ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ವಚನ + ಟಿಪ್ಪಣಿ
ಈ ಬಸವಣ್ಣನವರ ವಚನವನ್ನು ವಿಚಾರಮಂಟಪದಿಂದ ಪಡೆದೆ.
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ
ಹೋಯಿತ್ತು.
ಅದಂದೆ ಹುಟ್ಟಿತ್ತು. ಅದಂದೆ ಹೊಂದಿತ್ತು.
ಕೊಂದವರುಳಿದರೆ ಕೂಡಲಸಂಗಮದೇವ
----
ನನಗೆ ತಲೆಗಿಳಿದಿದಿಷ್ಟು.
ಇದು ಸಾವು ಅನ್ನುವುದು ಯಾವಾಗ ಬೇಕಾದರೂ ಬರಬಹುದು... ಅದರ ಬಗ್ಗೆ ಚಿಂತೆ ಬೇಡ ಅಂತ. ಮೊದಲು ಕುರಿ ತಳಿರನ್ನು ತಿಂತು ..ಅಂದೆ ಆ ಕುರಿಯನ್ನು ಕಡಿಯಲಾಯಿತು ...ಆ ಕುರಿಯನ್ನು ಕೊಂದವರು ಆಮ್ಯಾಕೆ ಸತ್ತರು... ಸಾವು ಯಾರನ್ನೂ ಬಿಡಲ್ಲ...
ಆ ಕುರಿ ತಳಿರು ತಿಂಧಾಗೆ ನಾವು ಸಾಯ್ತಿವಿ ಅಂತ ಗೊತ್ತಿದ್ರೂ ಆಸೆ ಪಡ್ತಾನೆ ಇರ್ತೀವಿ.
ನಿಮಗೆ ಬೇರೆ ತರ ತಲೆಗಿಳಿದರೆ ತಿಳಿಸಿ.

- ವೈಭವ ರವರ ಬ್ಲಾಗ್
- Login or register to post comments
- 724 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ವಚನ + ಟಿಪ್ಪಣಿ
ವೈಬವ,
ತುಂಬ ಒಳ್ಳೇ ವಚನವಿದು. ನೀವು ಚನ್ನಾಗೇ ಬಿಡಿಸಿವಿರಿ( ಇಹಿರಿ )
ಇಲ್ಲಿ ಬರುವ ಮೂರು ಸರಕುಗಳು ೧) ಕುರಿ, ೨) ತಳಿರು ೪) ಮಾನಿಸರು
ತಳಿರು ಅಂದೇ ಹುಟ್ಟಿ, ಅಂದೇ ಕುರಿಯು ತಿನ್ನುವುದರಿಂದ ಸಾಯುವುದು,
ಕುರಿಯನ್ನು ಮಾನಿಸರು ತಿಂದು ಸಾಯಿಸುವರು...
ಎಲ್ಲ ಜಂತುಗಳೂ ಒಂದಲ್ಲವೊಂದು ನಾಳು ಸಾಯಲೇ ಬೇಕು.
ಹಿಂಗಿರುವಾಗ ಕುರಿ ತಿಂದ ಮಂದಿ ಏಟು ನಾಳುಗಳು ಉಳಿಯುವರು?( ಒಂದು ನಾಳು ಸಾಯಲೇ ಬೇಕಲ್ಲ )
ಇಲ್ಲಿ ಬಸವಣ್ಣ ಹೋಲಿಕೆಗೆ ಬಳಸಿದ ಕುರಿ ಮತ್ತು ತಳಿರು ಚನ್ನಾಗಿವೆ.
======================================
ಉ: ವಚನ + ಟಿಪ್ಪಣಿ
ಸಾವು ನಮ್ಮ ಬೆನ್ನ ಹಿಂದೆ ಇದೆ ಎಂದು ಹಿರಿಯರು ಹೇಳುತ್ತಿರುತ್ತಾರೆ ಆದರೆ ನಾವು ಅದನ್ನು ಎಲ್ಲಿಇದೆ ಎಂದು ಪ್ರಶ್ನೆ ಮಾಡುತ್ತೇವೆ
ಆದ್ರೆ ನಿಮ್ಮ ಈ ವಚನ ಓದಿದ ಮೇಲೆ ನಿಜ ಅನಿಸುತ್ತದೆ ಆದ್ರೆ ನಮಗೆ ಸಾವು ಖಚಿತ ಎಂದರೂ ಸಮಯ ತಿಳಿದಿರುವುದಿಲ್ಲ ಆದ್ದರಿಂದ ನಾವು (ಮನುಷ್ಯರು)ಇಷ್ಟೊಂದು ಮೆರೆಯುತ್ತಿದ್ದೇವೆ ಅನಿಸುತ್ತದೆ ಅಲ್ಲವೆ ವೈಭವ ರವರೆ ?
ಸೊಗಸಾದ ವಚನ ವಂದನಾಭಿನಂದನೆಗಳು
-ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ ಬೆಂಗಳೂರು-೧೯
ಉ: ವಚನ + ಟಿಪ್ಪಣಿ
This is simple translation of philosophy found in vedic litrature. The concept of 'Nityaanitya Viveka' is given in lucid form, with the support of equally simple examples.