ಶ್ಯಾಮ ಕಶ್ಯಪ
ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.
ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಸಂಪದ ಓದುಗರು ಈಗಾಗಲೇ ಓದಿರಬಹುದು, ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರ 'ಋಜುವಾತು' ಬಿಡುಗಡೆ ಸಮಾರಂಭದ ಭಾಷಣವನ್ನು ಟೀಕಿಸಿ ಬರೆದ ಲೇಖನವನ್ನು.
ವಿಜಯಕರ್ನಾಟಕ ಬರ್ತಾ ಬರ್ತಾ ತೀರಾ ಬೇಜಾವಾಬ್ದಾರಿಯಿಂದ ಲೇಖನಗಳನ್ನು ಪ್ರಕಟಿಸುತ್ತಿದೆ ಎಂಬ ವಾದಕ್ಕೆ ಇಂದಿನ ಲೇಖನ ಮತ್ತೊಂದು ಪುರಾವೆ.
ಲೇಖನ ಓದಿದರೆ ಮೊದಲೇ ಅನ್ನಿಸುತ್ತದೆ. ಸರಿಯೋ ತಪ್ಪೋ, ಅನಂತಮೂರ್ತಿ 'ಅಂಡ್ ಕೋ' ವನ್ನು ನಿಂದಿಸಲಿಕ್ಕೇ ಹೊರಟ ಲೇಖನ ಇದು ಅಂತ. ಇರಲಿ, ಅದರಲ್ಲಿ ತಪ್ಪೇನಿಲ್ಲ. ನಾನೇನು ಅನಂತಮೂರ್ತಿಯವರ 'ಅಂಡ್ ಕೋ' ಬಳಗದವನಲ್ಲ. ಅಥವ, ಅನಂತಮೂರ್ತಿ ಮತ್ತು ಪ್ರಸ್ತುತ ಲೇಖಕರ ಜ್ಞಾನ/ಅಜ್ಞಾನ ಗಳ ಬಗ್ಗೆ ಮಾತಾಡುವಷ್ಟು ಪಾಂಡಿತ್ಯವೂ ನನಗಿಲ್ಲ.
ಅನಂತಮೂರ್ತಿಯವರಿಗೆ, ತೀರಾ ಹಿಂದಿನ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಾದ ಅನುಭವವಿಲ್ಲದಿದ್ದರೂ ಅವರು ಹಿಂದಿನ ಕನ್ನಡದ ಲೇಖಕರು 'non-communal' ಅಂತ ಹೇಳುವುದು ತಪ್ಪು ಎಂಬ ಅರ್ಥ ಬರುವ ಒಂದು ಪ್ಯಾರಾಗ್ರಾಫ್ ಇದೆ. ಇದಕ್ಕೆ ಅನಂತಮೂರ್ತಿಯವರೇ ಬರೆದ ೧೯೮೫ರ ಒಂದು ಪುಸ್ತಕದ ಮುನ್ನುಡಿ ಸಾಕ್ಷಿ ಎನ್ನುವುದು ಲೇಖಕರ ವಾದ. ಆದರೆ ಇದರಲ್ಲಿ ಒಂದು ತಾರ್ಕಿಕ ತಪ್ಪಿದೆ. (ಕೇವಲ ತಾರ್ಕಿಕ). ಅಲ್ಲಾ ಸ್ವಾಮಿ, ೨೨ ವರ್ಷಗಳ ಹಿಂದೆ ಅನಂತಮೂರ್ತಿಯವರು ಹಳೆಯ ಸಾಹಿತ್ಯವನ್ನು ಓದಿರಲಿಲ್ಲ, ಅದನ್ನು ಒಪ್ಪಿಕೊಂಡು ಬರೆದಿದ್ದರು. ಈಗ ೨೨ ವರ್ಷಗಳ ನಂತರವೂ ಅವರ ಕನ್ನಡ ಸಾಹಿತ್ಯ ಜ್ಞಾನ ವೃದ್ಧಿಸಿಲ್ಲ ಅಂತ ಹೇಗೆ ಹೇಳುತ್ತೀರ? ಉಲ್ಲೇಖ ನೀಡುವುದಕ್ಕೆಯೇ ಎಲ್ಲಿಂದಲೋ ತಂದು ಉಲ್ಲೇಖಿಸಿದಂತಿದೆ ಈ ಮಾಹಿತಿ.
ಇದಾದ ಮುಂದಿನ ಪ್ಯಾರ ದಲ್ಲಿಯೇ ಲೇಖಕರು ಮತ್ತೊಂದು potentially damaging statement ಕೊಡ್ತಾರೆ. ಅದ್ಯಾವುದು ಅಂತ ನೀವೇ ನೋಡಿ! (ಜಾಸ್ತಿ ತಲೆ ಕೆಡೆಸಿಕೊಳ್ಳಬೇಕಾಗಿಲ್ಲ, ಸಾಹಿತ್ಯದ ಗಂಧವೂ ಇಲ್ಲದೇ, ಸಮುದಾಯ ಜ್ಞಾನವನ್ನು ಅಷ್ಟೋ ಇಷ್ಟೋ by default ತಲೆಯಲ್ಲಿ ಸೇರಿಸಿಕೊಂಡಿರುವ ನಾನೇ ಕಂಡು ಹಿಡಿದಿರಬೇಕಾದರೆ ಯಾರೂ ಕೂಡ ಇದನ್ನು ಹಿಡಿದು ಲೇಖಕರನ್ನು ಮತ್ತೂ ಟೀಕಿಸಬಹುದು.)
ಒಟ್ಟಿನಲ್ಲಿ ಈ ಪೇಪರ್ ನ ಉಗಿಯಕ್ಕೆ ನನಗೆ ಮತ್ತೊಂದು ಚಾನ್ಸು ಅಷ್ಟೇ.

- ಶ್ಯಾಮ ಕಶ್ಯಪ ರವರ ಬ್ಲಾಗ್
- Login or register to post comments
- 1297 hits
- Email this blog





RSS:
ಪ್ರತಿಕ್ರಿಯೆಗಳು
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
>>ಒಟ್ಟಿನಲ್ಲಿ ಈ ಪೇಪರ್ ನ ಉಗಿಯಕ್ಕೆ ನನಗೆ ಮತ್ತೊಂದು ಚಾನ್ಸು ಅಷ್ಟೇ.
ನಿಮಗೂ ವಿಜಯಕರ್ನಾಟಕಕ್ಕೂ ಎಣ್ಣೆ ಸೀಗೆ ಕಾಯಿ ಸಂಬಂಧವೇ? ಯಾಕೆ?
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಯಾವ ದಿನದಲ್ಲಿ ಬಂದಿದೆ ಈ ಸುದ್ದಿ? ಅದರ ಲಿಂಕ್ ಕೊಟ್ಟಿದ್ದರೆ ಅನುಕೂಲವದೀತು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಋಜುವಾತು
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಕ್ಷಮಿಸಿ, ಲಿಂಕ್ ಸಿಕ್ಕಿರಲಿಲ್ಲ. ಇಂದಿನ (ಏಪ್ರಿಲ್ ೧೮ರ ಪ್ರತಿ)ಯಲ್ಲಿ ಪ್ರಕಟವಾದ ಲೇಖನ.
ನನಗೂ ಈ ಪೇಪರ್ರಿಗೂ ಯಾವ ತರಹದ ನಂಟೂ ಇಲ್ಲ ಸ್ವಾಮಿ. ದಿನಾ ಇದರಲ್ಲಿ ಬರುವ biased ಲೇಖನಗಳನ್ನು ಸ್ವಗತವಾಗಿಯೋ, ಮನೆಯಲ್ಲಿ ಅಪ್ಪ ಅಮ್ಮನ ಮುಂದೆಯೋ ಬೈಕೋತಾ ಇದ್ದೆ. ಇವತ್ತು ಮತ್ತದೇ ರಾಗಕ್ಕೆ ಮತ್ತೊಂದು ಅವಕಾಶ ಅಷ್ಟೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಸಿಕ್ಕಿತು. ಧನ್ಯವಾದಗಳು - ಅಶೋಕ್ ಮತ್ತು ಶ್ಯಾಮರಿಗೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಕೊಂಡಿ ನೀಡಿ
ಆ ಒಸಗೆಯ ಕೊಂಡಿ ನೀಡಿರಿ, ಸಾರ್
======================================
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಕೊಂಡಿ ತೆರೆದುಕೊಳ್ವಲ್ದು ಕಣಣ್ಣ.
Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಲೇಖನದ ಲಿಂಕ್
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ
ಯಪ್ಪಾ...ಯಪ್ಪ
ಆ ಬರಹ ಓದಕ್ಕೆ ನನ್ನ ಕಣ್ಣಲ್ಲಿ ಆಗಕ್ಕಿಲ್ಲ. ಅದೇನು ಕನ್ನಡವೋ, ಜೀನಿಯೋ ಆ ಬಯ್ರಪ್ಪಂಗೆ ಗೊತ್ತು.
ಹಿಂಗೆ ಕನ್ನಡದಾಗೆ ಎಲ್ರೂ ಬರೀತಾ ಹೋದ್ರೆ, ಕನ್ನಡವೂ ನಂಮಂತ ಮನುಸ್ಸರಿಗೆ ಅರ್ತ ಆಗದೇ, ಬರಿ ದ್ಯಾವರಿಗೇ ಅರ್ತ ಆಗೋ ದ್ಯಾವಬಾಸೆ ಆಗ್ ವೋಯ್ತದೆ.
ಯಪ್ಪೊ.. ಅದ್ಸರಿ ! ಆವಯ್ಯ ಬರೆದಂಗೆ ಅದ್ಯಾವೋರಲ್ಲಿ ಮಾತಾಡ್ತಾರೆ? ಅಂತ ಊರು ಐತಾ?
ಇನ್ ಮ್ಯಾಕೆ ಈವಯ್ಯ ಬರೆಯೋದ್ನ ನಾನ್ ನೋಡಕ್ಕೂ ವೋಗಕ್ಕಿಲ್ಲ, ಓದ್ರು ನಂಗೆ ತಿಳಿಯಕ್ಕಿಲ್ಲ. ಇದ್ರ ಬದಲು ನಾನು ನಮ್ಮ ಬಸವಣ್ಣ, ಅಕ್ಕಮಾದೇವಿ ಬರೆದಿರೋದನ್ನೇ ಓದ್ಕೊಂಡು ಹಾಯಾಗಿ ಇರ್ತೀನಿ.
ಅಲ್ಲಾ ಇವ್ರು ಏನೇನೋ, ಏನೇನೇನೋ ಓದ್ಕೊಂಡಿವ್ನಿ ಅಂತ ಹಿಂಗಾ ಬರೆಯೋದು?
ಅವ್ರಗೂ ಅವರ ಲೇಕನಕ್ಕೂ ದೊಡ್ ನಮ್‌ಸ್ಕಾರ. ಬತ್ತೀನಿ!
======================================
Potentially damaging statement
ಮೇಲೆ ಬರೆದಿದ್ದೆ, ಲೇಖನದಲ್ಲಿ ಇನ್ನೊಂದು potentially damaging statement ಇದೆ ಅಂತ. ಸಂಪದಿಗರು ಗಮನಿಸಿಲ್ಲವೆಂದು ತೋರುತ್ತದೆ. ಕನ್ನಡಿಗರೆಲ್ಲರಿಗೂ ಒಂದು ಸಲ ಜಟ್ಕ ಕೊಡುವ ಈ ವಾಕ್ಯವನ್ನು ಓದಿ:
communal ಗೂ non-communal ಗೂ ಮಧ್ಯೆ ಈ cheap ವಾಕ್ಯ ಏಕೆ ಬಂತು ಅಂತ ಗೊತ್ತಾಗಲಿಲ್ಲ. ವಾಕ್ಯದ ಹಿಂದೂ ಮುಂದೂ ಕೂಡ ಇದಕ್ಕೆ ಸರಿಯಾದ ಸಮರ್ಥನೆಯೂ ಇಲ್ಲ. ಇದರ ಅರ್ಥ ಏನು? ಕನ್ನಡ ಸಾಹಿತ್ಯದಲ್ಲಿ ಜೀವನಮೌಲ್ಯಗಳೇ ಇಲ್ಲವೇ ಅಥವ ಲಕ್ಷಾಂತರ ಕೃತಿಗಳಿರುವ ಸಾಹಿತ್ಯದಲ್ಲಿ, ಸಾವಿರಾರು ಕೃತಿಗಳಲ್ಲಿ ಮಾತ್ರ ಈ ಮೌಲ್ಯಗಳು ಕಳೆದುಹೋಗಿವೆಯೇ.. ಅಂದರೆ ಜೀವನಮೌಲ್ಯ, ಶ್ರೇಷ್ಠ ಆದರ್ಶ = non-communal attitude? ಏನು ಬರೆದಿದ್ದಾರೋ ತಿಳಿಯದಾಗಿದೆ.
ಒಟ್ಟಿನಲ್ಲಿ ಅನಂತಮೂರ್ತಿ ಕನ್ನಡ ಸಾಹಿತ್ಯ non-communal ಅಂದ್ರು, ಇವರು ಅದಕ್ಕೆ (by default) ವಿರುದ್ಧವಾದ ನಿಲುವು ತೆಗೆದುಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡಿರಬಹುದು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಕನ್ನಡದಲ್ಲಿ ಇಲ್ಲವಂತೆ
ಸ್ಯಾಮಣ್ಣ...
ಅಂನೋರು ಅಂತಾನೆ ಇರಲಿ. ಬಯ್ಯೋರು ಬಯ್ತಾನೆ ಇರಲಿ.
ಯಾವೋನೋ ಅದೇನೋ ಇಲ್ದೇ "ಕಂನಡ ಜಾಳು" ಅಂತಾನೆ, ಇಂನೊಬ್ಬ "ಕಂನಡನದಾಗೆ ಬಾೞಕ್ಕೆ ಬೇಕಾಗಿರೋದು ಏನು ಇಲ್ಲ" ಅಂತಾನೆ. ಅಂನಲಿ, ಅವನ ಬಾಯಿ, ಅವನ ನಾಲಗೆ. ಎಲ್ರುಗೂ ಈ ದೇಸದಾಗೆ ಅಬಿವೆಕುತಿ ಸೊತಂತ್ರ ಐತಂತೆ!
"ನಮ್ ದ್ಯಾವರು ಸತ್ಯ ನಮ್ಗೆ ಗೊತ್ತಿಲ್ವೇ" ಅಂನೋ ಗಾದೆಯಂಗೆ, ನಂಮ ಕಂನಡದಾಗೆ ಏನೈತೆ ಏನಿಲ್ಲ ಅಂತ ನಾವು ಕಂನಡದೋರಗೆ ಚೆಂನಾಗೇ ಗೊತ್ತು.
ಯಾವ್ ದೊಂಣೇ ನಾಯಕನೋ ಬಂದು, ಕಂನಡಕ್ಕೆ ಯಾವ್ certificate ಕೊಡಬೇಕಾಗಿಲ್ಲ. ಕಂನಡ ಸಾವಿರ ಸಾವಿರ ಏಡುಗಳಿಂದ ಬದುಕ್ಕೊಂಡು ಬಂದಿರೋದೆ, ಅದರ ದೊಡ್ಡತನ. ನಾವು ಸಲೀಸಾಗಿ ಅದಂನ ಮಾತಾಡ್ಕೊಂಡು ಬದುಕ್ತಿರೋದೇ ಅದರ ದೊಡ್ಡತನ.
ಜಾಸ್ತಿ ತಲೆಗೆಡಿಸ್ಕೋ ಬೇಡಿ. ಇಂತವ್ರು ಇದ್ದೇ ಇರ್ತಾರೆ!
======================================
ದನಿಗೂಡು: Potentially damaging statement
ಶ್ಯಾಮ್, ಕಳೆದ ವಾರ ಕನ್ನಡವು ಜಾಳು ಎಂಬ ವರದಿ ಆಯಿತು, ಈ ವಾರ ಇದು. ಇನ್ನು ಮುಂದೆ ಏನು ಕಾದಿದೆಯೋ ತಿಳಿಯದು. ಯಾವುದೋ ಮಾತಿನ ತೀಟೆಗೆ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡುವವರು ಇವುಗಳನ್ನು ಗಮನಿಸುತ್ತಾರೋ ಇಲ್ಲವೋ ತಿಳಿಯದು. ಸರಿ ಗೆಳೆಯರೆ, ಕನ್ನಡ ಸಾಹಿತ್ಯದಲ್ಲಿ ಜೀವನಾದರ್ಶ ಇದೆಯೇ ಇಲ್ಲವೇ ಎಂಬುದನ್ನು ತೀರ್ಮಾನಿಸಿಕೊಳ್ಳಲೊಸುಗ, ನಾನು ಇಲ್ಲಿಯವರೆಗೆ ಓದಿರುವ ಒಂದೋ ಎರಡೋ ಕೃತಿಗಳಲ್ಲಿರುವ ನನ್ನನ್ನು ತುಂಬಾ ಆಕರ್ಷಿಸಿದ್ದ ಮೂರು ಪಾಯಿಂಟುಗಳನ್ನು ಪಟ್ಟಿ ಮಾಡಿರುವೆ. ಇವುಗಳು ಆದರ್ಶಗಳು ಹೌದೋ ಅಲ್ಲವೋ ಎಂಬುದನ್ನು ನೀವುಗಳೇ ಕಂಡುಕೊಳ್ಳಿರಿ. ಏಕೆಂದರೆ ಒಬ್ಬರಿಗೆ ಮೌಲ್ಯವಾಗಿ ಕಂಡುಬಂದದ್ದು ಮತ್ತೊಬ್ಬರಿಗೆ ಕಂಡುಬರದಿರಬಹುದು.
೧. ಕವಿರಾಜಮಾರ್ಗದಲ್ಲಿ ಇರುವ ಅಂತರಂಗರಿಪುವರ್ಗ - ಮದ, ಮಾನ, ಮಾಯ, ಭಯ, ಲೋಭ, ವಿಷಾದ, ಹರ್ಷಾಭ್ಯುದಿ. ಇದು ಅತ್ಯಂತ ಪ್ರಸಿದ್ಧವಾದ ಅರಿಷಡ್ವರ್ಗಗಳಿಗಿಂತ(ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಬೇರೆಯಾಗಿದೆ. ಈ ಅಂತರಂಗರಿಪುವರ್ಗ ಕನ್ನಡದವರು ಕಂಡುಕೊಂಡಿದ್ದ ನಮ್ಮೊಳಗಣ ಶತ್ರುಗಳು. ಇದು ಕನ್ನಡ ಸಾಹಿತ್ಯ ಇಂದುಮತ್ತುಮುಂದಿನ ತಲೆಮಾರಿಗೂ ನೀಡಬಹುದಾದ ಮೌಲ್ಯವಾಗಬಲ್ಲುದೇ ?
ನಿಂತಾಗ, ಅವನಿಗೆ ಹೇಳಲ್ಪಡುವ ಮೆದುಮಾತುಗಳು.
೨. ಕುಲದ ಬಗ್ಗೆ - "ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ" ಎಂಬ ದಾಸವಾಣಿಯಿದೆಯಷ್ಟೇ. ಆದರೆ ಪಂಪ ಭಾರತದಲ್ಲಿಯೇ ಕರ್ಣನು ಕುಲವಂತರು ಯಾರು ಎಂಬುದನ್ನು ಹೇಳಿದ್ದಾನೆ. ಡಿ.೨೦೦೫ರಲ್ಲಿ ಓ.ಎಲ್.ಎನ್.ಸ್ವಾಮಿಯವರು ಪರಿಚಯ ಮಾಡಿಕೊಟ್ಟ ಪದ್ಯವನ್ನು ಓದಿ ನೋಡಿ. ಇದನ್ನು ಆಧಾರವಾಗಿಟ್ಟುಕೊಂಡು ನಮ್ಮ ನಮ್ಮ ಮೇಷ್ಟ್ರುಗಳು ನಮಗೆ ನೋಡ್ರಯ್ಯಾ ಬ್ರಾಹ್ಮಣ, ಶೂದ್ರ, ಜೈನ ಅಂತೆಲ್ಲ ಬಿಟ್ಟುಬಿಟ್ಟು ಛಲ, ಗುಣ, ಅಭಿಮಾನ, ಶೌರ್ಯ ಇವುಗಳನ್ನು ಕುಲವನ್ನು ನಿರ್ಣಯಿಸುವ ಮಾನದಂಡವೆಂದು ಸ್ವೀಕರಿಸಿ" ಎಂದು ಹೇಳಿಕೊಟ್ಟರೆ ಅದೊಂದು ಆದರ್ಶವಾಗುವುದಿಲ್ಲವೇ ?
೩. ಕಬ್ಬಿಗರ ಕಾವನ್ ದಲ್ಲಿಯಂತೂ ಸಿಕ್ಕಾಪಟ್ಟೆ ಮೌಲ್ಯಗಳಿವೆ.
೩.೧ ನನೆಯಂಬನು (ಮನ್ಮಥ) ಸನ್ಯಾಸಿಗಳಿಗೆ ಬುದ್ಧಿಕಲಿಸಲು
೩.೨ "ಪಿರಿಯರೆಂದರಿಯದೆ ನನ್ನೊಡ ಕಾದಿದೆ" ಎಂದು ಶಿವ ಮನ್ಮಥನಿಗ ಶಾಪವಿಕ್ಕುವದರಲ್ಲಿ ಪುರಾಣವನ್ನು ಹುಡುಕುವದಕ್ಕಿಂತ ಆದರ್ಶಗಳನ್ನು ಹುಡುಕಿದರಾಗುವದಿಲ್ಲವೇ?
೩.೩ ಅದರಲ್ಲಿರುವ ಹೆಸರುಗಳು, ಬರುವ ಪಾತ್ರಗಳು ಕನ್ನಡದವರು ಗಿಡ, ಮರ, ಪಕ್ಷಿಗಳನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದರು ಎಂಬುದನ್ನು ವಿವರಿಸಬಹುದು.
ಹಳಗನ್ನಡ ಸಾಹಿತ್ಯ communalಓ ಅಥವಾ non-communalಓ ಆದರೆ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿರುವ ಜೀವನಮೌಲ್ಯಗಳನ್ನು ಒಳಗೊಂಡಿಲ್ಲ ಎಂಬುದು ನನ್ನಮಟ್ಟಿಗಂತೂ ಸುಳ್ಳಾಗಿದೆ. ಏಕೆಂದರೆ ಕನ್ನಡ ಕಾವ್ಯದಿಂದ ಸ್ಪೂರ್ತಿಯನ್ನು ಪಡೆಯುವಲ್ಲಿ ನಾನು ಸಫಲನಾಗಿದ್ದೇನೆ. (ನಾನು ನೀಡಿರುವ ಮೊದಲ ಪಾಯಿಂಟೇ ಸಾಕು ಈ ನಿಲುವಿಗೆ). ಸಾಹಿತ್ಯವನ್ನು ಮೂಲವಾಗಿಟ್ಟುಕೊಂಡು ಹೊಸತನ್ನು ನಮ್ಮದಾಗಿಸಿಕೊಳ್ಳುವತ್ತ ಒಬ್ಬ ಜನಸಾಮಾನ್ಯನೂ ಹೆಜ್ಜೆ ಹಾಕಬಹುದು ಎಂಬುದರ ಕುರಿತಾಗಿ ಯಾವಾಗ ಗಂಭೀರವಾಗಿ ಯೋಚಿಸುತ್ತೇವೆಯೋ ಗೊತ್ತಿಲ್ಲ.
ಉ:
ಸುನಿಲ,
ಹಿಂದೆ ನೀನು ಹೇಳಿದ ""ಅಹಂಕಾರದ ಪರಮಾವಧಿ"ಗಳಲ್ಲಿ ಇದೂ ಒಂದು. ಏನು ಆವಯ್ಯ ಕನ್ನಡದ ಎಲ್ಲ ಕಬ್ಬಗಳನ್ನು ಓದಿ ಬಿಸಾಕಿದ್ದಾನೋ?
ಹೞಗನ್ನಡದ ಕುರಿತಾಡಿದರೆ, "ಹಳಕನ್ನಡದ ದೂಳ್ಳೆಬ್ಬಿಸುವವರು" ಎನ್ನುವರು; ಅದಿರಲಿ...
ಈಗ ನಾನು ಓದುತ್ತಿರುವ "ಜುಗಾರಿ ಕ್ರಾಸ್" ಏನು ಮಾಮೂಲಿ ಹೊತ್ತಗೆಯೇ?
ಬೈರಪ್ಪನವರ ಪರ್ವ, ಸಾರ್ಥ, ಗೃಹಭಂಗ, ದಾಟು ಇವೂ ಕೂಡ ನಮ್ಮ ಇಂದಿನ, ಹಿಂದಿನ ಬದುಕಿನ ಕನ್ನಡಿಯಲ್ಲವೇ!!
ಬೈರಪ್ಪ ಒಬ್ಬನೇ ಅಲ್ಲ, ಶಿವರಾಮ ಕಾರಂತ, ತೇಜಸ್ಚಿ, ಮುಂತಾದವರು ತಮ್ಮ ತನ್ತನ, ಸೊಂತಿಕೆಯಿಂದ, ನಮ್ಮ ಬದುಕನ್ನು ಹೊಸ ಹೊಸ ದಿಟ್ಟಿಯಿಂದ ನೋಡಿದವರು.
==========================================================
"ಸುಮ್ನೆ ಇದ್ರೆ ಮ್ಯಾಲೇ ಬಿದ್ರು"
ಉ:
ಕನ್ನಡದ ಸಾವಿರಾರು ಕೃತಿಗಳಲ್ಲಿ ಯಾವುದೇ ಜೀವನಮೌಲ್ಯಗಳಾಗಲಿ, ಎಲ್ಲರೂ ಬಾಳಿ ಬದುಕುವ ಶ್ರೇಷ್ಠ ಆದರ್ಶಗಳಾಗಲಿ ಇಲ್ಲ.
ಎಂತಾ ಎಡಬಿಡಂಗಿ ಮಾತು ಅವನದು. ಈ ಜೋಗಿ ಸಿನಿಮಾದಲ್ಲಿ, ಜೋಗಿನ್ ಎತ್ತಿ ತಾವು ಫೇಮಸ್ ರೌಡಿ ಆಗಬೇಕು ಅಂತಾ ಓಡಾಡ್ತಿರಾರಲ್ಲ, ಅಂತವನು ಈ ದೊಡ್ಡ ಮನುಷ್ಯಾ. ಹೋಗ್ಲಿ ಇದನ್ನು ಹಾಕೋ ಆ ಪೇಪರಿನವರಿಗೂ ಬುದ್ದಿ ಇಲ್ಲಾ? ಒಟ್ಟಿನಲ್ಲಿ ದೊಡ್ಡೋರ್ ಅನಿಸಿಕೊಂಡವರು ಹೇಳಿರುವದನ್ನ ಅಲ್ಲಗಳಿಲಿಕ್ ಹೋಗಿ ಆ ಮಾತು ಬರೆದಾನ್ ಅವನು.
ಸರ್ವಜ್ಞನ ಸಾವಿರಾರು ವಚನಗಳು, ಪುರಂದರರ ೪೫ ಸಾವಿರಕ್ಕೂ ಮೀರಿದ ಕೀರ್ತನೆಗಳು, ಶಿಶುನಾಳ ಶರೀಫರಂತ ಸಂತರ ಹಾಡುಗಳು, ಹನ್ನೆರಡನೆ ಶತಮಾನದ ಸಾವಿರಾರು ಶರಣರ ವಚನಗಳು, ಇವ್ಯಾವುಗಳಲ್ಲೂ ಜೀವನ ಮೌಲ್ಯಗಳಿಲ್ಲ ಅನ್ನೋರ್ ಬುದ್ದಿ ಏನ್ ಮಣ್ಣು ತಿಂತಿರುತ್ತಾ?
ಉ:
ಸಂಗನ,
ಯಾಕೊ ಕನ್ನಡವನ್ನು ತುಳಿಯಲು ಇಂತವರು ಟೊಂಕ ಕಟ್ಟಿ ನಿಂತಿದಾರೆ ಅನ್ಸುತ್ತೆ... ಈವಯ್ಯ ಏನಾದರೂ ಸೊಲ್ಪ ಕನ್ನಡದ ಬಗ್ಗೆ ಓದಿದ್ರೆ ಈ ಮಾತು ಬರ್ತಿರ್ಲಿಲ್ಲ ಅನ್ಸುತ್ತೆ. ಇನ್ನು ಪೇಪರ ನವರು ಸಕ್ಕದ ಉದ್ಧಾರ ಮಾಡಲು ನಿಂತಿದ್ದಾರೆ.( ಅವ್ರೆ ಹೇಳ್ಕೊಂಡಿದ್ದಾರೆ). ಕನ್ನಡ ಪೇಪರ್ ನವರಿಗೆ ಸಕ್ಕದ ಉಳಿಸುವ ಉಸಾಬ್ರಿ ಯಾಕೆ ಬೇಕು?
ಈ ವಯ್ಯನಿಗೆ ಇ-ಮೇಲ್ ಮಾಡಿ DLI ನಿಂದ ಸೊಲ್ಪ ಕನ್ನಡ ಹೊತ್ತಗೆ ಓದಪ್ಪ ಅನ್ನೋಣ ಅಂತಿದೀನಿ
ಉ:
i VK lekhakara bagge heLta iddira?
pls clarify , aamele maatadaNa
ಉ:
(ತಮಾಷೆ)
ಸಂಪದದಲ್ಲೂ ಕಂಗ್ಲೀಷ್ ಹಾವಳಿ
- ಮಾಯ್ಸ
ಉ:
"ಏನಾದ್ರು ಆಗ್ಲಿ ಅನಂತಮೂರ್ತಿಯವರನ್ನು ತೆಗಳಲೇಬೇಕು" ಎಂದು ಬರಿಯುವ ಮೊದಲೇ ಯೋಚಿಸಿದ್ರೆ ಹೀಗೇ ಆಗೋದು..
ಉ: ವಿಜಯಕರ್ನಾಟಕದ ಮತ್ತೊಂದು ಕೊಡುಗೆ!
ಅಂತೂ ಮೆಲ್ಲಮೆಲ್ಲಗೆ ಓದಿ ಮುಗಿಸಿದೆನು.......
ಒಟ್ನಲ್ಲಿ... ಆತಂಗೆ ಅನಂತ ಮೂರ್ತಿಗಳ ಈ ಎರಡು ಮಾತುಗಳು ಹಿಡಿಸಿಲ್ಲ.
೧) ಹಳಗನ್ನಡ ಸಾಹಿತ್ಯ non-communal
೨) ಅವರು nationalist ಅಲ್ಲ.
ಆದ್ರೆ ಅದಕ್ಕೆ ಈಯಪ್ಪ ಅಮೂಗಳ ಮೇಲೆ ಯಾಕಿಷ್ಟ ಮುನಿಸಕೊಂಡು, ಸಿಡಿದನೋ, ಆ ಬೆಟ್ಟದ ಬೈರವೇಸ್ವರಂಗೇ ಗೊತ್ತು.
===============================================
ಉ:
namaskara..nIvu ananata murthy avara himbalakaralla anatha heLikondiddira,, aadri avarige kannada gnaana vruddisde antira? yako ello enu ondakkondu svaamyate kaNistillavalla...
kannada sahitya ishatapadoru yaru URA haagu karnadaranna ishta pattu Odalla anisutte,, avara baravaNigeya guNamattave adakke saakshi..
innu rujuvaatu bagge VK nalli bareda lekhana,., enu tappide adaralli? lekhakaru maNdisiruva vaada na innomme Odi..
URA yavagalu dvandva vyakti.. rajakariNigaLa jote iralla anthare,, election ge niltare.. obba rajakaraNi jote paada yatre maaDtare..
byrappa kadamabarikaara alla aMtare.. gruhabanga oLLe kadambari antare.. idella nodta idre nimage annisallave aa vyakti matanna nambabaaradu antha?
ಸೂಚನೆ: ಕನ್ನಡದಲ್ಲಿ ಬರೆಯಿರಿ. ಕನ್ನಡದಲ್ಲಿ ಕೀ-ಇನ್ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.