Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಪ್ರವೀಣ್ ರವರ ಬ್ಲಾಗ್

ಕನ್ನಡವೇ ಜಾತಿ-ಧರ್ಮ-ದೇವರು ?

January 11, 2006 - 2:07pm — ಪ್ರವೀಣ್

ಅನೇಕ ಕನ್ನಡಿಗರಿಗೆ ಕನ್ನಡವು ಕೇವಲ ಮನೆಯ ಭಾಷೆ, ಇದಕ್ಕಿಂತ ದೊಡ್ಡ ಭಾಷೆಗಳು ಇವೆ. ಅವು ಬಂದಾಗ ಕನ್ನಡಕ್ಕೆ ಮನ್ನಣೆ ಕೊಡಬಾರದು ಅಂತ ಭಾವನೆ. ಕನ್ನಡ ಒಂದು ರಾಷ್ಟ್ರಭಾಷೆ ಅಂತ ಅನೇಕ ಕನ್ನಡಿಗರಿಗೆ ತಿಳಿದಿಲ್ಲ.
ನಮಗೆ ಪರ ಊರಿನಿಂದ ಬಂದರೆ ಹೆಚ್ಚು,ಅದೇ ನಮ್ಮ ರಾಜ್ಯದಲ್ಲಿ ಅದು ಇದ್ದರು ನಾವು ಅದಕ್ಕೆ ಮರ್ಯಾದೆ ಕೊಡುವದಿಲ್ಲ, ಅದು ಸಿನೆಮಾ ಅಗಿರಬಹುದು,ನಟ-ನಟಿ, ಪುಸ್ತಕ,ಸಾಹಿತ್ಯ ಅಥಾವ ದೇವರುಗಳು. ನಮಗೆ ಎಲ್ಲಾ ಬೇರೆ ಕಡೆಯಿಂದ ಆಮದು ಆಗಬೇಕು. ಇದರಿಂದ ನಮ್ಮ ಸಂಸ್ಕ್ರುತಿ ಯಾವ ತರಹ ಮೇಲೆ ಧಾಳಿ ಆಗುತ್ತಿವೆ ಅಂತ ನಮಗೆ ಅರಿವಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.

ಇವುಗಳಲ್ಲಿ ನಮಗೆ ಕಂಡು ಬರುವುದು ಧಾರ್ಮಿಕ ಧಾಳಿ, ಬೇರೆ ರಾಜ್ಯಗಳಿಂದ ಜನ ವಲಸೆ ಬರುವದರ ಜೊತೆಗೆ ಅಲ್ಲಿಯ ದೇವರುಗಳನ್ನು ತಂದರು. ಕಾಲಕ್ರಮೇಣ ನಮ್ಮ ಜನರು ಆ ದೇವರುಗಳನ್ನು ಅಪ್ಪಿಕೊಂಡರು. ಗಲ್ಲಿ-ಗಲ್ಲಿಗಳಲ್ಲಿ ಆ ದೇವರಿಗೆ ಗುಡಿ-ಗೋಪುರುಗಳು, ನಮ್ಮ ಊರಿನ ದೇವರುಗಳಿಗೆ ಒಂದು ೨x3 ಜಾಗವಿಲ್ಲ. ಆ ದೇವಸ್ಥಾನಗಳಿಗೆ ಹೋದರೆ, ಎಲ್ಲಾ ಪರಭಾಷೆಯು ಎದ್ದು ಕಾಣುತ್ತದೆ, ಕೇಳಿದರೆ ಆ ದೇವರಿಗೆ ಆರ್ಥ ಆಗುವುದು ಆ ಭಾಷೆ ಮಾತ್ರ ಅಂತ ಹೇಳುತ್ತಾರೆ. ನಮ್ಮ ಮೂರ್ಖ ಜನ ಅದನ್ನು ನಂಬುತ್ತಾರೆ.

ಕನ್ನಡ ಬರದ ದೇವರುಗಳು ನಮಗೆ ಬೇಕೆ ??

ಕನ್ನಡ ಅನೇಕ ಚಳುವಳಿಗಳು ಮತ್ತು ಹೋರಾಟಗಳು ಜಾತಿ-ಧರ್ಮದಿಂದ ಸತ್ತಿವೆ ಅಂದರೆ ತಪ್ಪಾಗಲಾರದು. ಯಾಕೆ ನಾವು ನಮ್ಮ ಕನ್ನಡವನ್ನು ಧರ್ಮವನ್ನಾಗಿ ಸ್ವೀಕರಿಸಿಲ್ಲ ??

ಹಿಂದೆ "ಕನ್ನಡ ಯುವಜನ" ಸಂಪಾದಕರು ಆಗಿದ್ದ ಮಾ.ರಾಮಮುರ್ತಿಯವರು " ಕನ್ನಡಿಗರಿಗೆ ಕನ್ನಡವೇ ದೇವರು, ಬೇರೆ ದೇವರಿಗೆ ಶರಣಾಗಲು ಬೇರೆ ದೇವರು ಬೇಕಾಗಿಲ್ಲ" ಅಂತ ಹೇಳಿದ್ದು ಮತ್ತು ಅದನ್ನು ತಮ್ಮ ಪತ್ರಿಕೆಯಲ್ಲಿ ಮುದ್ರಿಸುತ್ತಿದ್ದರು.

ಕನ್ನಡ ಜನರು ಒಂದೇ ಎಂಬ ಭಾವನೆ ಬರಲು ನಾವು ಒಂದು ಜನಾಂಗಕ್ಕೆ ಸೇರಬೇಕು ಮತ್ತು ಕನ್ನಡ ನಮ್ಮ ಜಾತಿ ಅಂತ ಭಾವನೆ ಬೆಳಸಿಕೊಂಡರೆ ಮಾತ್ರ ನಾವು ಒಗ್ಗಾಟ್ಟಾಗಿ ಕೆಲ್ಸ ಮಾಡಲು ಸಾಧ್ಯ.

ನೀವು ಏನು ಹೇಳುತ್ತಿರಿ ?

Ornamental seperator
  • ಪ್ರವೀಣ್ ರವರ ಬ್ಲಾಗ್
  • Login or register to post comments
  • 1924 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 11, 2006 - 7:12pm — Sunil Jayaprakash

ದೇವರಿಗೆ ಖಂಡಿತ ಕನ್ನಡ ಬರುತ್ತೆ

Sunil Jayaprakash's picture

ಕನ್ನಡ ಕನ್ನಡ ಹಾ! ಸವಿ ಕನ್ನಡ,
ಕನ್ನಡದಲಿ ಹರಿ ಬರೆಯುವನು,
ಕನ್ನಡದಲಿ ಹರ ತಿರಿಯುವನು.
ಕನ್ನಡದಲ್ಲಿಯೆ ಬಿನ್ನಹಗೈಡೊದೆ,
ಹರಿ ವರಗಳ ಮಳೆ ತಾ ಕರೆಯುವನು.

 ತಪ್ಪುಗಳಿದ್ದಲ್ಲಿ ಸರಿಪಡಿಸಿ

  • Login or register to post comments
  • link
  • Email this ಪ್ರತಿಕ್ರಿಯೆ
January 12, 2006 - 12:39pm — shreekant.mishrikoti

'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ

shreekant.mishrikoti's picture

'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ
ಕನ್ನಡದಲ್ಲಿಯೆ ಬಿನ್ನಹಗೈದೊಡೆ

  • Login or register to post comments
  • link
  • Email this ಪ್ರತಿಕ್ರಿಯೆ
January 12, 2006 - 6:15pm — srivathsajoshi

Re: 'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ

srivathsajoshi's picture

shreekant.mishrikoti wrote:
'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ

ಒಂದು ವಕ್ರತುಂಡೋಕ್ತಿ-

ಬಿನ್ನವಿಸಿಕೊಳ್ಳಲಿಕ್ಕೂ 'ಗೈಡ್' ಉಪಯೋಗಿಸಬೇಕಾಗಿ ಬಂದರೆ 'ಬಿನ್ನಹಗೈಡೊದೆ...' ಸರಿಯೇ ಇರಬಹುದು!

- ಶ್ರೀವತ್ಸ ಜೋಶಿ

  • Login or register to post comments
  • link
  • Email this ಪ್ರತಿಕ್ರಿಯೆ
January 11, 2006 - 10:03pm — gvmt

ಕನ್ನಡ ಬರದ ದೇವರುಗಳು

gvmt's picture

> ಕನ್ನಡ ಬರದ ದೇವರುಗಳು ನಮಗೆ ಬೇಕೆ ??

ದೇವರು ಸರ್ವಶಕ್ತ ಎನ್ನುವುದನ್ನು ನಂಬುವವರಾದರೆ "ಕನ್ನಡ ಬರದ ದೇವರು" ಎನ್ನುವುದರಲ್ಲಿ ಅರ್ಥವಿಲ್ಲ.

ದೇವರು ಸರ್ವಶಕ್ತನಲ್ಲ ಎಂದಾದರೆ ಆ ದೇವರು ನಮಗೆ ಇದ್ದೂ ಪ್ರಯೋಜನವಿಲ್ಲ.

ದೇವರ ಬಗೆಗಿನ ನಮ್ಮ ನಮ್ಮ ತಪ್ಪು ತಿಳಿವಳಿಕೆಯನ್ನು ದೇವರಿಗೆ ಆರೋಪಿಸಿವುದು ಸಾಮಾನ್ಯ; ಅರ್ಥಹೀನ, ಆದರೆ ಸಾಮಾನ್ಯ.

> ನಮ್ಮ ಮೂರ್ಖ ಜನ ಅದನ್ನು ನಂಬುತ್ತಾರೆ.

ಸಹಜ ತಾನೆ? "ನಮ್ಮ ದೇವರಿಗೆ ಇದೊಂದು ಭಾಷೆ ಮಾತ್ರ ತಿಳಿಯುವುದು" ಎನ್ನುವವರು ಬೇರೊಂದು ದೇವರಿಗೆ ಅವರ ಭಾಷೆ ತಿಳಿಯದು ಎಂದರೆ ನಂಬಲಾರರೆ? ಎಲ್ಲ ಜನರೂ ಮೂರ್ಖರೆ.

> ಕನ್ನಡ ಅನೇಕ ಚಳುವಳಿಗಳು ಮತ್ತು ಹೋರಾಟಗಳು ಜಾತಿ-ಧರ್ಮದಿಂದ ಸತ್ತಿವೆ ಅಂದರೆ ತಪ್ಪಾಗಲಾರದು.

ಯಾಕಾಗಲಾರದು? ಕನ್ನಡ ಸತ್ತಿದೆಯೆ? ಸತ್ತಿದ್ದರೆ ಸಾವಿಗೆ ಚಳಿವಳಿ, ಜಾತಿ ಧರ್ಮಗಳೇ ಕಾರಣವೆ? ಹೇಗೆ?

ಎಲ್ಲರೂ ಸಾಮಾನ್ಯವಾಗಿ ಮಾಡುವ ತಪ್ಪನ್ನು ನೀವೂ ಮಾಡುತ್ತಿದ್ದೀರಿ ಎಂದೆನಿಸುತ್ತೆ - ಭಾಷೆ, ಸಂಸ್ಕೃತಿಗಳಿಗೂ ಮತಕ್ಕೂ ಸಂಬಂಧವಿಲ್ಲ; ಮತಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಇವನ್ನು ಒಟ್ಟಾಗಿಯೋ ಬೇರೆಬೇರೆಯಾಗಿಯೋ ಗಂಟುಹಾಕುವುದು ಸರಿಯಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
December 3, 2006 - 11:50pm — kannadiga_1956

Re: ಕನ್ನಡ ಬರದ ದೇವರುಗಳು

kannadiga_1956's picture

ಸರಿಯಾಗಿ ಹೇಳಿದ್ರಿ... ಪರ ರಾಜ್ಯದವರು ತಮ್ಮ ತಮ್ಮ ಸಂಸ್ಕ್ರುತಿಯನ್ನ ಹಬ್ಬ್ಸಕ್ಕೊಸ್ಕಾರ "ಸಾಯಿಬಾಬ.. ಅಯ್ಯಪ್ಪ" ಈ ತರ ದೇವಸ್ತಾನ ತೆಗೆದು ತಮ್ಮ ತಮ್ಮ ಭಾಷೆ , ಸಂಸ್ಕ್ರುತಿ ಎಲ್ಲಾ ಹಬ್ಬಿಸ್ತ್ತಿದ್ದಾರೆ.. ಏಷ್ಟೊಂದು ಕ್ರೈಸ್ತ ದೇವಾಲಯದಲ್ಲೂ ಬರೀ ತಮಿಳನ್ನೆ ಶುರು ಹಚ್ಕೊಂಡಿದ್ದರೆ.. ಕನ್ನಡದೋರು ತಿರುಪತಿ ಗೆ, ಪುತ್ತಪರ್ತಿಗೆ ಹೊಗಿದ್ದೂ ಹೊಗಿದ್ದೆ, ಅಯ್ಯಪ್ಪನ ಮಾಲೆ ಹಾಕ್ಕೊಂಡಿದ್ದೂ ಹಾಕ್ಕೊಂಡಿದ್ದೆ... ನಮ್ಮ ಧರ್ಮಸ್ಠಳ ಮಂಜುನಾಥ, ಮಲೆ ಮಾದೇಶ್ವರ, ನಂಜುಂಡೇಶ್ವರ ಇವ್ರುನ್ನೆಲ್ಲಾ ಕೇಳೊವ್ರೇ ಇಲ್ಲ..

ದಡ್ದ ಬಡ್ಡೀಮಕ್ಳು ಕನ್ನಡಿಗ್ರು...

  • Login or register to post comments
  • link
  • Email this ಪ್ರತಿಕ್ರಿಯೆ
April 5, 2007 - 3:09pm — mahesha

ಕನ್ನಡ ಬರದ ದೇವರುಗಳು

mahesha's picture

ಕನ್ನಡ ಬರದ ಕಡವಳರು!

ಪಾಪ ಅವರಿಗೂ ಕನ್ನಡ ಕಷ್ಟ ಅಂತ ಅನ್ನಿಸುತ್ತೇ Laughing out loud.

ಎಷ್ಟೇ ಆದರು ನಮಗೆ ಗಂಗೆ ಮೇಲೆ ಬಕುತಿ, ಕಾವೇರಿ ಮೇಲೆ ಆಸೆ!!! Smiling
======
Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ಕನ್ನಡವನ್ನು develop ಮಾಡಿ.
  • ಕನ್ನಡ ಕಲಿಯುವದು ಕಷ್ಟವೇ?
  • ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ
  • ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ
  • ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
Syndicate content

ಲೇಖಕರು

ಪ್ರವೀಣ್'s picture

ಪರಿಚಯ

ಕನ್ನಡ ಜನಾಂಗದಿಂದ ಬಂದಿರುವೆನು. "ಕನ್ನಡ " ಜಾತಿ,ಧರ್ಮ ಮತ್ತು ದೇವರು ಎಂದು ನಂಬಿರುವೆನು. ನನಗೆ ಆಸಕ್ತಿ ಇರದಿರುವ ವಿಷಯಗಳು ಬಹಳ ಕಡಿಮೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator