ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಇಂಡಿಯಾ ಅನ್ನುವ ಹೆಸರು ಬರುವುದಕ್ಕೆ ಸಿಂದು/ಇಂಡಸ್ ಹೊಳೆಯೇ ಓಸುಗರ/ಕಾರಣ ಇದೆ ಎಂದು ಎಲ್ಲರಿಗೂ ಗೊತ್ತಿರುವ ವಿಶ್ಯವೇ. ಆದರೆ ನನ್ನ ಕನ್ನಡದ ಅರಿಮೆ
ಇದು ಕನ್ನಡ ಒರೆಯಾಗಿರಲು ಸಾದ್ಯವೇ ಎಂದು ಉಂಕಿಸಿತು. ಆಗ ನನಗೆ ಹೊಳೆದದ್ದು ಹೀಗೆ:-
ಕನ್ನಡದ ಇಡಿ,ಬಿಡಿ ಎಂಬ ಒರೆಗಳಿವೆ. ಇಡಿ- whole, wholistic, ಬಿಡಿ- part ಎಂಬ ತಿಳಿವಿದೆ. ಆದರೆ ನಾವು 'ಇಡಿ'ಯನ್ನು
ಹಳೆಗನ್ನಡಯಿಸಿದಾಗ ಅತ್ವ ಹಳ್ಳಿಸುವಿಕೆ ಮಾಡಿದಾಗ ಅದು 'ಇಂಡಿ'ಯಾಗುತ್ತದೆ. ಹಾಗೆ 'ಇಡಿಯ' ಇಂಡಿಯಾ ಆಗಬುಹುದು.
ನಮ್ಮ ದೇಶ(ಬಾರತ) ಹಲವು ರಾಜ್ಯಗಳಿಂದಾದ ದೇಶ. ಹಾಗಾಗಿ ಇಡಿಯ/ಇಂಡಿಯ ಒಂದು whole/ಪೂರ್ಣ ಎಂಬ ತಿಳಿವನ್ನು ನೀಡುತ್ತದೆ ಹಾಗಗಿ ಅದು ತುಂಬ ಹೊಂದಿಕೆ ಕೂಡ ಆಗುತ್ತದೆ.
ಈಗಲೂ ಹಲವರ ಬಾಯಲ್ಲಿ ಈ ಮಾತು ನೀವು ಕೇಳಿರಬಹುದು :- "ಇಡಿಯ ದೇಶದಲ್ಲೇ ನಿಂತರ ಯಾರೂ ಇಲ್ಲ" , "ಇಡಿಯ ದೇಶದಲ್ಲೇ ನಮ್ಮ ಜೋಗ ಎತ್ತರದ ಜಲಪಾತ"

- ವೈಭವ ರವರ ಬ್ಲಾಗ್
- Login or register to post comments
- 494 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಅಲಲೆ, ಭಲೇ ಇದ್ದೀಯಪ್ಪಾ ವೈಭವ. ಸೂಪರ್ . "ಐ ಲವ್ ಮೈ ಇಂಡಿಯಾ" ಎಂಬ ಭಾವವನ್ನು "ಇಂಡಿಯಾಕ್ಕೆನ್ನೊಲವು" ಎಂದು ಹೇಳಬಹುದಲ್ಲವೇ ?
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಹೇಳಬಹುದು. ನನ್ನಿ
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಬಿಜಾಪುರ ಜಿಲ್ಲೆಯಲ್ಲಿ ’ಇಂಡಿ’ ಎಂಬ ಊರಿದೆ, ಅದು ತಾಲೂಕೂ ಹೌದು, ಈ ಹೆಸರಿಗೂ ’ಇಂಡಿಯ’ ಅಂಬುದಕ್ಕು ಏನು ನಂಟು ಅಂಬುದ ಉಂಕಿಸಬೇಕು.
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಸಂಗನಗೌಡರೆ, ನಾನೂ ನಮ್ಮ ನಾಡಿನ 'ಇಂಡಿ' ಬಗ್ಗೆ ಬರೀಬೇಕು ಅಂತಿದ್ದೆ. You beat me to it
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಸಂಗನ ಗಾಂಧಿಕೊಂದ ನಾಥೂರಾಮ ಗೋಡ್ಸೆ ಮನೆತನ ಇಲ್ಲಿಯದೆ ಅಂತೆ.
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಇಂಡಿ ಅಂದ್ರೆ ಎರಡು ಅಂತ ಅರಿತವಿದೆ.
ಇಂಡಿ ಅಂದ್ರೆ ಇಂದು ಅಂತ ಅರಿತವಿದೆ.
ಇನ್ನು ಇಂಡಿಯ ಇಡಿಯಾಗಿದ್ದು ಬಿರಿಟೀಸರಿಂದ ಅವರು ಕಂನಡದ ಹೆಸರನ್ನು ಇಟ್ಟವ್ರೆ ಅಂತ ಹೇಳಕ್ಕೆ ನಸು ಎಡರೇ!!
ಅಂದ್ರು.. ಇಡಿ <=> ಇಂಡಿ ಇರಬವುದು. ಆಗಕ್ಕು ಸಾಕು!
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
"....ಇನ್ನು ಇಂಡಿಯ ಇಡಿಯಾಗಿದ್ದು ಬಿರಿಟೀಸರಿಂದ ಅವರು ಕಂನಡದ ಹೆಸರನ್ನು ಇಟ್ಟವ್ರೆ ಅಂತ ಹೇಳಕ್ಕೆ ನಸು ಎಡರೇ!!..."
ಅಣ್ಣ ಮಾಯ್ಸ,
ಹೀಗೆ ನಾನು ಹೇಳಲಿಲ್ಲ.. ನಾನು ಎಲ್ಲವನ್ನೂ ಕನ್ನಡದ ಕಣ್ಣಿನಿಂದ ನೋಡಬಹುದು ಎಂದು ತೋರಿಸಲು ಬರೆದದ್ದು. ಇದೇ ಓಸುಗರ ಎಂದು ನಿಕ್ಕುವಾಗಿ ಹೇಳಿಲ್ಲ. ನಾವು ಇಂಡಿಯ ಯಾವುದೋ ಇಂಗಲೀಸ್ ಹೆಸರು ಅನ್ನುಕೊಳ್ಳುವುದಕ್ಕಿಂತ ಅದು ನಮ್ಮ ಕನ್ನಡದ್ದೆ ಅಂದುಕೊಳ್ಳುವುದರಿಂದ(ದಿಟ ಬೇರೇನೆ ಇರಬಹುದು) ನನಗೆ( ನನ್ನಂತವರಿಗೆ) ಹೆಚ್ಚು ನಲಿವಾಗುತ್ತದೆ.
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ನೀವ್ ಹೇಳಿದ್ದನ್ನೇ ನಾನು
ಅದು "ಹಾಗೆ ಆಗಕ್ಕು ಸಾಕು" ಅಂದ್ರೆ "ಹಾಗೆ ಇರಲೂ ಬಹುದು" ಅಂತ ಹೇಳ್ದೆ!
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಸುಮ್ಮನೆ ಅದಕ್ಕೆ ಇದಕ್ಕೆ ಥಳುಕು ಹಾಕಿ ಹೋಲಿಕೆ ಮಾಡಿ ಇಂಡಿಯಾ ಅನ್ನೋ ಪದಾ ನ ಯಾಕೆ ನಮ್ಮದನ್ನಾಗಿ ಮಾಡುಕೋಬೇಕು.
ಭಾರತ ಅಂತ ಕರಿಯೋಕೆ ಸಂಕೋಚಾನಾ?!! ನಾಚಿಕೆನಾ?!!
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಇಲ್ಲಿ ಯಾವ ತಳಕು ಇಲ್ಲ . ಇದು ನಮ್ಮ ಆಡುನುಡಿಯಲ್ಲಿರುವ ಪದವೇ(ಇಡಿಯ/ಇಂಡಿಯ).
ಮತ್ತು ನಮ್ಮ ದೇಸದಲ್ಲಿ ಭಾರತಕ್ಕಿಂತ 'ಇಂಡಿಯ' ಒರೆಯೇ ಹೆಚ್ಚು ಬಳಸುವುದು.
ನಮ್ಮ ಪಾಸ್ಪೋರ್ಟ್, "ಸಂವಿದಾನ", ಆಟದ ತಂಡಗಳು ಮತ್ತು ಸಿನಿಮಾಗಳಲ್ಲು( ಚಕ್ ದೆ ಇಂಡಿಯ) ಬರೀ 'ಇಂಡಿಯ' ಒರೆಯ ಬಳಕೆಯೇ ಹೆಚ್ಚು.
ನೀವು ಬೇರೆ ದೇಸಗಳಿಗೆ ಹೋದಾಗ ಇಂಡಿಯ ಅಂದ್ರೇನೆ ಅವರಿಗೆ ತಿಳಿಯುವುದು. 'ಭಾರತ' ಅಂದ್ರೆ ಯಾರಿಗೂ ಗೊತ್ತಾಗಲ್ಲ.