ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ವಿಮರ್ಶೆ ಮತ್ತು ಮೀಮಾಂಸೆ
ನಾನು ಎಸ್.ಎಲ್. ಭೈರಪ್ಪನವರ "ಸತ್ಯ ಮತ್ತು ಸೌಂದರ್ಯ" ಪುಸ್ತಕವನ್ನು ಓದುತ್ತಿರುವಾಗ ಈ ಎರಡು ಪದಗಳನ್ನು ಎಡತಾಕಿದೆ :-
ವಿಮರ್ಶೆ ಮತ್ತು ಮೀಮಾಂಸೆ.
ನನ್ನ ಪ್ರಕಾರ ವಿಮರ್ಶೆ ಎನ್ನುವುದು ಒಂದು ಕೃತಿಯ ಬಗ್ಗೆ ಆಗುವ ಚರ್ಚೆ ( ಅದು ಒಂದು ಸಾಹಿತ್ಯ, ಚಿತ್ರಕಲೆ ಅಥವಾ ಸಿನಿಮಾ ಅಗಿರಬಹುದು) ಅಥವಾ ಅನಿಸಿಕೆಗಳು. ಈ ಚರ್ಚೆ ಮೇಲ್ನೋಟಕ್ಕೆ ಕಾಣ ಸಿಗುವ ಅಂಶಗಳನ್ನು ವ್ಯಕ್ಥಪಡಿಸುತ್ತದೆ
ಮೀಮಾಂಸೆ ( ಇದರ ಬಗ್ಗೆ ಮಾತಾನಾಡುವಷ್ಟು ಙ್ನಾನಿ ನಾನಲ್ಲ
ಆದರೂ ಪ್ರಯತ್ನಿಸುತ್ತೇನೆ
) ಬಹುಶಃ ಒಂದು ಕೃತಿಯ ಮೂಲ ಆಶಯ ಅಥವ ಅದರ ಒಳ ಅರ್ಥಗಳನ್ನು ಓರೆಗೆ ಹಚ್ಚುವ ಕೆಲಸ.
ಇವುಗಳ ಬಗ್ಗೆ ನಾವು, ಸಂಪದಿಗರು ವಿಸ್ತೃತ ವಿಚಾರ ವಿನಮಯ ಮಾಡೋಣವೆ?

- ವೈಭವ ರವರ ಬ್ಲಾಗ್
- Login or register to post comments
- 609 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಟಿಪ್ಪಣಿ: ವಿಮರ್ಶೆ ಮತ್ತು ಮೀಮಾಂಸೆ
ವೈಭವರವರೇ,
ಈ ಟಿಪ್ಪಣಿ ನೇರವಾಗಿ ಈ ಎಳೆಗೆ ಸಂಬಂಧಿಸಿದ್ದಲ್ಲ. ಸ್ವಲ್ಪ ಸಮಯದ ಹಿಂದೆ ಸಂಪದದಲ್ಲಿ ಈ ಮೀಮಾಂಸೆ ಪದವನ್ನು ಕುರಿತು ಸಣ್ಣ ಚರ್ಚೆ ನಡೆದಿತ್ತು, ಆದರೆ ಬೇರೆ ವಿಷಯಕ್ಕೆ ಸಂಬಂಧಪಟ್ಟಂತೆ.
ನೋಡಿ, ಪರಿತ್ಯಕ್ತ ಪ್ರೇಮದ ಸ್ವಗತ ಮೀಮಾಂಸೆ.
Re: ಟಿಪ್ಪಣಿ: ವಿಮರ್ಶೆ ಮತ್ತು ಮೀಮಾಂಸೆ
ಧನ್ಯವಾದಗಳು ಸುನಿಲ್,
ಆ ಲಿಂಕನ್ನು ನೋಡಿದೆ ಆದರೆ ಅಲ್ಲಿ ಚರ್ಚೆ ಬೇರೆ ದಿಕ್ಕಿನತ್ತ ಸಾಗಿದಂತೆ ಇದೆ.
ದಯವಿಟ್ಟು ಇದರೆ ಬಗ್ಗೆ ಇತರ ಸಂಪದರಿಂದ ಒಂದು ಒಳ್ಳೆಯ ಚರ್ಚೆ ನಡೆದರೆ ಚೆನ್ನಾಗಿರುತ್ತದೆ
ಜಿಎಸೆಸ್ ಅವರ ಡಾಕ್ಟರೇಟ್ ಪ್ರಬಂಧವು 'ಸೌಂದರ್ಯ ಮೀಮಾಂಸೆ" ಎಂದು ಎಲ್ಲೊ ಓದಿದ ನೆನಪು.
ಈ ಕೆಳಗಿನವುಗಳನ್ನು ತಿಳಿದುಕೊಳ್ಳಬೇಕೆಂಬ ಹಂಬಲ ನನ್ನನ್ನು ಕಾಡುತ್ತ ಇದೆ.
೧) ನಮ್ಮ ಕನ್ನಡದಲ್ಲಿ ವಿಮರ್ಶೆ ವಿಭಾಗವು ಯಾವ ಮಟ್ಟದಲ್ಲಿದೆ ? ಎಲ್ಲ ಸಾಹಿತ್ಯ ಕೃತಿಗಳ ವಿಮರ್ಶೆ ತಕ್ಕ ಮಟ್ಟಿಗೆ ಆಗಿದಿಯೆ?
೨) ಮುಖ್ಯ ವಿಮರ್ಶಕರು ಯಾರು ( ಬಹುಶಃ ಅವರ ಪುಸ್ತಕಗಳನ್ನು ಓದಿದರೆ ತಿಳಿಯಬಹುದು) . ನನಗೆ ಗೊತ್ತಿರುವ ಮಟ್ಟಿಗೆ ಸಿ, ಎನ್. ರಾಮಚಂದ್ರನ್ ಮತ್ತು ಕೀರ್ತಿನಾಥ ಕುರ್ತುಕೋಟಿ ಇವರು ಪ್ರಸಿದ್ದರು.
೩) ಕನ್ನಡದಲ್ಲಿ ಮೀಮಾಂಸೆಯಂಥ ಕೃತಿಗಳು ಯಾವುವು?
- ಜೈ ಕರ್ನಾಟಕ
Re: ವಿಮರ್ಶೆ ಮತ್ತು ಮೀಮಾಂಸೆ
ಇದು ನನ್ನ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ. ನಾವು `ಮೀಮಾಂಸೆ' ಎಂಬ ಪದವನ್ನು Theory ಅಥವಾ Theoretical discussion ಎನ್ನುವುದಕ್ಕೆ ಸಮಾನಾರ್ಥಕವಾಗಿಯೂ `ವಿಮರ್ಶೆ' ಎನ್ನುವುದನ್ನು Criticism ಎನ್ನುವುದಕ್ಕೆ ಸಂವಾದಿಯಾಗಿಯೂ ಬಳಸುತ್ತೇವೆ. ಸಾಹಿತ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳು ಹೀಗೆ ಬೇರೆ ಬೇರೆ ಅರ್ಥಗಳನ್ನು ಪಡೆದಿವೆ. ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಸರ್ವಸಾಮಾನ್ಯವಾದ ಪ್ರಶ್ನೆಗಳನ್ನು ಪರಿಶೀಲಿಸುವುದು ಮೀಮಾಂಸೆಯ ಕೆಲಸ. ಇದನ್ನೇ ಕಾವ್ಯಮೀಮಾಂಸೆ ಎಂದೂ ಕರೆಯಲಾಗಿದೆ. ಸಾಹಿತ್ಯ ಮೀಮಾಂಸೆಯು ಬೇರೆ ಬೇರೆ ದೇಶ, ಕಾಲ ಮತ್ತು ಸಂದರ್ಭಗಳಲ್ಲಿ ರೂಪಿತವಾಗಿದ್ದರೂ ಎಲ್ಲರ ಚರ್ಚೆಗೂ ಆಹಾರವನ್ನು ಒದಗಿಸುತ್ತದೆ.
ಸಾಹಿತ್ಯ ವಿಮರ್ಶೆಯು ನಿರ್ದಿಷ್ಟ ಕೃತಿ, ಲೇಖಕ ಅಥವಾ ಸನ್ನಿವೇಶವನ್ನು ತನ್ನ ಮೂಲನೆಲೆಯಾಗಿ ಹೊಂದಿರುತ್ತದೆ. ಇದಕ್ಕೆ ತನ್ನದೇ ಆದ ವಿಧಾನ, ಉಪಕರಣ ಮತ್ತು ಧೋರಣೆಗಳಿರುತ್ತವೆ. ಇವೆಲ್ಲವೂ ಕಾಲದಿಂದ ಕಾಲಕ್ಕೆ ಬದಲಾಗಬಹುದು. ಸಾಹಿತ್ಯ ಕೃತಿಯ ಮೂಲಕವಾಗಿಯೇ ಒಟ್ಟು ಸಂಸ್ಕೃತಿ ಹಾಗೂ ಸಮಾಜವನ್ನೂ ಪರಿಶೀಲನೆಗೆ ಒಳಪಡಿಸಲು ಸಾಧ್ಯ.
ಡಾ|| ಜಿ.ಎಸ್.ಎಸ್. ಅವರ ಕೃತಿಯ ಹೆಸರು `ಸೌಂದರ್ಯ ಸಮೀಕ್ಷೆ'. ಅದು ಸೌಂದರ್ಯ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಇಡೀ ಕನ್ನಡ ಸಾಹಿತ್ಯವನ್ನೇ ಪರಿಶೀಲಿಸುತ್ತದೆ.
ನಿಮಗೆ ಅಗತ್ಯವೆನಿಸಿದರೆ, ಕನ್ನಡದ ಮುಖ್ಯ ವಿಮರ್ಶಕರು ಮತ್ತು ಕೃತಿಗಳ ಪಟ್ಟಿಯನ್ನು ಕೊಡುಬಹುದು. ಅದು ಬಿ.ಎಂ.ಶ್ರೀಯವರಿಂದ ಮೊದಲಾಗಿ, ಡಿ.ಆರ್. ನಾಗರಾಜ್ ಮತ್ತು ರಹಮತ್ ತರೀಕೆರೆಯವರವರೆಗೆ ಹರಡಿರುವ ದೊಡ್ಡ ಪಟ್ಟಿ.
H.S.Raghavendra Rao
Re: ವಿಮರ್ಶೆ ಮತ್ತು ಮೀಮಾಂಸೆ
ಧನ್ಯವಾದಗಳು ರಾಘವೇಂದ್ರರವರೆ,
ಮೀಮಾಂಸೆ ಎಂದರೆ theory ಅಂತ ನನಗೆ ಗೊತ್ತಿರಲಿಲ್ಲ(ಎಲ್ಲ ಇಂಗ್ಲಿಷ್ ಪ್ರಭಾವ) ಹಾಗೆ ನೀವು ವಿಮರ್ಶಾ ಕೃತಿಗಳ ಪಟ್ಟಿಯನ್ನು ಕೊಟ್ಟರೆ ಒಳ್ಯೆಯದು. ಇತರ ಸಂಪದಿಗರಿಗು ಸಹಾಯವಾಗಬಹುದು. ಹಾಗೆಯೆ ಅವುಗಳ ಬಗ್ಗೆ ಸಣ್ಣ ಟಿಪ್ಪಣಿಯನ್ನು ಕೊಟ್ಟರೆ ಅದನ್ನು ನಾವು reference ಆಗಿ ಬಳಸಬಹುದು.
-ಜೈ ಕರ್ನಾಟಕ