ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

May 10, 2007 - 8:18pm — ವೈಭವ

ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. Smiling

೧) ಬಲಾ, ಹೊತ್ತಾಯ್ತು..ಗದ್ದೆಗೆ ಹೋಗಿ ತೆವರಿ ಸವರ್ಬುಟ್ಟು ಬರುಮ
೨) ಹೊಲ ಉತ್ತಾಯ್ತು ..ನಡೀ ಅಟ್ಟಿಗೋಗಿ ಇಟ್ ಉಣ್ಕಂಡ್ಬರೂಮ.
೩) ಎತ್ತು ಬಿಡ್ಸ ಕಂಡ್ ಬುಟ್ಟದೆ ಕಣ್ಲ..ಕಟ್ ಹಾಕು ವೋಗು.
೪) ವಾದಂವ ಕೇಮಿ ನೋಡೋಗು.
೫) ಬಲಾ,ಕಾವಲಿಗೆ ಹೋಗಿ ಈಜ್ಬುಟ್ಟು ಬರುಮ
೬) ಯಾನಪ್ಪ, ಈ ಬಸ್ಸು ಚಬ್ನಳ್ಳಿಗಾಣೆ ವಾದುದಾ?
೭) ಏ, ಕುರಿಗಳು ನುಗ್ಬುಟ್ಟವೆ ವೊಲದೊಳಿಕೆ..ಓಡ್ಸು ಓಗ್ಲ
೮) ನಡೀಲಾ ಬಿರ್ ಬಿರ್ನೆ, ಕಳೆ ಕೀಳೋ ಹೊತ್ತಾಯ್ತು
೯) ಎಮ್ಮೆ(ಕೋಣವ)ಯ ಮೇವ್ಗೆ ಬುಟ್ಟಿದ್ದೆ...ಅಟ್ಕ ಬಾ ಓಗ್ಲ.
೧೦) ವತಾರೆ ವತಾರೆ ಎದ್ಬುಟ್ಟು ಎಲ್ಲಿಗ್ಲಾ ವಾಗಿದ್ದೆ ?

~.~
  • ವೈಭವ ರವರ ಬ್ಲಾಗ್
  • Login or register to post comments
  • 611 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 10, 2007 - 8:22pm — ವೈಭವ

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ವೈಭವ's picture

ತೆವರಿ = ಗದ್ದೆಯ ನೀರು ಹರಿದು ಹೋಗದಂತೆ ತಡೆಯುವ ಸಣ್ಣ ಏರಿ
ಕಳೆ = ಗದ್ದೆಯಲ್ಲಿ ಬೆಳೆಯುವ ಬೇಡದೆ ಇರುವ ಸಸಿಗಳು
ವತಾರೆ = ಬೆಳಿಗ್ಗೆ
ಕಾವಲಿ = ಕಾಲುವೆ
ಅಟ್ಟಿ = ಹಟ್ಟಿ = ಮನೆ
ಇಟ್ = ರಾಗಿ ಮುದ್ದೆ
ಗಾಣೆ = ಮೂಲಕ , via
ಬಿರ್ ಬಿರ್ನೆ = ಬೇಗ ಬೇಗನೆ

ಕೇಮಿ = ಕೆಲಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 10:35am — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ಬೋ ಸಂದಾಗೈತಜ. ಇಂಗೇ ಬರೀತಿರುಜ..

ಮದ್ದೂರ್‍ ನರ್ಸಿಮ್ಮ ನಿನ್ ಸಂದಾಗ್ ಮಡಗ್ಲಿ Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 2:06pm — suresh_k

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

suresh_k's picture

ಬಡ್ಡೆತ್ತದ್ದೆ, ಬೋ ಪಸಂದಾಗ್ ಬರ್ದಿದ್ದಿ ಕಾಣ್ಲ....!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 3:20pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ಸುರೇಶ್!!

ನಿಮಗೆ ಬಡ್ಡೆತ್ತದ್ದೇ ಅಂದರೆ ಗೊತ್ತಿಲ್ಲ ಅಂತ ಕಾಣತ್ದೆ. ಅದು ಒಂದು ಕೆಡುಮಾತು.
ನೀವು ವೈಬವರನ್ನು ಹಂಗೆ ಕರೆದ ಮಾತನ್ನು ಹಿಂದಕ್ಕೆ ತಗೊಳ್ಳೀ Sad

= ಬೊಡ್ಡಿ/ಬಡ್ಡಿ ಹೆತ್ತದ್ದು => ಬಡ್ಡೆತ್ತದ್ದು ( ಹಾಸನದಿಂದ ತೆಂಕಣದ ಕನ್ನಡಿಗರಲ್ಲಿ ಬಹಳರು 'ಹ' ಹೇಳಲ್ಲ )
ಬೊಡ್ಡಿ/ಬಡ್ಡಿ = baḍḍi, boḍḍi strumpet, fornicatress;

ಇದನ್ನು ಗೊತ್ತಿರುವ ನಾವು ಹಂಗೆ ಯಾವಾಗಲೂ ಅಲ್ಲ. ಅದರ ಬದಲು

"ಪಡ್ಡೇದೇ" ಅಂತ ಅಂತೀವಿ.
ಪಡ್ಡೆ = ಹದಿ(ಕುದಿ)ಹರೆಯದ ಹುಡುಗ, ತರುಣ ಅಂತ

ಇನ್ನು "ಬರ್ದಿದ್ದಿ ಕಾಣ್ಲ" ಅಲ್ಲ "ಬರ್ದಿದೀ ಕಣ್ಲ" Smiling

"ಕಣ್ಲ" ಇದು ಮೈಸೂರು, ಸಿರಿರಂಗಪಟ್ಟಣದ ಕಡೆ!! ನಾವು ಮಳವಳ್ಳಿ, ಜಾಮರಾಜನಗರದ ಕಡೆಯೋರು ಕಡೆ "ಕಣ್‌ಜ" "ಮಾಡ್‌ಜ" ಅಂತೀವಿ.

"ಕಣುಡ", "ಕಣೆಳಿ " ಇನ್ಜು ಇವೆ...
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 3:22pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

"ಇದನ್ನು ಗೊತ್ತಿರುವ ನಾವು ಹಂಗೆ ಯಾವಾಗಲೂ ಅಲ್ಲ" ಇದನ್ನು "ಇದನ್ನು ಗೊತ್ತಿರುವ ನಾವು ಎಂದೂ ಹಾಗೆ ಅನ್ನಲ್ಲ" ಅಂತ ಓದಿಕೊಳ್ಳಿರಿ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 3:24pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ಕೆಡುಮಾತು = ಕೆಟ್ಟಮಾತು, ಬೈಗುಳ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 3:53pm — ವೈಭವ

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ವೈಭವ's picture

ಮಹೇಶಣ್ಣ,

ಇರಲಿ, ಸುರೇಶ್ ರವರು ಅರಿಯದೆ ನುಡಿದಿರಬೌದು...

ಎನಗಿಂತ ಕಿರಿಯರಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 3:59pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ವೈಬವ,

ನಾನೇನು ಅವರ ಮೇಲೆ ಮುನಿಸಿಕೊಂಡಿಲ್ಲ. ಅವರಿಗೆ ಅದರ ಅರ್ತ ತಿಳಿಸಿದೆ ಆಟೇಯ!!
======================================
ಎನಗಿಂತ ಕರಿಯನಿಲ್ಲ Smiling Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 4:37pm — suresh_k

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

suresh_k's picture

ಮಹೇಶ್ರವರೇ,

ನಾನು ಬಡ್ಡೆತ್ತದ್ದೆ ಅಂತ ಬಳಸಿದ್ದು ಪ್ರೀತಿಯಿಂದ. ಅಲ್ಲಿ ನಾನವರನ್ನು ಹೊಗಳುವಾಗ ಅದನ್ನು ಬಳಸಿದ್ದೇನೆ ಎಂಬುದನ್ನು ಗಮನಿಸಿ. ಸಮಯ, ಸಂದರ್ಭಕ್ಕನುಗುಣವಾಗಿ ಕೆಲ ಪದಗಳು ಹೊರಡಿಸುವ ಧ್ವನಿ ಬೇರೆಯದಾಗಿರುತ್ತದೆ, ಅಲ್ಲವೇ? ನಾವೆಲ್ಲ ನಮ್ಮ ಗೆಳೆಯರನ್ನು `ನನ್ಮಗನೇ' ಅಂತ ಪ್ರೀತಿಯಿಂದ ಗದರುವ ಹಾಗೆ, ಈ `ಬಡ್ಡೆತ್ತದ್ದೆ' ಎಂಬುದನ್ನೂ ಪ್ರೀತಿಯ ಗದರಿಕೆಯಾಗಿ ಬಳಸುತ್ತಾರೆ ಅಂತ ನಮ್ಮ ಕಚೇರಿಯಲ್ಲಿರುವ ಒಂದಿಬ್ಬರು ಮಂಡ್ಯದ ಹುಡುಗರು ಮಾತಾಡುವುದನ್ನು ಕೇಳಿ ಅರಿತುಕೊಂಡಿದ್ದೇನೆ. ಹಾಗಾಗಿ ಆ ಮಾತನ್ನು ಹಿಂದಕ್ಕೆ ಪಡೆಯುವ ಪ್ರಮೇಯ ನನಗೆ ಕಾಣಿಸುತ್ತಿಲ್ಲ.

ಇರಲಿ, ವೈಭವರಿಗೆ ಈ ಪ್ರೀತಿಯ ಮಾತಿನಿಂದೇನಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 4:51pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ಆಯ್ತಣ್ಣ

ನೀವು ಹಿಂದಕ್ಕೆ ತಗೋ ಬೇಡಿ, ಬಡಿ... Smiling

ಒಟ್ಟಿನಲ್ಲಿ .. ಅದರ ಅರ್ತ ಗೊತ್ತಾಯ್ತ.. ಸಾಕು!!!
ಅದನ್ನು ಬಳಸುವಾಗ ತುಸು ಎಚ್ಚರವಿರಲಿ...

ನಾವು ಪ್ರೀತಿಯಿಂದ, ಎಂದು "ಸೂಳೆಮಗ, ಬಡ್ಡೆತ್ತದ್ದೆ, ಹಡಕ, ... ನಿನ್ನವನ್........" ಅಂತ ಅನ್ನಬಹುದು. ಆದರೆ ಅದು ಸರಿಯೇ?

ಅದೂ ಅದನ್ನೆಲ್ಲ ಬರೆದು ಹೇಳಬಹುದು!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 4:52pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ಬಡಿ = ಬುಡಿ/ಬಿಡಿ ಎಂದುಕೊಳ್ಳಿ...

ನನ್ನಿ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 5:04pm — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ತಪ್ಪು ತಿಳಯಬೇಡಿ..

ಈ `ಬಡ್ಡೆತ್ತದ್ದೆ' ಎಂಬುದನ್ನೂ ಪ್ರೀತಿಯ ಗದರಿಕೆಯಾಗಿ ಬಳಸುತ್ತಾರೆ ಅಂತ ನಮ್ಮ ಕಚೇರಿಯಲ್ಲಿರುವ ಒಂದಿಬ್ಬರು ಮಂಡ್ಯದ ಹುಡುಗರು ಮಾತಾಡುವುದನ್ನು ಕೇಳಿ ಅರಿತುಕೊಂಡಿದ್ದೇನೆ.

ಇವರಿಗೆ ದಿಟವಾಗಲೂ ಅದು ಅರಿತಿದ್ದರೆ, ಇಲ್ಲಿ ಹಾಗೆ ಬರೆಯುತ್ತಿರಲಿಲ್ಲ ಎಂದು ನಾನು ಅಂದುಕೊಂಡೆನು. ಇವರು ಗೊತ್ತಿರದೇ ಬರೆದಿದ್ದಾರೆ ಎಂದೆ.

ಆದರೆ
ಅದೂ 'ಬೈಗುಳ' ಎಂದು ಅರಿತೂ ಬರೆದಿರಿ ಎಂದು ಹೇಳುತ್ತೀರ? ಇದು ತುಸು ಸೋಜಿಗವೇ!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 6:00pm — suresh_k

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

suresh_k's picture

ಮಹೇಶ್ ಅವರೇ, ನಾನದವನ್ನು ವೈಭವರಿಗೆ ಆರೋಪಿಸಿದೆನೋ ಅಥವಾ ನಿಮಗೋ ಅನ್ನೋ ಗೊಂದಲ ಈಗ ನನ್ನನ್ನು ಕಾಡುತ್ತಿದೆ!!

ಇರಲಿ. ನಿಮ್ಮ `ಒಪ್ಪ'ದ ಮಾತುಗಳನ್ನು ಒಪ್ಪೋಣ. ಆದರೆ ನಾನು ಆ ಪದವನ್ನು ಬಯ್ಗುಳ ಅಂತ ಗೊತ್ತಿದ್ದೂ `ಬಯ್ಗುಳ'ವಾಗಿ ಬಳಸಿಲ್ಲ ಅಂತ ಈಗಾಗಲೇ ಸ್ಪಷ್ಟಪಡಿಸಿಯಾಗಿದೆ. ವೈಭವರು ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬಹುದು ಅಂತನಿಸಿತು (ಇಷ್ಟಕ್ಕೂ ನಾನು ಬರೆದ ವಾಕ್ಯ ಯಾರಾದರೂ ಪಾಸಿಟಿವ್ ಆಗಿಯೇ ತೆಗೆದುಕೊಳ್ಳುವಂತಿದೆಯಪ್ಪ!). ಅದಕ್ಕೇ ಬರೆದೆ. ಮಂಡ್ಯದ ಮಣ್ಣಿನಲ್ಲಿ ಹೀಗೂ ಒಂದು ಮಾತು ಹಾಸುಹೊಕ್ಕಾಗಿದೆ ಅಂತ ಹೇಳಲೂ ನನಗೆ ಇಲ್ಲೊಂದು ಅವಕಾಶವಿತ್ತು. ಹಾಗಾಗಿ ಅದನ್ನು ಉಪಯೋಗಿಸಿದೆ.

ಅದರ ಅರ್ಥ ನೀವು ಹೇಳುವ ಮೊದಲೇ ಗೊತ್ತಿತ್ತು ಸ್ವಾಮಿ. ಕಚೇರಿಯಲ್ಲಿ ಪ್ರತೀದಿನ ಕಿವಿಗೆ ಬೀಳುವ ಶಬ್ದದ ಅರ್ಥವೇನು ಎಂಬುದನ್ನು ಅರಿಯುವ ಕುತೂಹಲ ನನ್ನ ವೃತ್ತಿಯ ಒಂದು ಭಾಗವೂ ಹೌದು ಎಂಬುದನ್ನು ನೆನಪಿನಲ್ಲಿಡಿ.
ನನ್ನ ಈ ಸ್ಪಷ್ಟನೆಯ ಹೊರತಾಗಿಯೂ ಬರುವ ನಿಮ್ಮ ಪ್ರತಿಕ್ರಿಯೆಗಳಿಗೆ ನೋ ಕಾಮೆಂಟ್ಸ್.... ತಪ್ಪು ತಿಳಿಯಬೇಡಿ, ದಯವಿಟ್ಟು ಕ್ಷಮಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 10:00pm — hpn

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

hpn's picture

ಸುರೇಶ್ ಬರೆದಿರುವುದು ಒಪ್ಪುತ್ತೇನೆ. ಅವರು ಬರೆದದ್ದನ್ನು ವೈಬವ ಪಾಸಿಟಿವ್ ಆಗಿ ತಗೊಂಡಿರುವಾಗ ಮಹೇಶ ಸುಮ್ಮನೇ ಪ್ರಹಾರ ಎತ್ತಿದಂತಿದೆ ಈ ಪುಟವನ್ನು ಹೊಸದಾಗಿ ಓದುತ್ತಿರುವವರಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 11:20am — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

HPN

ಈಗ ನೀವು ನನ್ನ ಮೇಲೆ "ಪ್ರಹಾರ ಎತ್ತ"ಬೇಡಿರಿ Smiling.

ಸುರೇಶರಿಗೆ ಹೇಳಬೇಕಾದುದನ್ನು ಹೇಳಾಯಿತು.
ಅವರು

ಅದರ ಅರ್ಥ ನೀವು ಹೇಳುವ ಮೊದಲೇ ಗೊತ್ತಿತ್ತು ಸ್ವಾಮಿ. ಕಚೇರಿಯಲ್ಲಿ ಪ್ರತೀದಿನ ಕಿವಿಗೆ ಬೀಳುವ ಶಬ್ದದ ಅರ್ಥವೇನು ಎಂಬುದನ್ನು ಅರಿಯುವ ಕುತೂಹಲ ನನ್ನ ವೃತ್ತಿಯ ಒಂದು ಭಾಗವೂ ಹೌದು ಎಂಬುದನ್ನು ನೆನಪಿನಲ್ಲಿಡಿ.

ಎಂದು ಹೇಳೀ " ಬಡ್ಡೆತ್ತದ್ದು "ಅಂದರೇ "ಸೂಳೆಮಗ"/"ಹಾದರಕ್ಕೆ ಹುಟ್ಟಿದ್ದು" ಎಂದು ಗೊತ್ತಿದ್ದೇ, ಪ್ರೀತಿಯಿಂದ ವೈಬರನ್ನು ಕುರಿತು ಹಾಗೆ ಅಂದೆನು, ಎಂದು ಮಾತುಕೊನೆ ಮಾಡಿದ್ದಾರೆ.

ನನಗೆ ಹೀಗೆ ಸಲಿಗೆಯೆಂದು "ಸೂಳೆಮಗೆ, ಬೋಳಿಮಗ" ಅನ್ನೋದು personal ಆಗಿ ಹಿಡಿಸದು. ಅದಕ್ಕೆ ಸುರೇಶರ ಮೇಲಿನ "ತಿಳಿದೂ ಅಂದೆ" ಎಂಬ ತಿಳಿ(ಸ್ಪಷ್ಟ)ಮಾತಿಗೆ ಒಪ್ಪದಿದ್ದರೂ, ಇನ್ನೂ ಮಾತುಬೆಳೆಸಿದರೆ ನೊಂದುಕೊಂಡಾರು, ಎತ್ತಿಂದೆತ್ತವೋ ಮಾತು ಹೊರಳುವುದೆಂದು ಎಂದು ತೆಪ್ಪಗಿದ್ದೆನು.

ಆದರೆ ತಮ್ಮ ಮಾತಿಗೆ ಮರುನುಡಿಯಲೆಂದೇ ಈಗ ಬರೆದುದು. ಸುರೇಶರ ಮಾತು ನಾನು ಮರೆತಾಗಿದೆ. ಅವರು ಸಲಿಗೆಯಿಂದ ಹೇಳಿದರೆಂದು ತಿಳಿದಾಗಿದೆ.

ನನ್ನ ಗುರಿಯಿದ್ದದ್ದು "ಬಡ್ಡೆತ್ತದ್ದೆ" ಎಂದರೆ "ಸೂಳೆಮಗನೇ" ಎಂದು ತಿಳಿಸಿ, ಅದು ಸಲಿಗೆಯಿಂದಾದರೂ, ಪ್ರೀತಿಯಿಂದಾದರೂ, public ಅಲ್ಲಿ ಒಬ್ಬರನ್ನು ಕರೆಯುವಂತ ಮಾತಲ್ಲ, ಎಂಬ ನನ್ನ ಅನಿಸಿಕೆಯನ್ನು ಮುಂದಿಡುವುದು.

ಈಗ HPN ಅವರು ಹೀಗೆ "ಬಡ್ಡೆತ್ತದ್ದೆ, ಹಡಕ, .." ಮುಂದಾದ ಮಾತುಗಳನ್ನು ಸಲಿಗೆಯಿಂದ ಸಂಪದದಲ್ಲಿ ಬಳಸಲು ಅನುವಿದೆ, ಎಂದು ಸ್ಪಷ್ಟವಾಗಿ ಹೇಳಿಬಿಟ್ಟರೆ ಮುಗಿಯಿತು, ಇಂಗಿತವಿರುವವರಿಗೆ ಸಲಿಗೆಯಿಂದ ಒಬ್ಬನ್ನೊಬ್ಬರು ಹೀಗೆ ಕರೆದುಕೊಳ್ಳಲು ಒಂದು ದಾರಿ ಸಿಗುವುದು. Smiling

ನನಗೆ ಒಬ್ಬರನ್ನು ಸುಮ್ಮನೆ ಹಿಡಿದು ಜಗ್ಗಿಸುವ ಯಾವ ಇಂಗಿತವಿಲ್ಲ ಈ ಎಳೆಯಲ್ಲಿ ಇರಲಿಲ್ಲ, ಈಗಲೂ ಇಲ್ಲ. ಆದರೆ ಇರುವ ಮಾತನ್ನು ನೇರವಾಗಿ ಹೇಳಿಮುಗಿಸುವ ಅಲುವಾಟವುಂಟು.
===========================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 12:40pm — ವೈಭವ

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ವೈಭವ's picture

ಮಹೇಶ ನನ್ನ ಪರ ಮಾತಾಡಿಲ್ಲ.... ಹಳ್ಳಿ ಬಾಸೇಲಿ ಹೆಂಗೆ ಹೇಳ್ಬೇಕು ಅಂತ ಸುರೇಶ ರವರಿಗೆ ಹೇಳ್ದ.
ನಮ್ಮಲ್ಲಿ ಹಲವರಿಗೆ ಹಳ್ಳಿ ಬಾಸೆ ಅಂದ್ರೆ ಬೈಗುಳ ತುಂಬಿರ್ತವೆ ಅಂತ ತಪ್ಪು ತಿಳುವಳಿಕೆ ಇದೆ. ಬೈಗುಳ, ಕೆಡು ಮಾತು ಆಡ್ದೇನೂ ಹಳ್ಳಿ ಬಾಸೆ ಮಾತಾಡ ಬೌದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 11:29am — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

೧೧) ಅವ್ಚ ಮಗೀಗೆ ಉಸಾರಿಲ್ಲ, ಯಾಕೋ ಕೊರಕೊರ ಅಂತೈತೆ.
೧೨) ಲೇ ಓತಿಕೇತ್ನ ಜಾತಿಯವ್ನೇ, ನಿಂಗೆ ಒಂದ್ ಕ್ಯಾಮೆಯೂ ನೆಟ್ಗ್ ಮಾಡಕ್ ಬರಕ್ಕಿಲ್ವೇನ್ಲಾ
೧೩) ಯಾಕ್ಲೇ, ಒಳ್ಳೇ ಅಂಡ್ ಸುಟ್ ಬೆಂಕ್ ಹಂಗೇ ವಿಲಿವಿಲಿ ಅಂತ ಒದ್ದಾಡ್ತೀಯ. ವಸಿ ಸುಮ್ಕೆ ನೆಟ್ಗಿರು
೧೪) ಅವ್ವಯ್ಯ, ಒಳೀತಕ್ ಓಯ್ತೀಯ ನಾನೂ ಬತ್ತೀನೀಈಈಈಈಈಈ Sad
೧೫)ಲೇ ಇಟ್ಟಿನ್ ಮ್ಯಾಲ್ ಏನ್ಲಾ ನಿನ್ ಕ್ವಾಪ, ಮುಚ್ಕೊಂಡ್ ಉಣ್ ಬಲಾ. ಇಂಗೇ ಆಡದ್ರೆ ಎದ್ ಬಂದ್ ನಾಕ್ ಇಕ್ತೀನಿ.
೧೬) ಏಲ್ಲಾ ಅದು ಕಿಸಿಯಾದು. ಏನ್ ತಲ್ಗಿಲೆ ಕೆಟ್ಟೋಗೈತಾ?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 11:30am — ಶಿವ

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ಶಿವ's picture

ಇಂಜೀನಿಯರಿಂಗ್ ಕಾಲೆಜ್‍ನಲ್ಲಿದ್ದಾಗ ಮಂಡ್ಯ ಮತ್ತು ಹಾಸನದ ಹುಡುಗರು ಬಡ್ಡೆತ್ತದೆ ಪದವನ್ನು ಬಳಸುತ್ತಿದ್ದರು..ನಂಗದರ ಅರ್ಥ ಗೊತ್ತಿರಲಿಲ್ಲ..ಇದನ್ನು ಬಳಸುತ್ತಿದ್ದವರಿಗೂ ಗೊತ್ತಿರಲಿಲ್ಲ.ಇವತ್ತು ಅದರ ಅರ್ಥ ಗೊತ್ತಾಯಿತು..

'ಬಾಯ, ಹೊತ್ತಾತು.ಗದ್ದೆಗೆ ಹೋಗಿ ಬರೋಮ.'
ಬೊಳ್ಪುಗೆ* ಎದ್ದು ಎಲ್ಲಿಗೆಯಾ ಹೋಗಿದ್ದದು? (ಬೊಳ್ಪುಗೆ ಎದ್ದು ಎಲ್ಲಿಗೆ ಹೋಗಿದ್ದ?) - ಇದು ನಮ್ಮ ಕಡೆಯ ಕನ್ನಡ.

*ಬೊಳ್ಪು = ಬೆಳಿಗ್ಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 11:40am — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

ಶಿವ

ಬೆಳ್ಪು/ ಬೊಳ್ಪು ಇದು standard ಕನ್ನಡದ ಒರೆ.
beḷ(u), beḷa, beḷ(u)pu, beḷatige, beḷantige, beḷḷage, biḷa, biḷu, biḷi, biḷe, biḷapu, biḷ(u)pu whiteness, brightness;

ಬೆಟ್ಟು/ಬೊಟ್ಟು ಇದ್ದ ಹಾಗೆ

ಬಿಳುವು/ಬೆಳುವು/ಬೆಳ್ಪು ಇವೆಲ್ಲ ಒಂದೆ.

"ಬೆಳ್ಳಂಬೆಳಗೂ ದಾರಿ ಬಿಡೂ" ಹಾಡು ನೆಪ್ಪಾಯ್ತು Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2007 - 11:47am — ಶಿವ

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ಶಿವ's picture

ಓಹ್! ಧನ್ಯವಾದಗಳು ಮಹೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ಕಡೆ - ಈ ಕಡೆ ...
  • ಮಂಡ್ಯದ ರೈತ, ಸೋಮಶೇಖರ್ , ಬೆಳೆದ ೩೦ ರಾಗಿತಳಿಗಳು !
  • ಹೋದವರ್ಷದ, ಮುಂಬೈ ನ ರೈಲ್ವೆ ಡಬ್ಬಿಯಲ್ಲಿ ಇಟ್ಟ ಬಾಂಬಿನ ಸ್ಪೋಟದ, ಒಂದು ಕೆಟ್ಟ ದೃ‍ಷ್ಯ ! [೧೧/೭]
  • ಕಿರುಮನೆ, ನಡುಮನೆ....
  • ಯಾರು ತೀವ್ರವಾದಿ ? Who is an extremist ?
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator