡಿಯಪ ನದಿಗೆ, ಆsದ್ರ ಸ್ವಲುಪು ಬೇಗ ಬಾ" ಅಂದರು. ಭಗವಂತ ನನ್ನ ಶಪಥಕ್ಕೆ ಕೇವಲ ಒಂದು ರಾತ್ರಿಯ ಆಯಸ್ಸನ್ನು ದಯಪಾಲಿಸಿದ್ದ.!

======================

 ಆ ದಿನ ಯಾಕೇನೋ ಗೊತ್ತಿಲ್ಲ ಸಿಕ್ಕಾಪಟ್ಟೇ ಕೈ ನೋವು ಶುರುವಾಯ್ತು. ಅದೂ ಅಲ್ದೆ ನಾನು ಬೆಳಿಗ್ಗೆ ಊರಿಗೆ ಹೋಗುವ ತುರ್ತಿನಲ್ಲಿದ್ದೆ. ನನ್ನ ಅನುಭವವನ್ನು ಪೂರ್ತಿ ವಿವರಿಸಲು ಆಗಿರಲಿಲ್ಲ.ಈಗ ಊರಿಂದ ಬಂದಾಯ್ತು, ಕೈನೋವೂ ಹೋಗಿದೆ. ಹೀಗಾಗಿ ನನ್ನ ಅನುಭವವನ್ನು ಪೂರ್ತಿಯಾಗಿ ವಿವರಿಸಿದ್ದೇನೆ. ಇದೇ ರೀತಿ ಇನ್ನೂ ಕೆಲವು ಅನುಭವಗಳು ನೆನಪಿನಾಗಸದಲ್ಲಿ ಆಗಾಗ ತೇಲಿಬಂದು ನನ್ನನ್ನು ಮುದಗೊಳಿಸುತ್ತಿರುತ್ತವೆ. ಸ್ನೇಹಿತರೇ, ನಾನು ದೇವರ ಅಸ್ತಿತ್ವದಲ್ಲಿ ನಂಬಿಕೆಯಿರುವ ವ್ಯಕ್ತಿ. ಆದರೆ ನಾನು ನಂಬಿರುವ ಸಿದ್ಧಾಂತವನ್ನು ಬಲವಂತವಾಗಿ ಇನ್ನೊಬ್ಬರ ಮೇಲೆ ಹೇರುವುದು ನನಗೆ ಇಷ್ಟವಿಲ್ಲ. ತುಂಗಭದ್ರೆಯಲ್ಲಿ ನಾನು ಕೊಚ್ಚಿ ಹೋಗಲೇಬೇಕಿತ್ತು ಎನ್ನುವ ವಿಷಯ ನಮ್ಮೂರ ನದಿಯ ಹರಹು ಪರಿಚಯವಿರುವವರಿಗೆ ಮಾತ್ರ ಮನನವಾಗುವ ಅಂಶ. ಹಾಗೆಯೆ ಶ್ರೀರಾಮದೇವರ ಭಕ್ತಾಗ್ರಣಿಯಾದ ಹನುಮನ ನಾಮದ ಬಲದಿಂದಲೇ ನಾನು ಬದುಕಿ ಉಳಿದದ್ದು ಸಾಧ್ಯ ಎನ್ನುವ ಅಂಶ ದೇವರ ಅಸ್ತಿತ್ವವನ್ನು ಅನುಭೂತಿಗೆ ತಂದುಕೊಂಡವರಿಗೆ ಮಾತ್ರ ಮನನವಾಗುವ ವಿಷಯ.

=======================

ಎನಗಿಂತ ಕಿರಿಯರಿಲ್ಲ

ರಘುನಂದನ

~.~
  • ರಘುನಂದನ ರವರ ಬ್ಲಾಗ್
  • Login or register to post comments
  • 503 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2006 - 10:52pm — Sunil Jayaprakash

ಧನ್ಯವಾದ: ನೀರಿನ ಮುಂದೆ ನಾವ್ಯಾರು? - ಭಾಗ ಎರಡು

Sunil Jayaprakash's picture

ಜಯ ಜಯ ಹೇ ಹನುಮಂತಾ......ಧನ್ಯವಾದಗಳು ನಿಮಗೆ. ಎರಡು ಕಾರಣಗಳಿಗೆ.

೧. ಸ್ಪಷ್ಟವಾದ ಮತ್ತು ಸ್ವಚ್ಛವಾದ ಕನ್ನಡ ಬರವಣಿಗೆಗೆ ಹಾಗು ಸುಂದರವಾದ ನಿರೂಪಣೆಗೆ.
೨. ನಿಮ್ಮ ಅನುಭವ ಓದಿದ ಮೇಲೆ, ಈಗ್ಗೆ ಕೆಲವು ವರ್ಷಗಳ ಹಿಂದೆ ನಮ್ಮ ತಾತ ಅವರ ಜೀವನದಲ್ಲಿ ನಡೆದ ಒಂದು ಘಟನೆ ವಿವರಿಸಿದ್ದನು ಜ್ಞಾಪಿಸಿದ್ದಕ್ಕೆ. ಸಾಧ್ಯವಾದಾಗ ಸಂಪದಿಗರೊಂದಿಗೆ ಅದನ್ನು ಹಂಚಿಕೊಳ್ಳುತ್ತೇನೆ.

ನಮ್ಮ ಅರಿವಿಗೆ ಬಂದಂತಹ ಇಂತಹ ಘಟನೆಗಳೇ ನಮ್ಮ ನಮ್ಮ ನಂಬಿಕೆಗಳಿಗೆ ಆಧಾರವಾಗಿರುವವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದಿನ ಸುದ್ದಿ...!
  • ಝೆನ ಕಥೆ ೩೬: ಛತ್ರ
  • ಬೈಟೊ ಕಾಫಿ !!! - ೧
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
  • ನಾಳೆ ನೀವೂ ಮಾಯ.............
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator