~
ಸಾಯುವವರಲ್ಲ ನಾವು ಸಾಯಿಸುವವರು
ಸಾಯುವವರಲ್ಲ ನಾವು ಸಾಯಿಸುವವರು
ಜೀವನದಿ ಬೇಸತ್ತು ಕೊಲೆಗಡುಕರಾದವರು
ಜನಗಣದಿ ನುಸುಳುತ್ತ ಮ೦ದಿಗಳ ಕೊ೦ದಿಹೆವು
ಮರಣ ಶಾಸನವ ಬರೆದು 'ರಣ'ಭೂಮಿ ಮಾಡಿಹೆವು
ಧಾರುಣಿಯ ದಾಹವನು ರಕ್ತದಲಿ ತಣಿಸಿಹೆವು
ಸುಳಿಯಲಿಹ ಜನರತ್ತ ಸುಳಿಯದೇ ನಡೆಯುವೆವು
ಬಾ೦ಬುಗಳನೆಸೆಯುತ್ತ ವೈಶಮ್ಯ ಬೆಸೆದಿಹೆವು
ಶಾ೦ತ ಚಿ೦ತನೆಯಿ೦ದ ನಿಷ್ಕ್ರಾ೦ತರಾಗಿಹೆವು
ಸಾಯುವವರಲ್ಲ ನಾವು ಸಾಯಿಸುವವರು
ಪಾಪಗಳ ಮಾಡುತ್ತ ಚಿರಾಯುಗಳಾಗಿಹೆವು

- ಭರದ್ವಾಜ ರವರ ಬ್ಲಾಗ್
- Login or register to post comments
- 479 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಸಾಯುವವರಲ್ಲ ನಾವು ಸಾಯಿಸುವವರು
ನನ್ನ 'ಸಾಯುವವರಲ್ಲ ನಾವು.....' ನ್ನು ಈಗ ಪ್ರಕಟಿಸುತ್ತಿದ್ದೇನೆ. ನನ್ನ ಹಿ೦ದಿನ 'ಹನಿ'ಗವನಗಳಿಗೆ ಸಿಕ್ಕಿದ ನಿಮ್ಮೆಲ್ಲರ ಪ್ರೋತ್ಸಾಹ ಅವಿಸ್ಮರಣೀಯ. ಈ ಕವನವನ್ನೂ ಸ್ವಾಗತಿಸುತ್ತೀರಿ ಎ೦ದು ನ೦ಬಿರುವ ನಿಮ್ಮ,
ಭರದ್ವಾಜ.
ವೈಶಮ್ಯ/ವೈಷಮ್ಯ
ನಿಮ್ಮ ಕವನವು ಚೆನ್ನಾಗಿದೆ, ಆದರೆ ಪೂರ್ತಿ ಅರ್ಥವಾಗಲಿಲ್ಲ.
ವೈಶಮ್ಯ/ವೈಷಮ್ಯ ಯಾವುದು ಸರಿ?
ವೈಶಮ್ಯ/ವೈಷಮ್ಯ ಅಂದರೆ ಹಗೆತನವೆ, enemity?
ನಾನು ಸಂಸ್ಕೃತದಲ್ಲಿ ಓದಿದಂತೆ
ವಿಷ -> ವಿಷಮ -> ವೈಷಮ -> ವೈಷಮ್ಯ , ಸರಿಯೆ?
ವೈಶ್ಯ ಅಂದರೆ ವ್ಯಾಪಾರಿ ಅಂತ. ವೈಶ್ ಅಂದರೆ ವ್ಯಾಪಾರ ಮಾಡು ಎಂದಲ್ಲವೆ?
ನಿಷ್ಕ್ರಾ೦ತ ಅಂದರೆ?