ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಉಉನಾಶೆ ರವರ ಬ್ಲಾಗ್

ನಮನ-೦೮: ಭಾರತ

ಭಾರತವು ಬಡಜನರ ಸಿರಿವಂತ ದೇಶ

ಸಿರಿವಂತರದೂ ಇಲ್ಲಿ ಬಡವರಾ ವೇಷ

ಬಡಜನರ ಏಳಿಗೆಗೆ ದುಡಿಯುವರು ಎಲ್ಲ

ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ

 

 

ನಮನ-೦೭: ದೇವ

ಜಗವೆಲ್ಲ ವೇದಿಕೆಯು, ಜೀವನವೆ ನಾಟಕವು

ನಟಕೋಟಿಯರಲೊಬ್ಬರು ನಾವು

ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು

ಕರೆಯುವೆವು ನಾವವನನೆ ದೇವನು .೧.

 

ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು

ಎಂತು ಸಲಹುವನೀ ಕೋಟಿ ಕಂದಮ್ಮಗಳನು?

ಒಂದೊಂದನಾಡಿಸಲು ಎರಡಾಳು ಬೇಕೆಮಗೆ!

ಸಿಗಬಹುದೆ ಅದರಂತೆ ಕೋಟಿಯಾಳುಗಳವಗೆ? .೨.

 

ಅದಕೆಂದೆ ಕರೆವರವನ ಜನರು, ಜಗದ ದೊರೆಯು  ಮುಂದೆ ಓದಿ »

ನಮನ-೦೭: ದೇವ

ಜಗವೆಲ್ಲ ವೇದಿಕೆಯು, ಜೆಎವನಕೆ ನಾಟಕವು

ನಟಕೋಟಿಯರಲೊಬ್ಬರು ನಾವು

ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು

ಕರೆಯುವೆವು ನಾವವನನೆ ದೇವನು .೧.

ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು

ಎಂತು ಸಲಹುವನೀ ಕೋಟಿ ಕಂದಮ್ಮಗಳನು?

ಒಂದೊಂದನಾಡಿಸಲು ಎರಡಾಳು ಬೇಕೆಮಗೆ!

ಸಿಗಬಹುದೆ ಅದರಂತೆ ಕೋಟಿಯಾಳುಗಳವಗೆ? .೨.

ಅದಕೆಂದೆ ಕರೆವರವನ ಜನರು, ಜಗದ ದೊರೆಯು

ಸಂಕಟಗೊಂಡ ಕ್ಷಣಕ್ಷಣದಲೆ ಹೋಗುವುದು ಕರೆಯು  ಮುಂದೆ ಓದಿ »

ನಮನ-೦೬: ಸಬ್ ವೇ ಮತ್ತು ನಮ್ಮ ಕವಿತೆಗಳು

ಬಿಳಿಯದಿರಲೆ, ಗೋಧಿಯದೆ?

ಎಂದೆನುತ ಸೆಳೆದ ಅ ಬ್ರೆಡ್ಡಿನೆದೆ

ಸೀಳುತ್ತ...

 

ಸೀಳಿನಲಿ ಮಾಂಸ ಮಡ್ಡಿ,

ಬೇಡದಿರೆ ಕಾಳು ಕಡ್ಡಿ

ತುಂಬುತ್ತ...

 

ಚೀಸಿನಲಿ, ಸಾಸಿನಲಿ

ಕೆನೆಬಣ್ಣ ರ್‍ಯಾಂಚಿನಲಿ

ನೆನೆಸುತ್ತ...

 

ಒಂದಡಿಯ ಸಬ್ ವೇಯನು  ಮುಂದೆ ಓದಿ »

ನಮನ-೦೫: ನೀವೂ ಇದ್ದೀರಾ?

ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..

ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ... ಷಹಜಹಾನ್ ನೋಡಿ .. ಹೆಂಡತಿಗಾಗಿ ತಾಜ್ ಮಹಲ್ಲೇ ಕಟ್ಟಿಸಿದ್ದಾನೆ."
ನನ್ನ ಉತ್ತರ ..."ಅದನ್ನು ಯಾವಾಗ ಕಟ್ಟಿಸಿದ ಅಂತ ಗೊತ್ತಾ? ಹೆಂಡತಿ ತೀರಿಕೊಂಡ ಮೇಲೆ!"  ಮುಂದೆ ಓದಿ »

Syndicate content