ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಸುಳ್ಳೇ ನಮ್ಮಯ ದೇವರು

October 9, 2007 - 4:29pm — ಗಣೇಶ

ಎಲ್ಲೋ ಅರ್ಜೆಂಟ್ ಹೊರಟಿದ್ದೆ.ಫಿನಾಯಿಲ್ ಮಾರುವವಳು ಕದ ತಟ್ಟಿದಳು.ಗಂಡಸಾಗಿದ್ದರೆ 'ಬೇಡ,ಹೋಗಪ್ಪಾ'ಎಂದು ಅಟ್ಟಬಹುದಿತ್ತು.ಹೆಣ್ಣು ನೋಡಿ,ಪಾಪ,ದೊಡ್ಡ ಬ್ಯಾಗು ಹೊತ್ತುಕೊಂಡು ಬರುತ್ತಾಳೆ.ತೆಗೆದುಕೊಂಡರೆ ಹೆಂಡತಿಯ ಬೈಗಳು ಕೇಳಬೇಕು.ಆಗ ನೆರವಿಗೆ ಬರುವುದು 'ಸುಳ್ಳು'."ಫಿನಾಯಿಲ್ ನಮಗೆ ಹಾಸ್ಪಿಟಲ್ನಿಂದ ಫ್ರೀ ಸಿಗುತ್ತದೆ."ಯಾವ ಹಾಸ್ಪಿಟಲ್ ಎಂದು ಆಕೆಯೂ ಕೇಳಲಿಲ್ಲ,ನನಗೂ ಗೊತ್ತಿಲ್ಲ.
-ಸುಳ್ಳೇ ನಮ್ಮಯ ದೇವರು.
ಫೋನ್ ನಲ್ಲಿ ಹೆಚ್ಚಾಗಿ ತೊಂದರೆ ಕೊಡುವವರು 'ನಿಮಗೆ ಬಹುಮಾನ ಬಂದಿದೆ,ಇಂಥಲ್ಲಿಗೆ ಬಂದು ಪಡಕೊಳ್ಳಿ...'ಬೇಡವೆಂದರೂ ಪಟ್ಟು ಬಿಡರು."ನಾನು ಬಂದರೆ ನಿಮಗೇ ತೊಂದರೆ.ನಾನು ಕ್ರೈಂ ಬ್ರಾಂಚ್ ಯಸ್.ಐ." ಎಂದಾಗ ಟಪ್ ಎಂದು ಫೋನ್ ಇಡುವರು.
-ಸುಳ್ಳೇ ನಮ್ಮಯ ದೇವರು.
ಕೆಲಸ ಮುಗಿಸಿ ಸುಸ್ತಾಗಿ ಬಸ್ಸಲ್ಲಿ ಕುಳಿತಿರುತ್ತೀರಿ. ಪಕ್ಕದಲ್ಲಿ ಕುಳಿತಿರುವಾತ ದೇಶಾವರಿ ನಗೆ ಬೀರಿದ ಎಂದರೆ ರಸ್ತೆಯುದ್ದಕ್ಕೂ ಕೊರೆಯುತ್ತಾನೆ ಎಂದೇ ಲೆಕ್ಕ.'ಅಬ್ಬಾ,ಎಂಥಾ ಸೆಖೆ.ತಾವು ಏನು ಕೆಲಸ ಮಾಡುತ್ತೀರಿ"ಎಂದ ಕೂಡಲೆ "ತಮ್ಮ ಪರಿಚಯವಾದುದು ಒಳ್ಳೆಯದಾಯಿತು.ನಾನು ಎಲ್.ಐ.ಸಿ.ಏಜೆಂಟ್ ಎನ್ನಿ.ಮತ್ತೆ ನಿಮ್ಮ ಬಳಿ ಮಾತನಾಡಿದರೆ ನೋಡಿ.
-ಸುಳ್ಳೇ ನಮ್ಮಯ ದೇವರು.
ಅದೇ ನಿಮ್ಮ ಆಫೀಸಿಗೆ ಗಂಟು ಮುಖವನ್ನು ಹಾಕಿಕೊಂಡು ಬರದೇ,ನಗು ಮುಖ,ಕಂಕುಳಲ್ಲಿ ಬ್ಯಾಗಿದೆ ಅಂದರೆ ಬಂದವ ೧೦೦% ಎಲ್.ಐ.ಸಿ.ಏಜೆಂಟ್.ಆತ ಮಾತನಾಡುವ ಮೊದಲೇ ನಿಮ್ಮ ಅತ್ತಿಗೆ ಎಲ್.ಐ.ಸಿ.ಏಜೆಂಟ್ ಆಗಿರುವುದನ್ನು ಹೇಳಿ.
-ಸುಳ್ಳೇ ನಮ್ಮಯ ದೇವರು.
ಹೆಚ್ಚಿನ ಹೆಂಗಸರು ತಿಂಗಳಿಗೆ ಎರಡು ಮೂರು ಸಾರಿಯಾದರೂ ಮುಟ್ಟಾಗುವರು.'ಅಯ್ಯೋ,ಬರಬಹುದಿತ್ತು ಕಣ್ರೀ.ನನಗೆ ಅದೇ ದಿನ ಡೇಟ್ ಕಣ್ರೀ...'ಏನು ಮಾಡುವುದು?
-ಸುಳ್ಳೇ ನಮ್ಮಯ ದೇವರು.
ಒಂದು ದಿನ ಒಂದು ಮಾಲ್ ನ ಹೊರಗೆ ರಸ್ತೆಯಲ್ಲಿ ಕಾರು ನಿಲ್ಲಿಸಿ ಕಾಯುತ್ತಿದ್ದೆ.ಹೆಂಡತಿ ಮಕ್ಕಳು ಒಳಗೆ ಹೋಗಿದ್ದರು.ನಾನು ಅನಗತ್ಯ ಐಟಮ್ ಗಳನ್ನೇ ಪರ್ಚೇಸ್ ಮಾಡುವುದೆಂದು ಮಾಲ್ ಗಳಿಗೆ ನನಗೆ 'ನೋ ಎಂಟ್ರಿ'. ೮-೧೦ ಜನರ ಗುಂಪೊಂದು ಬಂತು ದೇಣಿಗೆಗೆ."ನಾನು ಡ್ರೈವರ್ ಸರ್.ಓನರ್ ಒಳಗಿದ್ದಾರೆ.೨ ಗಂಟೆಯಾಯಿತು.ಟೀ ಕುಡಿಯಲೂ ದುಡ್ಡಿಲ್ಲಾ.."
-ಸುಳ್ಳೇ ನಮ್ಮಯ ದೇವರು.
ಆಪತ್ತು ದೊಡ್ಡದೇ ಇರಲಿ,ಸಣ್ಣದೇ ಇರಲಿ.
ಆಪತ್ಕಾಲದಲ್ಲಿ ರಕ್ಷಿಸುವಾತ ಆ ಪರಮಾತ್ಮ.
ಆಪತ್ಕಾಲದಲ್ಲಿ ರಕ್ಷಿಸುವ 'ಸುಳ್ಳೂ' ದೇವರು.
ನೀವು ಸಹ ದಿನದಲ್ಲಿ ಅನೇಕ ಸಾರಿ ಸುಳ್ಳು ಹೇಳಿಲ್ಲ ಎಂದು 'ಕುಮಾರನ'ಮೇಲೆ ಆಣೆಯಿಟ್ಟು ಹೇಳಿ ನೋಡೋಣ.ಏನು ಯೋಚಿಸುತ್ತಿದ್ದೀರಿ. ಒಪ್ಪಿಕೊಳ್ಳಿ-
-ಸುಳ್ಳೇ ನಮ್ಮಯ ದೇವರು.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 490 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 9, 2007 - 6:05pm — mahesha

ಉ: ಸುಳ್ಳೇ ನಮ್ಮಯ ದೇವರು

mahesha's picture

ಬೊಂಬಾಟ್...

ಇಡಿಯಗಳನ್ನು ಹಂಚಿಕೊಂಡಿದ್ದಕ್ಕೆ ನನ್ನಿ!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2007 - 9:25am — Sunil Jayaprakash

ಉ: ಸುಳ್ಳೇ ನಮ್ಮಯ ದೇವರು

Sunil Jayaprakash's picture

ಸುಳ್ಳೇ ಸುಳ್ಳು ಈ ಭೂಮಿ ಮ್ಯಾಗೆ ಎಲ್ಲಾ ಸುಳ್ಳು. "ಗಣೇಶ" ಅಲಿಯಾಸ್ ಸುಳ್ಳೇಶ್ವರಾಯನಮಃ Smiling !!!!!!!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2007 - 1:04pm — ppsringeri

ಉ: ಸುಳ್ಳೇ ನಮ್ಮಯ ದೇವರು

ppsringeri's picture

ಗಣೇಶ ಅವರೇ,
ತುಂಬಾ ಉಪಯುಕ್ತವಾದ ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದೀರಿ.
ಧನ್ಯವಾದಗಳು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 11, 2007 - 11:23pm — ಗಣೇಶ

ಉ: ಸುಳ್ಳೇ ನಮ್ಮಯ ದೇವರು

ಗಣೇಶ's picture

ಮಹೇಶ,ಸುನೀಲ,ಪಿಪಿಶೃಂಗೇರಿ,ಈ ಮೂರು ಘಟಾನುಘಟಿಗಳ ಬೆಂಬಲವಿದ್ದರೂ,ಬಹುಮತವಿಲ್ಲದಿರುವುದರಿಂದ 'ಸುಳ್ಳೇಶ್ವರ'ಸ್ಥಾನಕ್ಕೆ,ರಾಜಿನಾಮೆ ನೀಡುತ್ತಿದ್ದೇನೆ.
-ಗಣೇಶ.
-ಸುಳ್ಳೇ ನಮ್ಮಯ ದೇವರು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೀತಿಸಿರೋ...
  • ದೇವರು
  • ನಗುವಾಗ ದೇವರು
  • 'ದೇವರು' ದೇವರಲ್ಲ !!
  • ಶೇಷಾದ್ರಿವಾಸು ರವರಿಗೆ, ನಮ್ಮ ಕನ್ನಡನಾಡಿನ ಹಾಗೂ ಸಂಪದೀಯರ, ತುಂಬುಹೃದಯದ, ಹಾರ್ದಿಕ ಶುಭಾಶಯಗಳು !
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 148 ಅತಿಥಿಗಳು ಆನ್ಲೈನ್ ಇರುವರು.


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator