ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಪ್ರವೀಣ್ ರವರ ಬ್ಲಾಗ್

ನೈತಿಕತೆಯನ್ನು ಮರೆತು ಮರೆಮಾಚುತ್ತಿರುವ ಕಂಗ್ಲೀಷ ಶಾಲೆಗಳು.

June 10, 2007 - 4:51pm — ಪ್ರವೀಣ್

ದುಡ್ದಿದ್ದರೆ ನಮ್ಮ ದೇಶದಲ್ಲಿ ನೋಡಿ ಎನು ಬೇಕಾದರೂ ಆಗುತ್ತವೆ. ದುಡ್ದಿರುವರು ಮಾಡಿರುವ ಒಂದು ಅಪರಾಧವನ್ನು ಸಾಮಜಿಕ ಕಳಕಳಿ
ಎಂದು ಬಿತ್ತರಿಸಲಾಗುತ್ತದೆ.ಕನ್ನಡ ವಿಷಯಕ್ಕೆ ಬಂದರೆ ಕಾನೂನು ಪಾಲಿಸಿ ಅದೂ ಇದು ಎಂದು ಬೊಬ್ಬೆ ಹೊಡೆಯುವ ನಮ್ಮ
ಮಾಧ್ಯಮಗಳು , ಪ್ರಕರಣವನ್ನು ಬೇರೆಡೆ ತಿರುಗುಸಿ, ಇಲ್ಲಾ ಒಂದಿಬ್ಬರ ಅಮಾಯಕ ತಂದೆ ತಾಯಿಗಳ ಬಾಯಿಯಲ್ಲಿ ಮಾತುಗಳನ್ನು
ತುರುಕಿ ಜನರನ್ನು ವಂಚಿಸುವುದು ನೋಡುತ್ತ ನಗಬೇಕೋ ಇಲ್ಲಾ ಅಳಬೇಕೋ ಎಂದು ತಿಳಿಯದೇ ಇರುವಾಗ,
ದುಡ್ದು ಕೊಟ್ಟರೆ stayfreee ಕೂಡ ಹಾಕಿಕೊಳ್ಳುವದಕ್ಕೆ ಹಿಂಜರಿಯದ ಒಂದು ವರ್ಗ ಕೂಡ ಇದೆ, ಇವರನ್ನು stayfree ವರ್ಗ ಎಂದೇ ಕರೆಯೋಣ. ರಾಜಕರಣೀಗಳು,
ಸಾಹಿತಿಗಳು ಮತ್ತು ಪತ್ರಕರ್ತರ ಇರುವ ಈ ದಂಡು, ವ್ಯವಸ್ತಿತವಾಗಿ ವಿಷಯವನ್ನು ಮೇಲ್ವರ್ಗ-ಕೀಳ್ವರ್ಗ, ಐ.ಟಿ-ಬಿ.ಟಿಯ ಒಂದು ಟಚ್ ಕೊಟ್ತ್ತು
ಮುಖ್ಯ ವಂಚನೆಯನ್ನು ಮರೆಮಾಚುವ ಕೆಲ್ಸಕ್ಕೆ ಸಂಪೂರ್ಣ ಸಾಥ್ ಕೊಡುತ್ತವೆ.

ಮುಖ್ಯ ವಂಚನೆ ಎಂದರೇನು ??
ಈ ಶಾಲೆಗಳು ಸರಕಾರಕ್ಕೇ ಅನೇಕ ವರ್ಶಗಳಿಂದ ಕನ್ನಡ ಮಾಧ್ಯಮಗಳಲ್ಲಿ ಭೊಧನೆ ಮಾಡುತ್ತವೆ ಎಂದು ಮೋಸ ಮಾಡಿ,
ಇಲ್ಲಿ ಅಮಾಯಕ ಜನರಿಗೆ ನಮ್ಮ ಹತ್ತಿರ ಮಾನ್ಯತೆ ಇದೆ, ನಾವು ಪಾಠ ಮಾಡುವದೆಲ್ಲಾ ಸರಕಾರ ಪಠ್ಯಕ್ರಮ ಎಂದು ಬೂಸಿ ಬಿಟ್ಟು,
ಈ ಫೀಸು, ಆ ಫೀಸು, ಬಿಲ್ಡಂಗ್ ಡೊನೆಷನ್ ಎಂದು ಲೂಟಿ ಮಾಡುತ್ತ ಇರುವುದು ನಮ್ಮ stayfree ವರ್ಗಕ್ಕೆ ತಿಳಿದದೇ ಇರುವುದು ಮತ್ತು
ತಿಳಿದರೂ ಗೊತ್ತಿಲ್ಲದೇ ಇರುವುದು ಜಾಣಕುರುಡೇ ಸರಿ.
ತಮ್ಮ ಅಕ್ರಮಗಳು ಯಾವಾಗ ಬೆಳಕಿಗೆ ಬಂದವೋ ಆಗ ವಿಷಯವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತ ಬಂದಿದೆ, ಕಾಲಹರಣ ಮಾಡಲು
ಕೋರ್ಟಿಗೆ ಹೋಗಿ ಅವರ ಕೈನಲ್ಲೂ ಚಿಮಾರಿ ಹಾಕಿಸಿಕೊಂಡಿರುವ ಈ ಶಾಲೆಗಳು , ತಮ್ಮ ಕ್ರಮಕ್ಕೆ ಪೋಷಕರೇ ಕಾರಣ ಎಂದು ಗೂಬೆಯನ್ನು
ಅವರ ಮೇಲೆ ಕೂರಿಸುವ ಮತ್ತು ಅವರ ಕೈನಲ್ಲಿ ಪ್ರತಿಭಟನೆ ಮಾಡಿಸುವ ಚಿಲ್ಲರೆ ರಾಜಕರಣ ಮಾಡುತ್ತಿವೆ. ಇವರು ಕಳ್ಳ ಕೆಲಸವನ್ನು ಮಾಡಲು ಹೋರಟಾಗ
ಯಾವ ಪೋಷಕರು ಒತ್ತಾಯ ಮಾಡಿದ್ದರು ಎಂದು ಹೇಳಲಿ ನೋಡೊಣ. ಜನರನ್ನು ಲೂಟಿ ಮಾಡಿ ಡೊನೆಷನ್ ತೆಗೆದುಕೊಳ್ಳುವದನ್ನು ಯಾವ ಪೊಷಕರು
ಹೇಳಿಕೊಟ್ಟರೋ ನಾ ಕಾಣೆ. ಅದೇ ಪೋಷಕರು ನಾಳೇ ಡೊನೆಷನ್ ಇಲ್ಲದೇ ನಡೆಸುತ್ತಾರ ಎನ್ನುವುದು ಯಕ್ಷಪ್ರಶ್ನೆ.
ಒಂದು ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವುದು ಯಾಕೆ, ಮುಂದೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ, ಒಂದು ಒಳ್ಳೆಯ
ಮಾನವೀಯ ಮೌಲ್ಯಗಳನ್ನು ಅಭ್ಯಸಿಸುತ್ತಾರೆ ಎನ್ನುವ ಒಂದು ನಂಬಿಕೆ ಮೇಲೆ. ಆದರೆ ಇಲ್ಲಿ ನೋಡಿ ವೈಚಿತ್ರ್ಯ, ಶಾಲೆಯ ಆಡಳಿತವನ್ನು ನೋಡಿ ಮಕ್ಕಳು
ಕಲಿಯುವುದೇ ಬೇರೆ
೧) ಸರಕಾರಕ್ಕೆ ಸುಲಭವಾಗಿ ವಂಚನೆ ಮಾಡಬಹುದು
೨) ದುಡ್ದಿದ್ದರೆ ಸಾಕು, stayfree ವರ್ಗ ನಮ್ಮ ತೆಕ್ಕೆಯಲ್ಲಿ ..
೩) ಯಾವುದಕ್ಕೋ ಪರವಾನಿಗೆ ಪಡೆದು , ಇನ್ಯಾವುದೋ ಕೆಲ್ಸ ಮಾಡುವುದು.
ಉಧಾ:- ನಾಳೆ ಶಿವಕಾಶಿಯಲ್ಲಿ ಪಟಾಕಿ ಮಾಡಲು ಪರವಾನಿಗೆ ಪಡೆದು, ಬಾಂಬ್ ಮಾಡಲು ಹೋರಟರೆ ಅದನ್ನು ನಾವು ಸಮರ್ಥನೆ ಮಾಡಬೇಕೆ ??
ಆವಗಲೂ ಕೂಡ ಈ ನಮ್ಮ stayfree ವರ್ಗ ಪಾಪ ತುಂಬಾ ಮಕ್ಕಳ ಭವಿಷ್ಯವಿದೆ ಎಂದು ಸಾಮಾಜಿಕ ಕಳಕಳಿ ತೋರುವುದೇ ??. ಇದು ಬಡವರ ಮೇಲೆ ಮಾಡುತ್ತಿರುವ
ಧಬ್ಬಾಳಿಕೆ ಎಂದು ಬೊಬ್ಬೆ ಹೊಡೆಯುವುದೇ? .
ಅಷ್ತು ಮಕ್ಕಳ ಬಗ್ಗೆ ಕಳಕಳಿ ಇರುವ stayfree ವರ್ಗ ಓದುವ ವಯಸ್ಸಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರ ಬಗ್ಗೆ ದನಿ ಎತ್ತಲ್ಲಿ. ಅವರನ್ನು ಪಾಪಕೂಪದಿಂದ ಬಿಡುಗಡೆಗೊಳಿಸಿ
ಶಾಲೆಗೆ ಸೇರಿಸಲಿ , ಅದನ್ನು ಬಿಟ್ಟು ದುಡ್ದಿಗೆ ಜೋತು ಬಿದ್ದು ನಂದೆಲ್ಲಿ ಇಡಲಿ ನಾರಾಯಣ ಮೂರ್ತಿ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವುದು. ಅಕ್ರಮವನ್ನು ಸಕ್ರಮ ಮಾಡಲು
ಹೋಗುವುದು ಅವರಿಗೆ ಸರಿ ಕಾಣುವದಿಲ್ಲ. ಸ್ವಲ್ಪ ಸಾಮಾಜಿಕ ಖಳ-ಖಳಿ ತೋರುವ ಬದಲು, ಸಾಮಾಜಿಕ ಬದ್ಧತೆ ತೋರಿಸಲಿ ಸಾಕು.

ಕೊಸರು:- ಅಷ್ತಕ್ಕೂ ಈ ಶಾಲೆಗಳ ಗುಣಮಟ್ಟವನ್ನು ಗಮನಿಸಿದರೆ, ನಿಮಗೆ ಇವರ ಬಂಡವಾಳ ತಿಳಿಯುತ್ತದೆ. ಸ್ವಲ್ಪ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಇರುವ ಒಂದು ಪ್ರದೇಶದಲ್ಲಿ ಇವರು ತಮ್ಮ ಶಾಲೆಯನ್ನು ಶುರು ಮಾಡುತ್ತಾರೆ. ಸರಕಾರಕ್ಕೆ "ಕನ್ನಡ ಮಾಧ್ಯಮದಲ್ಲಿ" ಪಾಠ ಮಾಡುತ್ತೆವೆ ಎಂದು ಛಾಪ ಕಾಗದದಲ್ಲಿ ಬರಾದುಕೊಟ್ತು, ಒಂದು ವಿದೇಶಿಯನ ಹೆಸರಿಟ್ಟಿ, ಶಾಲೆಯನ್ನು ಆರಂಭಿಸುತ್ತಾರೆ. ಇವರು ಕೆಲ್ಸಕ್ಕೆ ಸೇರಿಸಿಕೊಳ್ಲುವರಿಗೂ ಕೂಡ ೧ ಸಾವಿರ-೨ ಸಾವಿರ ಮಾತ್ರ ಕೊಡುತ್ತಾರೆ. ಒಂದು ಪರದೆ ಹಾಕಿ
ಒಂದೇ ರೂಮಿನಲ್ಲಿ ೨ ಕ್ಲಾಸ್ ಇಂದ ಶುರು ಆಗುವ ಈ ಶಾಲೆಗಳು, ಮುಂದೆ ಜನರನ್ನು ಲೂಟಿ ಮಾಡಿ ತಮ್ಮ ಉಪ್ಪರಿಗೆ ಎರಿಸಿಕೊಳ್ಳುತ್ತಾರೆ.
ಮಕ್ಕಳಿಗೆ ಸರಿಯಗಿ ವಿದ್ಯೆ ಕೊಡದಿದ್ದರು ಸಹ, ಅಪ್ಪ-ಅಮ್ಮನ ಜೊತೆ ಇಂಗ್ಲೀಷನಲ್ಲಿ ಮಾತನಾಡಬೇಕು, ಸಮವಸ್ತ್ರವನ್ನು ಇಸ್ತ್ರಿ ಮಾಡಿಕೊಂಡು ಬನ್ನಿ ಎಂದು ಹೇಳಿ ಕಳಿಸುತ್ತ್ತಾರೆ.
ಜೊತೆಗೆ ಒಂದನೇ ಕ್ಲಾಸಿನ ಮಕ್ಕಳಿಗೂ ನೂರು ಪುಸ್ತಕಗಳ ಮಣ ಭಾರ ಹೋರಿಸುತ್ತಾರೆ. ಇದನ್ನು ನೋಡುವ ನಮ್ಮ ಪೊಷಕರು, ಅಬ್ಬ್ಬಾ ನಮ್ಮ ಮಕ್ಕಳು ಸೂಪರ್ ಆಗಿ ಓದುತ್ತಿವೆ. ಲಂಡನ್ ಮಕ್ಕಳ ಹಾಗೆ ಟಸ್-ಪುಸ್ ಎಂದು ಇಂಗ್ಲೀಷ್ ಹೇಳುತ್ತಿವೆ ಖುಹಿಯಾಗಿ ಬೀಗುತ್ತಾರೆ. ಕೇಳಿದಾಗಲೆಲ್ಲಾ ಶಾಲೆಗೆ ಸಾಲ ಮಾಡಿ ಆದರೂ ದುಡ್ದು ಸುರಿಯುತ್ತಾರೆ.
ವ್ಯ್ಸವಸ್ಥೆಗಳೇ ಇರದ ಶಾಲೆಗಳು ನೈತಿಕತೆ ಬಗ್ಗೆ ಮಾತನಾಡುವುದು ನೋಡಿದರೆ, "ಭೂತದ ಬಾಯಿನಲ್ಲಿ ಭಗವದ್ಗೀತೆ ಕೇಳಿದ ಹಾಗೆ ಆಗುತ್ತದೆ"

  • ಪ್ರಚಲಿತ ವಿಧ್ಯಾಮಾನ
~.~
  • ಪ್ರವೀಣ್ ರವರ ಬ್ಲಾಗ್
  • Login or register to post comments
  • 476 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 11, 2007 - 11:34am — mahesha

ಉ: ನೈತಿಕತೆಯನ್ನು ಮರೆತು ಮರೆಮಾಚುತ್ತಿರುವ ಕಂಗ್ಲೀಷ ಶಾಲೆಗಳು.

mahesha's picture

ಇದಕ್ಕೆಲ್ಲ ಬುಡವಾಗಿರುವ ಕಾರಣವೇನು ಎಂದು ಹುಡುಕಿದರೆ, ಇವೆಲ್ಲ ಏಕೆ ಅಂತ ತಿಳಿಯುವುದು.

೧) ಕನ್ನಡದಲ್ಲಿ science, maths ಕಲಿತರೆ ಮುಂದೆ ಹೆಚ್ಚಿನ ಓದಿಗೆ ತೊಂದರೆ. ಇದು ಬರೀ ಒಬ್ಬರ ಅನಿಸಿಕೆ ಎಂದು ಹೇಳಿಕೊಂಡು ನಮ್ಮನ್ನು ನಾವು ಸಂತೈಸಿಕೊಳ್ಳಬಹುದು.
೨) ಕನ್ನಡ ಮೀಡಿಯಂ ಅಂತ, ತಲೆಗಿಳಿಯದ ಸಂಸ್ಕೃತೀಕರಿಸಿ ಕನ್ನಡದ ಬಳಕೆ. ಮನೆಯಲ್ಲಿ ಮಾತಾಡು ಕನ್ನಡಕ್ಕೂ ಶಾಲೆಯ ವಿಚಿತ್ರ ಕನ್ನಡಕ್ಕೂ ನಂಟೇ ಇಲ್ಲ. ಅದೂ ಅಲ್ಲದೇ ಗೊಂದಲವೂ ಗೊಂದಲ, "ವೇಗ ಮತ್ತು ಜವ" ಇದರ ಮಾದರಿ ನೀಡಿದ್ದರು ಕಿಶೋರ್‍ ಪಟವರ್ಧನ್ ಇಲ್ಲೇ.
೩) ಸರಕಾರ ಇಂಗ್ಲೀಶ ಮೀಡಿಯಂ ಶಾಲೆಯನ್ನು ತೆರೆಯಲು ಅಪ್ಪಣೆ ಕೊಡುತ್ತಿಲ್ಲ. ಇದು ಒಂದ ಬಗೆಯ ದಬ್ಬಾಳಿಕೆ. ಸರಕಾರ ಇಂಗ್ಲೀಶ್ ಶಾಲೆ ತೆರೆಯೋದೇನು ಬೇಡ. ಯಾರಿಗೆ ಇಂಗ್ಲೀಶ್ ಬೇಕೋ ಅವರು ಇಂಗ್ಲೀಶ್ ಮೀಡಿಯಂ ಅಲ್ಲೇ ಓದಲು ಎಲ್ಲ ಅನು ಇರಬೇಕು.
೪) ಕನ್ನಡದಲ್ಲಿ science ಅಲ್ಲಿ PUC, BSc, BE, MBBS, MBA ಮಾಡಕ್ಕೆ ಆಗೋದೇ ಇಲ್ಲ.

ಇಲ್ಲಿ demand ಇರೋದು ಇಂಗ್ಲೀಶ್ ಶಾಲೆಗೆ, ಸರಕಾರ ಅದನ್ನು ತಕ್ಕ ಮಟ್ಟಿಗಾದರೂ ತೀರಿಸಬೇಕು. ಇಲ್ಲದಿದ್ದರೆ, ಯಾವಾಗ demand ಸಿಕ್ಕಾಪಟ್ಟೆಯಾಗಿ supply ತೀರಾ ಕಡಮೆಯಾದರೇ, ಕಳ್ಳಸಂತೆ ಆಗುವಂತೆ ಇಂತಹ ಮೋಸ ನಡದೇ ನಡೆಯುವುದು. ಇದನ್ನು ತಡೆಯೋ ಬಲ್ಮೆ, ಜಾಣ್ಮೆ ನಮ್ಮ ಸರಕಾರಕ್ಕೆ ಇದೆ ಅನ್ನೋದು ನಂಬಕ್ಕಾಗಲ್ಲ.!

=========
ಬರಹದಲ್ಲಿ ಕೆಲವು ತಪ್ಪುಗಳಿವೆ, ಅಚ್ಚುತಪ್ಪುಗಳಿರಬೇಕು. !

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 11:36am — mahesha

ಉ: ನೈತಿಕತೆಯನ್ನು ಮರೆತು ಮರೆಮಾಚುತ್ತಿರುವ ಕಂಗ್ಲೀಷ ಶಾಲೆಗಳು.

mahesha's picture

'ಸಂಸ್ಕೃತೀಕರಿಸಿ ' ನನಗೂ ಈ 'ಈಕರಿಸು'ವ ಸೊಂಕು ತಗುಲಿದೆ. Smiling
ಇದನ್ನು 'sanskrized' ಎಂದು ಓದಿಕೊಳ್ಳಿರಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 11:36am — mahesha

ಉ: ನೈತಿಕತೆಯನ್ನು ಮರೆತು ಮರೆಮಾಚುತ್ತಿರುವ ಕಂಗ್ಲೀಷ ಶಾಲೆಗಳು.

mahesha's picture

sanskrized ಅಲ್ಲ sanskritized.

"ದುಡುಕೇ ತಪ್ಪಿಗೆ ಕಾರಣ" Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:18pm — ಪ್ರವೀಣ್

ಉ: ನೈತಿಕತೆಯನ್ನು ಮರೆತು ಮರೆಮಾಚುತ್ತಿರುವ ಕಂಗ್ಲೀಷ ಶಾಲೆಗಳು.

ಪ್ರವೀಣ್'s picture

ಯಾವುದಕ್ಕೆ ಡಿಮ್ಯಾಂಡ್ ಇರುವುದೊ ಅದನ್ನು ಸರಕಾರ ಪೂರೈಸಬೇಕು, ಅದನ್ನು ತಡೆಯುವುದು ಅಪರಾಧ ಎನ್ನುವ ಹಾಗೆ ಇದೆ ನಿಮ್ಮ ಧಾಟಿ.
ಅದನ್ನು ಒಪ್ಪಿಕೊಂಡರೆ, ಬ್ಯೂಟಿ ಪಾರ್ಲರ್ ಹೆಸರಲ್ಲಿ ವ್ಯಭಿಚಾರವನ್ನು ಕೂಡ ಸಮರ್ಥಿಸಿಕೊಳ್ಳಬಹುದು, ಮಕ್ಕಳ ಸಮಾಜಿಕ ದೃಷ್ಟಿಯಲ್ಲಿ ನೋಡುವದಾದರೆ, ಅವರು ತಮ್ಮ ಮಕ್ಕ್ಳಳ ಉತ್ತಮ ಭವಿಷ್ಯಕ್ಕೆ ಮಾಡಿದರು ಎಂದು ಸಮರ್ಥನೆ ಮಾಡಿಕೊಂಡು ಅಕ್ರಮವನ್ನು ಸಕ್ರಮ ಎಂದು ಹೇಳಬಹುದು.

ಇಲ್ಲಿ ಸಮಸ್ಯೆ ಆಂಗ್ಲ ಮತ್ತು ಕನ್ನಡ ಮಾಧ್ಯಮದ್ದು ಅಲ್ಲ. ಇದು ಒಂದು ದೊಡ್ಡ ವಂಚನೆ, ಅದಕ್ಕೆ ಮತ್ತೆ demand-suppply ಅನ್ನುವ ಜಾರ್ಗನ್ ಕೊಟ್ಟು ವಿಷಯಾಂತರ ಮಾಡುವುದು ಬೇಡ. ಅನುಮತಿ ಪಡೆದು ಶಾಲೆ ನಡೆಸುತ್ತ ಇರುವರ ಹಾಗೆ ಇವರು ಮಾಡಬಹುದಿತ್ತು, ಆದರೆ ಹಾಗೆ ಮಾಡದೇ, ಶಿಕ್ಷ್ಣವನ್ನು ವ್ಯಾಪರ ಮಾಡುವ ಇವರ ಕ್ರಮ ಸರಿಯೇ ??. ಕನ್ನಡ ಮಾಧ್ಯಮವನ್ನು ಕಾಪಾಡುವ ಗುರುತರ ಜವಾಬ್ದಾರಿ ಸರಕಾರದ ಮೇಲೆ ಇದೆ,ಅದನ್ನು ಅದು ಮಾಡುತ್ತ ಇದೆ.

ಮುಂದುವರೆಯುತ್ತ, ಇನ್ನೂ ನಿಮ್ಮ ಬೇರೆ ತರ್ಕಗಳು (೨,೩)ಸರಿ ಕಾಣುವದಿಲ್ಲ, ಯಾಕೆ ಅಂದರೆ ಪ್ರಾರ್ಥಮಿಕ ಶಿಕ್ಶಣ ಮಾತೃಭಾಷೆಯಲ್ಲಿ ಇರಬೇಕೆಂದು ನಮ್ಮ ನ್ಯಾಯಲಯ ಹೇಳಿದೆಯೆ ವಿನಹ MBBS,BE,MBA..PUC.SSLC ಇರಬೇಕೆಂದು ಹೇಳಿಲ್ಲ, ೪ನೇ ತರಗತಿ ಆದ ಕೂಡಲೇ ಇವುಗಳನ್ನು ಯಾರು ಕಲಿಯುವದಿಲ್ಲ. ಅದ್ದರಿಂದ ಅವು ಅರ್ಥ ಕಳೆದು ಕೊಳ್ಳುತ್ತದೆ. ಇದು ಸುಖಾ-ಸುಮ್ಮನೆ ನ್ಯಾಯಲಯ ಹೇಳಿರುವ ಮಾತಲ್ಲ, ಈ ನಿರ್ಣಯದ ಹಿಂದೆ ಒಂದು ಅಧ್ಯಯನದ ಬೆನ್ನೆಲೆಬು ಇದೆ.

ಜ್ಮಾನ ಮುಖ್ಯವೊ ಇಲ್ಲಾ ಭಾಷೆ ಮುಖ್ಯವೋ ನಾ ಕಾಣೆ.. ನಿಮ್ಮ ಮೊದಲೆನೆ ತರ್ಕಕ್ಕೆ ಬರೋಣ. ನಿಮ್ಮ ಪ್ರಕಾರ ಮಾತೃಭಾಷೆಯಲ್ಲಿ ಕಲಿಯುವ ಜನರು ಅದರ ಮೇಲೆ ಹಿಡಿತ ಸಾಧಿಸುವದಿಲ್ಲ, ಕೇವಲ ಇಂಗ್ಲೀಷನಲ್ಲಿ ಕಲಿತರೆ ಮಾತ್ರ ಸಾಧನೆ ಎನ್ನುವುದೆ ಸರಿಯಾಗಿದ್ದರೆ International Maths Olympiad ನಲ್ಲಿ ಇಂಗ್ಲೀಷ್ ದೇಶಗಳ ಸಾಧನೆ ನೋಡಿ. ಹಂಗೇರಿ, ರಶಿಯಾ,ರೋಮಾನಿಯಾ, ಬಲ್ಗೇರಿಯಾ ,ಜಪಾನ್ ಇವುಗಳ ಸಾಧನೆ ಎದ್ದು ಕಾಣುತ್ತದೆ. ಅಂದರೆ ಜಗತ್ತಿನ ಒಂದು ದೊಡ್ಡ ಪ್ರತಿಭಾ ಅನ್ವೇಷಣಾದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರದೇ ಮೇಲುಗೈ. ಅದ್ದರಿಂದ ತರ್ಕವಿಲ್ಲದ ಮಾತುಗಳನ್ನು ಹೇಳಿ ಕನ್ನಡ ಕೇವಲ ಸಾಹಿತ್ಯ ಭಾಷೆಗೆ ನಿಲ್ಲಿಸುವುದು ನಮ್ಮ ಕೀಳೆರಿಮೆ ತೋರುತ್ತದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 6:25pm — mahesha

ಉ: ನೈತಿಕತೆಯನ್ನು ಮರೆತು ಮರೆಮಾಚುತ್ತಿರುವ ಕಂಗ್ಲೀಷ ಶಾಲೆಗಳು.

mahesha's picture

ಪ್ರವೀಣ್ ಸಾರ್‍...

ಇವರು ಮಾಡಿರುವುದು ಮೋಸ. ಒಪ್ಪೋಣ.

ನೀವು ಹೇಳಿರುವ ಕೆಲವು ಸಂಗತಿಗಳ ಬಗ್ಗೆ ನನ್ನ ಅನಿಸಿಕೆ ಮಡಗಿದೆ ಹೊರತು, ನೀವು ತಪ್ಪೆನ್ನಲಿಲ್ಲ.! ನಿಮ್ಮ ಬರಹದಲ್ಲಿ ಎತ್ತಿರುವ ಸಂಗತಿ ಸರಿಯಾದುದು, ಈ ಹೊತ್ತು ಉಂಕಿಸಬೇಕಾದುದು.

ನಿಮ್ಮ ಮಾತುಗಳ ಬಗ್ಗೆ ನನ್ನ ಅನಿಸಿಕೆಗಳಿವು

ಯಾವುದಕ್ಕೆ ಡಿಮ್ಯಾಂಡ್ ಇರುವುದೊ ಅದನ್ನು ಸರಕಾರ ಪೂರೈಸಬೇಕು, ಅದನ್ನು ತಡೆಯುವುದು ಅಪರಾಧ ಎನ್ನುವ ಹಾಗೆ ಇದೆ ನಿಮ್ಮ ಧಾಟಿ.
ಅದನ್ನು ಒಪ್ಪಿಕೊಂಡರೆ, ಬ್ಯೂಟಿ ಪಾರ್ಲರ್ ಹೆಸರಲ್ಲಿ ವ್ಯಭಿಚಾರವನ್ನು ಕೂಡ ಸಮರ್ಥಿಸಿಕೊಳ್ಳಬಹುದು, ಮಕ್ಕಳ ಸಮಾಜಿಕ ದೃಷ್ಟಿಯಲ್ಲಿ ನೋಡುವದಾದರೆ, ಅವರು ತಮ್ಮ ಮಕ್ಕ್ಳಳ ಉತ್ತಮ ಭವಿಷ್ಯಕ್ಕೆ ಮಾಡಿದರು ಎಂದು ಸಮರ್ಥನೆ ಮಾಡಿಕೊಂಡು ಅಕ್ರಮವನ್ನು ಸಕ್ರಮ ಎಂದು ಹೇಳಬಹುದು.

ಬೇಡಿಕೆ ಇರುವುದನ್ನು ಪೂರೈಸದಿದ್ದರೆ, ಕಳ್ಳಸಂತೆ, ಕಳ್ಳಮಾರಾಟ ನಡೆಯುವುದು. ನೀವು ಹೇಳಿದ 'ಸೂಳೆಗಾರಿಕೆ', ಇನ್ನೂ ಇದೆ, ಇರುತ್ತದೆ. ಸರಕಾರಕ್ಕೆ ಅವನ್ನು ಬುಡದಿಂದ ಕಿತ್ತೊಗೆಯಲು ಆಗುವುದೇ ಇಲ್ಲ. ಏಕೆಂದರೆ ಅದಕ್ಕೆ 'ಬೇಡಿಕೆ' ಇದ್ದೇ ಇರುತ್ತದೆ. ಅದಕ್ಕೆ ಹಿಂದ ಅರಸರು ಮಾಡಿದ ಹಾಗೆ ಒಂದು "legal channel" ಕೊಟ್ಟರೆ ಒಳ್ಳೆಯದು.
"ಮನೆಗೆ ದೇವರಕೋಣೆ ಇರುವಂತೆ ಕಕ್ಕಸೂ ಇರಬೇಕು". ( ಹಾಗಂತ ನಾನು ಇದರ ಹೋರಾಟಗಾರ ಅಲ್ಲ Smiling )

ಇಲ್ಲಿ ಹೆಚ್ಚು ಮಂದಿಗೆ ತಮ್ಮ ಮಕ್ಕಳನ್ನು ಇಂಗ್ಲೀಶಲ್ಲೇ ಓದಿಸುವ ಹಂಬಲ ಇರುವುದು, ತಿಳಿಯಾಗಿ ಕಾಣುತ್ತಾ ಇದೆ. ಅದಕ್ಕೆ ಹಿಂದೆ ಕೆಲವು ಕಾರಣಗಳು ಹೇಳಿದ್ದೀನಿ ಅಲ್ವಾ! ಮೊದಲು ನಮ್ಮ ಮಂದಿಯ ಮನದಲ್ಲಿ ಇಂಗ್ಲೀಶ್ ಬಗ್ಗೆ ಒಲವು, ಹುಚ್ಚು ಹೋಗಿಸಬೇಕು. ಅದಕ್ಕಾಗಿ ನಾವು / ಸರಕಾರ ದುಡಿಯಬೇಕು.

ಇಲ್ಲಿ ಸಮಸ್ಯೆ ಆಂಗ್ಲ ಮತ್ತು ಕನ್ನಡ ಮಾಧ್ಯಮದ್ದು ಅಲ್ಲ. ಇದು ಒಂದು ದೊಡ್ಡ ವಂಚನೆ, ಅದಕ್ಕೆ ಮತ್ತೆ demand-suppply ಅನ್ನುವ ಜಾರ್ಗನ್ ಕೊಟ್ಟು ವಿಷಯಾಂತರ ಮಾಡುವುದು ಬೇಡ. ಅನುಮತಿ ಪಡೆದು ಶಾಲೆ ನಡೆಸುತ್ತ ಇರುವರ ಹಾಗೆ ಇವರು ಮಾಡಬಹುದಿತ್ತು, ಆದರೆ ಹಾಗೆ ಮಾಡದೇ, ಶಿಕ್ಷ್ಣವನ್ನು ವ್ಯಾಪರ ಮಾಡುವ ಇವರ ಕ್ರಮ ಸರಿಯೇ ??. ಕನ್ನಡ ಮಾಧ್ಯಮವನ್ನು ಕಾಪಾಡುವ ಗುರುತರ ಜವಾಬ್ದಾರಿ ಸರಕಾರದ ಮೇಲೆ ಇದೆ,ಅದನ್ನು ಅದು ಮಾಡುತ್ತ ಇದೆ.

ಇದು ಮೋಸವೇ. ಅದನ್ನು ಎಲ್ಲರೂ ಒಪ್ಪುವರು. ನಾನು ಯಾವಾಗಲೂ "ರಸ್ತೆ ನೇಮ"/"Traffic rules"ಅಂತೆ ನಡೆಯುತ್ತೇವ? ಇಲ್ಲ ಮುರಿದೇ ಮುರಿಯುವೆವು. ಏಕೆಂದರೆ ನಮಗೆ ಗೊತ್ತು ಮುರಿದರೂ ನಮಗೆ ಯಾವ ದಂಡವಿಲ್ಲ. ದಂಡವಿದ್ದರೂ ಕಡಮೆ.

'ಕಲಿಕೆ'ಯನ್ನು ಮಾರಾಟ ಮಾಡುವವರು ಯಾರು ಎಂದು ಪಟ್ಟಿ ಮಾಡಿದರೆ, ಎಂತೆಂತ ಮಠದವರ, ಮುಂದಾಳುಗಳ ಹೆಸರು ಬರುವುದು. ಇವರೆಲ್ಲ ನಮ್ಮ 'ಆಧ್ಯಾತ್ಮ ಗುರುಗಳು' ನಮ್ಮ 'ಮುಂದಾಳುಗಳು'.

ಸರಕಾರಕ್ಕೆ ಕನ್ನಡದ ಮೀಡಿಯಂ(ಅಂತ ಹೆಸರಿರುವ ಯಾವುದೋ ನುಡಿ) ಕಾಪಾಡುವುದಕ್ಕಿಂತ ದೊಡ್ಡದಾದ ಹೊಣೆ, ಮಂದಿಯಲ್ಲಿ 'ಕನ್ನಡತನ' ಬೆಳೆಸುವುದು. ನಮ್ಮೆಲ್ಲರಿಗೂ ಅದು ಬಂದರೆ ಇವೆಲ್ಲ ತಾನೇ ತಾನಾಗಿ ಸರಿ ಹೋಗುವುದು.

ಇವೊತ್ತು ಮಂದಿ ಕನ್ನಡದಿಂದ ದೂರ ಸರಿಯುವದಕ್ಕೆ ಕಾರಣಗಳು
೧) ಬರಿ 'ಕನ್ನಡ' ಕಲಿತರೆ ಕೆಲಸ ಸಿಗಲ್ಲ. ಇಂಗ್ಲೀಶ್ ಬೇಕೇ ಬೇಕು. ಅದು ಬೆಂಗಳೂರಲ್ಲಿ, ಕನ್ನಡ ಬರದಿದ್ದರೂ, ಇಂಗ್ಲೀಶ್ ಬೇಕು. central ಸರಕಾರದ ಕೆಲಸಗಳಿಗೆ ಕನ್ನಡಿಗರಿಗೆ ಹಿಂದಿ ಬರಲೇ ಬೇಕು ( ತಮಿಳರಿಗೆ ಈ ಕಡ್ಡಾಯವಿಲ್ಲ )
೨) Sanskritized ಕನ್ನಡ ಹೇಳಿಕೊಟ್ಟು, ಅದನ್ನು "ಮಾತೃಭಾಷಾ ಶಿಕ್ಷಣ" ಅನ್ನುವುದು ದೊಡ್ಡ ಮೋಸ. ಅವರ 'ತಾಯ್ನುಡಿ'ಯಲ್ಲಿ ಇರುವ ಪದಗಳೇ ಇಲ್ಲ ಅವರು ಕಲಿಯುವ ಕನ್ನಡದಲ್ಲಿ. ಮನೆಯಲ್ಲಿ 'ನೀರು ಕುಡಿಯುವರು' ಶಾಲೆಯಲ್ಲಿ 'ಜಲಪಾನ ಮಾಡುವರು'. ಈ ಸಂಗತಿ ಸಂಪದದಲ್ಲಿ ಹಲವು ಸರತಿ ಮಾತುಕತೆಯಾಗಿ ಹೋಗಿದೆ.
೩) ಕನ್ನಡದಲ್ಲಿ ಹೆಚ್ಚು ಓದಲು ಆಗಲ್ಲ.(ಹಿಂದೆ ಹೇಳಿದೆ)

ಮುಂದುವರೆಯುತ್ತ, ಇನ್ನೂ ನಿಮ್ಮ ಬೇರೆ ತರ್ಕಗಳು (೨,೩)ಸರಿ ಕಾಣುವದಿಲ್ಲ, ಯಾಕೆ ಅಂದರೆ ಪ್ರಾರ್ಥಮಿಕ ಶಿಕ್ಶಣ ಮಾತೃಭಾಷೆಯಲ್ಲಿ ಇರಬೇಕೆಂದು ನಮ್ಮ ನ್ಯಾಯಲಯ ಹೇಳಿದೆಯೆ ವಿನಹ MBBS,BE,MBA..PUC.SSLC ಇರಬೇಕೆಂದು ಹೇಳಿಲ್ಲ, ೪ನೇ ತರಗತಿ ಆದ ಕೂಡಲೇ ಇವುಗಳನ್ನು ಯಾರು ಕಲಿಯುವದಿಲ್ಲ. ಅದ್ದರಿಂದ ಅವು ಅರ್ಥ ಕಳೆದು ಕೊಳ್ಳುತ್ತದೆ. ಇದು ಸುಖಾ-ಸುಮ್ಮನೆ ನ್ಯಾಯಲಯ ಹೇಳಿರುವ ಮಾತಲ್ಲ, ಈ ನಿರ್ಣಯದ ಹಿಂದೆ ಒಂದು ಅಧ್ಯಯನದ ಬೆನ್ನೆಲೆಬು ಇದೆ.

ಹೌದು. Court ಹೇಳಿದೆ. ಆದರೆ ಕಡ್ಡಾಯ ಎಂದು ಹೇಳಿಲ್ಲ. ಇಲ್ಲದಿದ್ದರೇ, ಈಗಿರುವ ಇಂಗ್ಲೀಶ್ ಶಾಲೆಗಳನ್ನು ಮುಚ್ಚಬೇಕು. Court ಹೇಳಿದರೂ, ಅವರ ಅವರ ಹಂಬಲದಂತೆ ಇಂಗ್ಲೀಶಲ್ಲಿ ಕಲಿಯುವ ಹಕ್ಕು 'ಬಾರತದ ಮಂದಿ'ಗೆ ಇದೆ. ಕೆಲವರ ಹಟದಂತೆ, ಹಲವರ ಹಂಬಲವನ್ನು ಕಡೆಯೆಣಿಸುವುರು 'ಜನರಾಡಳಿತ'ದ ಗುಣವಲ್ಲ. ಇಂಗ್ಲೀಶ್ ಮೀಡಿಮಂ ಬೇಕೇ ಬೇಡವೇ ಅಂತ ಒಂದು referendum ಆದರೆ ಇಂಗ್ಲೀಶ್ ಮೀಡಿಯಂಗೆ ತಕ್ಕ ಮಟ್ಟಿಗಾದರೂ ಓಟು ಬೀಳುವುದು. ಇಂಗ್ಲೀಶ್ ಶಾಲೆಗೆ ಮಂದಿ ಮುಗಿಬೇಳುತ್ತಿದ್ದಾರೆ.

ಇಲ್ಲಿ ಕೆಲವು ಇಂಗ್ಲೀಶ್ ಶಾಲೆಯನ್ನು ನೆಡಸಲು ಬಿಟ್ಟು, ಅವರಿಗೆ ಹೆಚ್ಚಾಗಿ ದುಡ್ಡು ಗಿಟ್ಟಿಸುವ ಹಂಬಲ. ಕಡ್ಡಾಯ ಕನ್ನಡದಲ್ಲಿ ನಾಲ್ಕರ ವರಗೆ ಕಲಿಕೆ ಅಂತ ಆದರೆ ಮೊದಲು ಈ ಹಳೆಯ ಇಂಗ್ಲೀಶ್ ಶಾಲೆಗಳನ್ನು ಮುಚ್ಚಬೇಕು.

ಜ್ಮಾನ ಮುಖ್ಯವೊ ಇಲ್ಲಾ ಭಾಷೆ ಮುಖ್ಯವೋ ನಾ ಕಾಣೆ.. ನಿಮ್ಮ ಮೊದಲೆನೆ ತರ್ಕಕ್ಕೆ ಬರೋಣ. ನಿಮ್ಮ ಪ್ರಕಾರ ಮಾತೃಭಾಷೆಯಲ್ಲಿ ಕಲಿಯುವ ಜನರು ಅದರ ಮೇಲೆ ಹಿಡಿತ ಸಾಧಿಸುವದಿಲ್ಲ, ಕೇವಲ ಇಂಗ್ಲೀಷನಲ್ಲಿ ಕಲಿತರೆ ಮಾತ್ರ ಸಾಧನೆ ಎನ್ನುವುದೆ ಸರಿಯಾಗಿದ್ದರೆ International Maths Olympiad ನಲ್ಲಿ ಇಂಗ್ಲೀಷ್ ದೇಶಗಳ ಸಾಧನೆ ನೋಡಿ. ಹಂಗೇರಿ, ರಶಿಯಾ,ರೋಮಾನಿಯಾ, ಬಲ್ಗೇರಿಯಾ ,ಜಪಾನ್ ಇವುಗಳ ಸಾಧನೆ ಎದ್ದು ಕಾಣುತ್ತದೆ. ಅಂದರೆ ಜಗತ್ತಿನ ಒಂದು ದೊಡ್ಡ ಪ್ರತಿಭಾ ಅನ್ವೇಷಣಾದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರದೇ ಮೇಲುಗೈ. ಅದ್ದರಿಂದ ತರ್ಕವಿಲ್ಲದ ಮಾತುಗಳನ್ನು ಹೇಳಿ ಕನ್ನಡ ಕೇವಲ ಸಾಹಿತ್ಯ ಭಾಷೆಗೆ ನಿಲ್ಲಿಸುವುದು ನಮ್ಮ ಕೀಳೆರಿಮೆ ತೋರುತ್ತದೆ.

ಹಂಗೇರಿ, ರಶಿಯಾ,ರೋಮಾನಿಯಾ, ಬಲ್ಗೇರಿಯಾ ,ಜಪಾನ್ ಇವುಗಳ ಸುದ್ದಿ ಇರಲಿ, ಕನ್ನಡದಲ್ಲಿ, ತಮಿಳಲ್ಲಿ, ತೆಲುಗಲ್ಲಿ ನಾವು ಹೋಗಿ ಮಾಡಲು ಅನುವು ಇದೆಯಾ? ನಮ್ಮ central ಸರಕಾರ ಬಿಡುವುದಾ?
ಅದು ಯಾಕೆ ನಂಗೆ passport ಕನ್ನಡದಲ್ಲಿ ಬೇಕು ಅಂದ್ರೆ ನಮ್ಮ 'ದೇಶ' ಅದನ್ನು ಕೊಡುತ್ತಾ? ಕೊಡಲ್ಲ!

ನಮ್ಮ ದೇಶದಲ್ಲಿ ಕನ್ನಡವು ಎರಡನೇ ಮಟ್ಟದ ನುಡಿಯೇ( ಬೇಸರವಾದರು ದಿಟ ).

ನೀವು "International Maths Olympiad"ಗೆ ಹೋದಿರಿ. ಕೋಲಾರದ session courtನಲ್ಲಿ, ಕೋಳಿ ಕದ್ದಿದಕ್ಕೆ ಆದ ತೀರ್ಪು ಕೂಡ ಕನ್ನಡದಲ್ಲಿ ಬರೆಯುವ ಹಾಗಿಲ್ಲ. ಕನ್ನಡದಲ್ಲಿ ಹೇಳಿ ಇಂಗ್ಲೀಶ್/ಹಿಂದಿಯಲ್ಲೇ ಬರೆಯಬೇಕು.

ತಮಿಳನ್ನು ಕೋರ್ಟ-ನುಡಿ ಮಾಡಲು ಹೊರಟ ತಮಿಳುನಾಡು ಸರಕಾರದ ಇದಿರು, "ಉತ್ತರಪ್ರದೇಶದಲ್ಲಿ" ಕೇಸ್ ಹಾಕಿದ್ದಾರಂತೆ.!

ಇನ್ನು ಅರಿವಿನ(ಜ್ಞಾನದ) ಸಂಗತಿ...

ನೋಡಿ
ನಮಗೆ

೧ techincal/scienceಗೆ English ಬೇಕೇ ಬೇಕು
೨ nationality/ದೇಶೀಯತೆಗೆ हिन्दी बिना हिन्दुस्तानी नही. ನಮ್ಮ ಶಾಲೆಯ ಇತಿಹಾಸ ಅಂದ್ರೆ ಅದು ಏನಿದ್ದರೂ ಉತ್ತರದವರ ಇತಿಹಾಸ. ಪುಲಿಕೇಶಿ ಬಗ್ಗೆ ಒಂದೆರಡು ಸಾಲಲ್ಲಿ ಮುಗಿಸಿ, ಅಕಬರ, ಅಶೋಕ, ಹರ್ಷವರ್ದನ ಬಗ್ಗೆ ಹಾಳೆಹಾಳೆ ಹೇಳಿರುತ್ತಾರೆ.
೩. ಆಧ್ಯಾತ್ಮಕ್ಕೆ देवभाषा सस्कृतम् अवश्यकम्। ಇದರಲ್ಲೇ ಆರ್ಯುವೇದ, ವೈದಿಕ ಗಣಿತ, ಪಂಚಾಂಗ, ಜೋತಿಷ್ಯ, ಭಗವದ್ಗೀತೆ ಇರುವುದು. ಇವುಗಳ ಕನ್ನಡಿಸಿದ ಹೊತ್ತಗೆಗಳನ್ನು ತಿಳಿಯಲೂ ಸಕ್ಕದದವು ಬೇಕೇ ಬೇಕು.

ಈ ಮೂರನ್ನು ಬಿಟ್ಟು ಅರಿವು ಯಾವುದು? ಕವನ, ಕಲ್ಪನೆ ತಾನೆ!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?
  • ಓಕಳಿಪುರಂ
  • ರಾಜಕೀಯ
  • ಶಾಲೆಗೆ ಆಟೋ ಗಳಲ್ಲಿ ಹೋಗುವ ನಮ್ಮ ಮಕ್ಕಳು ಎಷ್ಟು ಸೇಫ್?
  • ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..
Syndicate content

ಲೇಖಕರು

ಪ್ರವೀಣ್'s picture

ಪರಿಚಯ

ಕನ್ನಡ ಜನಾಂಗದಿಂದ ಬಂದಿರುವೆನು. "ಕನ್ನಡ " ಜಾತಿ,ಧರ್ಮ ಮತ್ತು ದೇವರು ಎಂದು ನಂಬಿರುವೆನು. ನನಗೆ ಆಸಕ್ತಿ ಇರದಿರುವ ವಿಷಯಗಳು ಬಹಳ ಕಡಿಮೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshab
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:51am
  • savithasr
    ಉ: ನಗುವ ನಯನ, ಮಧುರ ಮೌನ
    January 8, 2009 - 10:46am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator