ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನನ್ನ ಹಾಡು ನನ್ನದು....
೧)
ಬಾಳಿದರೂ ನಿನ್ನೊಡನೆ
ಬಾಡಿದರೂ ನಿನ್ನೊಡನೆ
ಒಡಲ ಹೊಕ್ಕಿ ನೋಡು
ಕಡಲ ಪ್ರೇಮ ನನ್ನಲ್ಲಿ ಉಕ್ಕುತಿದೆ
೨)
ಬದುಕಿನಲಿ ತುಳಿದಿಹೆನು
ಕೆಲವು ಹೆಜ್ಜೆ
ಅಗಾಗ ನೋಡುತ ಹಿಂದೆ
ನೊಂದೆ ಬೆಂದೆ
ಎದ್ದೆ ಬಿದ್ದೆ
ಆದರೂ ಗುರಿ ಒಂದೆ
ಸಾಗಬೇಕು ಮುಂದೆ
೩)
ಕನಸು ಕಾಣಬೇಕು
ನನಸಾಗುತ್ತದೆಯೆಂದಲ್ಲ
ಮನಸು ಹಸನಾಗುವುದೆಂಬ
ಬಯಕೆಯಿಂದ
೪)
ಆಳುವವರು ಉಳ್ಳವರ
ಕೈಗೊಂಬೆಯಾಗಿರಲು
ಇಲ್ಲದವರ ಅಳುವ
ಕೇಳುವವರಾರಯ್ಯ ಕೇಳಾ ಭರತೇಶ
೫)
ದೂರದ ಊರಲ್ಲಿ
ಹಸಿರಿನ ಹೊಲದಲ್ಲಿ
ತಂಪಾದ ಗಾಳೀಲಿ
ತೇಲಿಹೋದೆ ನಾ
ನನ್ನವಳ ಜೊತೆಯಲ್ಲಿ

- ವೈಭವ ರವರ ಬ್ಲಾಗ್
- Login or register to post comments
- 480 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನನ್ನ ಹಾಡು ನನ್ನದು....
ಬೊಂಬಾಟಾಗಿವೆ!!
ವಚನ ಚೆನ್ನಾಗಿದೆ..!!
======================================
ಉ: ನನ್ನ ಹಾಡು ನನ್ನದು....
ಮಹೇಶಣ್ಣ,
ನಿನ್ನ ಹುರುಪಿನ ಮಾತುಗಳಿಗೆ ನನ್ನಿ
ಉ: ನನ್ನ ಹಾಡು ನನ್ನದು....
ತುಂಬಾ ಚೆನ್ನಾಗಿವೆ ತುಣುಕುಗಳು. ಆನಂದವಾಯಿತು ಓದಿ -ಸರಳಜೀವಿ