ಎ ಬಿ ತಪ್ಪಿದ್ದೆಲ್ಲಿ?
ಬೆಲ್ ಬಾಟಮ್ ಪ್ಯಾಂಟ್,ಷರ್ಟ್ ನ ಮೇಲಿನ ಎರಡು ಗುಂಡಿ ಬಿಚ್ಚಿ ,ಮೂಳೆ ಕಾಣಬಾರದೆಂದು ಬನಿಯನ್ ಹಾಕಿಕೊಂಡು, ಷರ್ಟ್ ಕೈನ ಎರಡು ಮಡಕೆ ಮಡಚಿ,ತಲೆಯ ಗುಂಗುರು ಕೂದಲನ್ನೂ ಸಹ ನೀರು ಹಾಕಿ ಒತ್ತಿ ಒತ್ತಿ ಬಾಚಿ, ಅಮಿತಾಬ್ ಸ್ಟೈಲಲ್ಲಿ ತಿರುಗುತ್ತಿದ್ದೆವು.
ಶಮ್ಮಿ,,ದೇವ್,ಜಿತೇಂದ್ರ,ದರ್ಮೇಂದ್ರ,ಸಂಜೀವ್ ಕುಮಾರ್,ಕಿಶೋರ್,ರಾಜೇಶ್ ರೋಷನ್ ರಷ್ಟುಚಂದವೂ ಇರಲಿಲ್ಲ.ಆಕ್ಟಿಂಗ್,ಡ್ಯಾನ್ಸ್ ನಲ್ಲೂ ಹಿಂದೆ ಇದ್ದ ಅಮಿತಾಬ್ ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ಬೆಂಬಲದಿಂದ ನಂ. ೧ ಸ್ಥಾನಕ್ಕೆ ಲಗ್ಗೆ ಹಾಕಿದರು.
ಅಮಿತಾಬ್ ಗೆ ಏಟಾದಾಗ,ಖಾಯಿಲೆಯಿದ್ದಾಗ ನಾವೂ ದುಃಖಿಸಿದೆವು,ದೇವರ ಬಳಿ ಪ್ರಾರ್ಥಿಸಿದೆವು.
ರಾಜೀವ್ ಗಾಂಧಿ ಜತೆ ಸೇರಿ ಚುನಾವಣೆಗೆ ನಿಂತಾಗ ಬೇಸರವಾದರೂ ಬೆಂಬಲಿಸಿದೆವು.
ಕೌನ್ ಬನೇಗಾ ಕರೋಡ್ ಪತಿ ಸುರುವಾದಾಗ ,ಅಮಿತಾಬ್ ಜತೆ ಹಾಟ್ ಸೀಟಲ್ಲಿ ಕುಳಿತುಕೊಳ್ಳಲಿಕ್ಕಾಗಿ ಪ್ರಯತ್ನಿಸಿ,ಪ್ರಯತ್ನಿಸಿ, “ಏರ್ ಟೆಲ್” ಕೋಟ್ಯಾಂತರ ರೂಪಾಯಿ ಸಂಪಾದಿಸುವಂತೆ ಮಾಡಿದೆವು.
ಅಮಿತಾಬ್ ಮಗ ಎಂಬ ಒಂದೇ ಕಾರಣದಿಂದ ಅಭಿಷೇಕ್ ನ ಸಿನೇಮಾಗಳನ್ನು ನೋಡಿ ಅವನೂ ಹೀರೋ ಆದ.
ಇಷ್ಟೆಲ್ಲಾ ಸರಿ.
ಕಡೇ ಪಕ್ಷ ಅಭಿ-ಐಶ್ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸಬೇಕಿತ್ಊ. ಹೋಗಲಿ ಬಿಡಿ. ಒಂದೆರಡು ಟಿ.ವಿ.ಯವರಿಗಾದರೂ ನೇರ ಪ್ರಸಾರಕ್ಕೆ ಅವಕಾಶ ಕೊಡಬಾರದಿತ್ತಾ? ಆರಂಭದಿಂದ ಜತೆಗಿದ್ದ ಪತ್ರಿಕೆ,ಅಬಿಮಾನಿಗಳಿಗಿಂತ ಅಮರ್ ಸಿಂಗ್ ಬಳಗ, ಮತ್ತು ನಿನ್ನೆ ಮೊನ್ನೆಯ ಜ್ಯೋತಿಷಿಗಳು ಮುಖ್ಯವಾದರೆ?
ಅಮರ್ ಸಿಂಗ್ ಬಳಗ ಸೇರಿದ ಮೇಲಲ್ವೇ ಈ ಸುಳ್ಳು ರೈತನ ಸೋಗಿನಲ್ಲಿಜಮೀನು ಒಳ ಹಾಕುವ ಬುದ್ಧಿ ಬಂದುದು.ಮಾಯಾವತಿ ಗೆದ್ದುದಕ್ಕೂ ಐಶ್ವರ್ಯ ನ ನಕ್ಷತ್ರವೇ ಕಾರಣ! ಎನ್ನುವ ಜ್ಯೋತಿಷಿಯನ್ನು ಹತ್ತಿರಸೇರಿಸಿದ್ದೇ ಇಷ್ಟಕ್ಕೆಲ್ಲಾ ಕಾರಣ.

- ಗಣೇಶ ರವರ ಬ್ಲಾಗ್
- Login or register to post comments
- 564 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಎ ಬಿ ತಪ್ಪಿದ್ದೆಲ್ಲಿ?
ಒಂದ್ಸಲ NDTV ನೋ CNN-IBN Live ನೋ Song of the nation ಆರಿಸಲು ಕರ್ಯಕ್ರಮ ಇಟ್ಟಿದ್ದರು .
ದೇಶದ ಬಹುಪಾಲು ಜನ ’ಏ ಮೇರೆ ವತನ್ ಕೇ ಲೋಗೋ’ ಅನ್ನು ಆಯ್ದುಕೊಂಡರೆ
ಪ್ಯಾನೆಲ್ ನಲ್ಲಿದ್ದ ಈ ಮನುಷ್ಯ ’ಕಜರಾ ರೇ , ಕಜರಾ ರೇ ’ ಯನ್ನು ತಾವು Song of the nation ಗೆ ಪ್ರೆಫರ್ ಮಾದುವದಾಗಿ ಹೇಳಿದ - ’ ನನ್ನ ಸಂಸಾರದ ಕಾರಣಕ್ಕ - ಎಂದೂ ಸೇರಿಸಿದ
ದೇಶದ ಜನಕ್ಕೆ ತಂತಮ್ಮ ಪರಿವಾರ ಇರಲಿಲ್ವೇನೋ ? ಜನ ವೈಯುಕ್ತಿಕತೆಯಿಂದ ಮೇಲೆ ಏರಿದರೆ ಈತ ದೇಶದ ವಿಸಯವನ್ನು ಮನೆ ಮಟ್ಟಕ್ಕೆ ಇಳಿಸಿದ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಎ ಬಿ ತಪ್ಪಿದ್ದೆಲ್ಲಿ?
ಎ ಬಿ ಅಂದರೆ ಅಖಿಲ ಭಾರತ ಅಂತ ತಿಳಕೊಂಡಿದ್ದಾರೆ.
(ಎ ಬಿ ಗೆ ಇಷ್ಟ ಎಂದರೆ ಅಖಿಲ ಭಾರತ ಕ್ಕೆ ಇಷ್ಟ.)
ತಮಾಷೆಯಾಗಿ ಸಹ ಆ ಮಾತನ್ನು ಹೇಳಬಾರದಿತ್ತು.