ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಸೇದು, ಸಲೀಸು...ಮತ್ತು ಇತರೆ ಒರೆಗಳು
ನನಗೆ ಹಾಗೆ ಈ ಒರೆಗಳ ಬಳಕೆ ಬಲು ಸೋಜಿಗ ಅನ್ನಿಸಿತು. ಅದಕ್ಕಾಗಿ ಹಂಚಿಕೊಳ್ಳುತ್ತಿದ್ದೀನಿ
ಸೇದು ( Ka. sēdu, sēndu to draw up (water from a well), pull in (as string of kite), draw in with the mouth, draw in with the breath (snuff, etc.), draw or smoke (pipe or cheroot, etc.), pull along, drag; sēdu drawing, etc)
೧. ಅವನು ಬೀಡಿ ಸೇದುತ್ತಾನೆ/ಸೇಯುತ್ತಾನೆ/ಸೇಯ್ತಾನೆ.
೨. ಅವಳು ಬಾವಿಯಿಂದ ನೀರನ್ನು ಸೇದುತ್ತಾಳೆ/ಸೇಯುತ್ತಾಳೆ/ಸೇಯ್ತಳೆ.
ಬೀಡಿಗೂ <--> ಬಾವಿಗೂ ಎತ್ತಣಿಂದೆತ್ತ ನಂಟಯ್ಯಾ? ಎರಡಕ್ಕೂ ಒಂದೆ "ಸೇದು"...:) ಇದು ಅಣ್ಣೆ(ಅಚ್ಚ) ಒರೆ. ![]()
ಸಲೀಸು
= ಸುಲಭ, ಸರಾಗ....ಇದು ಪಾರ್ಸಿಯಿಂದ ಬಂದಿರುವ ಒರೆಯೆ?? ಬಲ್ಲವರು ತಿಳಿಸಿ
ಅವನು ಗುಂಡ್ ಕಲ್ನ ಏನ್ ಸಲೀಸಾಗಿ ಎತ್ದ ಮಾರಾಯ!! ಅನ್ನುವುದುಂಟು
ಅನಾಮತ್ತು
= ಒಂದೇ ಸರಿ, ಒಂದೇ ಸಲ, ಒಂದೇ ಏಟಿಗೆ...ಹೀಗೆ ಬಳಕೆಯಿಲ್ಲಿದೆ.....ಈ ಒರೆ ಎಲ್ಲಿಂದ ಬಂತು??? :
ಅವನು ಅಷ್ಟು ತೂಕದ ಕಲ್ಲನ್ನು ಅನಾಮತ್ತಾಗಿ ಎತ್ತಿ ಬಿಸಾಡಿದ !! ಅನ್ನುವುದುಂಟು

- ವೈಭವ ರವರ ಬ್ಲಾಗ್
- Login or register to post comments
- 318 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಸೇದು, ಸಲೀಸು...ಮತ್ತು ಇತರೆ ಒರೆಗಳು
ಸಲೀಸು/ಸಲಿಸು
http://dsal.uchicago.edu/cgi-bin/philologic/getobject.pl?c.1:1:193.burrow
Ka. sal (sand-) to enter, engage in, associate oneself to, agree to, accrue, arise, enter upon a course, pass, be current, be in use, pass by general consent, be valid, proper or fit, pass from one person to another, be given, be paid, become agreeable, become well known or famous;
sala entering, a coming to pass, a time;
salapu, salavu, salahu to forward, foster, tend, preserve, bring up;
salavu entrance, validity, force, valid reason; salahuvike fostering;
salike delivering over, paying, payment;
salige, saluge familiar intercourse, familiarity, excessive familiarity, indulgence, improper familiarity, freedom;
salisu to cause to enter, execute, perform, use, employ, fulfil, give, bestow, show, spend;
saluha entering, current, onward motion;
sale currently, perpetually, constantly; payment, the sum paid;
sallisu to serve up food;
selavu leave, permission, order.
ಇಲ್ಲಿ 'ಸಲಿಗೆ' ನೋಡಿದ, 'ಸಲಿಸು' ಕೂಡ with freedom, with familarity, with ease ಅಂತ ತಿಳಿಯಬವುದೇನೋ!!
ಸಲಿಸು/ಸಲೀಸು ನಮ್ಮ ಕನ್ನಡದ್ದೇ ಇರಬವುದು!!
======================================
ಉ: ಸೇದು, ಸಲೀಸು...ಮತ್ತು ಇತರೆ ಒರೆಗಳು
ಅನಾಮತ್ = only a moment. ಸಕ್ಕದ; ಅಂತ ನನ್ನ ಗೆಳೆಯ ಹೇಳಿದನು!
======================================