~
ತೆಲಗಿ ಚುಟುಕಗಳು - ೧
೧)
ನೂರು ಕೋಟಿಗೊಬ್ಬನೇ ತೆಲಗಿ
ಕೋಟಿಗಟ್ಟಲೆಯ ಅವನಾಸ್ತಿ ಮರೆಯಾಗಿ
ತೆರಿಗೆ ಕಟ್ಟಲು ಕೈಲಿ ಕಾಸಿಲ್ಲದಾಗಿ
ಯಾರೂ ಕೊಳ್ಳುವವರಿಲ್ಲ ಮೂರು ಸಲ ಕೂಗಿ.
೨)
ಕಾಲ ಕಳೆವನು ಚಿ೦ತೆಯಿಲ್ಲದಲೆ ಜೈಲಿನೊಳಗೆ
ಸಾಲವೆ೦ಬುದು ಇಲ್ಲ ಭಯವಿಲ್ಲ ಮನದೊಳಗೆ
ಒತ್ತಿದ್ದ ಛಾಪುಗಳ ಮೂಡಿಸುತ ತಲ್ಲೀನ
ಅವನ ಕೆಣಕಿದರೆ, ಅಡಿಗಡಿಗೆ - ಹಾಡಿಸುವನು ತಿಲ್ಲಾನ.
೩)
ಕೋಟಿಗಟ್ಟಲೆಯ ಬಲು ದೊಡ್ಡ ಆಸ್ತಿ,
ತೆಲಗಿ ತೆರಬೇಕು ತೆರಿಗೆಯಾ ಸುಸ್ತಿ,
ಅವರಿವರು ಜೊಲ್ಲು ಸುರಿಸಿದರೇನು ಬ೦ತು!
ಎಲ್ಲಿಹುದೋ ನಕಲಿ ಛಾಪದಾ ತ೦ತು??
೪)
ಲಾಲಿ ಹಾಡಿದುದ ಕೇಳಿರುವೆ ಕೃಷ್ಣನಿಗೆ,
ಹಾಲು ಕುಡಿಸಿಹುದ ಓದಿರುವೆ ಗಣಪನಿಗೆ
ಲಾಲಾ, ಖದೀಮ ತೆಲಗಿ- ನೀನೇನ ಮಾಡಿರುವೆ?
ಲೀಲೆಯಿ೦ದಲಿ ನಕಲಿ ಮುದ್ರೆಗಳ ನೀ ಬಿಗಿದು ಬಿಟ್ಟಿರುವೆ

- ಭರದ್ವಾಜ ರವರ ಬ್ಲಾಗ್
- Login or register to post comments
- 665 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ತೆಲಗಿ ಚುಟುಕಗಳು - ೧
ನಾನು ಹೊಸದಾಗಿ ಸ೦ಪದ ಬಳಗಕ್ಕೆ ಸೇರಿರುತ್ತೇನೆ. ನನ್ನ ಕೆಲವು ಕ(ವಿ)ತೆ- ಕವನಗಳನ್ನು "ಸ೦ಪದ"ದಲ್ಲಿ ಪ್ರಕಟಿಸಬಯಸಿದ್ದೇನೆ. ಅದರ ಮೊದಲ ಹೆಜ್ಜೆಯಾಗಿ 'ತೆಲಗಿ ಚುಟುಕಗಳು - ೧'ನ್ನು ಈಗ ಪ್ರಸ್ತುತ ಪಡಿಸಿರುತ್ತೇನೆ. ತಾವುಗಳು ನನ್ನನ್ನು ಪ್ರೋತ್ಸಾಹಿಸುತ್ತೀರಿ ಎ೦ದು ನ೦ಬಿರುವ,
ನಿಮ್ಮ
ಭರದ್ವಾಜ.
ಭರದ್ವಾಜರಿಗೆ.....
ಸಂಪದಕ್ಕೆ ಸ್ವಾಗತ.
ನಿಮ್ಮಿಂದ ಹೊಸ ಕವಿತೆಗಳ ಮಹಾಪೂರವೆ ಹರಿದು ಬರಲಿ.
ನಿಮಗೆ ಮತ್ತೊಮ್ಮೆ ಸ್ವಾಗತು.
ಮುಂದುವರೆಸಿ!
ಭರದ್ವಾಜರಿಗೆ ಸ್ವಾಗತ!
ಕವನ ಬಹಳ ಚೆನ್ನಾಗಿದೆ; ಮುಂದುವರೆಸಿ!
ನಿಮ್ಮವ
ಬೆನಕ
ತೆಲಗಿ ಚುಟುಕಗಳು
ತಮಗೆ ಮತ್ತು ತಮ್ಮ ಚುಟುಕಗಳಿಗೆ ಸುಸ್ವಾಗತ. ಬಹಳ ಸು೦ದರವಾಗಿವೆ. ಮತ್ತಷ್ಟು ಹೊರಬರಲಿ. ಎಲ್ಲರಿಗೂ ಮುದ ನೀಡಲಿ.