ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ವಿಶ್ವನಾಥ ರವರ ಬ್ಲಾಗ್

ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ

October 10, 2006 - 5:26pm — ವಿಶ್ವನಾಥ

ಹೌದು.

ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಖ್ಯಾತ ಕಾಶ್ಮೀರಿ ಉಗ್ರಗಾಮಿ ಅಫ್ಜಲ್ ಗುರೂ‌ಗೆ "ಗೌರವಯುತ" ಗಲ್ಲು ಶಿಕ್ಷೆ ಬೇಡ; ಆದರೆ ಆತನನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು!

ವಿಶ್ವದಲ್ಲೇ ಎರಡನೇ ದೊಡ್ಡ ಪ್ರಜಾಪ್ರಭುತ್ವವಿರುವ, ಜನಸಂಖ್ಯೆಯಿರುವ, ನೂರಾರು ಬಾರಿ ಸಂವಿಧಾನ ತಿದ್ದುಪಡಿಯಾಗಿರುವ ನಮ್ಮ ದೇಶದಲ್ಲಿ ನ್ಯಾಯದ ಮನೆಯಿಂದ ರಾಜಾರೋಷವಾಗಿ ತಪ್ಪಿಸಿಕೊಳ್ಳಲು ಅಷ್ಟೇ ಸಹಸ್ರ ದಾರಿಗಳಿವೆ. ಎಂಥ ಭಯಾನಕ ಪಾತಕಗಳನ್ನು ಮಾಡಿದರೂ ಸಲೀಸಾಗಿ ತಪ್ಪಿಸಿಕೊಳ್ಳುವ "ಗಟ್ಟಿ" ಕಾನೂನುಗಳು ನಮ್ಮಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಅಪರೂಪಕ್ಕೊಮ್ಮೆ ಕುಖ್ಯಾತ ಉಗ್ರಗಾಮಿ ಅಫ್ಜಲ್ ಗುರೂನಂಥವನಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ನೀಡಿದ್ದೇ ತಡ, ನಮ್ಮ ದೇಶದಲ್ಲಿ "ಭಯಂಕರ ಸೆಕ್ಯುಲರಿಸಂ" ತಾಂಡವವಾಡುತ್ತಿದೆ.

ಯಾವ ಟಿವಿ ಚಾನೆಲ್ ಅಮುಕಿದರೂ ಅದೇ ಸುದ್ದಿ, ರೇಡಿಯೊ ತಿರುವಿದರೂ ಅದೇ ಚರ್ಚೆ, ಪೇಪರ್ ಹೊರಳಿಸಿದರೂ ಅದೇ ಕಂತೆ ಕಂತೆ ಸುದ್ದಿ, ವಿಮರ್ಶೆ, ಆತ ಸತ್ತರೆ ರಾಷ್ಟ್ರೀಯ ಆಘಾತ ಸಂಭವಿಸಲಿದೆಯೇನೋ ಎಂಬ ಶಂಕೆ, ಜನಾಭಿಪ್ರಾಯ ಸಂಗ್ರಹ....

ನಾನ್‌ಸೆನ್ಸ್.

ಒಂದು ಕ್ರಿಮಿ(ನಲ್) ಬಗ್ಗೆ ಇಷ್ಟೆಲ್ಲ ಚರ್ಚೆಯ ಅಗತ್ಯವಿತ್ತೇ? ಕೇವಲ ಓಟ್‌ಬ್ಯಾಂಕ್ ರಾಜಕೀಯಕ್ಕೆ ನಮ್ಮ ಕಾಂಗ್ರೆಸ್ಸಿಗರು ಹೇಸಿಗೆಯನ್ನೂ ಬಾಯಲ್ಲಿಟ್ಟುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅಫ್ಜಲ್ ಓರ್ವ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಆತ ಮಾಡಿದ ತಪ್ಪನ್ನು ಮನ್ನಿಸಬೇಕು, ಆತನಿಗೆ ಕ್ಷಮಾದಾನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಅಂಗಲಾಚುವ ಕಾಂಗ್ರೆಸ್ ಪುಢಾರಿಗಳಿಗೆ ಸುಪ್ರೀಂ‌ಕೋರ್ಟ್ ನಂಥ ಪರಮೋಚ್ಚ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಎಂಥ ಗೌರವವಿದೆ ಎಂಬುದು ತಿಳಿಯುತ್ತದೆ. 2001ರಲ್ಲಿ ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆಯುತ್ತಿದ್ದಾಗ ಇದೇ ಅಫ್ಜಲ್ ಪಡೆ ದಾಳಿ ಮಾಡಿದಾಗ ನಮ್ಮ ಯೋಧರು ಇವರ ಜೀವಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಬಲಿ ಕೊಟ್ಟರು. ಆಗ ಇದೇ "ಸೆಕ್ಯುಲರ್" ಸಂಸದರು ಸಂಸತ್ತಿನಲ್ಲಿ ತಾವು ಕುಳಿತಲ್ಲೇ ಪ್ಯಾಂಟ್‌ಗಳನ್ನು ಒದ್ದೆ ಮಾಡಿಕೊಂಡಿದ್ದರು. ಆಗ ಎಲ್ಲಿ ಹೋಗಿತ್ತು ಇವರಿಗೆ ಸೆಕ್ಯುಲರಿಸಂ? ಯೋಧರ ಬದಲು ಇವರೇ ಬಂದು ಉಗ್ರರ ಗುಂಡಿಗೆ ತಮ್ಮ ಗುಂಡಿಗೆಯನ್ನೊಡ್ಡಬೇಕಿತ್ತು. ಬೇರೆಯವರ ಮಕ್ಕಳನ್ನು ನೀರಿಗಿಳಿಸಿ ನೀರಿನ ಆಳ ನೋಡುವ ನೀಚ ಬುದ್ಧಿ ನಮ್ಮ ರಾಜಕಾರಣಿಗಳದು.

ಇನ್ನು ಮುಸ್ಲಿಂ ಬಾಂಧವರ ವಿಷಯಕ್ಕೆ ಬರೋಣ.

ಮುಸ್ಲೀಮರು ಎಂದರೆ ಈಗಾಗಲೇ ದೇಶದ್ರೋಹಿಗಳು, ಭಾರತದ ಅನ್ನ ತಿಂದು, ಇಲ್ಲಿನ ಗಾಳಿ ಸೇವಿಸಿ ಪಾಕಿಸ್ತಾನಕ್ಕೆ ಜೈ ಅನ್ನುವವರು ಎಂಬಂಥ ಅಭಿಪ್ರಾಯ ಮನೆ ಮಾಡಿದೆ. ಅಫ್ಜಲ್‌ಗೆ ಕ್ಷಮಾದಾನ ನೀಡಬೇಕು ಎನ್ನುತ್ತಿರುವ ಇವರ ಬಗ್ಗೆ ಜನರಿಗೆ ಯಾವಾಗ ಒಳ್ಳೆಯ ಅಭಿಪ್ರಾಯ ಬರಬೇಕು?

ದೇಶದಲ್ಲಿ ಒಂದೇ ಒಂದು ಮುಸ್ಲಿಂ ಸಂಘಟನೆ ಅಫ್ಜಲ್‌ಗೆ ಮರಣದಂಡನೆಯಾಗಬೇಕು ಎಂದು ಒತ್ತಾಯಿಸಿದ ಸುದ್ದಿಯನ್ನು ನೀವು ಓದಿದ್ದೀರಾ? ಉಗ್ರಗಾಮಿಗೆ, ಕ್ರಿಮಿನಲ್‌ಗೆ, ಕಳ್ಳನಿಗೆ, ದರೋಡೆಕೋರನಿಗೆ ಜಾತಿ, ಮತ, ಧರ್ಮ ಉಂಟೇ? ಮಾನವೀಯತೆಯ ವಿರುದ್ಧ ಅಪರಾಧ ಎಸಗುವ ಇವರಿಗೆ ಮಾನವ ಹಕ್ಕುಗಳ, ಜಾತಿ, ಧರ್ಮದ ಅಂಗಿ ಏಕೆ ತೊಡಿಸುತ್ತೀರಿ ಸಾಬ್? ಕಿತ್ತು-ಬೀಸಾಕಿ ಆ ಬಟ್ಟೆಗಳನ್ನೆಲ್ಲಾ. ಇಂಥವರನ್ನು ನಂಗಾ ಮಾಡಿ ಕೊಂದು ಬಿಡಬೇಕು. ಹಾಗಾದಾಗ ಮಾತ್ರ ಇನ್ನೊಬ್ಬ ಅಫ್ಜಲ್ ಹುಟ್ಟಲು ಸಾಧ್ಯವಿಲ್ಲ.

ತುತ್ತು ಅನ್ನಕ್ಕೂ ತತ್ವಾರ ಬಂದೀತು:

ಕಾಶ್ಮೀರದ ಮುಸಲ್ಮಾನರು ಭಾರತದ ಮುಖ್ಯವಾಹಿನಿಯಲ್ಲಿ ಬರಲು ಇಷ್ಟಪಡುವುದಿಲ್ಲ ಎಂದು ಕಾಣುತ್ತದೆ. ರಕ್ತ-ಸಿಕ್ತ ರಾಜಕೀಯ ಇತಿಹಾಸ ಹೊಂದಿರುವ ಪಾಕಿಸ್ತಾನದ ಜೊತೆಗೇ ಗುರುತಿಸಿಕೊಳ್ಳಲು ಅವರಿಗೆ ಇನ್ನಿಲ್ಲದ ಆಸಕ್ತಿ. ಆ ದೇಶಕ್ಕೆ ಹೋದರೆ ಅಲ್ಲಿನ ದಿವಾಳಿಯೆದ್ದ ಆರ್ಥಿಕ ಪರಿಸ್ಥಿತಿಯಿಂದಾಗಿ ಇವರಿಗೆ ತುತ್ತು ಅನ್ನಕ್ಕೂ ತತ್ವಾರವಾದೀತು. ಯಾರು ಹೇಳಬೇಕು ಇವರಿಗೆ ಬುದ್ದಿಯನ್ನ?

"ಅಫ್ಜಲ್ ಪ್ರಾಣ ಉಳಿಯಬೇಕು ಇಲ್ಲದಿದ್ದರೆ ಕಾಶ್ಮೀರ ಕೊಳ್ಳ ಹೊತ್ತಿ ಉರಿದು ಹೋದೀತು" ಎಂದು ಎದೆ-ಎದೆ ಬಡಿದುಕೊಂಡು ಹರತಾಳ ನಡೆಸುವ ಇವರು, ಇದೇ ಕೊಳ್ಳದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಬಡ ಹಿಂದೂಗಳನ್ನು ಸಾಲು ಸಾಲಾಗಿ ನಿಲ್ಲಿಸಿ ಉಗ್ರಗಾಮಿಗಳು ಕೊಲ್ಲುವಾಗ ಎಲ್ಲಿ ಹೋಗಿರುತ್ತಾರೆ? ಏಕೆಂದರೆ ಆಗ ಸತ್ತವರು ಕೆಲಸಕ್ಕೆ ಬಾರದ ಹಿಂದೂಗಳು. ಈಗ ಸಾಯಲಿರುವವನು ಅವರನ್ನು ಕೊಂದವನು!

ಅಫ್ಜಲ್‌ನ ಮಗ ಡಾಕ್ಟರನಾಗಬೇಕಂತೆ, ಆತ ಡಾಕ್ಟರಾಗಬೇಕಾದರೆ ಆತನ ಅಪ್ಪ ಜೀವಸಹಿತ ಉಳಿಯಬೇಕಂತೆ. ಹೇಗಿದೆ ಅಫ್ಜಲನ ಹೆಂಡತಿಯ ವಾದ? ತನ್ನ ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಎಂದು ಬಯಸಿದ ಅಫ್ಜಲ್ ಏಕೆ ಅಮಾಯಕರನ್ನು ನಿರ್ದಯವಾಗಿ ಕೊಲ್ಲುವ ಉಗ್ರಗಾಮಿಯಾದ ಎಂಬ ಬಗ್ಗೆ ಮಾತ್ರ ಆಕೆ ಬಾಯಿ ಬಿಡುವುದಿಲ್ಲ.

ಕಾಶ್ಮೀರ ಕೊಳ್ಳದಲ್ಲಿ ಉಗ್ರರ ಅಟ್ಟಹಾಸಕ್ಕೆ ಸತ್ತ ಹಿಂದೂ ನವ ವಧೂವರರು, ಮದುವೆ ದಿಬ್ಬಣದಲ್ಲಿ ಪಾಲ್ಗೊಂಡ ಅಮಾಯಕ ಬಂಧುಗಳು ಇವರಿಗೆಲ್ಲ ಸಂಬಂಧಿಕರಿರಲಿಲ್ಲವೇ. ಹಸೆಮಣೆ ಏರಬೇಕಾದವರನ್ನು ಮಸಣಕ್ಕೆ ಅಟ್ಟಿದ ಇವರನ್ನು ಅಲ್ಲಾ ಕ್ಷಮಿಸಿಯಾನೆ?

ಮೀಡಿಯಾ ಹೈಪ್:

ಬಹುತೇಕ ಎಲ್ಲಾ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಮಾಧ್ಯಮಗಳು ಅಫ್ಜಲ್ ನ ಹೆಂಡತಿ-ತಾಯಿಯ ವಿಶೇಷ ಸಂದರ್ಶನ, ರಾಷ್ಟ್ರಪತಿ ಭೇಟಿಯ ಸುದ್ದಿ-ಚಿತ್ರಗಳನ್ನು ಮುಖಪುಟದಲ್ಲಿ, ಮುಖ್ಯ ಕಾರ್ಯಕ್ರಮದಲ್ಲಿ ಪ್ರಕಟಿಸಿ-ಪ್ರಸಾರ ಮಾಡಿ ಧನ್ಯವಾಗಿವೆ. ಸ್ವತಃ ಅಫ್ಜಲ್‌ನೇ ತನಗೆ ಕ್ಷಮಾದಾನ ಬೇಡ ಎಂದಾಗ, ನಮ್ಮ ಸಂವಿಧಾನದಲ್ಲಿನ 72 ಮತ್ತು 161 ನೇ ವಿಧಿ(ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕ್ಷಮಾದಾನ ನೀಡುವ ಹಕ್ಕು)ಯನ್ವಯ ಆತನಿಗೆ ಕ್ಷಮಾದಾನ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನ ದಾರಿಯನ್ನೇ ಯಶಸ್ವಿಯಾಗಿ ತಪ್ಪಿಸುವ ಕೆಲಸ ನಡೆಯುತ್ತಿದೆ.

ಗುಜರಾತಿನಲ್ಲಿ ಹಿಂದೂಗಳಿದ್ದ ರೇಲ್ವೆ ಬೋಗಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಆದರೆ ಮಾಧ್ಯಮದಲ್ಲಿ ಪದೇ ಪದೇ ವರದಿಯಾಗುವುದು ನಂತರದ ಗಲಭೆಗಳಿಗೇ. ಹಿಂದೂಗಳು ಗಲಭೆ ಮಾಡಿದರೆ ಸರಿ ಎನ್ನುವುದು ಇದರ ಉದ್ದೇಶವಲ್ಲ, ಆದರೆ ಪ್ರತಿಕ್ರಿಯೆಗೆ ಕಾರಣವಾದ ಮೂಲ ಕ್ರಿಯೆ ಬಗ್ಗೆ ಏಕೀ ನಿರ್ಲಕ್ಷ್ಯ? ಏಕೆಂದರೆ ಹಿಂದೂಗಳು ನರ ಸತ್ತವರು, ಅವರನ್ನು ಸಾಮೂಹಿಕವಾಗಿ ಕೊಂದು ಹಾಕಿದರೂ ನಮ್ಮ ಮಹಾನ್ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತ ಎಂಬ ಲೇಬಲ್ ಅಡಿಯಲ್ಲಿ ಸುರಕ್ಷಿತವಾಗಿರಬಹುದು ಎಂಬ ಉಡಾಫೆಯೇ ಇಂಥ ಅವಗಢಗಳಿಗೆಲ್ಲ ಕಾರಣ.

ಈ ಹಿಂದಿನ ಕೇಂದ್ರದ ಎನ್‌ಡಿಎ ಸರಕಾರ ಉಗ್ರಗಾಮಿಗಳ ವಿರುದ್ಧ ಕಠೋರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಟಾಡಾ ಕಾಯ್ಜೆ ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದೇ ತಡ ಅದನ್ನು ಹೊಸಕಿ ಹಾಕಿಬಿಟ್ಟಿತು. ಏಕೆಂದರೆ ಅಂಥ ಕಾಯ್ದೆಯಿದ್ದರೆ ಅಫ್ಜಲನಂಥವರನ್ನು ಉಳಿಸಲು ಸಾಧ್ಯವಿಲ್ಲ! ದೇಶದಲ್ಲಿ ಈ ವರೆಗೆ ಸಂಭವಿಸಿದ ಬಾಂಬ್ ಸ್ಫೋಟ, ಭಯೋತ್ಪಾದನೆಗಳಂಥ ಹೀನ ಕೃತ್ಯಗಳಲ್ಲಿ ಭಾಗಿಯಾದವರು ಯಾವ ಸಮುದಾಯದವರು? ಕೇವಲ ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಅಂಥವರಿಗೆ ಅನುಕೂಲವಾಗುವ ಕಾನೂನುಗಳನ್ನು ತರುತ್ತದಷ್ಟೇ ಅಲ್ಲ, ಈಗಿನ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿಗೆ ಸೆಡ್ಡು ಹೊಡೆದು ರಾಷ್ಟ್ರಪತಿಯೆಂಬ ರಬ್ಬರ್ ಸ್ಟಾಂಪ್ ಮೂಲಕ ತನ್ನ ತೆವಲನ್ನು ತೀರಿಸಿಕೊಳ್ಳುತ್ತಿದೆ.

ಭೀಕರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ ನೂರಾರು ಅಮಾಯಕರನ್ನು ಬಲಿತೆಗೆದುಕೊಂಡ ದಾವೂದ್ ಇಬ್ರಾಹಿಂ‌ನನ್ನು ನಮ್ಮ ಪೊಲೀಸರು ಸೆರೆಹಿಡಿದು ತಂದು ನ್ಯಾಯಾಲಯದ ಮೂಲಕ ಶಿಕ್ಷೆ ಕೊಡಿಸಿದರೆ, ನಾಳೆ ಇದೇ ಕಾಂಗ್ರೆಸ್ಸಿಗರು "ಈತ ನಮ್ಮ ಮುಸ್ಲಿಂ ಭಾಯ್ ಕ್ಷಮಿಸಿಬಿಡಿ ಇವನನ್ನ" ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ.

1976ರಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕಿ ಶ್ರೀಮತಿ ಇಂದಿರಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ನ್ಯಾಯಾಂಗಕ್ಕೆ, ಪ್ರಜಾಪ್ರಭುತ್ವಕ್ಕೆ ಎಕ್ಕಡದಿಂದ ಹೊಡೆಯುವ ಪರಿಪಾಠವನ್ನು ಪಕ್ಷದಲ್ಲಿ ಬಿಟ್ಟು ಹೋಗಿದ್ದಾರೆ. ಅದೇ ಪರಿಪಾಠವನ್ನು ಮನಮೋಹನ್ ಸಿಂಗ್ ರಂಥ ಅತ್ಯುನ್ನತ ಶಿಕ್ಷಣ ಪಡೆದ, ಸಂಭಾವಿತ "ಕಾಂಗ್ರೆಸ್ ಪಕ್ಷದ" ಪ್ರಧಾನಿಗಳು ಶಿರಸಾವಹಿಸಿ ಪಾಲಿಸುತ್ತಿದ್ದಾರೆ.

ಹಾಗಿದ್ದರೆ ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಏಕೆ ಬೇಕು? ಕಾಂಗ್ರೆಸ್ ಪಕ್ಷ ಒಂದೇ ಸಾಕು!
----

http://www.vishwaputa.blogspot.com

~.~
  • ವಿಶ್ವನಾಥ ರವರ ಬ್ಲಾಗ್
  • Login or register to post comments
  • 2464 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 10, 2006 - 6:33pm — subramanya

ಸ್ವಲ್ಪ

subramanya's picture

ಸ್ವಲ್ಪ ಭಾವುಕತೆ ಹೆಚ್ಚಾಯಿತೇನೊ ಎನಿಸಿದರೂ, ಬರೆದಿರುವ ವಿಷಯ ಮಾತ್ರ ಬಹಳ ಸರಿಯಾಗಿದೆ. ಮುಂದಿನ ಜನಾಂಗ ನಮ್ಮನ್ನು ಮೆಚ್ಚುವಂತೆ ಬದುಕಬೇಕು ಎನ್ನುವ ಪ್ರತಿಯೊಬ್ಬರು ತಪ್ಪು ಮಾಡಿದವರನ್ನು ಧರ್ಮ, ಜಾತಿ, ಭಾಷೆ, ಸಂಬಂಧ ಇವುಗಳ ನೆಲೆಯಲ್ಲಿ ನೋಡದೆ ನಾಗರೀಕ ಮತ್ತು ಅನಾಗರೀಕ ನೆಲೆಯಲ್ಲಿಯೆ ನೋಡಬೇಕು. ಅದರಂತೆ ಶಿಕ್ಷೆಯನ್ನು ನೀಡಬೇಕು.

ಸುಬ್ರಹ್ಮಣ್ಯ ಎಂ. ಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2006 - 8:08pm — tksbhat

ಮರಣ ದಂಡನೆ ಬೇಕೇ?

tksbhat's picture

ತಪ್ಪು ಮಾಡಿದವರು ಧರ್ಮ, ಜಾತಿ, ಭಾಷೆ, ಸಂಬಂಧಗಳ ನೆಲೆಯಲ್ಲಿ ನೋಡಬಾರದು. ಅಫ್ಜಲ್ ಗುರುವಿನ ವಿಷಯವನ್ನೂ ಹೀಗೆಯೇ ನೋಡೋಣ. ವಿಶ್ವನಾಥ್ ಆರಂಭಿಸಿರುವ ಈ ಚರ್ಚೆ ಹಾಗಿಲ್ಲ. ಅಫ್ಜಲ್ ಗುರುವಿಗೆ ಮರಣ ದಂಡನೆ ಬೇಡ ಎನ್ನುತ್ತಿರುವವರು ಎತ್ತಿರುವ ಪ್ರಶ್ನೆಗಳು ಮತ್ತು ವಿಶ್ನನಾಥ್ ಅವರ ಭಾವುಕ ಮಾತುಗಳು ಉತ್ತರವಾಗುವುದಿಲ್ಲ. ಅಫ್ಜಲ್ ಗುರು ವಿಷಯ ಮರಣದಂಡನೆಯಂಥ ಶಿಕ್ಷೆ ಬೇಕೇ ಬೇಡವೇ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ನಾವು ಯಾರೂ ಅದರ ಬಗ್ಗೆ ಯೋಚಿಸುತ್ತಿಲ್ಲ. ಕೊಲ್ಲುವವನನ್ನು ಕೊಲ್ಲುವ ಶಿಕ್ಷೆ ಬಹಳ ಕಾಲದಿಂದ ನಮ್ಮ ದೇಶದಲ್ಲಿದೆ. ಅತ್ಯಂತ ಮುಂದುವರಿದ ಅಮೆರಿಕದಲ್ಲಿಯೂ ಇದೆ. ಇಲ್ಲೆಲ್ಲೂ ಕೊಲೆಗಳ ಸಂಖ್ಯೆ ಕಡಿಮೆಯಾಗಿರುವಂತೆ ಕಾಣಿಸುವುದಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇಷ್ಟಕ್ಕೂ ಶಿಕ್ಷೆ ಎಂದರೆ ಏನು. ನಮ್ಮ ಸಂಸ್ಕೃತಿ ಹೇಳುವಂತೆ ಶಿಕ್ಷಣ ಅರ್ಥಾತ್ ತಪ್ಪಿತಸ್ಥನಿಗೆ ಶಿಕ್ಷಣ ನೀಡುವ ಕೆಲಸ. ಒಬ್ಬ ಕೊಲ್ಲುತ್ತಾನೆ. ಅವನನ್ನು ಸ್ಟೇಟ್ ಕೊಲ್ಲುತ್ತದೆ ಎಂದಾದರೆ ಸ್ಟೇಟ್ ನ ನ್ಯಾಯಾಂಗ ವ್ಯವಸ್ಥೆಗೂ ಕೊಲೆಗಡುಕನಿಗೂ ಇರುವ ಮೂಲಭೂತ ವ್ಯತ್ಯಾಸವೇನು?

ಅಫ್ಜಲ್ ಗುರುವಿನ ಪರವಾಗಿ ವಾದಿಸುತ್ತಿರುವವರು ಹೇಳುತ್ತಿರುವಂತೆ ಆತನ ಮೇಲಿನ ಆರೋಪಗಳು ಸಂಶಯವಿಲ್ಲದಂತೆ ಸಾಬೀತಾಗಿಲ್ಲ. ಕೇವಲ ಸಾಂಧರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಅವನಿಗೆ ಮರಣ ದಂಡನೆ ವಿಧಿಸಲಾಗಿದೆ. ಈ ಬಗೆಯ ಸಾಕ್ಷ್ಯಗಳನ್ನು ಇಟ್ಟುಕೊಂಡು ಮರಣ ದಂಡನೆ ವಿಧಿನಸುವುದು ಸರಿಯಲ್ಲ. ಅದನ್ನು ಜೀವಾವಧಿ ಶಿಕ್ಷೆಯಾಗಿಸಿ ಎನ್ನುತ್ತಿದ್ದಾರೆ. ಇನ್ನು ಇದರ ಸುತ್ತ ಇರುವ ರಾಜಕಾರಣ. ಇದು ಕೇವಲ ಅಫ್ಜಲ್ ಗೆ ಮಾತ್ರ ಸಂಬಂಧಿಸಿದ ಅಥವಾ ಸೀಮಿತವಾದ ವಿಷಯವೇನೂ ಅಲ್ಲ. ಅಫ್ಜಲ್ ಗೆ ಮರಣ ದಂಡನೆ ನೀಡಲೇ ಬೇಕು ಎಂದು ವಾದಿಸುತ್ತಿರುವವರ ಕಣ್ಣು ಹಾಗೂ ಬೇಡ ಎಂದು ಹೇಳುತ್ತಿರುವ ರಾಜಕೀಯ ಪಕ್ಷಗಳವರ ಕಣ್ಣಿರುವುದು ಅವರಿಗೆ ಸಿಗಬಹುದಾದ ಓಟುಗಳೇ ಮೇಲೇ. ಅವರಿಗೆ ನ್ಯಾಯ, ಅನ್ಯಾಯ, ಮರಣ ದಂಡನೆಯ ಅಗತ್ಯ, ಅನಗತ್ಯತೆಗಳ ಬಗೆಗಿನ ಚರ್ಚೆ ಅವರಿಗೆ ಅಗತ್ಯವಲ್ಲ.

ಈಗ ಮರಣ ದಂಡನೆಯ ಪರವಾಗಿ ವಾದಿಸುತ್ತಿರುವವರ ವಿಷಯಕ್ಕೇ ಬರೋಣ. ಗೋಧ್ರಾ ಘಟನೆಯನ್ನು ನೆಪವಾಗಿಟ್ಟುಕೊಂಡು ಗುಜರಾತ್ ನಡಿಸಿದ ವ್ಯವಸ್ಥಿತ ನರಮೇಧಕ್ಕೆ ಪ್ರಭುತ್ವದ ಬಲವನ್ನೂ ಒದಗಿಸಿಕೊಟ್ಟವರಿಗೆ ಮರಣ ದಂಡನೆ ವಿಧಿಸಿದ್ದರೆ ಅವರು ಇದೇ ಧ್ವನಿಯಲ್ಲಿ ಮರಣ ದಂಡನೆಯ ಪರವಾಗಿ ವಾದಿಸುತ್ತಿದ್ದರೇ?

ಮರಣದಂಡನೆಯ ವಿರುದ್ಧ ವಾದಿಸುತ್ತಿರುವವರು ಒಂದು ಕಾಲದಲ್ಲಿ ಇಂದಿರಾಗಾಂಧಿಯವರನ್ನು ಕೊಂದವರನ್ನು ಗಲ್ಲಿಗೇರಿಸಿದಾಗ ಸುಮ್ಮನಿದ್ದರು. ಅಷ್ಟೇಕೆ ರಾಜೀವ್ ಹತ್ಯೆಯ ಆರೋಪಿಗಳಿಗೆ ಮರಣ ದಂಡನೆಯಿಂದ ಮುಕ್ತಿ ಕೊಡುವುದಕ್ಕೆ ಅವರು ಒಪ್ಪುತ್ತಾರೆಯೇ?

ಇಲ್ಲಿರುವ ಮುಖ್ಯ ಮರಣ ದಂಡನೆ ಒಂದು ನಾಗರಿಕ ಸಮಾಜಕ್ಕೆ ಎಷ್ಟು ಅಗತ್ಯ ಎಂದ ಪ್ರಶ್ನೆಯನ್ನು ನಾವು ಕೇಳಿಕೊಳ್ಳದೆ ಅದಕ್ಕೆ ಸಂಬಂಧವಿಲ್ಲದ ವಿಷಯಗಳ ಕುರಿತು ಚರ್ಚಿಸುವುದು ರಾಜಕೀಯ ಪಕ್ಷಗಳ ಪೊಳ್ಳುತನದಷ್ಟೇ ಪೊಳ್ಳಾದ, ಠೊಳ್ಳಾದ, ಮನುಷ್ಯ ಬದುಕಿನಿಂದ ದೂರವಾದ ಚರ್ಚೆ.

ಟಿ.ಕೆ.ಎಸ್. ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2006 - 1:55am — hpn

ಒಂದು ರೀತಿ ಆಲೋಚಿಸಿದರೆ

hpn's picture

ಒಂದು ರೀತಿ ಆಲೋಚಿಸಿದರೆ ಅವನಿಗೆ ಮರಣ ದಂಡನೆ ಕೊಡದೇ ಹೋಗಿದ್ದಿದ್ದರೆ ಒಳ್ಳೆಯದಿರುತ್ತಿತ್ತು (ಮರಣದಂಡನೆಯಾದರೆ ಅವ ಉಗ್ರಗಾಮಿಗಳ ಮಟ್ಟಿಗೆ "ಶಹೀದ್" ಆಗಿಬಿಡುತ್ತಾನೆ). ಆದರೆ ಜೀವಾವಧಿ ವಿಧಿಸಿದರೆ ಮತ್ತಷ್ಟು ಕಷ್ಟ! ಯಾವಾಗ ನಮ್ಮ ಭ್ರಷ್ಟ ಆಢಳಿತದ ಕಣ್ತಪ್ಪಿಸಿಯೋ ಅಥವ ಕೈಜೋಡಿಸಿಯೋ ಓಡಿಹೋಗುತ್ತಾನೋ ಹೇಳಲಿಕ್ಕಾಗದು.

ಆರೋಪಗಳು ಸಾಬೀತಾಗಿಲ್ಲ ಎನ್ನೋದು ಪೊಳ್ಳು ಮಾತು. ಸುಪ್ರೀಂ ಕೋರ್ಟು ಕೂಡ ಗಲ್ಲು ಆದೇಶಿಸಿದೆ ಎಂದರೆ ಸಾಕಷ್ಟು ಪುರಾವೆ ಇದ್ದಿರಲೇಬೇಕು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 13, 2006 - 6:51pm — ವಿಶ್ವನಾಥ

ವಿಶ್ಲೇಷಣೆ ಸಲ್ಲ

ವಿಶ್ವನಾಥ's picture

ಓರ್ವ ಅಪರಾಧಿಗೆ ಅದರಲ್ಲೂ ಅಫ್ಜಲ್‌ನಂಥ ಕುಖ್ಯಾತ ಕ್ರಿಮಿನಲ್‌ಗೆ ಶಿಕ್ಷೆ ವಿಧಿಸುವಾಗ ಆತನ ರಾಜಕೀಯ ಹಿನ್ನೆಲೆ, ಪ್ರಾದೇಶಿಕ ಪ್ರಭಾವ, ಓಟುಬ್ಯಾಂಕ್ ಲೆಕ್ಕಾಚಾರ, ಕೌಟುಂಬಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡರೆ ಅದು ನ್ಯಾಯಾಂಗಕ್ಕೇ ಮಾಡುವ ಅಪಚಾರವಾದೀತುೋ. ಅಫ್ಜಲ್ ಮಾಡಿದ್ದು ಚಿಕ್ಕ ಅಪರಾಧವೇನಲ್ಲ. ಸಂಸತ್ತಿನ ಮೇಲೆ ದಾಳಿ ನಡೆದಾಗ ನಮ್ಮ ಭದ್ರತಾ ಪಡೆಯ ಯೋಧರು ಸ್ವಲ್ಪವೇ ಅಜಾಗರೂಕತೆ ತೋರಿದ್ದರೂ ಇಂದು ಅಫ್ಜಲ್ ಪರವಾಗಿ ವಕಾಲತ್ತು ವಹಿಸುವ ರಾಜಕಾರಣಿಗಳು ಈ ಭೂಮಿಯ ಮೇಲಿರುತ್ತಿರಲಿಲ್ಲ. ತಮ್ಮ ಜೀವವನ್ನೇ ಬಲಿಗೊಟ್ಟು, ಅತ್ಯಂತ ಸಮರ್ಥವಾಗಿ ಸಂಸತ್ ಮೇಲಿನ ದಾಳಿಯನ್ನು ಅವರು ತಡೆಗಟ್ಟಿದ್ದಾರೆ. ಇಲ್ಲದಿದ್ದರೆ ಈ ಜಗತ್ತಿನ ಪ್ರಜಾಪ್ರಭುತ್ವದಲ್ಲೇ ಕಂಡು, ಕೇಳರಿಯದಷ್ಟು ರಕ್ತಪಾತವಾಗುತ್ತಿತ್ತು.

ಸಂಸತ್ ದಾಳಿಯ ದಿನವನ್ನು ಒಂದು ಕ್ಷಣ ನೆನೆಪಿಸಿಕೊಳ್ಳಿ. ನಂತರ ನೀವೇ ಹೇಳಿ- ಆ ಪಾತಕಿಗೆ ಸುಪ್ರೀಂಕೋರ್ಟ್ ನೀಡಿರುವ ಶಿಕ್ಷೆ ಸೂಕ್ತವೇ ಅಲ್ಲವೇ ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 14, 2006 - 11:43pm — hpn

ಸುಪ್ರೀಂ ಕೋರ್ಟು ನೀಡಿದ ಆದೇಶ

hpn's picture

ಸುಪ್ರೀಂ ಕೋರ್ಟು ನೀಡಿದ ಆದೇಶ ಸೂಕ್ತವೋ ಅಲ್ಲವೋ ಚರ್ಚೆ ಮಾಡುವುದು ಬಹುಶಃ ಸರಿಯಿರದು.
ನಾನು "ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪು ತಪ್ಪು" ಎಂದು ಹೇಳುತ್ತಿಲ್ಲ, ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಗೌರವದಿಂದ ಸ್ವೀಕರಿಸಬೇಕಷ್ಟೆ?

ಬದಲಿಗೆ ಅಫ್ಜಲ್ ಗೆ ಗಲ್ಲು ಶಿಕ್ಷೆಯಾದರೆ ಏನಾಗಬಹುದು, ಆಗದಿದ್ದರೆ ಏನಾಗಬಹುದು ಎಂಬ ಅವಲೋಕನ ಮಾಡಿದೆ ಅಷ್ಟೆ. ಗಲ್ಲಿಗೆ ಏರಿಸಲ್ಪಟ್ಟರೆ ಇಂಥವರು ಕೆಲವರ ಪಾಲಿಗೆ "martyr" ಆಗುವ ಸಂಭವ ಹೆಚ್ಚು.

ಆದರೆ ರಾಜಕೀಯ ಹಿನ್ನೆಲೆ, ಪ್ರಾದೇಶಿಕ ಪ್ರಭಾವದ ಹಿನ್ನೆಲೆಯಲ್ಲಿ ಇದನ್ನು ಅಳಿಯುವುದು ತಪ್ಪೇ.
ಟಿ ಕೆ ಎಸ್ ಭಟ್ಟರು ಹೇಳಿದಂತೆ

"ಅಫ್ಜಲ್ ಗೆ ಮರಣ ದಂಡನೆ ನೀಡಲೇ ಬೇಕು ಎಂದು ವಾದಿಸುತ್ತಿರುವವರ ಕಣ್ಣು ಹಾಗೂ ಬೇಡ ಎಂದು ಹೇಳುತ್ತಿರುವ ರಾಜಕೀಯ ಪಕ್ಷಗಳವರ ಕಣ್ಣಿರುವುದು ಅವರಿಗೆ ಸಿಗಬಹುದಾದ ಓಟುಗಳೇ ಮೇಲೇ. ಅವರಿಗೆ ನ್ಯಾಯ, ಅನ್ಯಾಯ, ಮರಣ ದಂಡನೆಯ ಅಗತ್ಯ, ಅನಗತ್ಯತೆಗಳ ಬಗೆಗಿನ ಚರ್ಚೆ ಅವರಿಗೆ ಅಗತ್ಯವಲ್ಲ."

ಒಂದೇ ವಿಷಯವನ್ನು ಆಲೋಚಿಸುವ ಹಲವು ಡೈಮೆನ್ಶನ್ನುಗಳಿರುತ್ತವೆ. ನಮ್ಮ ಆಲೋಚನೆಗೆ ಜಾತಿ ಹಾಗೂ ಸ್ವಾರ್ಥದ ಮಸಿ ಬಳಿದುಕೊಂಡರೆ ಹಲವು ವಿಷಯಗಳು ಟಿ ಕೆ ಎಸ್ ಭಟ್ಟರು ವಿವರಿಸಿದಂತೆ ನಮ್ಮ ಕಣ್ಣಿಗೆ ಕಾಣವು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2006 - 8:12pm — ವಿಶ್ವನಾಥ

ಗಲ್ಲು ಶಿಕ್ಷೆ ಬೇಕೆ ಬೇಡವೇ

ವಿಶ್ವನಾಥ's picture

ಟಿಕೆಎಸ್ ಭಟ್ಟರೇ,

ನಿಮ್ಮ ಅಮೂಲ್ಯ, ಪ್ರಚೋದನಾತ್ಮಕ ಅನಿಸಿಕೆಗೆ ಧನ್ಯವಾದಗಳು.

ನಿಮ್ಮ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಿರುವಂತೆ "ಗಲ್ಲು ಶಿಕ್ಷೆ ಬೇಕೆ ಬೇಡವೇ" ಎಂಬುದು ಪ್ರಸ್ತುತ ವಿಷಯವಲ್ಲ. ಆ ವಿಷಯವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳೋಣ. ದೇಶದ ಸಂವಿಧಾನವೇ ಘೋರ ಪಾತಕ ಮಾಡಿದವರಿಗೆ ಮರಣ ದಂಡನೆಗೆ ಅವಕಾಶ ನೀಡಿದೆ. ಪ್ರತಿಯೊಂದು ವಿಷಯಕ್ಕೂ ಸಾಧಕ-ಬಾಧಕಗಳಿರುವಂತೆ ಇದಕ್ಕೂ ಇದೆ. ಅದು ಬೇರೆ ವಿಷಯ.

ಈಗ ನಮ್ಮ ಮುಂದಿರುವ ದುರಂತವೆಂದರೆ, ಓರ್ವ ದೇಶದ್ರೋಹಿಗೆ ನೀಡಿರುವ ಮರಣ ದಂಡನೆಯನ್ನು ನಾಚಿಕೆಯಿಲ್ಲದೇ ಬೆಂಬಲಿಸುತ್ತಿರುವ ಗಾಂಧಿವಾದಿಗಳದು. "ವಂದೇ ಮಾತರಂ" ಗೀತೆಯನ್ನು ಕೇವಲ ಒಂದು ಸಮುದಾಯಕ್ಕೆ ನೋವಾಗುತ್ತದೆ (ಹಾಗೆಂದು ಅವರಿಗಿಂತ ಮೊದಲು ಇವರೇ ಹೇಳುತ್ತಿದ್ದಾರೆ) ಎಂಬ ಕಾರಣಕ್ಕೆ ಅದನ್ನು ಹಾಡಬಾರದು ಎನ್ನುವ ಪಕ್ಷಗಳ ದುರಂಧರರು ಕಳೆದ ಒಂದೂವರೆ ದಶಕದಿಂದ ಉಗ್ರಗಾಮಿ ಚಟುವಟಿಕೆಯ ಹಿನ್ನೆಲೆಯಿರುವ ವ್ಯಕ್ತಿಗೆ ಬಹಿರಂಗ ಬೆಂಬಲ ನೀಡುತ್ತಿರುವುದು ಸರಿಯೇ ಎಂಬುದು ಈಗಿನ ಜ್ವಲಂತ ಪ್ರಶ್ನೆ. ಕೇವಲ ಓಟುಗಳಿಗಾಗಿ ದೇಶದ ಸರ್ವೋಚ್ಛ ನ್ಯಾಯಾಂಗ ವ್ಯವಸ್ಥೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಮೂಗು ತೂರಿಸಹೊರಟಿರುವುದು ಸರಿಯೇ?

ದೇಶಭಕ್ತರಾದ ವೀರ ಸಾವರ್ಕರ್, ಭಗತ್ ಸಿಂಗ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಶರ ವಿರುದ್ಧ ಹೋರಾಡಿ ನೇಣಿನ ಕುಣಿಕೆಗೆ ಗೋಣೊಡ್ಡಿದಾಗ ಅವರನ್ನು ಉಳಿಸುವ ಯಾವುದೇ ಗೋಜಿಗೆ ಹೋಗದೇ ಮೌನವಾಗಿದ್ದು ಉಭಯ ವೀರರಿಗೆ ಗಲ್ಲು ಶಿಕ್ಷೆಯಾಗಲು ಬ್ರಿಟೀಶರಿಗೆ ನೆರವಾದ- ನಾವೆಲ್ಲ "ಮಹಾತ್ಮಾ" ಎನ್ನುವ ಗಾಂಧೀಜಿ ಪಕ್ಷದ ಜನರೇ ಈಗ ದೇಶದ್ರೋಹಿಯೊಬ್ಬನನ್ನು ಹೀರೋ ಮಾಡಲು ಹೊರಟಿದ್ದಾರೆ. ಇಂಥವರನ್ನು ಇತಿಹಾಸ ಕ್ಷಮಿಸದು.

ಇನ್ನು, ಅಫ್ಜಲ್ ಗುರೂ‌ಗೆ ತನ್ನ ಮುಗ್ಧತೆ ಸಾಬೀತುಪಡಿಸಲು ಯಾವುದೇ ಅವಕಾಶ ನೀಡದೇ ಏಕಾಏಕಿ ಮರಣ ದಂಡನೆ ವಿಧಿಸಲಾಗಿದೆ ಎಂಬುದು ಕೆಲ ಕುಹಕಿಗಳ ವಿತಂಡವಾದ. ನಮ್ಮ ನ್ಯಾಯಾಂಗ ವ್ಯವಸ್ಥೆ ಎಷ್ಟು ಹಂತದಲ್ಲಿ ಫಿಲ್ಟರ್ ಆಗಿ ಬರುತ್ತದೆ. "ಒಬ್ಬ ಅಪರಾಧಿ ತಪ್ಪಿಸಿಕೊಂಡರೂ, ನಿರಪರಾಧಿಗೆ ಶಿಕ್ಷೆಯಾಗಬಾರದು" ಎಂಬ ನೀತಿಯಿಂದ ಅನೇಕ ಜನ ಕಾನೂನಿನ ಕಪಿಮುಷ್ಠಿಯಿಂದ ಜಾರಿಕೊಂಡು ಹೋಗಿಬಿಡುತ್ತಾರೆ. ಅಂಥದ್ದರಲ್ಲಿ ಅಫ್ಜಲ್‌ಗೆ ಮರಣ ದಂಡನೆ ವಿಧಿಸಲಾಗಿದೆ ಎಂದರೆ ಸುಪ್ರೀಂ ಕೋರ್ಟ್ ಬಳಿ ಬಲವಾದ ಸಾಕ್ಷ್ಯಗಳು ಇರಲೇಬೇಕು. ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಾದಿ ತಪ್ಪಿಸುವುವದು ಕ್ಷುಲ್ಲಕತನವಾದೀತು.

ಗೋಧ್ರಾ ನರಮೇಧಕ್ಕೆ ಕಾರಣರಾದವರಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಬಾರದು ಎಂದು ಯಾರೂ ಎಲ್ಲಿಯೂ ಹೇಳಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ, ಅಲ್ಲಿ ಸಾಬೀತಾದರೆ ಶಿಕ್ಷೆ ಕೊಡುವುದು ಕೋರ್ಟ್ ವಿವೇಚನೆಗೆ ಬಿಟ್ಟಿದ್ದು. ಯಾರು ತಪ್ಪು ಮಾಡಿದರೂ ಅದು ತಪ್ಪೇ. ಸರಿಯಾಗಲು ಹೇಗೆ ಸಾಧ್ಯ- ಭಟ್ಟರೇ?

ಮರಣ ದಂಡನೆಯಂಥ ಕಠಿಣ ಶಿಕ್ಷೆಗಳಿಂದ ಅಪರಾಧಗಳ ಪ್ರಮಾಣ ಕಡಿಮೆಯಾಗುತ್ತದೆ ಎಂಬುದರಲ್ಲಿ ನಂಬಿಕೆಯಿಟ್ಟವನು ನಾನು. ಇದಕ್ಕೆ ಕೊಲ್ಲಿ ರಾಷ್ಟ್ರಗಳೇ ಉತ್ತಮ ಉದಾಹರಣೆ. ಅಲ್ಲಿ ಅಪರಾಧಗಳ ಪ್ರಮಾಣ ಇಲ್ಲ ಎನ್ನುವಷ್ಟು ಕಡಿಮೆ ಎಂಬ ಸತ್ಯ ನಿಮಗೂ ಗೊತ್ತಿದೆ.

ಇನ್ನು ನನ್ನ ಭಾವುಕತೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಅವರಿಗೆ ಬರೆದ ಉತ್ತರದಲ್ಲಿ ತಿಳಿಸಿದ್ದೇನೆ.

ಮತ್ತೊಮ್ಮೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು.

ನಮಸ್ಕಾರ,

-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 19, 2006 - 12:12am — tksbhat

ಸಾವರ್ಕರ್ ಗೆ ಮರಣ ದಂಡನೆ

tksbhat's picture

ಸಾವರ್ಕರ್ ಅವರಿಗೆ ಯಾರು, ಯಾವಾಗ, ಎಲ್ಲಿ ಗಲ್ಲು ಶಿಕ್ಷೆ ವಿಧಿಸಿದರು. ಅದನ್ನು ಯಾವಾಗ ಅನುಷ್ಠಾನಕ್ಕೆ ತರಲಾಯಿತು ಎಂಬ ಬಗ್ಗೆ ಮಾಹಿತಿ ಒದಗಿಸಬೇಕೆಂದು ಕೋರುತ್ತೇನೆ. (ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆಯೇ ಬರೆದಿದ್ದೀರಿ ಎಂದು ನಾನು ಭಾವಿಸಿದ್ದೀನೆ.) ಅಂದ ಹಾಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಹಳ ಸ್ಪಷ್ಟವಾಗಿ ಸಾಂದರ್ಭಿಕ ಸಾಕ್ಷ್ಯಗಳಷ್ಟೇ ಇವೆ ಎಂದು ಹೇಳಿರುವುದು ಪತ್ರಕರ್ತರಾದ ತಮ್ಮ ಗಮನಕ್ಕೆ ಬಾರದೇ ಹೋದದ್ದು ಮಾತ್ರ ಆಶ್ಚರ್ಯ. ಕೊಲ್ಲಿ ರಾಷ್ಟ್ರಗಳಲ್ಲಿ ಅಪರಾಧಗಳ ಸಂಖ್ಯೆ ಇಲ್ಲ ಎನ್ನುವಷ್ಟು ಕಡಿಮೆ ಇದ್ದರೆ ಪ್ರತೀ ವರ್ಷವೂ ಅಲ್ಲಿ ಫೈರಿಂಗ್ ಸ್ಕ್ವಾಡ್ ಗಳು ಸಾವಿರಾರು ಮಂದಿಗೆ ಮರಮ ದಂಡನೆ ವಿಧಿಸುತ್ತವೆ. ಮರಣ ದಂಡನೆ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ ಎನ್ನುವುದಕ್ಕೆ ಇಲ್ಲಿರುವ ಅನೇಕ ಅಧ್ಯಯನಗಳು ಸಾಕ್ಷ್ಯ ನುಡಿಯುತ್ತವೆ. 

ನಿಮ್ಮ ಲೇಖನ ಮತ್ತು ಅದಕ್ಕೆ ಬಂದ ಅಭಿಪ್ರಾಯಗಳಲ್ಲಿರುವ ಸೌಂದರ್ಯವೊಂದನ್ನು ಹೇಳಲೇಬೇಕು ಅನ್ನಿಸುತ್ತಿದೆ. ಈ ದೇಶದಲ್ಲಿ ಗಾಂಧೀಜಿ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು  ಪ್ರತಿಪಾದಿಸುವವರನ್ನು ಬೈಯ್ಯುವುದು ಮಾತ್ರ ಸುಲಭ. ಯಾಕೆಂದರೆ ಗಾಂಧೀವಾದಿಗಳು ಮತ್ತು ಪ್ರಜಾಸತ್ತೆಯಲ್ಲಿ ನಂಬಿಕೆ ಇರುವವರು ಯಾವಾಗಲೂ  ಅರೆಬೆಂದ ಎಡಬಿಡಂಗಿ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 20, 2006 - 6:07pm — ವಿಶ್ವನಾಥ

ವಿತಂಡವಾದ ಬೇಡ

ವಿಶ್ವನಾಥ's picture

ಹೌದು. ತಪ್ಪಾಗಿದೆ. ಭಗತ್ ಸಿಂಗ್ ಎಂದು ಬರೆಯುವ ಬದಲು ವೀರ ಸಾವರ್ಕರ್ ಎಂದಾಗಿದೆ. ಪ್ರಮಾದಕ್ಕಾಗಿ ವಿಷಾದಿಸುತ್ತೇನೆ.

ಕೇವಲ ತಳ್ಳಿಹಾಕುವ ಸಾಂದರ್ಭಿಕ ಸಾಕ್ಷ್ಯಗಳಷ್ಟೇ ಇದ್ದಿದ್ದರೆ ಸಂವಿಧಾನ ಒದಗಿಸಿರುವ ಅತ್ಯುಗ್ರ ಶಿಕ್ಷೆ ಮರಣದಂಡನೆಯನ್ನು ಅಫ್ಜಲ್‌ಗೆ ನೀಡುತ್ತಿರಲಿಲ್ಲ. ಉಗ್ರಗಾಮಿಗಳಿಗ ನೆಲೆ ಒದಗಿಸಿರುವ, ಅವರಿಗೆ ಶಸ್ತ್ರಾಸ್ತ್ರ ಪೂರೈಸಿರುವ ಘಾತುಕ ಆರೋಪಗಳು ಆತನ ಮೇಲಿವೆ ಎಂಬುದನ್ನು ದಯವಿಟ್ಟು ಗಮನಿಸಿ. ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅದನ್ನು ಸ್ವೀಕರಿಸುವುದನ್ನು ಬಿಟ್ಟು, ಕೇವಲ ಜಾತಿ-ಧರ್ಮದ ಲೆಕ್ಕಚಾರದ ಮೇಲೆ ತೀರ್ಪನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತ ನ್ಯಾಯಾಂಗ ವ್ಯವಸ್ಥೆಯ ಹಾದಿಯನ್ನೇ ತಪ್ಪಿಸುವಂಥ ಕೆಲಸವನ್ನು ನನ್ನಂಥ ಎಡಬಿಡಂಗಿಗಳಂತೂ ಮಾಡುತ್ತಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ ಎಂದುಕೊಂಡಿದ್ದೇನೆ.

ಈಗಾಗಲೇ ಹೇಳಿರುವಂತೆ ಅಫ್ಜಲ್‌ಗೆ ಭಯೋತ್ಪಾದನಾ ಸಂಘಟನೆಗಳ ಜೊತೆ ಒಂದೂವರೆ ದಶಕಗಳ ನಂಟಿರುವುದನ್ನು ಆತನ ಬಗ್ಗೆ ಓದಿದರೆ ತಿಳಿಯುತ್ತದೆ. ಆತನ ಕೌಟುಂಬಿಕ ಹಿನ್ನೆಲೆ, ಕಾಶ್ಮೀರ ವಿಮೋಚನಾ ಚಳವಳಿಯಲ್ಲಿ ಧುಮುಕಲು ಆತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತರಬೇತಿಗಾಗಿ ಹೋಗಿದ್ದು, ಇದೀಗ ಆತನ ಬಿಡುಗಡೆಯಲ್ಲಿ ಪಾಕಿಸ್ತಾನ ವಹಿಸಿರುವ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಉಗ್ರಗಾಮಿಯೊಬ್ಬನ ಶರಾಯಿಯ ಹಿಂದೆ ನಿಂತು ಆತನ ಪರವಾಗಿ ವಾದಿಸುವುದು ಎಷ್ಟು ಸೂಕ್ತ ಎಂಬುದು ಗೊತ್ತಾಗುತ್ತದೆ.

ಕೇವಲ ಎರಡು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಿ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೊಲ್ಕೊತ್ತದ ಧನಂಜಯ ಚಟರ್ಜಿಗೆ ಆಗಸ್ಟ್ 15 ರಂದೇ ನೇಣುಗಂಬಕ್ಕೇರಿಸಲಾಯಿತು. ಹಾಗಿದ್ದರೆ, ಇದು ದೇಶದಲ್ಲೇ ನಡೆದ ಮೊದಲ ಅತ್ಯಾಚಾರ-ಕೊಲೆಯ ಪ್ರಕರಣವೇ? ನಮ್ಮ ಮಧ್ಯೆಯೇ ಅಂಥ ಎಷ್ಟು ಖೂಳರಿಲ್ಲ?

ಅದು ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪು. ಅದನ್ನು ಒಪ್ಪಲೇಬೇಕು. ಎಲ್ಲರೂ ಒಪ್ಪಿದ್ದಾಗಿದೆ.

ಆದರೆ ಪ್ರಸಕ್ತ ಪ್ರಕರಣದಲ್ಲಿ, ಸೋ ಕಾಲ್ಡ್ ಸೆಕ್ಯೂಲರಿಸ್ಟ್‌ಗಳು ಏಕೆ ವಿತಂಡವಾದ ಮಾಡುತ್ತಿದ್ದಾರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2006 - 8:10pm — ವಿಶ್ವನಾಥ

ಧನ್ಯವಾದ

ವಿಶ್ವನಾಥ's picture

ಪ್ರಿಯ ಸುಬ್ರಹ್ಮಣ್ಯ ಅವರೇ,

ಲೇಖನ ಓದಿದ್ದಕ್ಕೆ-ಅನಿಸಿಕೆಗೆ ಅನಂತ ಧನ್ಯವಾದಗಳು. ಗುಜರಾತಿನ ಅಕ್ಷರಧಾಮ ದೇವಾಲಯ, ಕಾಶಿ ವಿಶ್ವನಾಥ ದೇಗುಲ, ಅಮರನಾಥ, ವೈಷ್ಣೋದೇವಿ ಯಾತ್ರೆ ಸಂದರ್ಭದಲ್ಲಿ ಬಹುಸಂಖ್ಯಾತ ಸಮುದಾಯದ ಮೇಲೆ ದಾಳಿ ನಡೆದಾಗ ಜಾತ್ಯತೀತತೆ ಸೋಗಿನಲ್ಲಿ ಗಡ್ಡದ ಹಿಂದೆಯೇ ನಗುವ ಜನ, ಓರ್ವ ದೇಶದ್ರೋಹಿ ಕ್ರಿಮಿಗೆ ಶಿಕ್ಷೆ ನೀಡಿದಾಗ ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಬಹಿರಂಗವಾಗಿ ಬೆಂಬಲಿಸುವುದನ್ನು ಕಂಡು ಮನಸ್ಸಿಗೆ ತೀವ್ರ ಬೇಸರವಾಗಿ ಈ ಲೇಖನ ಬರೆದಿರುವ. ಇದನ್ನೇ ನೀವು ಅತಿ ಭಾವುಕತೆ ಎನ್ನುವುದಾದರೆ ನನ್ನ ಅಭ್ಯಂತರವಿಲ್ಲ.

ನೆಲದ ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂಬ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

ನಮಸ್ಕಾರ,

-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 14, 2006 - 1:12am — gangadharg

ನೀವ್ ಹೇಳೋದ್ ಸರಿ

gangadharg's picture

ನೀವ್ ಹೇಳೋದು ಸರಿ ಸಾರ್. ಆದ್ರೆ ನಿಮ್ಗ್ ಗೊತ್ತಿಲ್ದೇ ಇರೋ ಎಷ್ಟೋ ವಿಷ್ಯ ಇರತ್ವೆ. ಅವ ಸತ್ರೆ ಹೋದ, ಅಷ್ಟೆ. ಅವ ಇದ್ರೆ ಏನೆಲ್ಲ ಬಾಯ್ಬಿಡುಸ್ಬೋದೊ!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2006 - 7:53pm — rajeshnaik111

ನಿಸ್ಸಹಾಯಕರು

rajeshnaik111's picture

ವಿಶ್ವನಾಥ್ ಬರೆದದ್ದು ಸರಿಯಾಗಿಯೇ ಇದೆ. ಆದರೆ ಪ್ರಜೆಗಳಾದ ನಾವು ನಿಸ್ಸಹಾಯಕರು. ಇಂತಹ ಕ್ರಿಮಿಗಳನ್ನು ಕ್ಷಮಿಸಿದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಇನ್ನು ಸಾಬರ ಬಗ್ಗೆ ಸುಮ್ಮನುಳಿಯುವುದೇ ಒಳಿತು. ಯಾವುದೇ ಸರಕಾರ ಬಂದರೂ ಆಡಳಿತ ಮಾಡುವುದು ಅಷ್ಟರಲ್ಲೇ ಇದೆ. ಹಿಂದುಗಳು ತಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಸುಮ್ಮನೆ ಹಿಂದು ಪಕ್ಷಕ್ಕೆ ಮತ ನೀಡಿ ಸುಮ್ಮನಿದ್ದುಬಿಡುವುದು ಒಳ್ಳೆಯದಲ್ಲವೆ? ಆದರೆ ಇದು ಎಲ್ಲಿ ಸಾಧ್ಯ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2006 - 1:59am — hpn

ಹಾಗೆ

hpn's picture

ಹಾಗೆ ಮಾಡಿದರೆ ಜಾತಿ ರಾಜಕೀಯಕ್ಕೆ ಕುಮ್ಮಕ್ಕು ಕೊಟ್ಟಂತೆ. ಯಾವ ಪಾರ್ಟಿಯೇ ಆಗ್ಲಿ - "ನಾವು ಹಿಂದೂ", "ನಾವು ಮುಸ್ಲಿಂ" ಎಂದುಕೊಂಡು ದೇಶವನ್ನು ಜಾತಿವಾರು ವಿಭಜಿಸಿ ವೋಟಿಗೆ ಅಂಗಲಾಚಿದರೆ ಅಂತಹ ಪಾರ್ಟಿಗಳನ್ನು ಹೊರಗಿಡುವುದು ಒಳ್ಳೆಯದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2006 - 8:14pm — ವಿಶ್ವನಾಥ

ನಾಚಿಕೆಗೇಡು

ವಿಶ್ವನಾಥ's picture

ರಾಜೇಶ ನಾಯಕರೇ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ಅಫ್ಜಲ್ ಒಂದು ಸಮುದಾಯಕ್ಕೆ ಸೇರಿದವನು ಎಂಬುದಕ್ಕಿಂತ ಆತ ಒಬ್ಬ ಕ್ರಿಮಿನಲ್. ಅವನಿಗೆ ಜಾತಿ, ಧರ್ಮ, ಭಾಷೆಯ ಹೊದಿಕೆ ತೊಡಿಸುವುದು ಮೂರ್ಖತನ. ದಿನನಿತ್ಯ ಕಾಶ್ಮೀರದಲ್ಲಿ ನಮ್ಮ ಯೋಧರನ್ನು ಕೊಲ್ಲುವ, ನಿಶ್ಯಸ್ತ್ರ ಜನರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಕೊಲೆ ಮಾಡುವ ಭಯೋತ್ಪಾದಕರ ವಿರುದ್ಧ ಮಾತಾಡದ ಜನ, ಉಗ್ರಗಾಮಿಯೊಬ್ಬನನ್ನು ದೇಶಭಕ್ತನನ್ನಾಗಿ ಮಾಡಹೊರಟಿರುವುದು ಶತಮಾನದಷ್ಟು ಹಿನ್ನೆಲೆಯಿರುವ ಪಕ್ಷಕ್ಕೆ ನಿಜಕ್ಕೂ ನಾಚಿಕೆಗೇಡು.

ಇಂಥ ಹುಚ್ಚಾಟ ಭಾರತದಂಥ ಪ್ರಜಾಪ್ರಭುತ್ವದಲ್ಲಿ ಮಾತ್ರ ಸಾಧ್ಯ. ಪಾಕ್ ನಂಥ ಮತಾಂಧ ದೇಶದಲ್ಲಿ ಇದು ಸಾಧ್ಯವೇ?

ಬಿಲ್ಕುಲ್ ಇಲ್ಲ.

ನಮಸ್ಕಾರ,

-ವಿಶ್ವನಾಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 13, 2006 - 10:59pm — pavanaja

ಇಲ್ಲಿ ನಮೂದಿಸಿ

pavanaja's picture

ರಾಷ್ಟ್ರಪತಿಯವರಿಗೆ ಸಲ್ಲಿಸಲಿರುವ ಮನವಿಗೆ ನಿಮ್ಮ ಸಹಿಯನ್ನು ಹಾಕಿ - http://www.hindujagruti.org/nation/kashmir/. ಈಗಾಗಲೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿಯ ಸಹಿ ಇದೆ. ನನ್ನ ಸಹಿಯೂ ಇದೆ.

ನಿಮ್ಮ ಎಲ್ಲ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಈ ಅರೆಬೆಂದ ಎಡೆಬಿಡಂಗಿ (ಅಬೆಎಬಿ) ಬುದ್ಧಿಜೀವಿಗಳಿರುವ ತನಕ ನಮ್ಮ ದೇಶಕ್ಕೆ ಒಳ್ಳೆಯದಾಗುವುದಿಲ್ಲ. ಅವರೆಲ್ಲರನ್ನೂ ಕಾರ್ಗಿಲ್‌ಗೆ ಕಳುಹಿಸಬೇಕು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 14, 2006 - 1:07am — gangadharg

ತರ್ಲೆ ಜನ

gangadharg's picture

ನಿಮ್ಮಂತಹ ತರಲೆ ಜನ ಇರೋದಕ್ಕೂ ನಮ್ ದೇಶ ಉದ್ಧಾರ ಅಗಿಲ್ಲಾ...

ನಿಮ್ಮಂತವರನ್ನು ಪ್ಯಾಲೆಸ್ಟೀನ್ಗೆ ಕಳುಹಿಸಬೇಕು!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 14, 2006 - 11:20pm — hpn

hmm...

hpn's picture

hmm...

ಓದಿ: ಸಂಪದದಲ್ಲಿ ಬರೆಯುವ ಮುನ್ನ

ನಿಮ್ಮ ಬರೆಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ.
ಹಾಗೆಂದು ಈಗಾಗಲೇ ನಡೆಯುತ್ತಿರುವ ಚರ್ಚೆ ಸಂವಾದಗಳನ್ನು ದಾರಿ ತಪ್ಪಿಸುವಂತಿರಬಾರದು. ಹಾಗೆಯೇ
ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.

ಸಂಪದವನ್ನು ವೈಯಕ್ತಿಕ ದೂಷಣೆಗಳಿಗೆ ಬಳಸಬೇಡಿ. (ಮೇಲಿನ ಎರಡು ಪ್ರತಿಕ್ರಿಯೆಗಳ ಕತೃಗಳಿಗೂ ಇದು ಅನ್ವಯಿಸುತ್ತದೆ).

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2006 - 2:04pm — pavanaja

ಉ: hmm...

pavanaja's picture
ನಿಮ್ಮ ಬರೆಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ.
ಹಾಗೆಂದು ಈಗಾಗಲೇ ನಡೆಯುತ್ತಿರುವ ಚರ್ಚೆ ಸಂವಾದಗಳನ್ನು ದಾರಿ ತಪ್ಪಿಸುವಂತಿರಬಾರದು. ಹಾಗೆಯೇ
ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.

ಸಂಪದವನ್ನು ವೈಯಕ್ತಿಕ ದೂಷಣೆಗಳಿಗೆ ಬಳಸಬೇಡಿ. (ಮೇಲಿನ ಎರಡು ಪ್ರತಿಕ್ರಿಯೆಗಳ ಕತೃಗಳಿಗೂ ಇದು ಅನ್ವಯಿಸುತ್ತದೆ).

1. ನಾನು ಬರೆದುದು ಯಾವ ರೀತಿಯಲ್ಲಿ ವೈಯಕ್ತಿಕ ದೂಷಣೆ ಆಗುತ್ತದೆ ಎಂಬುದನ್ನು ತಿಳಿಸುತ್ತೀರಾ? ಸಂಪದದ ಯಾವ ಸದಸ್ಯರ ಮೇಲೂ ನಾನು ವೈಯಕ್ತಿಕ ನಿಂದೆ ಮಾಡಿಲ್ಲ. ಹಿಂದೊಮ್ಮೆ ಸಂಪದದ ಸದಸ್ಯರನ್ನೊಬ್ಬರು ಮತಿಭ್ರಮಣೆ ಆದವರು ಎಂದು ಟೀಕಿಸಿದ್ದರು. ಆ ಸದಸ್ಯರು ಸಂಪದವನ್ನು ಬಿಟ್ಟೇ ಬಿಟ್ಟಿದ್ದಾರೆ. ನಾನು ಎಂದಿಗೂ ಯಾರನ್ನೂ ಆ ರೀತಿ ದೂಷಿಸಿಲ್ಲ.

2. "ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು" - ಈ ನಿಯಮವೇ ಅಷ್ಟು ಸರಿಹೊಂದುವುದಿಲ್ಲ. ಸಾರ್ವಜನಿಕ ಚರ್ಚಾ ವೇದಿಕೆಗಳಿರುವುದೇ ತಮ್ಮ ಆಲೋಚನಾ ಧಾಟಿ ಏನು ಎಂಬುದನ್ನು ಹೇಳುವುದಕ್ಕೆ. ಆದರೆ ಅದು ಇನ್ನೊಬ್ಬರ ವೈಯಕ್ತಿಕ ನಿಂದನೆ ಆಗಬಾರದು, ಅಷ್ಟೆ. ತಮ್ಮ ಆಲೋಚನಾ ಧಾಟಿಯನ್ನು ಇನ್ನೊಬ್ಬರ ಮೇಲೆ ಹೇರುವುದು ಅಸಾಧ್ಯ ಕೂಡ. ಪ್ರತಿಯೊಬ್ಬರಿಗೂ ತಮ್ಮದೇ ಆದ ವಿವೇಚನಾ ಶಕ್ತಿ ಇರುತ್ತದೆ. ಇನ್ನೊಬ್ಬರು ಹೇಳಿದ ತಕ್ಷಣಕ್ಕೆ ಯಾರೂ ಒಪ್ಪುವುದೂ ಇಲ್ಲ.

3. ನಿಯಮದ ಪುಟದಲ್ಲಿ ಇರುವ ಮೊದಲನೆಯ ನಿಯಮ "ಕನ್ನಡದಲ್ಲಿ ಬರೆಯಿರಿ" ಎಂದಿದೆ. ಆದರೆ ನಿಮ್ಮ ಪ್ರತಿಕ್ರಿಯೆಯ ಶೀರ್ಷಿಕೆ ಕನ್ನಡದಲ್ಲಿಲ್ಲ! ಇದು ಕೇವಲ ವಾದಕ್ಕೋಸ್ಕರ ಮಾಡುವ ವಾದವೇ ಹೊರತು hmm... ಎಂದು ಇಂಗ್ಲೀಷಿನಲ್ಲಿ ಬರೆದುದಕ್ಕೆ ನನ್ನ ಅಂತಹ ಅಡ್ಡಿಯೇನಿಲ್ಲ. ಇದನ್ನು ಯಾಕೆ ಉಲ್ಲೇಖಿಸಿದೆ ಎಂದರೆ ಭೂತಕನ್ನಡಿ ಹಿಡಿದು ಹುಡುಕಿದರೆ ಪ್ರತಿಯೊಂದರಲ್ಲೂ ತಪ್ಪು ಸಿಗುತ್ತದೆ ಎಂಬುದನ್ನು ವಿಶದೀಕರಿಸಲು.

-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 16, 2006 - 1:56pm — ಸಂಗನಗೌಡ

ಬುದ್ದ,ಗಾಂದಿ ವಿಚಾರಗಳು, ನಾಡು ಮತ್ತು ದೊರೆ

ಸಂಗನಗೌಡ's picture

ಅನಾದಿ ಕಾಲದಿಂದಲೂ ಇರುವ ಹಿಂದು ದಮ್ಮದಂತೆ 'ಅಹಿಂಸೆ' ಅಂಬುದಕ್ಕೆ ಯಾವುದೇ ಜಾಗವಿಲ್ಲ. ನಾವು ಪೂಜಿಸುವ ಶಿವ, ಕಾಳಿ, ರಾಮ, ಕ್ರುಷ್ಣ ಇವರಾರೂ ಅಹಿಂಸೆಯನ್ನು ಬೋದಿಸಿಲ್ಲ. ರಾಮನು, ಬಹಳ ಬಲಶಾಲಿಯಾಗಿದ್ದ ಆದರೆ ತಪ್ಪು ಎಸಗಿದ ರಾವಣನನ್ನು ಕೊಂದ, ಮತ್ತು ಅದೇ ದೆಸೆಯಿಂದ ಇಂದು ಎಲ್ಲರಿಂದಲೂ ಪೂಜೆ ಪಡೆಯುತ್ತಿದ್ದಾನೆ. ಇಲ್ಲವಾದಲ್ಲಿ ರಾಮನನ್ನಾರು ಪೂಜೆ ಮಾಡುತ್ತಿರಲಿಲ್ಲ. ಕ್ರುಷ್ಣನು ತನ್ನ ಸೊದರ ಮಾವನನ್ನು ಕೊಂದ ಮತ್ತು ಕೌರವರನ್ನು ತಪ್ಪು ಎಸಗಿದ ಕಾರಣಗಳಿಂದಾಗಿ ಕೊಲ್ಲಿಸಿದ ಮತ್ತು ಅದೇ ಕಾರಣದಿಂದ ಅವನೂ ಪೂಜೆಗೆ ಲಾಯಕ್ಕಾದ. ಕಾಳಿ ತಾಯಿಯೂ ಅನೇಕ ರಕ್ಕಸರನ್ನು ಮಣ್ಣು ಮುಕ್ಕಿಸಿದಳು. ಯಾವಾಗಲೂ ಅರೆ ಕಣ್ಣು ತೆರೆದು ಜಗವನ್ನು ನೋಡುತ್ತಲೂ, ನೋಡದೆಯೂ ಇರುವ ಶಿವನೂ, ಹೊತ್ತು ಬಂದಾಗ ತನ್ನ mooಶೂಲವನ್ನು ಬಳಸಿದ್ದಾನೆ.

ಆಮೇಲೆ ಹುಟ್ಟಿದ ಜೈನ ಮತ್ತು ಬೌದ್ದ ದಮ್ಮಗಳು 'ಅಹಿಂಸೆ' ಎಂಬ ಹೊಸ ವಿಚಾರವನ್ನು ಹುಟ್ಟು ಹಾಕಿದವು ಮತ್ತು ಹಿಂದೂಗಳನ್ನು ಹೇಡಿಗಳಾಗಿ ಮಾಡಿದವು ಎಂದರೆ ತಪ್ಪಿಲ್ಲ.

ಹಿಂದು ದಮ್ಮದಲ್ಲಿ ಶಂಕರರು ನೀಡಿದ 'ಅಹಂ ಬ್ರಹ್ಮಾಸ್ಮಿ' ಎಂಬ ಮಾತಿದೆ. ಇದರಂತೆ ನಾನು ಅಂದರೆ 'ಆತ್‍ಮ'ವೇ ದೇವರು. ಇದರೊಂದಿಗೆ ದೇವರು ಎಲ್ಲೆಲ್ಲಿಯೂ ಇದ್ದಾನೆ ಎಂಬ ವಿಚಾರವನ್ನು ಸೇರಿಸಿದರೆ, ಎಲ್ಲೆಲ್ಲೂ ಇರುವುದು ನಾನೇ ಎಂದಾಗುವುದು. ಹಾಗಾಗಿ ಎಲ್ಲವೂ ನಾನೆ ಆಗುವೆನು, ಅಫ್ಜಲನೂ ನಾನೇ, ಕೊಲ್ಲಲು ಹೇಳಿದ ನೇಯದೀಶನೂ ನಾನೇ, ನನ್ನನ್ನು ನಾನೇ ಕೊಲ್ಲಲು ಹೇಳುವುದೇ? ನನ್ನನ್ನು ನಾನೇ ಕೊಂದುಕೊಂಡರೆ ನನಗೆ ನಾನೇ ವಂಚನೆ ಮಾಡಿಕೊಂಡಂತೆ, ಹಾಗಾಗಿ ಕೊಲ್ಲುವುದು ತಪ್ಪು, ಹೀಗೆ ವಿಚಾರ ಮಾಡಿದಾಗ 'ಅಹಿಂಸೆ' ಎಂಬ ವಿಚಾರ ಹುಟ್ಟುತ್ತದೆ. ಆದರೆ ನಮ್ಮ 'ಸರ್ವಜ್ಞ' ಕವಿ ಒಂದು ಕಡೆ ಹೇಳಿದ್ದಾರೆ, 'ಅಹಂ ಬ್ರಹ್ಮಾಸ್ಮಿ' ಎಂಬುದು ವಿಚಾರಗಳ ಮಟ್ಟಿಗೆ ಚಂದ, ಇದನ್ನು ಅತೀ ಬಳಕೆಗೆ ತಂದರೆ ಕಲ್ಲು ಕಟ್ಟಿಕೊಂಡು ನೀರಿಗೆ ಬಿದ್ದಂತೆ.

ಬುದ್ದರು 'ಹೋದ ಜೀವವನ್ನು ಮರಳಿ ತಾರದ ನಿನಗೆ ಕೊಲ್ಲಲು ಅದಿಕಾರ ಕೊಟ್ಟವರಾರು?' ಎಂದು ಕೇಳಿದರು. ಇದೆಲ್ಲವು ವಿಚಾರಕ್ಕೇನೋ ಸರಿ, ಆದರೆ ಬಳಕೆಗೆ ತಂದ ಹಿಂದುಗಳಿಗೆ ಆದ ಗತಿಯನ್ನು ನೋಡಿದರೆ (ಮಹಮ್ಮದ ಘೋರಿ,ಗಜನಿಯರ ದಾಳಿ, ನಳಂದಾ ನೆಲಸಮ, ಹಲವಾರು), ಇದು ತನ್ನನ್ನು ತಾನು ಕೊಂದುಕೊಂಡಂತೆ.

ಗಾಂದಿ ತಾತನು ಹೇಳಿದ ಸತ್ಯ ಮತ್ತು ಅಹಿಂಸೆಗಳಲ್ಲಿ ಎರಡನೆಯದೇ ಹೆಚ್ಚು ಮಂದಿಗೆ ಹಿಡಿಸಿದೆ. ಹೇಡಿಗಳಿಗೆ ಮತ್ತೇನು ಹಿಡಿಸೀತು? ಆದರೆ ಸತ್ಯ ಎಂಬುದಕ್ಕೆ ಹಿಂದೂ ದಮ್ಮದಲ್ಲಿ ಬಹಳ ಎಂದರೆ ಬಹಳ ಮಹತ್ತರ ಜಾಗವಿದೆ. ಕ್ರುಷ್ಣನು ಹೇಳಿದ್ದು ನಿನ್ನ ಕೆಲಸವನ್ನು ನೀನು ಮಾಡು ಅದರ ಹಣ್ಣನ್ನು(ಫಲವನ್ನು) ನನಗೆ ಬಿಡು ಎಂದು. ಅದರಂತೆ ನಿನ್ನ ಮೇಲೆ ದಾಳಿ ಮಾಡ ಬಂದವರಿಂದ ನಿನಗೆ ಹೇಗೆ ತೋಚುವುದೋ ಹಾಗೆ ಮಾರುತ್ತರ ನೀಡು ಅದರ ಹಣ್ಣನ್ನು ನನಗೆ ಬಿಡು ಎಂದು, ಹೇಡಿಯಂತೆ ಸುಮ್ಮನಿರು ಎಂದಲ್ಲ. ಗಾಂದಿ ಮಾಡಿದ್ದು ಜೈನ ಮತ್ತು ಬೌದ್ದ ದಮ್ಮಗಳು ಹುಟ್ಟು ಹಾಕಿದ್ದ ಈ ಪೊಳ್ಳು 'ಅಹಿಂಸೆ' ಎಂಬ ವಿಚಾರವನ್ನು ಮತ್ತೊಮ್ಮೆ ಹೇಳಿದ್ದು ಆಟೆ ಎನಿಸುತ್ತದೆ.

ಹಿಂದು ದಮ್ಮದಂತೆ ಬೇರೆ ಬೇರೆ ಕೆಲಸದವರಿಗೆ ಬೇರೆ ಬೇರೆ ರೀತಿ ದಮ್ಮೋಪದೇಶ ಮಾಡಬೇಕು. ದೊರೆ ಮತ್ತು ಸೈನಿಕನಿಗೆ 'ಅಹಿಂಸೆ'ಯ ಬೊದನೆ ಮಾಡಿ ಅವನ ನೈತಿಕತೆಯನ್ನು ಕುಗ್ಗಿಸಬಾರದು. ಹಾಗೆಯೇ ನಾವೀಗ ನೇಯಾಲಯದ ನೈತಿಕತೆಯನ್ನು ಕುಗ್ಗಿಸಬಾರದು, ನಮ್ಮ ವಿಚಾರಗಳು ಏನೇ ಇದ್ದರೂ ಅದು ನಮ್ಮನ್ನು ಕಾಯುವ ಗುಡಿಯಂತೆ, ಹಾಗಾಗಿ ಅದರ ತೀರುಮಾನವನ್ನು ನಾವು ಗೌರವದಿಂದ ತೆಗೆದುಕೊಳ್ಳಬೇಕು.

ನಿಮ್ಮ,

ಸಂಗನಗೌಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 18, 2006 - 11:42pm — Yamini

ಮರಣ ದಂಡನೆಯ ಸುತ್ತ

Yamini's picture

ಇಲ್ಲಿ ನಡೆಯುತ್ತಿರುವ ಚರ್ಚೆ ಬಹಳ ತಮಾಷೆಯಾಗಿದೆ. ಟಿ ಕೆ ಎಸ್ ಭಟ್ ಅವರು ಎತ್ತಿದ ಮುಖ್ಯ ಪ್ರಶ್ನೆ ಯಾರಿಗೂ ಮುಖ್ಯವಾಗುತ್ತಿಲ್ಲ. ದೇಶಭಕ್ತಿ ಎಂಬ ಪರಿಕಲ್ಪನೆ ಕೇವಲ ಪಾರಿಭಾಷಿಕ ಮತ್ತು ನಿರ್ದಿಷ್ಟ ವ್ಯಾಖ್ಯಾನದೊಳಗೆ ಮಾತ್ರ 'ಸರಿಯಾದ ಅರ್ಥ' ಪಡೆಯುತ್ತದೆ ಎಂಬ ವಾತಾವರಣ ಸೃಷ್ಟಿಯಾದಾಗ ಏನಾಗಬಹುದು ಎಂಬುದಕ್ಕೆ ಇಲ್ಲಿ ನಡೆದಿರುವ ಚರ್ಚೆಯೇ ಸಾಕ್ಷಿ.

ಅಫ್ಜಲ್ ದೇಶ ದ್ರೋಹಿ ಎಂದು ಒಪ್ಪಿಕೊಂಡು ಚರ್ಚಿಸುವುದಾದರೂ ವಿಶ್ವನಾಥರು ಮರೆತ ಅನೇಕ ಸಂಗತಿಗಳಿವೆ. ಕೆಲಕಾಲದ ಹಿಂದೆ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಅಬು ಸಲೇಂನನ್ನು ಪೋರ್ಚುಗಲ್ ನಿಂದ ಕರೆತಂದದ್ದು ಎಲ್ಲರಿಗೂ ನೆನಪಿರಬಹುದು. ಈ ಸಂದರ್ಭದಲ್ಲಿ ಭಾರತಆಗಿದ್ದದ್ದು ಸೋ ಕಾಲ್ಡ್ 'ದೇಶಭಕ್ತ'ರದ್ದೇ ಸರಕಾರ ಅನ್ನಿಸುತ್ತದೆ. ಅವರು ಪೋರ್ಚುಗಲ್ ಸರಕಾರಕ್ಕೆ ಅಬೂ ಸಲೇಂಗೆ ಮರಣ ದಂಡನೆ ವಿಧಿಸುವುದಿಲ್ಲ ಎಂಬ ವಾಗ್ದಾನ ನೀಡಿದ್ದರು. ಇದನ್ನು ಖಚಿತ ಪಡಿಸದಿದ್ದರೆ ಆತನನ್ನು ನಿಮಗೊಪ್ಪಿಸುವುದಿಲ್ಲ ಎಂದು ಪೋರ್ಚುಗಲ್ ಸರಕಾರ ಸ್ಪಷ್ಟವಾಗಿ ಹೇಳಿತ್ತು. ಇದು ಸರಕಾರವೊಂದು ಮಾಡಿದ ದೇಶದ್ರೋಹದ ಕೆಲಸ ಎಂದು ಯಾರಿಗೂ ಅನ್ನಿಸದೇ ಇದ್ದದ್ದು ಆಶ್ಚರ್ಯಕರ ವಿಷಯವಲ್ಲವೇ?

ಕೊಲ್ಲುವವರನ್ನು ಕೊಲ್ಲುವುದರಿಂದ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂಬುದು ಸಾಬೀತು ಮಾಡುವ ಯಾವ ಅಂಕಿ-ಅಂಶಗಳೂ ಇರುವಂತೆ ಕಾಣಿಸುವುದಿಲ್ಲ. ಚೀನಾದಲ್ಲಿ, ಸೌದಿ ಅರೇಬಿಯಾದಲ್ಲಿ ಪ್ರತೀ ವರ್ಷ ಸಾವಿರಾರು ಮಂದಿಯನ್ನು ಗಲ್ಲಿಗೇರಿಸುತ್ತಿದ್ದರೂ ಅಲ್ಲಿನ ಅಪರಾಧಗಳ ಪ್ರಮಾಣವೇನೂ ಕಡಿಮೆಯಾಗಿಲ್ಲ. ಯೂರೋಪಿನ ಹೆಚ್ಚಿನ ದೇಶಗಳಲ್ಲಿ ಮರಣದಂಡನೆ ಇಲ್ಲ ಅಲ್ಲಿನ ಅಪರಾಧಗಳ ಪ್ರಮಾಣ ಮೇಲೆ ಉದಾಹರಿಸಿದ ದೇಶಗಳಿಗಿಂತ ಕಡಿಮೆ. ಅಪರಾಧಗಳ ಸಂಖ್ಯೆಗೂ ಸಾಮಾನ್ಯ ಆರ್ಥಿಕ ಸ್ಥಿತಿಗೂ ಇರುವ ಸಂಬಂಧ, ಭಯೋತ್ಪಾದನೆಯಂಥ ಸಮಸ್ಯೆಗಳ ಹಿಂದಿನ ಕಾರಣಗಳ ಬಗ್ಗೆ ಯೋಚಿಸಿದರೆ ಬೆಳಕಿಗೆ ಬರುವ ಸಂಗತಿಗಳೇ ಬೇರೆ.

ಮರಣ ದಂಡನೆಯ ಪರವಾಗಿ ವಾದಿಸುವುದಕ್ಕೆ ಅವಕಾಶವಿರುವಂತೆಯೇ ಮರಣ ದಂಡನೆಯ ವಿರುದ್ಧವಾಗಿ ವಾದಿಸುವವರಿಗೆ ಒಂದು ಪ್ರಜಾಸತ್ತಾತ್ಮಕ ಅವಕಾಶವಿದೆ. ಇನ್ನು ಪವನಜ ಅವರು ಕೊಟ್ಟಿರುವ ಲಿಂಕ್ ಕರೆದೊಯ್ಯುವ ಸೈಟ್ ನಲ್ಲಿ ಇರುವ ವಾದಗಳು ಅಫ್ಜಲ್ ಮರಣ ದಂಡನೆ ಬೇಡ ಎನ್ನುವವರ ವಾದಗಳಿಗಿಂತ ಹೆಚ್ಚು ವಿಶ್ವಸನೀಯವಾಗಿರುವುದು ಹೇಗೆ ಎಂಬುದು ಅರ್ಥವಾಗಲಿಲ್ಲ. ಬೇಡ ಎನ್ನುವವರಿಗೆ ಇರುವ ರಾಜಕೀಯ ಮಹತ್ವಾಕಾಂಕ್ಷೆಗಳಂತೆಯೇ ಇವರಿಗೂ ಒಂದಷ್ಟು ರಾಜಕೀಯ ಮಹತ್ವಾಕಾಂಕ್ಷೆಗಳಿವೆ ಅಷ್ಟೇ. ಕಾಶ್ಮೀರದ ಹಿಂದೂಗಳು ಅನುಭವಿಸುವ ಕಷ್ಟಗಳ ಬಗ್ಗೆ ಅಲ್ಲಿ ಸಾಕಷ್ಟು ಬರೆಯಲಾಗಿದೆ. ಇದು ಕಾಶ್ಮೀರದ ಮುಸ್ಲಿಮರು ಭಯೋತ್ಪಾದನೆಯಿಂದ ಪೀಡಿತರಲ್ಲ ಎಂಬ ಧ್ವನಿಯಲ್ಲಿದೆ. ಕಾಶ್ಮೀರದ ಸಾಮಾನ್ಯ ಮುಸ್ಲಿಮರೂ ಇತರರಷ್ಟೇ ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂಬ ಸರಳ ಸತ್ಯವನ್ನು ಉದಾತ್ತವಾದ ಹಿಂದೂ ಧರ್ಮದ ಪರವಾಗಿ ವಾದಿಸುವಾಗ ಮುಚ್ಚಿಡುವ ಅಗತ್ಯವಿದೆಯೇ?

ಭಯೋತ್ಪಾದಕರಿಗೆ ಬಲಿಯಾಗುವವರು ಮನುಷ್ಯರು ಎಂದು ಅರ್ಥ ಮಾಡಿಕೊಳ್ಳಲಾಗದಷ್ಟು ಸಂವೇದನಾ ಶೂನ್ಯ ಮನಸ್ಸು ನಮ್ಮದೇ?

ಸಂಗನಗೌಡರು ಹೇಳಿದಂತೆ ಗೀತೆಯಲ್ಲಿ ಕೃಷ್ಣ ನಿಮಗೆ ತೋಚಿದಂತೆ ಮಾರುತ್ತರ ಕೊಡುವುದಕ್ಕೆ ಹೇಳಿಲ್ಲ. ಹಾಗೆ ಅವನು ಹೇಳಿದ್ದರೆ ಗೀತೋಪದೇಶದ ಅಗತ್ಯವೇ ಇರುತ್ತಿರಲಿಲ್ಲ. ಅರ್ಜುನನಿಗೆ ಆ ಕ್ಷಣ ತೋಚಿದ್ದು ಯುದ್ಧ ಬೇಡ ಎಂದು. ತೋಚಿದಂತೆ ಮಾಡಲು ಕೃಷ್ಣ ಹೇಳಿದ್ದರೆ ಅರ್ಜುನ ಏನು ಮಾಡಬಹುದಿತ್ತು?

ಹಿಂದೂ ಧರ್ಮ ಬೇರೆ ಬೇರೆಯವರಿಗೆ ಬೇರೆ ಬೇರೆ ಧರ್ಮವನ್ನು ಉಪದೇಶ ಮಾಡಿದ್ದು ಸರಿ ಎಂದಾದರೆ ಜಾತಿ ವ್ಯವಸ್ಥೆಯನ್ನು ಸಂಗನಗೌಡರು ಒಪ್ಪುತ್ತಾರೆ ಎಂದು ಭಾವಿಸಬೇಕೇ?

-ಯಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 19, 2006 - 7:26pm — muralihr

ಬಾ೦ಧವ್ಯ

muralihr's picture

ಮರಣದ ಸತ್ಯ ತಿಳಿಯದೆ, ನಾವು  ಮರಣ ದ೦ಡನೆಯನ್ನು ಕೊಡ ಬಾರದು. ಹಾಗೆ ಮಾಡಿದರೆ ಯಾರಿಗು ಹಿತವಿಲ್ಲಾ.  

ಅಡಿಗರ ಪದ್ಯ  "ಜೀವ ಜೀವದ ನ೦ಟು ಬ್ರಹ್ಮ ಗ೦ಟು."

ಬಾ೦ಧವ್ಯ
ಪ್ರತಿಯೊ೦ದು ಜೀವಕ್ಕೂ ಇನ್ನೊ೦ದು ಪೂರಕವಯ್ಯ
ಜೀವ ಜೀವದ ನ೦ಟು ಬ್ರಹ್ಮ ಗ೦ಟು.
ಇಲ್ಲಿನೀ ನೆಲ , ನೀರು, ಗಾಳಿ, ಭಾಗಿದ ಭಾನು
ಎಲ್ಲರಿಗು; ನಮಗೆ ನಿಮಗಷ್ಟೆ ಅಲ್ಲ.
ಒ೦ದೆ ಜೀವದ ಅನ೦ತ ರೂಪಾ೦ತರದ ವಿಲಾಸ,
ವಿಕಾಸಕ್ಕೆ ಏಕತೆಯ ಅರಿವಗತ್ಯ.
ನಾಯಿಗಳು, ಬೆಕ್ಕುಗಳು, ಅಳಿಲು, ಹಸು., ಕುರಿ, ಕುದುರೆ
ಹುಲಿ, ಸಿ೦ಹ , ನರಿ , ತೋಳ, ಹಾವು ಚೇಳು;
ತೆ೦ಗು ಹಲಸು ಮಾವು ಬೇಳು ತೊಣಚಿ ಜಾಲಿ
ನಮ್ಮೊಳಡಗಿರುವ ಬಾ೦ಧವರು.

ದ್ವೇಷ ಹಿ೦ಸೆ ಗಳಾಚೆ, ಭಯ ಸಹಾನು ಭೂತಿಗಳಾಚೆ
ಬಾ೦ಧ್ವ್ಯದರಿವು ಪಡಿ ಮೂಡಿದಾಗ
ಪರಿಪೂರ್ಣ ವಾಗಬಲ್ಲದು ಇಲ್ಲಿ ಬದುಕು
ಪ್ರೀತಿಸುವುದನ್ನು ತಿಳಿ, ಬದುಕಲು ಕಲಿ

ಕೊಲ್ಲುವುದು ಮನುಷ್ಯ ಲಕ್ಷಣವಲ್ಲ, ಹೆಚ್ಚಳವಲ್ಲವೇ ಅಲ್ಲ,
ಬದುಕುವುದು ಬದುಕು ಬಿಡುವುದು ಬೆಳೆವುದು
ಮಾನವತ್ವದ ಮಹತ್ವ ಇಲ್ಲಿ ಇದೆ ತಿಳಿಯೋಣ
ಒ೦ದು ಅಳಿದರೆ ಉಳಿದುದೆಲ್ಲ ಮುಕ್ಕು.

----ಅಡಿಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 19, 2006 - 10:21pm — ಸಂಗನಗೌಡ

ಮೂರನೆ ಜಾಗತಿಕ ಸೆಣಸಾಟ

ಸಂಗನಗೌಡ's picture

ನಿಮ್ಮಗಳಿಗೆ ಒಂದು ಗುಟ್ಟಲ್ಲದ ಗುಟ್ಟನ್ನು ಹೇಳುತ್ತೇನೆ, ಬುದ್ದ ಬಂದು ಹೋಗಿ 2500 ವರುಶಗಳಾಯಿತು, ಯುದ್ದಗಳು ನಿಂತವೇ? ಇಲ್ಲ. ನಾವು ಸುಮ್ಮನಿದ್ದರೂ ನಮ್ಮ ಎದುರಾಳಿ ಸುಮ್ಮನಿರಲಾರ. ಪಶ್‍ಚಾತಾಪ ಪಡಲಾದರೂ ಬದುಕುಳಿಯಬೇಕಲ್ಲವೇ? ಹಾಗಾಗಿ ನಾವು ನೆಮ್ಮದಿಯಿಂದ ಬದುಕಲು ನಮ್ಮ ಎದುರಾಳಿಯನ್ನು ಮುಗಿಸಲೇಬೇಕಾಗುತ್ತದೆ.

ಒಬ್ಬ 'ಅಫ್‍ಜಲ'ನನ್ನು ಕೊಂದು ಏನೂ ಸಾದನೆ ಮಾಡಿದಂತಾಗದು, ಈ terrerism ಅನ್ನುವುದು ಕೊನೆಯಾಗುವುದು ಬಹುಶ ಮೂರನೆ ಜಾಗತಿಕ ಸಮರದ ಬಳಿಕವೇ.

ಮುಂದೇ ಆಗಲಿರುವುದನ್ನು ಮುಂಚೆಯೇ ನುಡಿಯುವುದರಲ್ಲಿ ಹೆಸರಾದ Nostradamus ಹೇಳಿರುವಂತೆ, ಮೂರನೆ ಜಾಗತಿಕ ಸಮರ ಈಗಾಗಲೆ ಮೊದಲಾಗಿದೆ. ಅದು WTC 9/11 ದೊಂದಿಗೆ. ಹಾಗಾಗಿ ನಾವೇನೇ ದೊಡ್ಡ ದೊಡ್ಡ ವಿಚಾರಗಳನ್ನು ಹಂಚಿಕೊಂಡರೂ terrorism ನ ಕೈ ಬಹಳ ದೊಡ್ಡದಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 20, 2006 - 6:10pm — ವಿಶ್ವನಾಥ

ಹುತ್ತವ ಬಡಿದರೆ...

ವಿಶ್ವನಾಥ's picture

ಯಾಮಿನಿಯವರು ಹಾವು ಹೊಡೆಯುವುದನ್ನು ಬಿಟ್ಟು ಬರೀ ಹುತ್ತವನ್ನೇ ಬಡಿದಿದ್ದಾರೆ!

ಮರಣ ದಂಡನೆ ನಾಗರಿಕ ಸಮಾಜ ಸ್ವೀಕರಿಸುವಂಥ ಶಿಕ್ಷೆಯೇ, ಗಲ್ಲುಶಿಕ್ಷೆಗೆ ಗುರಿಯಾದಾತ ಸತ್ತ ಬಳಿಕ ಹುತಾತ್ಮನಾಗುತ್ತಾನಾ, ಶಹೀದ್ ಆಗುತ್ತಾನಾ, ಜಗದೇಕವೀರನಾಗುತ್ತಾನಾ ಇಲ್ಲವೇ ಭೂತ-ಪ್ರೇತವಾಗಿ ಕಾಡುತ್ತಾನಾ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಲ್ಲ. ಅಥವಾ ಗಲ್ಲುಶಿಕ್ಷೆಯಿದ್ದರೆ ದಯಾ ಮರಣದಂಥ ಸಾಫ್ಟ್ ಕಿಲಿಂಗ್ ಇರಬೇಕೆ ಇಲ್ಲವೇ ಅಪರಾಧಿಗೆ ಆತನ ಇರುವಿಕೆಯೆ ಬಗ್ಗೆ ತಿಳಿಯದಂತೆಯೇ ಇಲ್ಲವಾಗಿಸಬೇಕೆ ಎಂಬುದೂ ಅಲ್ಲ. ಈ ರೀತಿಯ ಚರ್ಚೆಯನ್ನು ಪ್ರತ್ಯೇಕವಾಗಿರಿಸಿಕೊಳ್ಳೋಣ.

ಅಫ್ಜಲ್ ಓರ್ವ ಕ್ರಿಮಿನಲ್ ಎಂದು ನಿರ್ಧರಿಸಿ ಸುಪ್ರೀಂಕೋರ್ಟೇ ಆತನಿಗೆ ಮರಣದಂಡನೆ ವಿಧಿಸಿರುವಾಗ ಹತ್ತಾರು ವಿತಂಡ ವಾದಗಳನ್ನು ಮಾಡುತ್ತ ನ್ಯಾಯಾಂಗದ ದಿಕ್ಕು ತಪ್ಪಿಸುವ ಕೆಲಸ ಏಕೆ ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ.

ಯಾವ ಪಕ್ಷದ ಸರಕಾರ ದೇಶಭಕ್ತ, ಯಾವುದು ಗದ್ದಾರ್ ಎಂಬುದನ್ನು ನಿರ್ಧರಿಸುವುದು ಅವರವರ ಭಕುತಿಗೆ-ಭಾವಕ್ಕೆ ಬಿಟ್ಟದ್ದು!

ಅಫ್ಜಲ್ ಎಂಬ ಉಗ್ರಗಾಮಿ ಸಾಯಲಿದ್ದಾನೆ ಎಂಬುದೇ ತಡ ಮೈಕೊಡವಿಕೊಂಡು ಎದ್ದು ತಮ್ಮದು ರಾಷ್ಟ್ರೀಯ ಪಕ್ಷ ಎಂಬುದನ್ನೂ ಮರೆತು ಆತನನ್ನು ಶತಾಯಗತಾಯ ಉಳಿಸಬೇಕು ಎಂದು ಸಾರ್ವಜನಿಕವಾಗಿ ಬೊಬ್ಬೆಯಿಟ್ಟವರು ಯಾವ ಪಕ್ಷದವರು? ಉಗ್ರಗಾಮಿಗಳನ್ನು ಮಟ್ಟ ಹಾಕುವ ಪೋಟಾ ದಂಥ ನಿಷ್ಠುರ ಕಾನೂನನ್ನು ಕೇವಲ ಒಂದು ಸಮುದಾಯಕ್ಕೆ ನೋವಾಗುತ್ತದೆ (ಓಟ್ ಬ್ಯಾಂಕ್ ತಪ್ಪುತ್ತದೆ ಎಂದು ಓದಿಕೊಳ್ಳಿ) ಎಂಬ ಕಾರಣ ನೀಡಿ ಅದನ್ನು ನಿರ್ಮೂಲನೆ ಮಾಡಿದವರು ಯಾರು? ಸಮಾಜಕ್ಕೆ-ದೇಶಕ್ಕೆ ಎಂಥ ವಿಪತ್ತು ಬಂದರೂ ಸರಿ ತಮ್ಮ ಹೊಟ್ಟೆ ತುಂಬಿಕೊಳ್ಳುವ ಓಟ್ ಬ್ಯಾಂಕ್ ಮಾತ್ರ ತಪ್ಪಬಾರದು ಎಂಬುದು ಯಾರ ನೀತಿ?

ಇನ್ನು ನೀವೇ ಹೇಳಿದಂತೆ ದೇಶಭಕ್ತರ ಸರಕಾರ ಅಬು ಸಲೇಂನನ್ನು ಪೋರ್ಚುಗಲ್ ನಿಂದ ಬಿಡಿಸಿಕೊಂಡಿದ್ದರ ಬಗ್ಗೆ ಹೇಳುವುದಾದರೆ, ಅದು ಶಾಸಕಾಂಗದ ನಿರ್ಧಾರ. ಶಿಕ್ಷೆ ನೀಡುವುದು ನ್ಯಾಯಾಂಗ ಎಂಬುದು ನಿಮಗೆ ಗೊತ್ತಿರುವುದೇ ಇದೆ. ಸುಪ್ರೀಂಕೋರ್ಟಿನ ಯಾವ ಮುಖ್ಯನ್ಯಾಯಮೂರ್ತಿಯೂ ಪೋರ್ಚುಗಲ್ ಗೆ ಮುಚ್ಚಳಿಕೆ ಬರೆದುಕೊಟ್ಟಿಲ್ಲ. ಈ ಪ್ರಕರಣ ಇನ್ನೂ ವಿಚಾರಣೆಯಲ್ಲಿರುವಾಗಲೇ ಅಬು ಸಲೇಂಗೆ ಅತ್ಯುಗ್ರ ಶಿಕ್ಷೆ ಆಗದು ಎಂದು ಹೇಗೆ ಹೇಳುತ್ತೀರಿ. ಅಬು-ಅಫ್ಜಲ್ ಪ್ರಕರಣ ಹೋಲಿಕೆಯೇ ಅಲ್ಲ.

ಕಾಶ್ಮೀರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಈವರೆಗೆ ಜಮ್ಮು-ಕಾಶ್ಮೀರದಲ್ಲಿ ಸತ್ತಿರುವ ಬಹುತೇಕರಲ್ಲಿ ಹಿಂದೂಗಳ ಸಂಖ್ಯೆಯೇ ಅಧಿಕ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ಕೆಲ ಮುಸ್ಲೀಮರು ಬಲಿಯಾಗಿದ್ದಾರೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಸತ್ತವರ ಪೈಕಿ ಅನೇಕರು ಉಗ್ರರ ಹುಟ್ಟಡಗಿಸಲು ಭದ್ರತಾ ಪಡೆಗಳಿಗೆ ಮಾಹಿತಿದಾರರಾಗಿದ್ದವರು ಎಂಬುದು ಗಮನಾರ್ಹ. ತುಡುಗು ದನಗಳಂತೆ ರಾತ್ರಿ ಹೊತ್ತು ಹಳ್ಳಿಗಳಿಗೆ ನುಗ್ಗಿ, ನಿರ್ದಿಷ್ಟವಾಗಿ ಹಿಂದೂಗಳನ್ನು ಸಾಲು-ಸಾಲಾಗಿ ನಿಲ್ಲಿಸಿ ಹೆಂಗಸರು-ಮಕ್ಕಳೆನ್ನದೇ ಗುಂಡಿಕ್ಕಿ ಕೊಂದಾಗ ಕೇವಲ ಔಪಚಾರಿಕ ಖಂಡನೆಯ ಮಾತುಗಳನ್ನು ಉದುರಿಸುವ ಸೆಕ್ಯೂಲರ್‌ವಾದಿಗಳು, ಉಗ್ರಗಾಮಿಯೊಬ್ಬನಿಗೆ ಮರಣದಂಡನೆ ವಿಧಿಸಿದಾಗ ಕೊಡವಿಕೊಂಡು ಎದ್ದು ಪ್ರತಿಭಟಿಸುತ್ತಾರೆ ಎಂದರೆ ಇದ್ಯಾವ ನ್ಯಾಯ ಮೇಡಂ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 8, 2008 - 4:59pm — sreekrishna

ಉ: ಹುತ್ತವ ಬಡಿದರೆ...

sreekrishna's picture

ಇಂಥ ಕ್ರಿಮಿಯ ಬಗ್ಗೆ ಇಷ್ಟೆಲ್ಲಾ ಚರ್ಚೆ ಯಾಕೆ? ನಮ್ಮ ಗೂಬೆ ಕೇಂದ್ರ ಸರ್ಕಾರಕ್ಕೆ ದಂ ಇದ್ದರೆ ಆ ಕ್ರಿಮಿಯನ್ನು ಎನ್ ಕೌಂಟರ್ ಮೂಲಕ ಇಲ್ಲವಾಗಿಸಿದ್ದರೆ ಇಷ್ಟೆಲ್ಲಾ ಚರ್ಚೆಯ ಅಗತ್ಯವಿರಲಿಲ್ಲ. ಇನ್ನಾದರೂ ಆ ಕೆಲಸವನ್ನು ಯಾರಾದರೂ ಒಬ್ಬ ದೇಶಭಕ್ತ ಮಾಡಲಿ. ಬೆಸ್ಟ್ ಆಫ್ ಲಕ್!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • (ಅಫ್ಜಲ್) ಗುರು ಹತ್ಯೆ ಮಹಾಪಾಪ!
  • ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !
  • ಬಾಂಬೆ ಡೈಯಿಂಗ್!
  • ಶಹಬ್ಬಾಶ್ ಮುಂಬೈಕಾರ್!
  • "ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?
Syndicate content

ಲೇಖಕರು

ವಿಶ್ವನಾಥ's picture

ಪರಿಚಯ

I am web journalist. Reading Kannada novels, watching art movies, travelling are my hobbies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.