ಇಂದಿನ ನಮ್ಮ ತವಕ ತಲ್ಲಣಗಳು
ಸ್ನೇಹಿತರೇ,
ಈ ತಿಂಗಳ ಮೂರನೇ ಭಾನುವಾರ ವಿಚಾರಗೋಷ್ಠಿ ಹಾಗು ಚರ್ಚೆಯನ್ನು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಆಯುಜಿಸುತ್ತಿದ್ದು, ಎಲ್ಲರಿಗೂ ಆದರದ ಸ್ವಾಗತ.
ಕಾರ್ಯಕ್ರಮದ ವಿವರಗಳು:
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ
ನಂ.36 ಬಿ.ವಿ. ಕಾರಂತ್ ರಸ್ತೆ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070
ಸಹಯೋಗ: ಮಲ್ಲಿಗೆ ಮಾಸಪತ್ರಿಕೆ ಹಾಗು
ಸಂಚಯ-ಅಭಿನವ ಸಾಹಿತ್ಯ ಪತ್ರಿಕಾ ಬಳಗ
ದಿವಂಗತ ಕೆ.ವಿ. ಸುಬ್ಬಣ್ಣನವರ ನೆನಪಿನಲ್ಲಿ
‘ಇಂದಿನ ನಮ್ಮ ತವಕ ತಲ್ಲಣಗಳು’
ವಿಚಾರಗೋಷ್ಠಿ
ದಿನಾಂಕ: 19-2-2006
ಸಮಯ: ಬೆಳಿಗ್ಗೆ 1:30 ರಿಂದ ಸಂಜೆಯವರೆಗೆ
ಸ್ಥಳ: ಸುಚಿತ್ರ ಸಭಾಂಗಣ
ಉದ್ಘಾಟನೆ: ಡಾ ಯು.ಆರ್. ಅನಂತಮೂರ್ತಿ
ಪ್ರತಿಭಾ ನಂದಕುಮಾರ್ ಅವರ
‘ಮುನ್ನುಡಿ ಬೆನ್ನುಡಿಗಳ ನಡುವೆ’
‘ಅವರು ಪುರಾವೆಗಳನ್ನು ಕೇಳುತ್ತಾರೆ’
ಪುಸ್ತಕಗಳ ಬಿಡುಗಡೆ. ಪ್ರಕಾಶಕರು: ಮಹಿಳಾ ಸಾಹಿತ್ಯಿಕಾ, ಧಾರವಾಡ
ವಿಶೇಷ ಉಪನ್ಯಾಸ
ಆರ್ಥಿಕ ಉದಾರೀಕರಣ ಮತ್ತು ಸಮುದಾಯ ಅಸಮಾನತೆಗಳು: ಡಾ ಯು.ಆರ್. ಅನಂತಮೂರ್ತಿ
ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು: ಶ್ರೀ ಎಂ.ಪಿ. ಪ್ರಕಾಶ್
ಚರ್ಚೆ
ಊಟದ ವಿರಾಮ
ಮಧ್ಯಾಹ್ನ 2:00 ಗಂಟೆಗೆ
ವಿಜ್ಞಾನ-ತಂತ್ರಜ್ಞಾನ ಸೃಷ್ಟಿಸಿರುವ ಆತಂಕಗಳು: ಶ್ರೀ ಶರತ್ ಅನಂತಮೂರ್ತಿ
ಜಗತ್ತು, ರಾಷ್ಟ್ರ, ದೇಸೀಯತೆ: ಶ್ರೀ ವಿಜಯಶಂಕರ್
ವಾಣಿಜ್ಯ ಸಂಸ್ಕೃತಿ ಮತ್ತು ಸೃಜನಶೀಲತೆಯ ಸ್ವಾಯತ್ತತೆ: ಶ್ರೀ ಸುಗತ
ರಂಗಭೂಮಿ, ಟೆಲಿವಿಷನ್, ನಾಟಕಗಳು, ಸಿನಿಮಾ: ಶ್ರೀ ರಘುನಂದನ್
ಅಧ್ಯಕ್ಷತೆ: ಎಚ್.ಎಸ್. ರಾಘವೇಂದ್ರರಾವ್
ಚರ್ಚೆ
ಚಹಾ ವಿರಾಮ
ಅಲನ್ ರೆನೆ ನಿರ್ದೇಶನದ ‘ಹಿರೋಷಿಮಾ ಮೋನಮೋರ್’ ಚಲನಚಿತ್ರ ಪ್ರದರ್ಶನ

- ಪ್ರಶಾಂತ.ಪಂಡಿತ ರವರ ಬ್ಲಾಗ್
- Login or register to post comments
- 1092 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ:ಇಂದಿನ ನಮ್ಮ ತವಕ ತಲ್ಲಣಗಳು
ದಿನಾಂಕ: 19-2-2006
ಸಮಯ: ಬೆಳಿಗ್ಗೆ 1:30 ರಿಂದ ಸಂಜೆಯವರೆಗೆ
ವಾವ್. ಈ ಕಾರ್ಯಕ್ರಮದ ಆಯೋಜಕರು ನಿಜವಾಗಿಯೂ ಧೈರ್ಯಶಾಲಿಗಳೇ ಹೌದು. ಇಲ್ಲವಾದಲ್ಲಿ ಕಾರ್ಯಕ್ರಮವನ್ನು ಬೆಳಗ್ಗೆ(ಅಥವಾ ಮಧ್ಯರಾತ್ರಿ ಎನ್ನಬಹುದೇ) ೧:೩೦ ಕ್ಕೆ ಆಯೋಜಿಸುವ ಧೈರ್ಯ ಯಾರು ಮಾಡುತ್ತಾರೆ ಹೇಳಿ.
ಅಥವಾ ಇದು ಅಚ್ಚಣ ದೋಷವೇ? (ಅಚ್ಚಣ ಪದಪ್ರಯೋಗ ಸರಿಯಾಗಿದೆ ಎಂದುಕೊಂಡಿದ್ದೇನೆ.)
ಟೈಪೋ - ಇಂಗ್ಲೀಷ್.
ಮುದ್ರಣ - ಸಂಸ್ಕೃತ ?
ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ
ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ
ಅಚ್ಚಣ ಎಂಬ ಪದವನ್ನು ನಾನು ಈ ವರೆಗೆ ನೋಡಿಿಲ್ಲ ; ಈ ರೀತಿಯ ಮತ್ತೆ ಯಾವ ಸಬ್ದಗಳಿವೆ ?( ಮೂಡಣ , ಪಡುವಣ , ತೆಂಕಣ , ಬಡಗಣ ಹೊರರ್ತಾಗಿ ) , ನೀವೇ ಟಂಕಿಸಿದ್ದೋ ? ಬೇರೆ ಪದಗಳಿದ್ದರೆ ತಿಳಿಸಿ.
ಉಃ ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ
ಸುಮ್ಮನೆ ಹಾಗೆ ಒಂದು ಕನ್ನಡ ಬಾಣ(????
) ತೇಲಿಬಿಟ್ಟೆ ಅಷ್ಟೇ
.
ಏಕೆಂದರೆ - ಅಚ್ಚಿನ ದೋಷ ಎಂಬುವಲ್ಲಿ ಕ್ರಿಯಾಪದವನ್ನ ಹೆಚ್ಚು ಒತ್ತಿ ಹೇಳಿದ ಹಾಗಾಗುತ್ತದೆ. ಈ ಅಚ್ಚುವಾಗ ಆಗುವ ದೋಷಕ್ಕೆ ಒಂದು ನಾಮಪದದ ಸ್ವರೂಪ ಕೊಟ್ಟರೆ ಹೇಗಿರುತ್ತದೆ ಎಂದು ಯೋಚಿಸಿದಾಗ, ಅಂದರೆ ಟೈಪೊಗೆ ಸರಿಸಮಾನವಾಗಿ ಕನ್ನಡದಲ್ಲಿ ಹೇಳ ಹೊರಟರೆ ಏನು ಹೇಳಬೇಕು ಎಂದು ಯೋಚಿಸುತ್ತಿದ್ದಾಗ, ಹೊಳೆದದ್ದೆ - ಅಚ್ಚಣದೋಷ. ಇವನು ನಮ್ಮ ಮುದ್ರಾರಾಕ್ಷಸನ ಸಂಬಂಧಿ.
ತಾವುಗಳು ಏನ ಹೇಳಬಯಸುತ್ತೀರಿ.
ಹೊಸ ಪದಗಳು
ಹೊಸ ಪದಗಳು ಹೀಗೆಯೇ ಅಲ್ಲವೇ ಸೃಷ್ಟಿಯಾಗುವುದು? ಈಗೇನೋ ತಮಾಷೆಗೆ ಬರೆದಿರಬಹುದು. ಮುಂದೊಂದು ದಿನ ಇದನ್ನು ಓದಿದವರು, ಇನ್ನೂ ಹೆಚ್ಚಿಗೆ ತಿಳಿದವರು ಈ ಪದವನ್ನು ಅಳವಡಿಸಿಕೊಳ್ಳಲೂಬಹುದು. ನಾನೊಂದು ಪದವನ್ನು ಉಪಯೋಗಿಸಿದ್ದೆ. ಮೋಸಿಸಿ. ಮೋಸಮಾಡಿ ಎನ್ನುವುದಕ್ಕೆ ಬದಲಾಗಿ ಪ್ರಾಸಬದ್ಧವಾಗಲೆಂದು ಉಪಯೋಗಿಸಿದ್ದು. ಬಹಳ ಜನರು ಈ ಪದದ ಉಪಯೋಗ ಇಲ್ಲ. ಇದು ಸರಿಯಿಲ್ಲವೆಂದರು. ಆಗ ನಾನು ಸಮಾಜಾಯಿಷಿ ಕೊಟ್ಟಿದ್ದೆ. ಉಪಯೋಗಿಸಿ, ಬಳಸಿ, ಬಯಸಿ, ಇತ್ಯಾದಿಯಂತೆ ಮೋಸಿಸಿ ಯಾಕಾಗಬಾರದು? ಆಗ ಚರ್ಚೆಯಲ್ಲಿ ಪಾಲ್ಗೊಂಡಿದ್ದ (ಅದೊಂದು ಅಂತರ್ಜಾಲ ವೇದಿಕೆ) ಮಂದಿ ಒಪ್ಪಿದ್ದರು. ಈ ಪದಪ್ರಯೋಗ ಸರಿ ಇಲ್ಲದಿರಬಹುದು. ನಮ್ಮ ಓಎಲ್‍ಎನ್ ಸರ್ ಅವರು ಇದರ ಬಗ್ಗೆ ನಮಗೆ ದಾರಿದೀಪವಾಗಬೇಕೆಂದು ಕೇಳಿಕೊಳ್ಳುವೆ.
ಹೀಗೆಯೇ ಮುಂದೊಂದು ದಿನ ಸುನೀಲ್ ಅವರು ವ್ಯಾಕರಣ ಪಂಡಿತರಾಗಬಹುದಲ್ಲವೇ?
ಸುನೀಲ್ ಇದೇ ತರಹ ಪದಪ್ರಯೋಗ ಮುಂದುವರೆಸಿ. ಇದರ ಬಗ್ಗೆ ನಮ್ಮ ಓಎಲ್‍ಎನ್ ಸರ್ ಅವರ ಮುಂದಾಳತ್ವದಲ್ಲಿ ಹೆಚ್ಚು ಹೆಚ್ಚು ಕಲಿಯೋಣ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಉ ಹೊಸ ಪದಗಳು
ಅಯ್ಯೋ ಕಾಲೇಜಿನಲ್ಲಿದ್ದಾಗ ಹೀಗೆಯೇ ಒಂದು ಪದ ಕಟ್ಟಿದ್ದೆ. ಆದರೆ ಅದು ಇಂಗ್ಲೀಷಿನದ್ದು. ಹೀಗಿತ್ತದು. ನಮ್ಮಲ್ಲಿ ಬಳಕೆಯಲ್ಲಿರುವ "ಬಕರ ಆಗುವ" ಕ್ರಿಯೆಗೆ ಏನನ್ನಬೇಕು ಎನ್ನುವುದು ಎಂದು. ಅದಕ್ಕೆ ನನಗೆ ಹೊಳೆದಿದ್ದೆ ಸುಲಭ ಉಪಾಯ Bakrified. He gets bakrified always. ಹೇಗಿದೆ. ಮತ್ತೆ ನನ್ನ ಮಾತುಗಳನ್ನು ಕೇಳುತ್ತಾ ಸಂಪದಿಗರು - ಸಂಪದದ ಮಂದಿ ಅದಾದೀರಿ. ಯಾವುದಕ್ಕೂ ಎಚ್ಚರದಲ್ಲಿರುವುದು ಒಳ್ಳೆಯ ಗುಣ,
ಅಚ್ಚಿನ, ಅಚ್ಚಣ
ಈ ಬಗೆಯ ಸಾಕಷ್ಚು ಪದಗಳು ಬಳಕೆಯಲ್ಲಿವೆ!
ಉದಾಹರಣೆ: ಮೇಲಿನ (ಮೇಲಣ, ಮೇಗಣ), ಕೆಳಗಿನ (ಕೆಳಗಣ), ಮುನ್ನಿನ (ಮುನ್ನಣ), ಹಿಂದಿನ (ಹಿಂದಣ)... ಇತ್ಯಾದಿ.
ಕುಟ್ಟಣ ದೋಷ!!
ಇದು ಕುಟ್ಟಣ ದೋಷ. ಕೀಲಿಮಣೆಯನ್ನು ಕುಟ್ಟುವಾಗ ಆಗುವ ಪ್ರಮಾದಗಳನ್ನು ಹೀಗೇ ಕರೆಯಬಹುದೇನೋ...
Re: ಕುಟ್ಟಣ ದೋಷ!!
ನಾನು ಈ ಹಿಂದೆ ವಿಜಯ ಕರ್ನಾಟಕ ಪತ್ರಿಕೆಗಾಗಿ "eಳೆ" ಹೆಸರಿನ ಅಂಕಣ ಬರೆಯುತ್ತಿದ್ದೆ. ಅದರ ಕೆಲವು ಲೇಖನಗಳನ್ನು ವಿಶ್ವಕನ್ನಡದಲ್ಲಿ ಓದಬಹುದು. ಅದರಲ್ಲಿ ನಾನೊಮ್ಮೆ ಬರೆದಿದ್ದೆ -"ಮುದ್ರಣ ದೋಷಗಳಿಗೆ ಮುದ್ರಾರಾಕ್ಷಸ ಎಂಬ ಹೆಸರು ಚಾಲ್ತಿಯಲ್ಲಿದೆ. ಕೀಲಿಮಣೆ ಕುಟ್ಟುವಾಗ ಆಗುವ ದೋಷಗಳಿಗೆ ಕುಟ್ಟೋರಾಕ್ಷಸ ಎನ್ನಬಹುದೇನೋ?"
ಸಿಗೋಣ,
ಪವನಜ
ಉ:ಇಂದಿನ ನಮ್ಮ ತವಕ ತಲ್ಲಣಗಳು
ಭಾನುವಾರದಂದು ಕೆಲ ಕೆಲಸಗಳಿದ್ದ ಕಾರಣ ಭಾಗವಹಿಸಲಾಗಲಿಲ್ಲ. ಭಾಗವಹಿಸಿದವರು ಯಾರಾದರೂ ಏನು ನಡೀತು, ನಾವು ಏನೇನು ಮಿಸ್ ಮಾಡ್ಕೊಂಡ್ವು ಬರೀತೀರ?. ಫೋಟೋಗಳಿದ್ರೆ ತಪ್ಪದೇ ನಮ್ಮೊಂದಿಗೆ ಹಂಚ್ಕೊಳ್ಳಿ. ಫೋಟೋ ಅಪ್ಲೋಡ್ ಮಾಡುವ ಪರ್ಮಿಶನ್ ಈಗಾಗ್ಲೇ ನಿಮ್ಮ ಅಕೌಂಟಿಗೆ ಕೊಟ್ಟಿಲ್ದಿದ್ರೆ ನೀಡುವೆ.
- ಹೆಚ್ ಪಿ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಕಾರ್ಯಕ್ರಮದ ವಿವರ
ನಾಡಿಗ್, ನನ್ನ ಮಟ್ಟಿಗಂತೂ ಬಹಳ ದಿನ ನೆನಪಿನಲ್ಲುಳಿಯುವ, ಗಂಭೀರ ಚಿಂತನೆಗೆ ಅವಕಾಶಮಾಡಿಕೊಡುವ ಕಾರ್ಯಕ್ರಮ ಅದಾಗಿತ್ತು. ಭಾಗವಹಿಸಿದ್ದ ಎಲ್ಲ ಚಿಂತಕರು ನಮ್ಮ ಸಮಾಜದ ಇಂದಿನ ಆಗುಹೋಗುಗಳ ಬಗ್ಗೆ, ಅವುಗಳ ಕುರಿತಾದ ನಮ್ಮ ಧೋರಣೆಗಳು, ಇದರಲ್ಲಿ public intellectualಗಳ ಪಾತ್ರ ಇತ್ಯಾದಿ ವಿಷಯಗಳನ್ನು ಮಂಡಿಸಿದರು. ನಂತರ ಚರ್ಚೆ ನಡೆಯಿತು. ಅವೆಲ್ಲವನ್ನು ಇಲ್ಲಿ ವಿವರಿಸುವುದು ಸ್ವಲ್ಪ ಕಷ್ಟ. ನಾನು ಆ ದಿನ record ಮಾಡಲಾದ ಭಾಷಣ/ಚರ್ಚೆಯನ್ನು ಕೇಳಿಸಿಕೊಂಡು ಲೇಖನವೊಂದನ್ನು ಬರೆಯಬೇಕೆಂದಿದ್ದೇನೆ.
ಸಾರಾಂಶ ಕೊಡಬಲ್ಲೆ:
೧. ಎಂ.ಪಿ. ಪ್ರಕಾಶ್ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವುಗಳನ್ನು ಎದುರಿಸಿ ಹೊಸ ನಾಳೆಗಳನ್ನು ಕಟ್ಟುವ ಬಗ್ಗೆ ಆಶಾವಾದಿಯಾಗಿ ಮಾತನಾಡಿದರು
೨. ಯು.ಆರ್. ಅನಂತಮೂರ್ತಿಯವರು ಎಂ.ಪಿ. ಪ್ರಕಾಶರ ಮಾತಿಗೆ ಪ್ರತಿಕ್ರಿಯಿಸುತ್ತ 'ನಿಮ್ಮಂತ ಅಪರೂಪದ ರಾಜಕಾರಣಿಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ, ನಿಮ್ಮಿಂದ ಬಹಳ ನಿರೀಕ್ಷೆಯಿದೆ' ಎಂದರು
೩. Outlook ಪತ್ರಿಕೆಯ ಸುಗತ ಶ್ರೀನಿವಾಸರಾಜು Infosysನ ಭೂಮಿ ಹಗರಣದ ಹಿನ್ನೆಲೆಯಲ್ಲಿ corporate ಸಂಸ್ಥೆಗಳ ಉಢಾಫೆ ಧೋರಣೆ, ರಾಜಕಾರಣಿಗಳ/ಅಧಿಕಾರಿಗಳ ವರ್ತನೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ - ಈ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲು ಕಾರಣರಾದರು
೪. ಶರತ್ ಅನಂತಮೂರ್ತಿಯವರು ವಿಜ್ಞಾನ (basic science) ಹಾಗು ತಂತ್ರಜ್ಞಾನ (technology) ಗಳ ನಡುವಿನ ಸೂಕ್ಷ್ಮ ವ್ಯತ್ಯಾಸ, ಇಂದಿನ ಸಮಾಜದಲ್ಲಿ ಅವುಗಳ ಬಳಕೆಗಳ ಬಗ್ಗೆ ಪ್ರಬಂಧ ಮಂಡಿಸಿದರು
೫. ವಿಜಯಶಂಕರ ಅವರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸಮಾಡುತ್ತ (beneficiary ಗಳಾಗಿ), ನಮ್ಮ ನೆಲದ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರುವ ಅಗತ್ಯ, ಜಾಗತೀಕರಣದ ಸಂದರ್ಭದಲ್ಲಿ ಸುತ್ತಲ ಆಗುಹೋಗುಗಳ ಬಗೆಗಿನ ಅರಿವು, ಅವುಗಳನ್ನು ಗ್ರಹಿಸುವ ಪರಿ - ಈ ವಿಷಯಗಳ ಬಗ್ಗೆ ಮಾತಾಡಿದರು
೬. ಖ್ಯಾತ ರಂಗಕರ್ಮಿ ರಘುನಂದನ ಅವರು TVಯ ಕಾರ್ಯಕ್ರಮಗಳು ಹಂತ ಹಂತವಾಗಿ ಭಾಷೆಯನ್ನು ಕೊಲ್ಲುತ್ತಿರುವ ಬಗ್ಗೆ, ನಾಟಕ ಹಾಗು ಸಿನಿಮಾ ಕಲೆಯ ಸಾಧ್ಯತೆಗಳ ಬಗ್ಗೆ (ಅವರ ಪ್ರಕಾರ ನಾಟಕ ಮತ್ತು ಸಿನಿಮಾ ಕಲಾಪ್ರಕಾರಗಳು - TV ಕೇವಲ ಮಾಧ್ಯಮ) ಪ್ರಬಂಧ ಮಂಡಿಸಿದರು
೭. ಕೊನೆಯಲ್ಲಿ ರಾಘವೇಂದ್ರ ರಾವ್ 'ಇಷ್ಟೆಲ್ಲ ತವಕ ತಲ್ಲಣಗಳ ಮಧ್ಯೆ ಅರಿವು, ಎಚ್ಚರಗಳನ್ನಿಟ್ಟುಕೊಂಡು, ಹೊಸ ಕನಸುಗಳನ್ನು ಕಾಣುವ, ಬದುಕುವ challenge'ಗಳ ಬಗ್ಗೆ ಮಾತನಾಡಿದರು