ಕಾಡುತ್ತಿರುವ ಹಾಡು
೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು.
ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು.
http://www.kannadaaudio.com/Songs/Bhaavageethe/
Daivatha-C.Ashwath/Naanalida.ram
೨) ಹೇಮಂತ್ ಹಾಡಿರುವ ಕಲ್ಲರಳಿ ಹೂವಾಗಿ - ಕಲ್ಲರಳಿ ಹೂವಾಗಿ ಸಿನಿಮಾದಿಂದ.
http://www.kannadaaudio.com/Songs/Moviewise/
K/KallaraliHoovaagi/Kallarali.ram

- ಸಂಗನಗೌಡ ರವರ ಬ್ಲಾಗ್
- Login or register to post comments
- 687 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ದನಿಗೂಡು: ಕಾಡುತ್ತಿರುವ ಹಾಡು
ನನ್ನನ್ನು ಕಾಡುವ ಹಾಡು. ಹಾಗೆ ನೋಡಿದರೆ ಎಷ್ಟೋ ಹಾಡುಗಳು ಇಷ್ಟವಾಗುತ್ತವೆ. ಕೆಲವೊಂದು ಛೀ ಥೂ ಎಂದು ಉಗಿಯುವ ಮನಸ್ಸು ಬರುತ್ತದೆ. ಆದರೆ ಕಾಡುವ ಹಾಡುಗಳು ಇಷ್ಟವಾಗುವ ಹಾಡುಗಳಿಗಿಂತ ಕಡಿಮೆಯಿರುತ್ತವೆ.
ನೋಡಿ, ನನ್ನನ್ನು ಒಂದು ಹಾಡು ಅತಿಯಾಗಿ ಕಾಡಿದೆ. ಆದರೆ ವಿಪರ್ಯಾಸವೆಂದರೆ ಆ ಹಾಡು ಎಲ್ಲಿಯೂ ಸಿಗುತ್ತಿಲ್ಲ. ಬಹಳ ವರ್ಷಗಳ ಹಿಂದೆ, ಶಿವರಾಜ್ ಕುಮಾರ್ ಅಭಿನಯದ ಚಿರಬಾಂಧವ್ಯ ಅಂತ ಸಿನಿಮಾ ಬಂದಿತ್ತು. ಅದರಲ್ಲಿ ಬಾನಿಗೂ, ಭೂಮಿಗೂ ಬಿಡಸದ ಚಿರಬಾಂಧವ್ಯ ಎಂಬ ಹಾಡಿದೆ. ನಿಮಗಾರಿಗಾದರು ಸಿಕ್ಕದರೆ ಇಲ್ಲಿ ಹಾಕಿರಿ.
Re: ಕಾಡುತ್ತಿರುವ ಹಾಡು
ನಾನಳಿದ ಮೇಲೆನ್ನ ಮರೆಯುವೆಯ ನೀನು?
ನಿನ್ನ ಹ್ರುದಯವು ಪರರ ವಶವಾಗದೇನು?
ಮರೆತು ಬಿಡು, ಮರೆತು ಬಿಡು,
ನೀ ಮರೆತೊಡೇನು?
ನಾ ಮರೆಯೆ, ನಾ ಮರೆಯೆ,
ನಾ ನಿನ್ನ ಮರೆಯೆ.
ಮರೆಯುವೆಯ ನಾತೋರಿದ ಒಲವಿನ ಪಿಂಪ?
ಮರೆಯುವೆಯ ನಾನಿತ್ತ ಚುಂಬನಗಳಿಂಪ?
ಮರೆತು ಬಿಡು, ಮರೆತು ಬಿಡು,
ನೀ ಮರೆತೊಡೇನು?
ನಾ ಮರೆಯೆ, ನಾ ಮರೆಯೆ,
ನಾ ನಿನ್ನ ಮರೆಯೆ.
ಸೆರೆಗೊಳ್ಳುವದು ನಿನ್ನ ಬೇರೊಂದು ಹ್ರುದಯ,
ಇನಿಯ ನಿನಗಾಗುವದು ಹೊಸಹರುಷದುದಯ,
ಆಗೆನ್ನ ನೆನೆಯದಿರು,
ಮರೆತುಬಿಡು ನೀನು,
ನಾ ಮರೆಯೆ ನಾ ಮರೆಯೆ,
ನಾ ನಿನ್ನ ಮರೆಯೆ.
ಕೋಗಿಲೆಯ ಕೂಗೆನ್ನ ನೆನಪ ತರಬಹುದು,
ಬೀಸುತಿಹ ಕಂಬೆಲರು ನೆನಪ ತರಬಹುದು,
ಹೊಸಬಳನು ನೋಡೆನ್ನ,
ಮರೆತು ಬಿಡು ನೀನು,
ನಾ ಮರೆಯೆ ನಾ ಮರೆಯೆ,
ನಾ ನಿನ್ನ ಮರೆಯೆ.
ನಾನಳಿದ ಮೇಲೆನ್ನ ಮರೆಯುವೆಯ ನೀನು?
ನಿನ್ನ ಹ್ರುದಯವು ಪರರ ವಶವಾಗದೇನು?
ಮರೆತು ಬಿಡು, ಮರೆತು ಬಿಡು,
ನೀ ಮರೆತೊಡೇನು?
ನಾ ಮರೆಯೆ, ನಾ ಮರೆಯೆ,
ನಾ ನಿನ್ನ ಮರೆಯೆ.
Re: ಕಾಡುತ್ತಿರುವ ಹಾಡು
ಭಲೇ
ಮತ್ತೆ ಕಾಡತೊಡಗಿತೊಂದು ಹಾಡು....
ಎರಡು ದಿನದಿಂದ ಬಿಡದೇ ಮತ್ತೆ ಮತ್ತೆ ಕೇಳುತ್ತಿದ್ದೇನೆ, ಎಷ್ಟು ಕೇಳಿದರೂ ಸಾಲದು. ಚಳಿಗಾಲ ಮುಗಿದು ಇನ್ನೇನು ಬೇಸಿಗೆ
ಮೊದಲಾಗುವ ಈ ಹೊತ್ತಲ್ಲೂ ಮನಸ್ ತುಂಬ ಜಿಟಿ ಜಿಟಿ ಮಳೆಯ ಸಪ್ಪಳ. ಈ ಹಾಡುಗಳೇಕ್ ಹಿಂಗ್ ಕಾಡುತಾವೋ?
ಅದೇ 'ಮುಂಗಾರು ಮಳೆ' ಯ 'ಅನಿಸುತಿದೆ' ಹಾಡು.