ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ದಿಟತನದಿಂದಿರಲು ದಿಟ್ಟತನ ಬೇಕು

April 18, 2007 - 2:19pm — ಸಂಗನಗೌಡ

ನಾನು ಇನ್ ಮೇಲೆ ಸುಳ್ಳು ಹೇಳುವದನ್ನು ಬಿಡಬೇಕೆಂದಿದ್ದೇನೆ. ಇದು ಸುಳ್ಳಲ್ಲ, ನಂಬಿ ಪ್ಲೀಸ್, ಪ್ಲೀಸ್ ಅನ್ನಬೇಕಾಗಿಲ್ಲ, ಯಾಕೆ ಅಂದರೆ ಈ ಸುಳ್ಳಿನಿಂದ ಎಸ್ಟು ತೊಂದರೆ ಅಂಬುದನ್ನು ಮನಗಂಡು, ಈ ಒಂದು ತೀರ್ಮಾನಕ್ ಬಂದೀದಿನಿ. ಸಣ್ಣ-ಪುಟ್ಟ ಸುಳ್ಳೇ ಆದರೂ, ಒಂದು ಸುಳ್ಳನ್ನ ಉಳಿಸಲು ಮತ್ತೊಂದು, ಹಾಗೆ ಮಗದೊಂದು ಅಂತ ಸುಳ್ಳಿನ ರಾಶಿನೇ ಬೆಳೆದು ನಿಲ್ಲುತ್ತೆ.

ಮತ್ತು ಸುಳ್ಳು ಹೇಳುವದು ಹೇಡಿತನದ ರೂಪ ಅಂತಾನೂ ಅನ್ನಿಸ್ತಿದೆ. ನಾವು ಸುಳ್ಳು ಹೇಳಿದವರ ಜೊತೆ ಬಿಚ್ಚು ಮನಸ್ಸಿಂದ ಮಾತಾಡೋಕಾಗಲ್ಲಾ.

ಸುಳ್ಳು ಎಸ್ಟೇ ಚೆಂದವಾಗಿದ್ದರೂ, ಅದು ಸುಳ್ಳು ಅಂತ ತಿಳಿದ ಮೇಲೆ ಕವಡೆ ಕಾಸಿನ ಬೆಲೇನೂ ಇರಲ್ಲಾ.

ಅದಕ್ಕೆ ಸತ್ಯ-ಶಿವ-ಸುಂದರ ಅಂತಾರೆ. ಸತ್ಯದಿಂದ ಕೂಡಿದ ಸೌಂದರ್ಯವನ್ನು ಎಲ್ಲರೂ ಮೆಚ್ಚುತ್ತಾರೆ.

ದಿಟವನ್ನು ಹೇಳೋಕಾಗದೇ ಇರುವ ಹೊತ್ತಲ್ಲಿ, ಸುಮ್ಮನಾಗೋದು ಒಳ್ಳೆಯದೇ ಹೊರತು, ಸುಳ್ಳು ಮಾತ್ರ ಹೇಳಲೇಬಾರದು ಅನಿಸುತ್ತೆ.

~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 532 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 18, 2007 - 2:40pm — shreekant.mishrikoti

Re: ದಿಟತನದಿಂದಿರಲು ದಿಟ್ಟತನ ಬೇಕು-ಸುಳ್ಳು ಹೇಳಲು

shreekant.mishrikoti's picture

ಸುಳ್ಳು ಹೇಳಲು ದಕ್ಕಿಸಿಕೊಳ್ಳುವ ಜಾಣತನ ಚಾಕಚಕ್ಯತೆ ಬೇಕು .

ಅಯ್ಯೋ ? ಅದು ನನಗಿಲ್ವೇ ?!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2007 - 2:24am — gangadharg

Re: ದಿಟತನದಿಂದಿರಲು ದಿಟ್ಟತನ ಬೇಕು-ಸುಳ್ಳು ಹೇಳಲು

gangadharg's picture

ಏನ್ಸಾರ್. ನೀವು ಜಾಣರಲ್ಲವಾ ಹಾಗಾದ್ರೆ... ?

ಸುಳ್ ಹೇಳೋಕೆ ಜಾಣ್ತನ ಬ್ಯಾಡ. ಸುಳ್ಳು ಉಳಿಸ್ಕೊಂಡ್ ಹೋಗಾಕೆ ಜಾಣ್ತನ ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2007 - 3:17pm — Sunil Jayaprakash

ದನಿಗೂಡು : ದಿಟತನದಿಂದಿರಲು ದಿಟ್ಟತನ ಬೇಕು

Sunil Jayaprakash's picture

ವಿಚಾರ ಭಾಳ ಗಂಭೀರ ಅದ ಅನ್ಸುತ್ತ. ಈ ಬಿಕ್ನಾಸಿ ಸುಳ್ನಿಂದ ಏನಾದ್ರು ಕೆಟ್ದಾತೇನಪ್ಪ ಮತ್ತಆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2007 - 5:24pm — ಸಂಗನಗೌಡ

Re: ದನಿಗೂಡು : ದಿಟತನದಿಂದಿರಲು ದಿಟ್ಟತನ ಬೇಕು

ಸಂಗನಗೌಡ's picture

ಹಾಂಗೇನಿಲ್ಲಾ ಸುನೀಲ್, ಸುಮ್ನ ತಲೆನೋವು ಬ್ಯಾಡಾ ಅಂತ...

 

------------------------------------------------------------- ನಡೆವವ ಬಿದ್ದಾನಲ್ಲದೇ, ನಿಂತವ ಬೀಳಲಾರ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2007 - 6:35pm — mahesha

ದಿಟ/ಹುಸಿ ಏಕಿದರ ಗೊಡವೆ!

mahesha's picture

ಸಂಗನ, ಸುನಿಲ

ನೋಡ್ರಿ ಹಿಂಗೆ ಹೇಳ್ತೀನಿ ಅಂತ ಅವಕ್ಕಾಗಬ್ಯಾಡಿ.

ಯಾವಾಗಲೂಊಊ ಸಾಯೋ ತನಕ ದಿಟ ನುಡಿಕೊಂಡು ಇರಕ್ಕೆ ಆಗಲ್ಲ.

ದಿಟ ಅನ್ನೊದೇ ಇಲ್ಲ.
"There is no such thing as truth. The only thing that is actually there is your 'logically' ascertained premise, which you call truth." ಅಂತ ಒಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ truth ಒಂದು ಅನಿಸಿಕೆ/ನಂಬಿಕೆ, fact ಅಲ್ಲ, "my favorate color is blue" ತರ.
ಹಂಗಾರೆ, ಸುಳ್ಳು ಅಂದ್ರೇನು ಅಂತ ನೀವ್ ನನ್ ಕೇಳಬೋದು, ಅಲ್ವರಾ!

ಸುಳ್ಳು ಅಂದರೆ ನಮಗೆ ಅನ್ನಿಸದ್ದು, ನಂಬುಗಿಲ್ಲದ್ದು, ಬೇರೆಯವರು ಹೇಳಿದ್ರು ನಾವು ನಂಬದೇ ಇರೋ ಅಂತದ್ದು!!

"ನಮಗೆ ಏನೇನು ಅನ್ಸಲ್ವೋಓ, ಯಾವ್ ಯಾವುದ್ರಲ್ಲಿ ನಂಬುಗೆ ಇಲ್ವೋ, ಅದೆಲ್ಲ ಸುಳ್ಳು ಅಂತ ಇರಬೇಕು."
.
.
.
ಆದ್ರೆ ಅದು ಆಟ್ ಸಲೀಸಾ???

ಹುಟ್ಟದಾಗಿಂದ ಈ ವರೆಗೂ ನಾವು ಏನೇನೋ ಸುಳ್ಳುಗಳಂನ ನೆಚ್ಚಕೊಂಡು, ಮೆಚ್ಚುಕೊಂಡು, ನಂಬಿಕೊಂಡು, ಅದರಂತೆ ನಡೆದು, ಓಡಿ, ತವುಳಿ, ಕಾಡಿ, ಕಾಡಿಸಿಕೊಂಡು, ತಲೆ ತಿಂದು, ತಲೆ ತಿಂನಿಸಿಕೊಂಡು, ಅದರಿಂದ ಏನೇನು ಬ್ರಾಂತುಗಳನ್ನು ತುಂಬಿಕೊಂಡೇ ಬದುಕ್ತಾ ಇದ್ವಿ, ಇದ್ದೀವಿ. ಇರ್ತೀವಿ. ಇವಂನೆಲ್ಲ ಒಮ್ಮೆಗೆ ಬಿಟ್‌ಬಿಟ್ರೆ. ನಮ್ ಬದುಕು ಸ್ಯಾನೆ ಬದಲಾಗಿ ಹೋಯ್ತದೆ. ನಮ್ಮ ಕೂಟೆ ಇರೋ ಏಟೋ ಮಂದಿ, ನಮ್ ಬಿಟ್ ಹೊಂಟೋಯ್ತರೆ.

ನಮ್ಗೆ ಅವರಂನೆಲ್ಲ ಬಿಟ್ ಇರಕ್ಕೆ, ನಾವು ಬದಲಾಗಕ್ಕೆ, ಮಾರ್ಪಡಕ್ಕೆ, ಆಟು ಸಲೀಸಾಗಿ ತಯಾರಿಲ್ಲ. ಅದ್ಯಾಕೆ ಹಲವು ಸುಳ್ಳಗಳಂನ ಸುಳ್ಳು ಅಂತ ಒಪ್ಪಕ್ಕೂ ತಯಾರಿಲ್ಲ.
.
.
.
ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬಿದ್ದೇ ಸಾಯೋ ತನಕ ಇರಬೇಕು ನಾವು.

ಆ ಆಲದ ಮರದ ಬೆಳಲು ಬಿಟ್ರೆ ಸುತ್‌ಮುತ್ಲ ಇರೋರು "ನಮ್ ಸಂಸ್ಕುರುತಿ, ಸಂಪ್ರದಾಯ ಈ ಟಟಟ ಮಗನಿಂದ ಎಕ್ಕುಟ್ಟು ಹೋಯ್ತು, ನಾವ್‌ ಎಕ್ಕುಟ್ ಹೋದ್ವಿ" ಅಂತ ಬಡಕೊಂಡು, ನಮ್ಮ ಜೀವ ತಿಂತಾರೆ.

ಹೊಸತು, ದಿಟ ಅಂತ ನುಡಿದ ಗೆಲಿಲಿಯೋಗೆ ಒಬ್ಬ ದೊಡ್ಡತಲೆ ಹಿಂಗೆ ಅಂದಿದ್ನಂತೆ
"Your invention has not value, because it doesn't have any historical precedent" Sad
.
.
.
.
ಏನೋ ದಿಟಗಾರನಾಗಿ ಆ ಸತಿಯ ಹರಿಚ್ಚಂದ್ರನಂಗೆ ಇರ್ತೀನಿ, ಅಂತೀರ.

ಹುಸಾರು
.ಹೆಂಡ್ರು ಮಕ್ಕಳಂನ ಉಪಾಸ ಕೆಡುವಿ, ಕೊನೆಗೆ ಮಾರಕ್ಕೂ ಬಂದೀತು.
.ಸುಡುಗಾಡ್ ಕಾಯ್ ಬೇಕಾದೀತು.
.ಕೊನೆಗೆ ಹಂಡ್ತಿ ಕೊರಳಂನೇ ಕಡೀಬೇಕಾಗೂ ಬಂದೀತು.

ಇದೆಲ್ಲ ಯಾವೋನಿಗೆ ಬೇಕು! Sad, ಸುಮ್ನೆ ಇರೋ ಹಂಗೆ ಇರಕ್ಕೆ ಏನ್ ದಾಡಿ ನಮ್ಗೆ...

ಇಲ್ದೇ ಇರೋ ಇರುವೇನ ಯಾಕೆ ಬುಟ್ಕೋಬೇಕು.!!!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2007 - 2:21am — gangadharg

Re: ದಿಟ/ಹುಸಿ ಏಕಿದರ ಗೊಡವೆ!

gangadharg's picture

ಓದೋರ್ ಮ್ಯಾಲೆ ಕರುಣೆ ಇಟ್ಟು ಬರೆಯೋ ಗುರುವೆ. ಚುಕ್ಕಿ ಇಡೋದ್ರ ಬದ್ಲು ಸ್ಪೇಸು ಬಿಡ್ಪಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2007 - 1:18pm — mahesha

Re: ದಿಟ/ಹುಸಿ ಏಕಿದರ ಗೊಡವೆ!

mahesha's picture

ಅಣ್ಣ, ಗಂಗದರ್‍ಗಣ್ಣ.

ನಾನ್ ಬರೆದಿದ್ದನ್ನ, ನಿಮಗೆ ಓದಕ್ಕೆ ಸ್ಯಾನೆ ತ್ರಾಸ ಆಗಿದ್ರೆ 'ಸಮಸಿ' ಬುಡಿ ನನ್ನ. .. ಏನೋ ತಿಳೀದೇ ತೆಪ್ಪಾಗಿ ವೋಯ್ತು.

ನಂಗೆ ಚುಕ್ಕಿ ಇಟ್ಟು ಹಂಗೆ ಬರೆಯಕ್ಕೆ ತುಂಬ ಇಸ್ಟ. ಅದಕ್ಕೆ ಹಂಗೆ ಬರ್ದೆ.

ನಂನಿ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2007 - 6:45am — ವೈಭವ

Re: ದಿಟ/ಹುಸಿ ಏಕಿದರ ಗೊಡವೆ!

ವೈಭವ's picture

ಸುಳ್ಳನ್ನು ಎರಡು ನೆಲೆಯಲ್ಲಿ ನೋಡಬೇಕಾಗುತ್ತೆ.

ವೈಯಕ್ತಿಕ ನೆಲೆ , ಸಾಮಾಜಿಕ ನೆಲೆ.

 ವ್ಯಕ್ತಿಗತವಾಗಿ ನಿಜ ಎಂದರೆ ಅತನು (ಳು) ನುಡಿದಂತೆ ನಡೆಯುವುದು. ನುಡಿಯೋದು ಒಂದು ನಡೆಯೋದು ಒಂದಾದ್ರೆ ಅದು ಸುಳ್ಳು ಮತ್ತು ಒಳ್ಳೇದು ಯಾವುದು ಕೆಟ್ಟದು(ಇವು ಅನುಭವದ ಮೇಲೆ ನಿಂತಿದೆ) ಯಾವುದು ಅಂತ ಅರಿವು ಬಂದಾದ ಮೇಲೂ ಅರಿವಿನಂತೆ ನಡೆಯದಿರುವುದು ದೊಡ್ಡ ಸುಳ್ಳು.(ಅಕ್ಕನ ವಚನ - ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು)

ಸಾಮಾಜಿಕ ನೆಲೆ( ಅಥವಾ ಒಂದು ದೇಶದ ನೆಲೆಯಲ್ಲಿ) ಸುಳ್ಳು ತುಂಬ ಕಾಂಪ್ಲೆಕ್ಸ್ ಆಗುತ್ತೆ. ಒಂದು ಧರ್ಮ ನಿಜ ಅಂತ ನಂಬಿರೋದು ಇನ್ನೊಬ್ಬರಿಗೆ ಸುಳ್ಳಾಗಿ ಕಾಣಬಹುದು. ಆಗ ನಾವು ತಾಳ್ಮೆಯಿಂದ ಸುಳ್ಳನ್ನು ಬಿಡಿಬಿಡಿಯಾಗಿ ನೋಡಿ ತರ್ಕಿಸಬೇಕಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2007 - 12:37pm — mahesha

Re: ದಿಟ/ಹುಸಿ ಏಕಿದರ ಗೊಡವೆ!

mahesha's picture

ವಯ್ಬವಣ್ಣ...

ನಿನ್ ಮಾತು ಸರಿಯಾಗೈತೆ.

ಆದರೆ ಮೊದಲು ನಾವು ಏನ್ ದಿಟ-ಸುಳ್ಳು ಅಂತ ಅರಿತುಕೊಬೇಕು ಅಲ್ವಾ. ಆಮ್ಯಾಕೆ ಊರು ಕೇರಿ ಉದ್ದಾರ ಮಾಡೋದು.!
ನಮ್ ತಲೆಯಾಗೇ ಏಟೊಂದು ಹುಸಿ ನಂಬುಗೆಗೊಳವೆ. ಅವಂನೆಲ್ಲ ಒಂದೊಂದಾಗಿ ನೋಡಿ, ಕಳೆ ಕಿ‌ತ್ ಹಂಗೆ ಕಿತ್ ಹಾಕ್ ಬೇಕು.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2007 - 2:19pm — ಸಂಗನಗೌಡ

Re: ದಿಟ/ಹುಸಿ ಏಕಿದರ ಗೊಡವೆ!

ಸಂಗನಗೌಡ's picture

ಈಗ್ ಬಾಳುಕೊಂಡ ಹೊತ್ತಿಲ್ಲಾ, ಸಂಜಿಕ್ ಇದರ್ ಬಗ್ಗೆ ಚಲೋತಂಗಿ ಏನರೆ ಬರೀತSನ್ರೀ ಗುರುಗಳೇ......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ + ಟಿಪ್ಪಣಿ
  • ದೇವರಿಗೊಂದು ಮನವಿ
  • ಆಶಯ ಗೆಳೆಯ/ಗೆಳತಿ ಯರಿಗೆ
  • ಜಾನಪದಶೈಲಿಯ ಗೀತೆ
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 554 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator