ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಬರತ್ ಕುಮಾರ್
ಪರಿಚಯ
ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.
ಹಳ್ಳಿಯ ಪದಗಳು/ಒರೆಗಳು
ನನ್ನ ಇತ್ತೀಚಿನ ಹಳ್ಳಿ ಸುತ್ತುವಿಕೆಯಿಂದ ಗಮನಕ್ಕೆ(ಮೊದಲೆ ಗೊತ್ತಿತ್ತು ...) ಬಂದ ಕೆಲವು ಒರೆಗಳು...ಏನೋ ಹಳ್ಳಿ ಒರೆಗಳ ಮೇಲೆ ಒಲವು ಹೆಚ್ಚು.
೧) ಮುತ್ತೈದೆ - ಮದುವೆಯಾಗಿ 'ಸೌಭಾಗ್ಯ' ಹೊಂದಿರುವವಳು
೨) ಸೋಗ್ಲು ( ಸೋಗಲು) - ಮುತ್ತೈದೆ ಮನೆಗೆ ಬಂದಾಗ ಕೊಡುವ ದುಡ್ಡು/ರವಿಕೆ
೩) 'ಕಾಡೋರು' ಅಂದ್ರೆ ಗೊತ್ತಿಲ್ಲದವರು ಅಂದ್ರೆ ಅಪರಿಚಿತರು ಉದಾ: ನಾವೇನು ಕಾಡೋರಿಗೆ ಮಾಡ್ತಾ ಇದ್ವಾ. ನೆಂಟರಿಶ್ಟರಿಗೆ ತಾನೆ (ನೆರೆವು) ಮಾಡೋದು.
೪) ಹೆಮಕ್ಳು = ಹೆಣ್ಣ್ + ಮಕ್ಕಳು
..ನೆಪ್ಪು ಬಂದ್ರೆ ಮತ್ತೆ ಬರೀತೀನಿ
- ವೈಭವ's blog
- Login or register to post comments
- 641 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹಳ್ಳಿಯ ಪದಗಳು/ಒರೆಗಳು
ಇವು ಯಾವುದೂ ಅಷ್ಟು ಹಳ್ಳೀದೇ ಅನ್ನೋಹಾಗಿಲ್ಲವಲ್ರೀ? (ಅಥವಾ ನಾನೂ ಹಳ್ಳೀಯವನೇ ಇರಬಹುದು ;)
ನಾವು "ಕಂಡೋರಿಗೆ" ಅಂತ ಬಳಸ್ತೀವಿ. ಉದಾಹರಣೆ:- ಕಂಡೋರಿಗೆಲ್ಲ ಕೂರಿಸಿ ಮಣೆ ಹಾಕಕ್ಕಾಗತ್ತಾ?
-ಹಂಸಾನಂದಿ
ಉ: ಹಳ್ಳಿಯ ಪದಗಳು/ಒರೆಗಳು
ನೀವು 'ಕಾಡೋರು' , ' ಹೆಮಕ್ಳು' ಕೇಳಿದ್ರಾ? ಇವೆರಡು ಅಪ್ಪಟ ಹಳ್ಳೀಕರಿಸಿದ ಒರೆಗೆಳೇ ...ಜಾಸ್ತಿ ಚಾ.ನಗರ, ಗುಂಡ್ಲುಪೇಟೆಯ ಹಳ್ಳಿಗಳಲ್ಲಿ ಬಳಸ್ತಾರೆ.
ಕಾಡೋರು = ಕಾಣದವರು = ಅಪರಿಚಿತರು ಆಮೇಲೆ ಅಂತ ತಲೆಗಿಳಿಸಿಕೊಳ್ಳಬಹುದು.
ಉ: ಹಳ್ಳಿಯ ಪದಗಳು/ಒರೆಗಳು
ಅಣ್ಣಾವ್ರೆ
"ಹಳ್ಳೀಕರೀಸಿ"
ಇದು ಹಳ್ಳಿ(ಕನ್ನಡ) + ಈಕರ( ಸಕ್ಕದ )
ಇದನ್ನೇ ಕನ್ನಡದಲ್ಲಿ "ಹಳ್ಳಿಯಿಸಿ" ಅಂತ ಹೇಳಬೋದೇನೋ
"ಕಾಡೋರು" = ಕಾಡಿನವರು ಇರಬೇಕು
ಚಾಮರಾಯನಗರದಲ್ಲಿ ಕಾಡು ಜಾಸ್ತಿ!
ಹೆಮಕ್ಳು ಇದನ್ನು ನಾನು ಕೇಳಿಲ್ಲ. ಆದ್ರೆ ಚಾ.ನಗರದಲ್ಲಿ ಬಲು ಬಿರಬಿರನೇ ಮಾತಾಡ್ತಾರಂತೆ. ಅದಕ್ಕೆ ಅವರು ಹೆಣ್ಣುಮಕ್ಕಳು ಇದರಲ್ಲಿ ನಡುವಿನ ಅಕ್ಕರವೆಲ್ಲ ನುಂಗಿಕೊಂಡು( ಇದು ಎಲ್ಲೆಡೆ ಮಾಮೂಲಿ ) ಹೆಮಕ್ಳು ಉಳಿಸಿಕೊಂಡಿರಬಹುದು.
ಮಲಗಿಕೊ = ಮಕ್ಕೋ
ತೆಗೆದುಕೊ = ತಕ್ಕೋ
ಇಟ್ಟುಕೊ = ಇಕ್ಕೋ
ಆದಂಗತೆ.
ನನ್ನ ಮಾತೊಳು ತಪ್ಪಿರಬೋದು!
ಉ: ಹಳ್ಳಿಯ ಪದಗಳು/ಒರೆಗಳು
ಅಡ್ದಬಿದ್ದೆ....ನೀವು ಸರಿ ಅಣ್ಣಾವರೆ