ಶುಭಂ
ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು.
ನಿನ್ನೆ ಕೋರಮಂಗಳದ ಫೋರಮ್‍ನಲ್ಲಿ 'ಶುಭಂ' ನೋಡಿದೆ.
ತಾಂತ್ರಿಕವಾಗಿ ಇದು ಭಾರತದ ಯಾವುದೇ ಭಾಷೆಯ ಸಿನೆಮಾದ ಜೊತೆ ಸ್ಪರ್ಧಿಸಬಹುದು.ಗುರುಕಿರಣರ ಉತ್ತಮ ಸಂಗೀತವಿದೆ, ಆದರೆ ಸಂಗೀತವನ್ನು ಮೀರಿಸೋದು ಗಿರಿಯವರ ಛಾಯಾಗ್ರಹಣ.ಸಿನೆಮಾದ ಕತೆ ಮುಂದುವರೆಯೋದು ಪ್ರಕೃತಿಯ ನಡುವೆ, ಹಾಡುಗಳ ಸಹಾಯದಿಂದ.ಇದನ್ನು ನೋಡಿಯೆ ಅನುಭವಿಸಬೇಕು.
ಸಿನೆಮಾದ ತುಂಬ ಘಟನೆಗಳು ಮತ್ತು ತಿರುವುಗಳು.ಮುಂದೆ ಎನಾಗಬಹುದು ಅಂತ ಯೋಚಿಸುವ ಅಗತ್ಯವಿಲ್ಲ, ಯೋಚಿಸಿದಂತೆ ಏನೂ ನಡೆಯೋದು ಇಲ್ಲ.
ಸಿನೆಮಾ ಚೆನ್ನಾಗಿದೆಯ??
ಹ್‍ಮ್.....ಸಿನೆಮಾದ ತಾಂತ್ರಿಕತೆಗೆ ಕೊಟ್ಟಷ್ಟೆ ಗಮನ ,'ಸ್ಕ್ರಿಪ್ಟ್'ಗೆ ಕೊಟ್ಟಿದ್ರೆ ....!
ಚೆನ್ನಾಗಿಲ್ಲ ಅಂತ ಹೇಳಲು, ಯಾವುದೇ ಕಾರಣಗಳಿಲ್ಲ...ಋಣಾತ್ಮಕ ಅಂಶಗಳಿಗಿಂತ , ಧನಾತ್ಮಕ ಅಂಶಗಳು ಜಾಸ್ತಿ ಇದೆ.
'ಶುಭಂ'- ಒಂದು ಕತೆ,ಎರಡು ನಿರೂಪಣೆ ಎಂದು ಪ್ರಚಾರ ಗಿಟ್ಟಿಸಿಕೊಂಡಿತ್ತು.ಒಂದು 'ಕ್ಲಾಸ್'ಗಾಗಿ, ಮತ್ತೊಂದು 'ಮಾಸ್'ಗಾಗಿ.
ಈಗ ನೋಡಿದ್ದು ಕ್ಲಾಸ್‍ಗಾಗಿ ಮಾಡಿದ ಸಿನೆಮಾವಾ ಅಥವಾ ಮಾಸ್‍ಗಾಗಿ ಮಾಡಿದ ಸಿನೆಮಾವಾ?
ಇದೊಂದು ಉತ್ತಮ ಪ್ರಯತ್ನ.ಪ್ರೋತ್ಸಾಹಿಸುವ ಅಗತ್ಯವಿದೆ.ನಿರ್ದೇಶಕ ರವಿ ಗರಣಿಯವರಿಗೆ 'ಶುಭಂ'..

- ಶಿವ ರವರ ಬ್ಲಾಗ್
- Login or register to post comments
- 772 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಶುಭಂ ಬಗ್ಗೆ...
ದೂರವಿರುವ ಕನ್ನಡಿಗರಿಗೆ ನೀವು ಮೂಗಿಗೆ ತುಪ್ಪ ಹಚ್ಚಿದಂತಾಯ್ತತಲ್ಲವೇ! ಶುಭಂ ಬಗ್ಗೆ ಬರೆದಾಗ ಚಿತ್ರದ ಬಗ್ಗೆ ಒಂದೆರಡು ಸಾಲುಗಳನ್ನು ಬರೆದಿದ್ದರೆ ಸ್ವಲ್ಪವಾದರೂ ತೃಪ್ತಿಯಾಗುತ್ತಿತ್ತು.
ಏನೇ ಹೇಳಿ, ಚಿತ್ರಕಥೆ (script) ಸರಿಯಾಗಿರದಿದ್ದರೆ ನನಗಂತೂ ಚಿತ್ರಗಳು ರುಚಿಸೋದೇ ಇಲ್ಲ. ನಮ್ಮವರು ಅಲ್ಲಿಂದ ಇಲ್ಲಿಂದ ಸಂಗೀತವನ್ನು ಕದ್ದು ತರದಿದ್ದರೆ ಸಾಕು.
ಅಂದ ಹಾಗೆ, ಶುಭಂ ಎಂದರೆ ಮಂಗಳವೆಂತಲೂ ಅರ್ಥವಾದ್ದರಿಂದ ಇನ್ನು ಮುಂದೆ ಈ ರೀತಿ ಚಿತ್ರಗಳನ್ನು (ಇದೇ ನಿರ್ದೇಶಕರಿಂದ)ನಿರೀಕ್ಷಿಸೋಣವೋ ಬೇಡವೋ?
ಇತಿ
ನಿಮ್ಮವ ನಾನು
antaranga.blogspot.com
ಉ:ಶುಭಂ ಬಗ್ಗೆ...
ಸಿನೆಮಾ ತುಂಬ ಕಡೆ ಬೋರ್ ಹೊಡೆಸುತಿತ್ತು.ಆದರೆ ಚೆನ್ನಾಗಿಲ್ಲ ಎಂದು ಹೇಳಲು ಮನಸ್ಸು ಒಪ್ಪಲಿಲ್ಲ. ಮುಖ್ಯವಾಗಿ ಹಾಡುಗಳ ಚಿತ್ರೀಕರಣ ಮತ್ತು ಛಾಯಾಗ್ರಹಣ ,ಚಿತ್ರ ತಂಡದ ಅಭಿರುಚಿಯನ್ನು ತೋರಿಸುತಿತ್ತು.ಈ ತಂಡದಿಂದ ಇನ್ನೂಒಳ್ಳೆಯ ಚಿತ್ರಗಳು ಬರಲಿ .
ಈ ಸಿನೆಮಾದ ವಿಮರ್ಶೆಯ ಲಿಂಕ್ ಇಲ್ಲಿದೆhttp://www.kannadaprabha.com/cinema/CineItems.asp?ID=KP320060408105005&Title=Cine+Reviews&lTitle=%D2%AC+%C9%C8%DA%DF%CB%E6%25