ಶ್ಯಾಮ ಕಶ್ಯಪ
ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.
ಮೈಸೂರು ಅನಂತಸ್ವಾಮಿ, ಡಾಕ್ಟರ್ ಡ್ರೇ, ಸ್ಲೇಯರ್
ಕೆಲವೊಮ್ಮೆ ಸಂಗೀತದಲ್ಲಿ ರಚನೆಯಾಗುವ ಹೊಸ ಕೃತಿಗಳು ಹೊಸದೊಂದು ಸಂಗೀತದ ಶೈಲಿಯನ್ನೇ ಹುಟ್ಟು ಹಾಕುತ್ತವೆ ಅಥವ ಇರುವಂತಹ ವಿಧಾನಕ್ಕೇ ಹೊಸ ಅರ್ಥವನ್ನು ಕೊಡುತ್ತವೆ. ಅಂತಹ ರಚನಾಕಾರರು ಈ ಮೇಲಿನ ಮೂವರು.
ಅಷ್ಟನ್ನು ಬಿಟ್ಟರೆ ಮತ್ಯಾವ ಸ್ವಾಮ್ಯವೂ ಇಲ್ಲ ಇವರ ನಡುವೆ. ಅನಂತಸ್ವಾಮಿ ಕನ್ನಡ ಭಾವಗೀತೆಗಳ ಜಗತ್ತಿನಲ್ಲಿ ಸುಪ್ರಸಿದ್ಧರು, ಡಾಕ್ಟರ್ ಡ್ರೇ ಪಾಶ್ಚಿಮಾತ್ಯರಲ್ಲಿ ಅತ್ಯಂತ ಕುಪ್ರಸಿದ್ಧವಾದ gangsta rap ಎಂಬ ಹೊಸ ಶೈಲಿಯನ್ನು ಹುಟ್ಟುಹಾಕಿ ಬ್ಲಾಕ್ ಜನರಿಗೆ ಹೊಸ ದಾರಿ ಹಿಡಸಿದ ಗುರು. ಸ್ಲೇಯರ್ heavy metal ಸಂಗೀತಕ್ಕೆ ಹೊಸ ತಿರುವು ಕೊಟ್ಟು thrash metal ಎಂಬ ಹೊಸ ಶೈಲಿಗೆ ನಾಂದಿ ಇಟ್ಟ ವಾದ್ಯವೃಂದ.
ಆಶ್ಚರ್ಯದ ಸಂಗತಿಯೇನೆಂದರೆ ಇವರಲ್ಲಿ ಯಾರ ಹೆಸರು ಬಂದರೂ ಸಾಕು, ಅವರವರ ಭವ್ಯಕೃತಿಗಳು ತಟ್ಟನೆ ಮನಸ್ಸಿಗೆ ಬರುತ್ತವೆ. ಮೈಸೂರು ಅನಂತಸ್ವಾಮಿಯವರ ಮೈಸೂರು ಮಲ್ಲಿಗೆ ಸಂಕಲನ, ಡಾಕ್ಟರ್ ಡ್ರೇ ನ Chronic ಮತ್ತು ಸ್ಲೇಯರ್ ಬಾಂಡಿನ Reign in Blood ಇಂದಿಗೂ ಆಯಾ ಸಂಗೀತಶೈಲಿಗಳಲ್ಲಿ ಮೈಲಿಗಲ್ಲುಗಳು.
ಮೈಸೂರು ಮಲ್ಲಿಗೆಯ ಮಧುರಭಾವ, ಕ್ರಾನಿಕ್ ನ ಮನಸೆಳೆಯುವ ಲಯ, ಕೊಳಕು ಸಾಹಿತ್ಯ
ಮತ್ತು Reign in Blood ನ ಕಿವಿಗಡಚಿಕ್ಕುವ ಕಠೋರತೆ ಅಪ್ರತಿಮವಾದರೂ ಒಂದಕ್ಕೊಂದನ್ನು ಹೋಲಿಸುವುದೇನು, ಒಟ್ಟಿಗೆ ನೆನೆಸಿಕೊಳಳಲೂ ಕೂಡ ಅಸಾಧ್ಯವಿನ್ನುವಷ್ಟರ ಮಟ್ಟಿಗೆ ವ್ಯತ್ಯಾಸ... ಆದರೆ ಪ್ರತೀ ರಚನೆಗೂ ಒಂದೇ ಬಗೆಯ ಹೆಗ್ಗಳಿಕೆಯಿರುವುದು ಸೋಜಿಗದ ವಿಷಯವೇ ಸರಿ!

- ಶ್ಯಾಮ ಕಶ್ಯಪ ರವರ ಬ್ಲಾಗ್
- Login or register to post comments
- 944 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಐಟ್ರಾನ್ಸ್ ಎಸ್ ಸಿ ಐ ಎಮ್
ಶ್ಯಾಮ್, ನಿಮಗೆ ಪ್ಯಾಚ್ ಮಾಡಿದ m17n ಕನ್ನಡ ಐಟ್ರಾನ್ಸ್ ಫೈಲ್ ಮೇಯ್ಲ್ ಮಾಡಿರುವೆ. ಅದನ್ನ /usr/share/m17n ಗೆ ಕಾಪಿ ಮಾಡಿಕೊಳ್ಳಿ.
ಹೊಸ ಫೈಲಿನಲ್ಲಿ ಈ ಕೆಳಗಿನಂತೆ ಬದಲಾಯಿಸಿರುವೆ:
ee - ಏ
RRi - ಋ
ಹಾಗೂ ಮತ್ತಷ್ಟು ಬದಲಾವಣೆಗಳಿವೆ. ಉಳಿದ ಬದಲಾವಣೆಗಳನ್ನು ತಿಳಿಯಲು ಮೇಯ್ಲ್ ಮಾಡಿ.
- ಹೆಚ್ ಪಿ.
ಮೈಸೂರು ಮಲ್ಲಿಗೆ - ಮೈಸೂರು ಅನಂತಸ್ವಾಮಿ?
ಬಹುಶ: ನೀವು ಸಿ. ಅಶ್ವತ್ಥ ಅವರ ಬಗ್ಗೆ ಹೇಳುತ್ತಿದ್ದೀರಿ.
ಮೈಸೂರು ಮಲ್ಲಿಗೆ ಭಾವಗೀತೆಗಳ ಧ್ವನಿಸುರುಳಿಗೆ ಮತ್ತು ಮೈಸೂರು ಮಲ್ಲಿಗೆ ಚಲನಚಿತ್ರಕ್ಕೆ ಸಂಗೀತ ಒದಗಿಸಿದವರು ಸಿ. ಅಶ್ವತ್ಥ ಅವರು .
ಮೈಸೂರು ಅನಂತಸ್ವಾಮಿ ಅವರಿಂದ ಮೈಸೂರು ಮಲ್ಲಿಗೆ ಧ್ವನಿಸುರುಳಿ ಬಂದ ಹಾಗಿಲ್ಲ.
ನನ್ನ ಪ್ರಕಾರ ಸಿ. ಅಶ್ವತ್ಥ ಅವರು ಅದ್ಭುತ ಸಂಗೀತಕಾರರು.
ಪ್ರತ್ಯೇಕವಾಗಿ ಇಲ್ಲ
ಆದರೂ ಮೈಸೂರು ಅನಂತಸ್ವಾಮಿಯವರೂ ಅವರ ನಿರ್ದೇಶನದಲ್ಲಿ ಅವರ ಬಳಗದವರೂ ಮೈಸೂರು ಮಲ್ಲಿಗೆಯ ಕೆಲವಾರು ಕವನಗಳನ್ನು ಹಾಡಿದ್ದಾರೆ. MSILನವರು ಮಾಡಿರುವ ಕ್ಯಾಸೆಟ್ಟುಗಳ ಕಟ್ಟನ್ನು ನೋಡಿ.
ಮೈಸೂರು ಅನಂತಸ್ವಾಮಿ - ಮೈಸೂರು ಮಲ್ಲಿಗೆ
ಅನಂತಸ್ವಾಮಿಯವರ ಸಂಗೀತ ಸಂಯೊಜನೆಯಲ್ಲಿ ಮೈಸೂರು ಮಲ್ಲಿಗೆಯ ಕೆಲವು ಭಾವಗೀತೆಗಳನ್ನು ಇಲ್ಲಿ ಕೇಳಬಹುದು. MSIL ಗೀತೆಗಳಲ್ಲಿ ಹುಡುಕಿ ನೋಡಿ
ಇತರ ಆಲ್ಬಮ್ಮುಗಳ preview
ಡಾಕ್ಟರ್ ಡ್ರೇ: ಕ್ರಾನಿಕ್
ಸ್ಲೇಯರ್: ರೀನ್ ಇನ್ ಬ್ಲಡ್
-- ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ