ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಶಿವ ರವರ ಬ್ಲಾಗ್

ರಂಗ್ ದೇ ಬಸಂತಿ

February 12, 2006 - 12:33pm — ಶಿವ

ಇದು ಸಿನೆಮಾ ವಿಮರ್ಶೆ ಮಾಡುವ ಪ್ರಯತ್ನ ಅಲ್ಲ.

'ರಂಗ್ ದೇ ಬಸಂತಿ' ನಾನು ಇತ್ತೇಚೆಗೆ ನೋಡಿದ ಒಂದು ಒಳ್ಳೆಯ ಚಲನಚಿತ್ರ.ಸ್ಯೂ(Sue), ತನ್ನ ಅಜ್ಜನ ಡೈರಿಯನ್ನು ಆಧಾರವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳ ಕುರಿತು ಸಾಕ್ಶ್ಯಚಿತ್ರ ಮಾಡಲು ಭಾರತಕ್ಕ್ತೆ ಬರುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ.ತನ್ನ ಚರಿತ್ರೆಯೊಂದಿಗೆ ಗುರುತಿಸಿಕೊಳ್ಲಲಾಗದ ಗೆಳೆಯರ ಗುಂಪೊಂದು(Products of modern India), ಸಾಕ್ಶ್ಯಚಿತ್ರದಲ್ಲಿ ಅಭಿನಯಿಸುತ್ತಾ, ಭಗತ್ ಸಿಂಗ್, ಚಂದ್ರಶೇಕರ ಆಝಾದ್ ಮೊದಲದ ಪಾತ್ರಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ತಮ್ಮ ಗೆಳೆಯನ ಸಾವಿಗೆ ಪ್ರತಿಕಾರ ತೆಗೆದುಕೊಳ್ಳಲು, ಭಾರತದ ರಕ್ಷಣಾ ಮಂತ್ರಿಯ ಕೊಲೆ ಮಾಡಿ,ಅದನ್ನು ಜಗತ್ತಿಗೆ ಆಕಾಶವಾಣಿಯ ಮೂಲಕ ತಿಳಿಸುತ್ತಾರೆ.ಈ ಮಧ್ಯೆ ಗೆಳೆಯರ ನಡುವಿನ ತಮಾಷೆಯ ಮಾತುಕತೆ(Fun) ಇದೆ.ಹಿಂದೂ ಮೂಲಭೂತವಾದಿಗಳು ಬಂದು ಹೋಗುತ್ತಾರೆ.ಈ ದೇಶದಲ್ಲಿ ಏನು ಬದಲಾಗೊಲ್ಲ ಎನ್ನುವ ಯುವ ಜನತೆಯ ನಿರಾಶವಾದ ಇದೆ.ಇದನ್ನು ನಾವೇ ಬದಲಾಯಿಸಬೇಕು ಎನ್ನುವ ಸಂದೇಶದೊಂದಿಗೆ ಸಿನೆಮಾ ಮುಗಿಯುತ್ತದೆ.
ಯುನಿವರ್ಸಿಟಿಯ ಕ್ಯಾಂಪಸ್ ನಲ್ಲಿ ನನ್ನ ಜನ ಗುರುತಿಸುತ್ತಾರೆ, ಇಲ್ಲಿಂದ ಹೊರಗೆ ಹೋದರೆ ನಾನು ಒಬ್ಬ ಸಾಮಾನ್ಯ ಮನುಷ್ಯ ಎನ್ನುತ್ತಾ ಕ್ಯಾಂಪಸ್ ನಲ್ಲೇ ಕಾಲ ಕಳೆಯುವ ಡಿಜೆಯಾಗಿ ಆಮೀರ್ ಖಾನ್, ತಾನು ಬ್ರಹ್ಮಚಾರಿಯಾಗಿಯೇ ಸಾಯಬಹುದೆಂಬ ಅಂಜಿಕೆಯಿರುವ ಸೂಕಿಯಾಗಿ ಶರ್ಮಾನ್ ಜೋಶಿ,"dad calling" ಅನ್ನು ಮೊಬೈಲ್ ಫೋನ್ ನಲ್ಲಿ ನೋಡಿದ್ರೆ ಇರಿಟೇಟ್ ಆಗುವ ಕರಣ್ ಆಗಿ ಸಿದ್ಧಾರ್ಥ್,ಆಸ್ಲಾಮ್ ಪಾತ್ರದಲ್ಲಿ ಕುನಾಲ್ ಕಪೂರ್, ಸೋನಿಯಾ ಆಗಿ ಸೊಹಾ ಆಲಿ ಖಾನ್, ಆವಳ ಇನಿಯನಾಗಿ ಮಾಧವನ್, ಸ್ಯೂ ಆಗಿ ಆಲಿಸ್ ಪ್ಯಾಟರ್ನ್,ಹಿಂದು ಸಂಘಟನೆಯ ಕಾರ್ಯಕರ್ತನಾಗಿ ಅತುಲ್ ಕುಲಕರ್ಣಿ - ಎಲ್ಲರೂ ಸಿನೆಮಾಗೆ ಜೀವ ತುಂಬಿದ್ದಾರೆ.ಸಿನೆಮಾದ ಇನ್ನೊಂದು ಪ್ಲಸ್ ಪಾಯಿಂಟ್ ಸಂಗೀತ .
ಸಿನೆಮಾದ ಕೊನೆಯ ೩೦ ನಿಮಿಶಗಳು ಸ್ವಲ್ಪ ಜಾಸ್ತಿನೇ ನಾಟಕೀಯ ಆಯಿತು ಅನ್ನಿಸಿತು,ಮುಖ್ಯವಾಗಿ ಶಾಂತಿಯುತ ಪ್ರತಿಭಾಟನೆಯ ಮೇಲೆ ಪೋಲಿಸ್ ಲಾಟಿ ಚಾರ್ಜ್, ರಕ್ಷಣಾ ಮಂತ್ರಿಯ ಕೊಲೆ, ಈ ಮಧ್ಯೆ ಚರಿತ್ರೆ ಮತ್ತು ವರ್ತಮಾನದ ನಡುವೆ (very frequently) ಬದಲಾಗುವ ದೃಶ್ಯಗಳು ಹಾಗೂ ಆಕಾಶವಾಣಿ ಇಲಾಖೆಯ ಒಳಗಿದ್ದ ಯುವಕರ ಮೇಲೆ ಪೋಲಿಸ್ ಫೈರಿಂಗ್.
ಆ ತರ ರಕ್ಶಣಾ ಮಂತ್ರಿಯ ಕೊಲೆ, ನಮ್ಮ ಪ್ರಜಾಪ್ರಭುತ್ವವನ್ನೇ ಪ್ರಶ್ನೆ ಮಾಡುದಿಲ್ವಾ?ಸಿನೆಮಾದ ಕೊನೆಯಲ್ಲಿ ಕೊಲೆ ಮಾಡಿದ್ದು ತಪ್ಪು ಅನ್ನೊದು ಯುವಕರಿಗೆ ಅರ್ಥ ಆಗುತ್ತದೆ, ಆದ್ರೆ ಅದು ಅಷ್ಟೊಂದು ಪ್ರಭಾವ ಬೀರುವುದಿಲ್ಲ!
ಸಿನೆಮಾದ ಯಶಸ್ಸಿನ ಕ್ರೆಡಿಟ್ ನಿರ್ದೇಶಕ ಓಮ್ ಪ್ರಕಾಶ್ ಮೆಹ್ರಾಗೆ ಸಿಗಬೇಕು.ಬ್ರಿಟೀಷ್ ಆಡಳಿತವನ್ನು ಈಗಿನ ಆಡಳಿತದೊಂದಿಗೆ ಹೋಲಿಸಿದ್ದಾರೆ.ದೇಶಪ್ರೇಮವನ್ನು ಹೊಸದಾಗಿ ಡಿಫೈನ್ ಮಾಡಿದ್ದಾರೆ.ಈ ಎಲ್ಲದರ ಮಧ್ಯೆ ಒಂದು ಒಳ್ಳೆಯ ಕಮರ್ಷಿಯಲ್ ಸಿನೆಮಾವನ್ನು ಕೊಟ್ಟಿದ್ದಾರೆ.

ಇ ಸಿನೆಮಾದ ಫೇವರಿಟ್ ಡೈಲಾಗ್:"ಏಕ್ ಪಾವ್ past ಮೇ,ಏಕ್ ಪಾವ್ present ಮೇ,ಇಸೀಲಿಯೆ ಹಮ್ ಅಪ್ನೆ present ಪರ್ ಮೂಟ್(moot) ರಹೆ ಹೆ"!

~.~
  • ಶಿವ ರವರ ಬ್ಲಾಗ್
  • Login or register to post comments
  • 762 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 12, 2006 - 5:46pm — hpn

ಭ್ರಷ್ಟಾಚಾರ

hpn's picture

ಮೊದಲರ್ಧದಲ್ಲಿ ಇರೋ ತಮಾಷೆ ಮತ್ತು ಮನೋರಂಜನಾ ಮೌಲ್ಯಕ್ಕಾಗಿ ಮಾತ್ರ ಆ ಚಿತ್ರ ನೋಡಬಹುದು, ಅಷ್ಟೆ. ಆ ಚಿತ್ರದಲ್ಲಿ ಕೊನೆಗೆ ತೋರಿಸಿರುವಂತೆ ಎಲ್ಲರೂ ಮಾಡಹೋದರೆ ನಮ್ಮ ಭಾರತದಲ್ಲಿ ಅದೆಷ್ಟು ಜನರನ್ನು ಉಡಾಯಿಸಬೇಕಾಗತ್ತೋ ಏನೋ! Eye-wink
ಅಷ್ಟೊಂದು ಭ್ರಷ್ಟಾಚಾರ ನಮ್ಮಲ್ಲಿ ಬೇರೂರಿಬಿಟ್ಟಿದೆ. ನಾಳೆ ಲಾಲೂಗೋ ಇನ್ಯಾವ ಪುಢಾರಿಗೋ ಗುಂಡು ತಗುಲಿ ಸತ್ತರೆ ಅವರು "ಶಹೀದ್" ಆಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡುಬಿಡುವರು... ಅವರ ಭ್ರಷ್ಟಾಚಾರ, ಅನಾಚಾರ ಜನ ಮರೆತುಬಿಡ್ತಾರೆ. "ಪಬ್ಲಿಕ್ ಮೆಮೋರಿ ಈಸ್ ಶಾರ್ಟ್" ಅಂತಾರಲ್ಲ, ಹಾಗೆ.
ಸುಧಾರಣೆ, ಬೆಳವಣಿಗೆ ರಾತ್ರಿ ಬೆಳಗಾಗುವುದರಲ್ಲಿ ಆಗತ್ಯೆ? ಆದರೆ ಬೇಗ ಆಗಬೇಕಂದ್ರೆ ಎಲ್ಲರೂ ತಾವು ತಾವು ಸಾಧ್ಯವಾದಷ್ಟೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೇ ಇರೋ ಹಾಗೆ ನೋಡ್ಕೋಬೇಕು ಅಲ್ವೆ? Smiling
RTOನಲ್ಲಿ ಲಂಚ ಕೊಡದೆ ಇರೋದು, ಪೋಲೀಸರಿಂದ ದೂರವಿರೋದು (ಸ್ವಲ್ಪ oppurtunity ಸಿಕ್ರೂ ದುಡ್ಡು ಕಿತ್ಕೊಳ್ಳೋ ಜನ - majority ಪೋಲೀಸರು - ಲಂಚ ಕಿತ್ತುಕೊಂಡೇ ಮುಂದೆ ಹೋಗ್ತಾರೆ, ಟ್ರಾಫಿಕ್ ಪೋಲೀಸರೂ ಅಷ್ಟೆ!) ಇವೆಲ್ಲ ಮೊದಲ ಹೆಜ್ಜೆಗಳಾಗಬಹುದು.
ರಾಜಕಾರಣದಲ್ಲಿ, ಪೋಲೀಸರಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ, ಒಟ್ಟಾರೆ ಸರಕಾರಿ ಕಾರ್ಯಾಲಯಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗೋದು ಬಹುಶಃ ಹೊಸ ಪೀಳಿಗೆಯೆ wave ಬಂದಮೇಲೇನೆ. ಸಂಪೂರ್ಣ ಹೋಗೋದಂತೂ ದೂರದ ಮಾತು, gradually ಕಡಿಮೆಯಾಗಬಹುದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 15, 2006 - 1:28pm — sinchanabhat

ನಾವು

sinchanabhat's picture

ನಾವು ಮನೆಯೊಳಗೇ ಕಲಹವಿರುವಾಗ ಕೋಣೆಯನ್ನು ಪ್ರಶಾಂತವಾಗಿಸಿಕೊಂಡು ಮಲಗುವವರು.
ಇತ್ತೀಚೆಗೆ ನಾವು ಎನ್ನುವುದು ಮನೆಯ ಮಾತಾಗೂ ಉಳಿದಿಲ್ಲ ಅಂದರೆ,ಮನೆ ಎಂಬುದನ್ನೇ ಮೊಟಕಾಗಿಸುತ್ತೇವೆ!ನೆರೆಮನೆಯ ಕಷ್ಟಗಳನ್ನು ವಿಚಾರಿಸುವುದು ನಂತರದ ಮಾತು.
ನೀವು ಹೇಳಿರುವಂತೇ ಕೊನೆಯ ೩೦ ನಿಮಿಶಗಳು ಸ್ವಲ್ಪ ನಾಟಕೀಯವೆನಿಸಿದರೂ ಅದರಲ್ಲಿ ಸಂದೇಶವಿದೆ.
ಚರಿತ್ರೆಯನ್ನು ಓದಿದವರೆಲ್ಲರೂ ಅದರಿಂದ ಅದೇನೇನು ಕಲಿತಿದ್ದಾರೆ? ನಾವು ಎಚ್ಹೆತ್ತುಕೊಳ್ಳಬೇಕೆಂದರೆ ನಮ್ಮೊಳಗೆ ಹುದುಗಿದ ಧೈರ್ಯ,ಕೆಚ್ಹು,ಪ್ರತಿಭಟನೆ ಗಳು ಮೊದಲು ರೂಪಗೊಳ್ಳಬೇಕು.ನಾನು ಹೇಳ ಹೊರಟಿರುವುದು ಅದಾವುದೋ ಭ್ರಷ್ಟರನ್ನು ಕೊಲೆಮಾಡಬೇಕೆಂದಲ್ಲಾ,ಆದರೆ ಅನ್ಯಾಯಗಳ ವಿರುದ್ದ ತಲೆ ಎತ್ತುವಂತಾಗಬೇಕೆಂದು,ಯುವಶಕ್ತಿಯ ಸದ್ಭಳಕೆಯಾಗುವಂತಾಗಬೇಕೆಂದು.
ನನ್ನ ಪ್ರಕಾರ ಒಂದು ಪ್ರಭಾವಶಾಲಿ ಸಂವಹನವಾಗಿ ಚಲನಚಿತ್ರಗಳು ಬರಿ ಮನರಂಜನೆ ಮಾತ್ರವಾಗಬಾರದು.
ಉತ್ತಮ ಸಂದೇಶದೊಂದಿಗೆ ಹೊರ ಬಂದ ಈ ಚಿತ್ರ ನಿರ್ಧೇಶಕರ ಉತ್ತಮ ಪ್ರಯತ್ನ.
ನನ್ನವಿಚಾರ ಸರಿ ಇದೆಯೋ ಇಲ್ಲವೊ ಆದರೆ ನನಗನಿಸಿದಂತೆ ಈ ಚಿತ್ರದಲ್ಲಿ ಯಾವ ವೈಪರಿತ್ಯವೂ ಕಾಣಲಿಲ್ಲ.ನನ್ನ ಮಾತುಗಳು ಬಾಲಿಶವೆನಿಸಿದರೆ ಕ್ಷಮೆ ಇರಲಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 18, 2006 - 12:18am — ಶಿವ

Re:ನಾವು

ಶಿವ's picture

ನಮಗಿಬ್ಬರಿಗೂ ಸಿನೆಮಾ ಇಷ್ಟವಾಗಿದೆ.ಇಷ್ಟವಾಗಲಿಕ್ಕೆ ಕಾರಣಗಳು ಏನೇ ಇರಬಹುದು.ನಾವಿಬ್ಬರು ಸಿನೆಮಾವನ್ನು ನೋಡಿ, ನಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೇವೆ.

ಭ್ರಷ್ಟಾಚಾರವನ್ನು ಒಂದು ಮಟ್ಟದವರೆಗೆ ನಾವು ಒಪ್ಪಿಕೊಂಡಿದ್ದೇವೆ. ಇದನ್ನು ಪ್ರತಿಭಟಿಸುವ,ವ್ಯವಸ್ಥೆಯ ವಿರುದ್ದ ಹೋರಾಡುವ 'ರೆಬೆಲಿಯನ್' (Rebellion) ಮನಸ್ಥಿತಿ ನಮ್ಮಲ್ಲಿ ಇದೆಯಾ?

"...generation awakens" ರಂಗ್ ದೇ ಬಸಂತಿ ಸಿನೆಮಾದ ಸಬ್‌ಟೈಟಲ್. ನೋಡೋಣ ನಮ್ಮ ಯುವಜನತೆಗೆ ಯಾವಾಗ ಎಚ್ಚರವಾಗುತ್ತದೆ ಅಂತ?

ನಾನ???ಜೋರಾಗಿ ನಿದ್ದೆ ಬರ್ತಾ ಇದೆ,ಇನ್ನೂ ಸ್ವಲ್ಪ ನಿದ್ದೆ ಮಾಡ್ತೇನೆ.Disturb ಮಾಡ್ಬೇಡಿ, ಪ್ಲೀಸ್. Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 18, 2006 - 1:35am — hpn

ರಂಗ್ ದೇ ಬಸಂತಿ

hpn's picture

ಐ ಬಿ ಎನ್ ಲೈವ್ ತಾಣದಲ್ಲಿ ಸೋಮನ್ ಮಿಶ್ರಾ ರಂಗ್ ದೇ ಬಸಂತಿ ಬಗ್ಗೆ ಬರೆದಿರುವುದನ್ನ ಓದಿ. ಕೊನೆಗೆ ಅವರೂ ಆ ಬರಹದ ಕೊನೆಗೆ ಬಿಟ್ಟು ಹೋಗುವ notion ಗಮನಿಸಿ.

"Be the change you wish to see" ಎಂದು ಗಾಂಧಿ ತಾತ ಹೇಳಿದ್ದು ಎಷ್ಟರಮಟ್ಟಿಗೆ ಇಲ್ಲಿಗೆ ಅನ್ವಯಿಸಬಹುದು? Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 18, 2006 - 7:32am — sinchanabhat

ಚನ್ನಾಗಿದೆ!

sinchanabhat's picture

ನಿಮ್ಮ ಉತ್ತರ ಚನ್ನಾಗಿದೆ. ನಿದ್ದೆ ಮಾಡುತ್ತಿದ್ದವರನ್ನು ಎಬ್ಬಿಸಬಹುದು,ನಿದ್ದೆ ಬಂದಂತೆ ನಟಿಸುವವರ ಎಬ್ಬಿಸುವುದು ತುಂಬಾನೆ ಕಷ್ಟ..Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶುಭಂ
  • ಹೊಸ ಸಿನೆಮಾ ವಿಮರ್ಶೆಗಳು
  • ನಿದ್ರೆ ಇಲ್ಲಾ ಮಾರಾಯ !
  • ಪ್ರಾಮಾಣಿಕ ಹುಡುಗನ ಕೊಲೆ
  • ಜಲ ಜಲ ಜಲಜಾಕ್ಷಿ ಹೇಳೋದನ್ನ ಅರ್ಥ ಮಾಡಿಸಿ
Syndicate content

ಲೇಖಕರು

ಶಿವ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:30am
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:26am
  • nkumar
    ಉ: ಅನರ್ಥಕೋಶ ೬
    January 8, 2009 - 11:21am
  • anil.ramesh
    ಉ: ನಗುವ ನಯನ, ಮಧುರ ಮೌನ
    January 8, 2009 - 11:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:18am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:18am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:16am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 152 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator