ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

March 14, 2007 - 8:21pm — ವೈಭವ

ಗೆಳೆಯರೆ/ಹಿರಿಯರೆ,

   ನಾನು ಹಾಗೆ ಯೋಚಿಸುತ್ತಿದ್ದಾಗ ನನಗೆ ಈ ವಿಷಯ ತಿಳಿದು ಬಂತು. ಕನ್ನಡದಲ್ಲಿ ಶುದ್ಧ ಸ್ವರಗಳಿಂದ ಕೊನೆಗೊಳ್ಳುವ ಪದಗಳೇ ಇಲ್ಲ(ನನಗಂತೂ ಇನ್ನೂ ಹೊಳೆದಿಲ್ಲ). ಇದು ಅಲಿಖಿತ/ಲಿಖಿತ ನಿಯಮವೆ? ಅಥವ ಆಕಸ್ಮಿಕವೆ? ಅಥವ ನಮ್ಮ ಕನ್ನಡದ ವೈಶಿಷ್ಟ್ಯವೆ?

ಆದರೆ ಹಿಂದಿಯಲ್ಲಿ ಇಂತಹ ಪದಗಳಿವೆ

ಉದಾ:

नई  - ಹೊಸ  ( ಇಲ್ಲಿ  'ಈ' ಕೊನೆಯ ಅಕ್ಷರ)
ताऊ - ದೊಡ್ಡಪ್ಪ (ಇಲ್ಲಿ 'ಊ' ಕೊನೆಯ ಅಕ್ಷರ)
कलाई - ಕಲಾಯಿ (ಇಲ್ಲಿ 'ಈ' ಕೊನೆಯ ಅಕ್ಷರ)
ताई   - ದೊಡ್ಡಮ್ಮ (ಇಲ್ಲಿ 'ಈ' ಕೊನೆಯ ಅಕ್ಷರ)

ಆದರೆ ಶುದ್ಧ ಸ್ವರಾಕ್ಷರಗಳಿಂದ ಪ್ರಾರಂಭವಾಗುವ ಪದಗಳು ಕನ್ನಡದಲ್ಲಿವೆ (ನಮಗೆಲ್ಲ ಗೊತ್ತೇ ಇದೆ)

ಉದಾ:  ಅರಸ, ಆಡು, ಇಲಿ, ಈಶ, ಉಂಗುರ, ಊರು ....ಇತ್ಯಾದಿ.

ಏಕೆ ಹೀಗೆ? ಇದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿ ಹೆಚ್ಚುತ್ತಿದೆ. ದಯವಿಟ್ಟು ಬಲ್ಲವರು ಇದರ ಕಾರಣಗಳ ಬಗ್ಗೆ ತಿಳಿಸಿಕೊಡಿ 

-ಜೈ ಕರ್ನಾಟಕ

~.~
  • ವೈಭವ ರವರ ಬ್ಲಾಗ್
  • Login or register to post comments
  • 445 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 14, 2007 - 10:12pm — hamsanandi

Re: ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

hamsanandi's picture

ನನಗೆ ಗೊತ್ತಿರುವ ಮಟ್ಟಿಗೆ, ಕನ್ನಡದಲ್ಲಿ ಸ್ವರಗಳು ಸ್ವತಂತ್ರವಾಗಿ ಪದದ ಕೊನೆಯಲ್ಲೂ, ಅಥವಾ ಮಧ್ಯದಲ್ಲೂ ಬರುವುದಿಲ್ಲ. ಎಲ್ಲಾ ದ್ರಾವಿಡ ಭಾಷೆಗಳಲ್ಲೂ ನಾವು ಇದನ್ನೇ ನೋಡುತ್ತೇವೆ. ಸಂಸ್ಕೃತದಲ್ಲೂ ಹೀಗೆಯೇ ಎಂದು ನೆನಪು ಹೇಳುತ್ತಿದೆ Smiling

ನಡುವೆ ಬರುವ ಸ್ವರವು ಕೆಲವು ಪ್ರಾಕೃತಗಳಿಂದ* ಬಂದಿರುವ ಹಾಗೆ ತೋರುತ್ತದೆ. ಹಾಗಾಗಿ, ಹಿಂದಿ, ಮರಾಠಿ ಮೊದಲಾದ ಪ್ರಾಕೃತ ಜನ್ಯ ಭಾಷೆಗಳಲ್ಲಿ ಇದರ ಪ್ರಯೋಗ ಸಹಜ. ಉದಾಹರಣೆಗೆ ಮರಾಠಿಯಲ್ಲಿ ಮುಂಬ‍ಇ ಎಂದೇ ಬರೆಯುತ್ತಾರೆ; ಕನ್ನಡದ ರೂಢಿಗೆ ಸರಿಯಾಗದ ಕಾರಣ ನಾವು ಅದನ್ನು ಮುಂಬಯಿ ಎಂದು ಬದಲಾಯಿಸಿಕೊಂಡಿದ್ದೇವೆ.

-ಹಂಸಾನಂದಿ

* ಉದಾ - ಪ‍ಉಮ ಚರಿಯ ಎಂಬ ಗ್ರಂಥವೇ ಇದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2007 - 11:12pm — mahesha

Re: ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

mahesha's picture
ಏಕೆ ಹೀಗೆ??

೧. ಹಿಂದಿಯಲ್ಲಿ ಸಂಧಿಗಳಿಲ್ಲ. ಇದ್ದರೂ ಅವು ಸಂಸ್ಕೃತದಿಂದ ಆದ ಸಂಧಿಗಳ ಮರುಬಳಕೆ.

ಮಾದರಿ: ನಇ + ಇಲಾಖಾ = ನಇ ಇಲಾಖಾ ಅಂತಲೇ ಬರೆಯುವುದು, ಸಂಧಿಯಿಲ್ಲ.

ಆದರೂ ಹೇಳುವುದು ’ನಯಿ ಯಿಲಾಖಾ’ ಎಂದೇ ತಾನೆ?

ಆದರೆ ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಸಂಧಿ ಮಾಡದೇ ಇರುವ ಹಾಗಿಲ್ಲ. ಮಾಡದೇ ಇರುವ ಬಳಕೆಗಳು ಕೆಲವೇ ಕೆಲವು.

೨. ಅದೂ ಅಲ್ಲದೆ ಹಿಂದಿಯಲ್ಲಿ ಬರೆದಂತೆ ಯಾವಾಗಲು ಓದುವುದಿಲ್ಲ. ’ಬಹನ್’ ಎಂದು ಬರೆದು ’ಬೆಹೆನ್’ ಎನ್ನುವರು.

೩. ಹಿಂದಿಯಲ್ಲಿ ನೈ ಎಂದು ಬರೆದು ’ನೇ’ ಎಂದು ಉಲಿ. ನಇ ಎಂದು ಬರೆದು ’ನೈ’ ಎಂದು ಹೇಳುವರು.  ಇದು ಹಿಂದಿ ಮತ್ತು ಸಂಸ್ಕೃತದ ಬರೆವಣಿಗೆ ಮತ್ತು ಉಲಿಗೆ ಇರುವ ಅಂತರ.

ನಾನೊಮ್ಮೆ ನನ್ನ ಹಿಂದಿ ಗೆಳೆಯರನ್ನು ಕೇಳಿದ್ದುಂಟು. ಅವರು ಹಾಗೆ ಹೇಳಿದರು.

ನನಗೆ ಒಂದು ಗೊಂದಲ, ಎಲ್ಲಾ ಹಿಂದಿಗಳು ಹೀಗೆಯೇ? ಹಿಂದಿಯಲ್ಲಿ ಭೋಜಪುರಿ, ಮೈಥೀಲಿ ಮುಂತಾದವು ನಾವು ಕೇಳುವ ಮಾಮೂಲಿ ಹಿಂದಿಗಿಂತ ಬಹಳ ಬೇರೆ ತೆರದಲ್ಲಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 7:32pm — Rohith

Re: ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

Rohith's picture

ನಿಜ, ನೀವು ಹೇಳಿದ ಹಾಗೆ ಎಲ್ಲಾ ಹಿಂದಿಯ ಗ್ರಾಮ ಭಾಷೆಗಳಲ್ಲಿ ಈ ತರಹ ಇಲ್ಲ. ಉದಾ. ಅವಧಿ ಎಂದು ಕರೆಯುವ ಭಾಷೆಯಲ್ಲಿ ಇಂದಿಗೂ ನಾವು ಬರೆದ ಹಾಗೇ ಮಾತಾಡುವುದನ್ನು ನೋಡುತ್ತೇವೆ ಹಾಗೆಯೇ ಎಷ್ಟೋ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಈ ತರಹದ ಭಾಷೆಗಳನ್ನು ’ದೆಹಾತಿ’ ಎಂದು ಕರೆಯುತ್ತಾರೆ. ಇಂದು ನಮಗೆ ಕೇಳಿಬರುವ ಹಿಂದಿ ನಿಜವಾದ ಮತ್ತು ಶುಧ್ಧ ಹಿಂದಿ ಅಲ್ಲ (ಇದಕ್ಕೆ ನಿದರ್ಶನ ಹಳೆಯ ಹಿಂದಿ ಚಲನಚಿತ್ರಗಳು), ಇದನ್ನು ’ಹಿಂದೂಸ್ತಾನಿ’ ಎಂದು ಕರೆಯುತ್ತಾರೆ. ಅದು ಆಡು ಭಾಷೆಯಾಗಿ ಉರ್ದುವಿನ ಬಹಳಷ್ಟು ಪದಗಳನ್ನು ಎರವಲು ಪಡೆದಿದೆ ಮತ್ತು ಆಡು ಭಾಷೆಯಲ್ಲಿ ಮಾರ್ಪಾಡಾಗಿ ಇಂದು ಬರಹಕ್ಕೆ ಮತ್ತು ನುಡಿಗೆ ಸಂಬಂಧವಿಲ್ಲದ ಹಾಗಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • ಹೆಸರು ಬರೆಯುವುದು ಹೇಗೆ?
  • ಕನ್ನಡದಲ್ಲಿ ಹಿನ್ನೆಲೆ ಗಾಯಕರ ಕೊರತೆಯೆ?
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator