ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
http://anthro.palomar.edu/language/language_5.htm
ಮೇಲೆ ಕೊಟ್ಟಿರುವ ಎಳೆಯಲ್ಲಿ ಹಲವು ಅರಿಮೆಗಳಿವೆ.
ನುಡಿ ಮತ್ತು ಉಂಕು ತುಂಬ ಹತ್ತಿರದ ನಂಟಿದೆ ಎಂದು ಅವರು ಹೇಳುತ್ತಾರೆ.
ನೀವು --> ನಿಮ್ಮ ನುಡಿ --> 'ದಿಟ'
ಮಾದರಿ ೧: ಆಪ್ರಿಕಾದ ನೈಜಿರಿಯಾದಲ್ಲಿರುವ 'ಟಿವ್' ನುಡಿಯಲ್ಲಿ ಇರುವುದು ಮೂರೇ ಬಣ್ಣಗಳು.
ಮಾದರಿ ೨: ಆಸ್ಟ್ರೇಲಿಯದಲ್ಲಿರುವ 'ಗುಗು ತಿಮಿತಿರ್' ನುಡಿಯಲ್ಲಿ ಎಡ,ಬಲ (left,right) ಒರೆ/ಪದಗಳೇ ಇಲ್ಲವಂತೆ. ಅವರು ಇದರ ಬದಲು ಬಡಗಮೂಡಣ(north-east), ತೆಂಕಪಡುವಣ (south-west) ಎಂಬ absolute ಒರೆಗಳನ್ನೇ ಬಳಸುತ್ತಾರಂತೆ.
ಈ ರೀತಿಯ ಏಟೋಂದು ಸೋಜಿಗಗಳಿದಿವಿಯೋ ಏನೋ?
ನಮ್ಮ ಕನ್ನಡದಲ್ಲಿ ಇಂತ ಮೇಲ್ಮೆಗಳಿವಿಯೇ?

- ವೈಭವ ರವರ ಬ್ಲಾಗ್
- Login or register to post comments
- 333 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಕನ್ನಡದಲ್ಲಿ ಬೇಕಾದ ಅನ್ನಿತ್ತು ಇವೆ..
ಇಲ್ಲ, ಅಲ್ಲ.
ಮಾಡುವನು, ಮಾಡುವಳು, ಮಾಡುವಳು.
ಕುರಿತು, ಕುರಿತ
ಹಂಗಾಸೆ, ಹಿಂಗಾಸೆ
ಬಾರೋ, ಬಾರೇ, ಬಾ
ಇನ್ನೂ ಇವೆ.. ಹುಡುಕಿ
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಮಾಯ್ಸ ನನ್ನಿ..
ಬಾರಾ ಕೂಡ ಇದೆ... ಬೇಂದ್ರೆ ಹೇಳಿರುವ "ಕುಣಿಯೋಣು ಬಾರಾ".
ನನಗೆ "ಅಲ್ಲ,ಇಲ್ಲ" ಇದರ ಬಗ್ಗೆ ಹೆಮ್ಮೆ ಹೆಚ್ಚು.. ಬೇರೆ ಯಾವ ನುಡಿಗಳಲ್ಲಿ negation ಗೆ ಎರಡು ಒರೆಗಳಿಲ್ಲ ಅನ್ಸುತ್ತೆ.
ಮಾದರಿ:
೧) ಅವನು ಇವನಲ್ಲ ( ಅಲ್ಲ )
೨) ಅವನು ಅಲ್ಲಿಲ್ಲ (ಇಲ್ಲ)
ಇಂಗಲೀಸನಲ್ಲಿ ಬರೆದರೆ
೧) He is not this.
2) He is not there.
ಎರಡಕ್ಕೂ "not" ಯೇ.
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಅವನಲ್ಲ = it is not he.
ಅವನಿಲ್ಲ = he is not there.
ಹಾಗಲ್ಲ = it is not like that
ಹಾಗಿಲ್ಲ = it doesn't exist like that.
ಹಾವಲ್ಲ = it is not snake
ಹಾವಿಲ್ಲ = the snake doesn't exist
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಅಲ್ಲ, ಇಲ್ಲದ ಬಗ್ಗೆ ಹೆಮ್ಮೆ ಪಡಬೇಕಾದ್ದೇ.
ಅದು ಇಲ್ಲ - it is not there.
ಅದು ಅಲ್ಲ - it is not that.
ನ ಕಾರ ತೋರಿಸಲು ನಮ್ಮ ಕಡೆ ’ಇಲ್ಲ’ ಅಂತಾನೇ ಹೆಚ್ಚಾಗಿ ಬಳಕೆಯಲ್ಲಿದೆ. ತೆಂಕಣದ ಹಳ್ಳಿಯ ಕರ್‍ನಾಡಿಗರು ಅಸ್ಟೇ.
ಕೊಡಲ್ಲ - ಕೊಡುವದಿಲ್ಲ / ಕೊಡಾಕಿಲ್ಲ
ಹೋಗಲ್ಲ - ಹೋಗುವದಿಲ್ಲ / ಹೋಗಾಕಿಲ್ಲ
ಬರಲ್ಲ - ಬರುವದಿಲ್ಲ / ಬರಾಕಿಲ್ಲ
ಅಲ್ಲ ಅನ್ನುವದು ಅದು ಹಾಗೆ ಅಲ್ಲ, ಹೀಗೆ ಅನ್ನುವ ತಿಳಿವಲ್ಲಸ್ಟೇ ಬಳಕೆಯಲ್ಲಿದೆ. ಮಾದರಿಗೆ,
ಅದು ಬೋಗುಣಿಯಲ್ಲ, ಬುಟ್ಟಿ.
ನನ್ನ ಹೆಸರು ರಾಜು ಅಲ್ಲ.
ಅಂದರೆ ಅಲ್ಲ ಅಂಬುದನ್ನು ’ಕ್ರೀಯಾಪದ’(ಕೆಲಸದೊರೆ)ಗೆ ಹಚ್ಚುವದು ಸರಿಯೇ? ಆಡುಮಾತಲ್ಲಿ ಹಾಗೆ ಇಲ್ಲ. ನನ್ನ ಕೇಳಿಕೆ, ಬರಲ್ಲಾ,ಬರುವದಿಲ್ಲ ಈ ಎರಡರಲ್ಲಿ ಯಾವುದು ಸರಿ?? ಎರಡೂ ಸರಿ ಅಂತ ಹೇಳಬೇಡಿ.....
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಬರಲ್ಲ, ಹೋಗಲ್ಲ. ಇದು ಬರೀ ಮೈಸೂರು, ಬೆಂಗಳೂರಂತ ಹೊೞಲಿಗರ ಮಾತಲ್ಲಿ ಕಾಣುವುದು...
ಬರಲ್ಲ, ಬರೊಲ್ಲ, ಇವೆಲ್ಲ ಬರುವುದಿಲ್ಲ ಅಂನೋದರ ಒಂದು ರೂಪ ಅಂತಾರೆ.
ಆದ್ರೆ ಬರು+ಅಲ್ಲ = ಬರಲ್ಲ, ಹೋಗು+ಅಲ್ಲ = ಹೋಗಲ್ಲ, ಹೀಗೆ ತಕ್ಕೊ ಬೋದಾ ಗೊತ್ತಿಲ್ಲ.
ನಾವು ಬರಕ್ಕಿಲ್ಲ( ಬರಕ್ಕು = ಬರುವುದು + ಇಲ್ಲ ), ಹೋಕ್ಕಿಲ್ಲ/ಹೋಗಕ್ಕಿಲ್ಲ( ಹೋಕ್ಕು/ಹೋಗಕ್ಕು = ಹೋಗುವುದು, + ಇಲ್ಲ ), ಅಂತ ಕಾವೇರಿ-ಹೇಮಾವತಿ ಸೀಮೆಯೊರು ಹೇಳೊದು.
ಇಲ್ಲಿ ಬರುವ ಬರಕ್ಕು, ಹೋಕ್ಕು, ತಿನ್ನಕ್ಕು, ಮಾಡಕ್ಕು, ಇವು ಸರಿಯಾದ ರೂಪಗಳು, ಶಬ್ದಮಣಿದರ್ಪಣದಲ್ಲೂ ಇವುಗಳ ಬಳಕೆಯವೆ.
ಬರಲಿಕ್ಕಿಲ್ಲ ಇದು ಸರಿಯಿಲ್ಲ ಇದು ಹೇಗೆ ಅಂತ ಗೊತ್ತಿಲ್ಲ.
ಬರಲು+? ಬರಲಿಕ್ಕೆ ( ಇಲ್ಲಿ ಬರಲು = ಬರಕ್ಕೆ , ಆದರೆ ಬರಲಿಕ್ಕೆ ಅಂದ್ರೆ? )
ಇದು ಬರಲ್ಕೆ ಅಂತ ಇತ್ತಾ ಹಿಂದೆ?
ಈ ಬರಲಿಕ್ಕೆ ನಮ್ಮ ಕಡೆ ಉವರೂ ಬಳಸಲ್ಲ!!
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ನಾಲ್ಕನೆಯ ವಿಬಕತಿಯಲ್ಲಿ ಗೆ, ಇಗೆ, ಕೆ, ಇಕ್ಕೆ, ಅಕ್ಕೆ ಅನ್ನೋ ಪರುತೆಯ/ಪ್ರತ್ಯಯಗಳು ಇವೆಯಂತೆ
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಹೌದು..
ಆದ್ರೆ ವಿಬಕುತಿ ಹತ್ತೋದು ಹೆಸರೊರೆ/ನಾಮಪದಗಳಿಗೆ...
ಬರಲು, ಹೋಗಲು ಇವು ಹೆಸರೊರೆಗಳಲ್ಲ. ಇವು ಕೆಲಸದೊರೆಗಳ ರೂಪಗಳು!
ಬರಲಿಂದ, ಬರಲನ್ನು, ಬರಲಲ್ಲಿ ಅಂತ ಇಲ್ಲ ಅಲ್ವಾ!
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಇದೆ ರೀ
ನಾನು ಬರಲಿಂದ ಕಸ ಗುಡಿಸುತ್ತೇನೆ
ಬರಲನ್ನು ಮೂಲೆಯಲ್ಲಿ ಇಡು
ಹೊಸ ಬರಲಲ್ಲಿ ಗುಡಿಸಿದರೆ ಕಸವೇ ಹೆಚ್ಚಾಯಿತಲ್ಲ!
ಬರಲು= ಪರಕೆ = ಪೊರಕೆ
ಸ್ವಲ್ಪ ತಮಾಷೆ ಮಾಡೋಣ ಎನಿಸಿತು ಅಷ್ಟೇ! (ಇಲ್ಲಿ ಬರಲು ನಾಮಪದವಾಗಿ ಉಪಯೋಗವಾಗಿದೆ.)
ಹಾಗೇ ಮೊದಲ ಮತ್ತು ಮೂರನೇ ಸಾಲುಗಳನ್ನು ನೋಡಿ. ಬರಲಿಂದ ಮತ್ತು ಬರಲಲ್ಲಿ ಅನ್ನೋದನ್ನು ಒಂದರ ಬದಲು ಒಂದು ಉಪಯೋಗಿಸಬಹುದು. ಅದಕ್ಕೇ ಸೇಡಿಯಾಪು ಕೃಷ್ಣಭಟ್ಟರು ಕನ್ನಡಕ್ಕೆ ಪಂಚಮಿ ವಿಭಕ್ತಿಯ ತರಹ ತೃತೀಯೆಯೂ (ಕರ್ತೃ/ಕರಣ) ಹೊರಗಿನ ಪ್ರಭಾವ ಎಂದು ಹೇಳುತ್ತಾರೆ. ಸಪ್ತಮಿಯೇ ಈ ತೃತೀಯೆಗೂ ಮೂಲ ಅನ್ನುವುದು ಅವರ ಅಂಬೋಣ.
-ಹಂಸಾನಂದಿ
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ತುಸು ಬಿಡಿಸಿ ಅಣ್ಣ..
ಈ ದಪ್ಪ ತಲೆಗೆ ಇಳೀಲಿಲ್ಲ!
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
"ಅದಕ್ಕೇ ಸೇಡಿಯಾಪು ಕೃಷ್ಣಭಟ್ಟರು ಕನ್ನಡಕ್ಕೆ ಪಂಚಮಿ ವಿಭಕ್ತಿಯ ತರಹ ತೃತೀಯೆಯೂ (ಕರ್ತೃ/ಕರಣ) ಹೊರಗಿನ ಪ್ರಭಾವ ಎಂದು ಹೇಳುತ್ತಾರೆ. ಸಪ್ತಮಿಯೇ ಈ ತೃತೀಯೆಗೂ ಮೂಲ ಅನ್ನುವುದು ಅವರ ಅಂಬೋಣ.
"
ಹಂಸಾನಂದಿ ಹಾ!! ಹೊಳೆಯಿತು..
ಇದನ್ನು ಶಂಕರ ಭಟ್ಟರು ಚನ್ನಾಗಿ ಹೇಳಿದ್ದಾರೆ.
ಕನ್ನಡ ಇಂದ ಕರಣ ಅಲ್ಲ. ಕನ್ನಡದಲ್ಲಿ ಮನೆಯಿಂದ ಮನೆಗೆ, ನಲೆದಿಂದ ಗಾಳಿಗೆ, ಹೀಗೆ ಒಂದು ಜಾಗದಿಂದ ಮೊತ್ತೊಂದಕ್ಕೆ ಹೋಗುವುದನ್ನು ಹೇಳುವುದು..
ಹೊಳೆಯನ್ನು ಈಜಿದನು = ಹೊಳೆಯ ಈ ದಡದಿಂದ ಆ ದಡಕ್ಕೆ ಈಜಿದನು
ಹೊಳೆಯಿಂದ ಈಜಿದನು = ಹೊಳೆಯಿಂದ ದಡಕ್ಕೆ ಈಜಿದನು
ಹೊಳೆಗೆ ಈಜಿದನು = ದಡದಿಂದ ಹೊಳೆಗೆ ಈಜಿದನು
ಹೊಳೆಯಾಚೆ ಈಜಿದನು = ಹೊಳೆಯ ದೂರದ ದಡಕ್ಕೆ ಈಜಿದನು.
ಹೊಳೆಯಲ್ಲಿ ಈಜಿದನು = ಹೊಳೆಯೊಳಗೆ ಈಜಿದನು
ಇಲ್ಲಿ ನೋಡಿ ಕನ್ನಡ ವಿಬಕುತಿಗಳನ್ನು ಸರಿಯಾಗಿ ತಿಳಿಯಬಹುದು.