ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

August 10, 2007 - 5:06pm — ವೈಭವ

ನಯಸೇನ ( 1112 ) 

 ಈತ ಜಿನ ಕಬ್ಬಿಗ.  'ಧರಮಾಮ್ರುತ' ಈತನ ನೆಗೞ್ಚು. ಬೇಕರನದ/ವ್ಯಾಕರಣದ ಬಗ್ಗೆ ಕೂಡ ಬರೆದಿದ್ದಾನೆ. ಈತನ ಕಬ್ಬದಲ್ಲಿ ' ಮುಳುಗುಂದದೊಳಿರ್ದು.." ಇರುವುದರಿಂದ ಇವನು ಮುಳುಗುಂದದಲ್ಲಿ ಇದ್ದನೆಂದು ತಿಳಿಯಬಹುದು. ಕೆಳಗೆ ಕೊಟ್ಟಿರುವ ಸಾಲುಗಳಿಂದ ತಿಳಿಯುವುದೇನೆಂದರೆ ಈತನ ಹೊತ್ತಿ/ಕಾಲದಲ್ಲಿಯೇ ಕಬ್ಬಿಗರು ಬೇಡದೇ ಇರುವ ಸಕ್ಕದದ ಒರೆಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ.

೧)  ಪೊಸಗನ್ನಡದಿಂ ವ್ಯಾವ|

     ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ|

     ತಿಸಿ ಕೂಡಲಾಱದಕ್ಕಟ|

     ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ ||

 ತಿಳಿವು: ಕನ್ನಡ ಕಬ್ಬಗಳನ್ನು ಬರೆಯಲು ತೊಡಗಿದರೆ ಅದರಲ್ಲೇ ಬರೆಯಬೇಕು. ಸಕ್ಕದ ಒರೆಗಳನ್ನು ತುಮ್ಬುವುದು ತಪ್ಪು, ಹಾಗೆ ಬರೆದವನನ್ನು ಕಬ್ಬಿಗ ಎನ್ನಬಹುದೇ?

೨) ಸಕ್ಕದಮಂ ಪೇೞ್ವೊಡೆ ನೆಱೆ|

     ಸಕ್ಕದಮಂ ಪೇೞ್ಗೆ  ಸುದ್ದಗನ್ನಡದೊಳ್ ತಂ

     ದಿಕ್ಕುವುದೇ ಸಕ್ಕದಮಂ|

     ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮಂ

ತಿಳಿವು:  ಸಕ್ಕದದಲ್ಲಿ ಹೇಳಬೇಕಾದುದನ್ನ ಸಕ್ಕದದಲ್ಲಿ ಹೇಳಿ/ಬರೆಯಿರಿ/ನೆಗೞ್ಚಿ, ಅದರ ಬದಲು ಸಕ್ಕದವನ್ನು ಕನ್ನಡದ ಕಬ್ಬದಲ್ಲಿ ತಂದಿಕ್ಕಿದರೆ ಎಣ್ಣೆಗೆ ತುಪ್ಪ ಬೆರೆಸಿದಂತಾಗುತ್ತದೆ. ಎಂದೂ ಹೊಂದಲ್ಲ.

[ತಿಳಿವು ತಪ್ಪಿದ್ದರೆ ಮನ್ನಿಸಿ]

ಹೆಚ್ಚಿನ ಓದಿಗೆ ರಾ.ನರಸಿಂಹಾಚಾರ್ಯರ 'ಕರ್ನಾಟಕ ಕವಿ ಚರಿತೆ' ಓದಿರಿ.

  • ನಯಸೇನ ಪೊಸಗನ್ನಡ ಸಕ್ಕದ
~.~
  • ವೈಭವ ರವರ ಬ್ಲಾಗ್
  • Login or register to post comments
  • 399 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2007 - 6:15pm — mahesha

ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

mahesha's picture

"ಸಕ್ಕದಮಂ ಪೇೞ್ವೊಡೆ ನೆಱೆ|
ಸಕ್ಕದಮಂ ಪೇೞ್ಗೆ ಸುದ್ದಗನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ|
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮಂ"

ಇಲ್ಲಿ ಘೃತವು ಯಾವುದು? ತೈಲವು ಯಾವುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 10, 2007 - 7:58pm — ವೈಭವ

ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

ವೈಭವ's picture

ಅಣ್ಣ ಮಾಯ್ಸ,

ನಯಸೇನನೆಗೆ ನಿನಗಿಂತ ತಲೆಯಿದೆ.

ಅಲ್ಲಿ ಘ್ರುತ, ತೈಲ ಬೇಕು ಅಂತನೇ ಅವನು ಸೇರಿಸಿರುವುದು ಅಂತ ನನ್ನ ಅನಿಸಿಕೆ. ಓದೋರಿಗೆ ಗೊತ್ತಾಗಲಿ ಸಕ್ಕದ ಸೇರಿಸುದ್ರೆ ಹೆಂಗಾಗುತ್ತೆ ಅಂತ ತೋರ್ಸೋಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 10, 2007 - 8:10pm — mahesha

ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

mahesha's picture

ಅಯ್ಯೋ ವೈಭವೋಪೇತರೇ!!

ನಯಸೇನನಿಗೆ ನನಗಿಂತ ಶಿರಸ್ಸಿ ಇರಲಿ, ಆ ವಿಷಯವನ್ನು ನಾನು ಪ್ರಶ್ನಿಸುತ್ತಿಲ್ಲ.

ಇರಲಿ ಬಿಡಿ, ಅಸುಖ ಅನುಭವಿಸಿಕೊಳ್ಳಬೇಡಿರಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 10, 2007 - 8:07pm — Khavi

ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

Khavi's picture

ಮಹೇಶ
ಅದು ತುಪ್ಪದಲ್ಲಿ ಎಣ್ಣೆ ಬೆರೆತಂತೆ ಅಂತ ಕೇಳಿದ್ದೆ.
ಇಲ್ಲಿ ತುಪ್ಪ ಅಂದರೆ ಕನ್ನಡವೆಂತಲೂ, ಎಣ್ಣೆಯನ್ನು ಸಕ್ಕದಕ್ಕೆ ಹೋಲಿಸಿಯೂ ಬರೆದಿದೆ ಎಂದ ನೆಂಪು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 10, 2007 - 8:12pm — mahesha

ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

mahesha's picture

ಓ ಆ ಪ್ರಕಾರವಾಗಾ?

ನನಗೆ ಸ್ಫರಿಸಲಿಲ್ಲ!! ಧನ್ಯವಾದಗಳು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 4:49pm — kannadakanda

ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ

kannadakanda's picture

ನಯಸೇನನ ಧರ್ಮಾಮೃತದಲ್ಲಿ ಕೆೞಗಿನ ಅಪೂರ್ಣ ಪದ್ಯದ ಪೂರ್ಣಪಾಠ ದಯವಿಟ್ಟು ಯಾರಾದರೂ ತಿಳಿದಿದ್ದರೆ ಹೇೞಿ:
ನರೆ ಬಂದ ನರರ್ ಮೆಲ್ದಿರೆ
ತರುಣತ್ವಮನೆಯ್ದುವರ್ ...........

ದಯವಿಟ್ಟು ಗೊತ್ತಿದ್ದವರು ಪೂರ್ತಿಗೊಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಘೃತಮುಮಂ ತೈಲಮುಮಂ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಅವಳು...
  • ಗೂಗಲ್ ಮೈಲಿನಲ್ಲಿ (ಜಿ-ಮೈಲ್) ನೀವಿದನ್ನು ಗಮನಿಸಿದ್ದೀರಾ?
  • ಕಬ್ಬಿಗ = ಕವಿ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator