ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಗಾದೆ + ಟಿಪ್ಪಣಿ
ದರ್ಮಕ್ಕೆ ದಟ್ಟಿ ಕೊಟ್ರೆ ಇತ್ತಲ್ ಗೆ ಹೋಗಿ ಮೊಳ ಹಾಕಿದ್ನಂತೆ.
ಅಂದ್ರೆ...ನೀವು ಬಿಟ್ಟಿಯಾಗಿ ಏನಾದ್ರೊ ಕೊಟ್ರೆ...ಅದನ್ನು ತಗೊಂಡವ್ರು ಅನುಮಾನಿಸುತ್ತಾರೆ...ಅಥವ ತಗೊಂಡವ್ರಗೆ ಅದರ ಬಗ್ಗೆ ಐಬು ಮೂಡಿ ಅದನ್ನು ಪರೀಕ್ಸೆ ಮಾಡ್ತಾರೆ. ವಸ್ತುವನ್ನು ಬಿಟ್ಟಿಯಾಗಿ ತಗೊಂಡು ಅದರ ಐಬುಗಳ ಬಗ್ಗೆ ಮಾತಾಡುವುದು ಜಂಬದ ಮಾತಾಗುತ್ತದೆ.
ದಟ್ಟಿ = ಬಟ್ಟೆ
ಇತ್ತಲ್ = ಹಿತ್ತಲು = ಮನೆಯ ಹಿಂಬಾಗ
ಮೊಳ = ಮೊಳ್ಸಂದೆ(elbow)ಯಿಂದ ಮುಂಗೈ ವರೆಗೆ ಒಂದು ಮೊಳ ಅಂತಾರೆ.

- ವೈಭವ ರವರ ಬ್ಲಾಗ್
- Login or register to post comments
- 427 hits
- Email this blog





RSS:
ಪ್ರತಿಕ್ರಿಯೆಗಳು
ಉ: ಗಾದೆ + ಟಿಪ್ಪಣಿ
ಮೊಳ => ಮೊಳಗೈ( ಮೊಣಗೈ ಅಂತವೂ ಅಂತಾರೆ )
"ಮೊಳಗೈ ವರೆಗೆ" ಮೊಳ
"ಮಾರು" ಹರವಿಡ ಎರಡೂ ಕೈಗಳುದ್ದ!
"ಮೊಳ ಹಾಕು" ಇದು ಮಾಮೂಲಿ ಬಳಕೆ, "ಮೊಳದನಿತ್ತು ಅಳತೆ ಮಾಡು". ಹೀಗೆ "ಮಾರು ಹಾಕು" ಅಂತವೂ ಇದೆ.
======================================
ಉ: ಗಾದೆ + ಟಿಪ್ಪಣಿ
ಹರವಿಡ = ಹರವಿದ ಅಂತ ಇದಬೇಕು
======================================