Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಶ್ಯಾಮ ಕಶ್ಯಪ ರವರ ಬ್ಲಾಗ್

ಶ್ಯಾಮ ಕಶ್ಯಪ

ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.

ಮೈಸೂರಿನ ಬಹುರೂಪಿ: Culture - Agriculture

December 20, 2006 - 4:42pm — ಶ್ಯಾಮ ಕಶ್ಯಪ

ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದದ್ದು ವಿಚಾರಸಂಕಿರಣಕ್ಕೆ ವಿಶೇಷ ಮೆರಗು ತಂದಿತ್ತು. ಸಮ್ಮೇಳನದಲ್ಲಿ ಬಹಳಷ್ಟು ರಸವತ್ತಾದ ಸಂಗತಿಗಳು ಕಂಡುಬಂತು.ಆದರೆ ಹಲವು ಕಾರಣಗಳಿಂದಾಗಿ ಕೆಲವು ಸೂಕ್ಷ್ಮವಿಚಾರಗಳು ಚರ್ಚೆಗೆ ಬರಲಿಲ್ಲ. ಅದೀನೇ ಇರಲಿ, ಇದು ಸಮ್ಮೇಳನದ ನಂತರ ಮನಸ್ಸಿಗೆ ಒಂದು ಯೋಚನೆ.

ವಿ.ಸೂ: ಇಲ್ಲಿ ರೈತ ಅಂದರೆ ಅಷ್ಟೋ ಇಷ್ಟೋ ಓದಿರುವ, ತಕ್ಕ ಮಟ್ಟಿಗೆ ಅನುಕೂಲತೆಗಳನ್ನು ಪಡೆದುಕೊಂಡು, ರೈತ ಶಿಬಿರ, ರೈತ ಸಂಘಟನೆ ಮುಂತಾದವುಗಳಲ್ಲಿ ಪಾಲ್ಗೊಳ್ಳುವಂತಹಾ ರೈತ. ಕಡಿಮೆ ಭೂಮಿಯಿದ್ದು (ಕೆಲವೊಮ್ಮೆ ಭೂಮಿಯೂ ಇಲ್ಲದೇ), ಓದು ಬರಹ ತಿಳಿಯದೇ, ಗ್ರಾಮ ಕುಗ್ರಾಮಗಳಲ್ಲಿ ಕಳೆದುಹೋಗಿರುವ, ವಿನಾಕಾರಣ ಸಂಕಷ್ಟವನ್ನನುಭವಿಸುತ್ತಿರುವವರು ಈ ಮೇಲಿನ ಪಂಗಡವರಿಗಿಂತ ಸಂಖ್ಯೆಯಲ್ಲಿ ಹೆಚ್ಚೇ. ಅವರಿಗೆ ಸ್ವಂತದ ಧ್ವನಿ ಹೋಗಲಿ, ಸಹಾಯ ಯಾಚಿಸಲೂ ಧ್ವನಿಯಿಲ್ಲ. ದುರಾದೃಷ್ಟವಶಾತ್ ಈ ಲೇಖನ ಅವರ ಬಗ್ಗೆಯಲ್ಲ. ಆದರೆ ಅವರ ಜೀವನವನ್ನು ನೇರವಾಗಿ ಬದಲಾಯಿಸುವ ಶಕ್ತಿಯುಳ್ಳ ಮೊದಲಿನ ಅಲ್ಪಸಂಖ್ಯಾತ ರೈತರ ಬಗ್ಗೆ.

ರೈತನ ತೊಂದರೆಗಳಿಗೆ, ಇಂದಿಗೆ ಲಭ್ಯವಿರುವ ಉತ್ಪಾದನಾ ತಂತ್ರಜ್ಞಾನಗಳಲ್ಲಿ ನೈಸರ್ಗಿಕ ಕೃಷಿಯು ಒಂದು ಉತ್ತರವಾಗಿದೆ ಅಂತ ಹೇಳಬಹುದು. ಇದಿನ್ನೂ ಸಮರ್ಪಕವಾಗಬೇಕಾದರೆ ಬಳಕೆದಾರರು ಕೂಡ ತಮ್ಮ ಖರೀದಿಸುವಿಕೆಯ ಕ್ರಮಗಳನ್ನು, ನಿಸರ್ಗ ಹಾಗು ರೈತರ ಒಳಿತಿನ ದೃಷ್ಟಿಯಿಂದ ಬದಲಾಯಿಸಿಕೊಳ್ಳಬೇಕಾಗುತ್ತದೆ. ಪಾಳೇಕರ್ ಅಭಿಪ್ರಾಯದಂತೆ ಅವರ ಆಯ್ಕೆಗಳು
೧. ಜಾಗತೀಕರಣದ ವಿರುದ್ಧವಾಗಿರಬೇಕು,
೨. ಸಾಮಜಿಕ ಕಳಕಳಿಯಿಂದ ಕೂಡಿರಬೇಕು
೩. ಜಾಗತೀಕರಣ, ಉದಾರೀಕರಣ ಹಾಗು ಖಾಸಗೀಕರಣಗಳ ವಿರುದ್ಧವಾಗಿ ಪರ್ಯಾಯ ವ್ಯವಸ್ಥೆಯನ್ನು ಬೆಳಸಬೇಕು.

ಆದರೆ ನಾವು ಈ ಮಾನಸಿಕ ಬದಲಾವಣೆಯನ್ನು ಕೇವಲ ಬಳಕೆದಾರರಿಂದ ಆಶಿಸುವುದು ತಪ್ಪಾಗುತ್ತದೆ ಕೃಷಿಯಲ್ಲಿ ಪಾಳೇಕರ್ ಅವರ ವಿಧಾನ, ಫುಕುವೋಕ ವಿಧಾನ, ಸಾವಯವ, ಸುಸ್ಥಿರ ಇವ್ಯಾವೆ ವಿಧಾನಗಳಾಗಲಿ ಅಥವ ಪರಿಸ್ಥಿತಿಗೆ ತಕ್ಕ ಇವೆಲ್ಲದರ ಮಿಶ್ರಿತ ವಿಧಾನವಾಗಲೀ ಯಶಸ್ಸುಗಳಿಸಲು ಇಂದಿನ ಮಟ್ಟಿಗೆ ರೈತನ ಮನಸ್ಸಿನಲ್ಲೂ ಹಲವು ಬದಲಾವಣೆಗಳಾಗಬೇಕಿದೆ.

“ನನಗೂ ದೊಡ್ಡ ಮನೆಯ ಕಟ್ಟಿಸುವ ಆಸೆಯಿದೆ, ದೊಡ್ಡ ಕಾರಿನಲ್ಲಿ ಓಡಾಡುವ ಬಯಕೆಯಿದೆ. ಹಾಗಾಗಿ ಸರ್ಕಾರದಿಂದ, ಬುದ್ಧಿಜೀವಿಗಳಿಂದ, ಬಳಕೆದಾರರಿಂದ ತೆರೆದ ಮನ, ನೆರವಿನ ಅಗತ್ಯವಿದೆ” ಎಂದು ಬಹಳ logical ಆಗಿ, sensible ಆಗಿ ಹೇಳುವ ರೈತ ಅಷ್ಟೇ ಮುಕ್ತವಾಗಿ ರೈತನಾಗಿ ಪ್ರಕೃತಿ ಹಾಗು ದೇಶದ ಪ್ರತಿ ತನ್ನ ಜವಾಬ್ದಾರಿಯೇನು, ಅವುಗಳನ್ನು ನಿಭಾಯಿಸಲು ಅವನ ವೈಯುಕ್ತಿಕ ಯೋಜನೆಗಳೇನು ಎಂಬುದರ ವಿಚಾರ ಬಂದಾಗ ನಿಸ್ಸಹಾಯಕನಾಗುತ್ತಾನೆ. ನಾನೊಬ್ಬ ರೈತ ನನಗೇನು ಬುದ್ಧಿಯಿದೆ ನಾನೇನು ಮಾಡಬಲ್ಲೆ ಎಂದು ನಿಟ್ಟುಸಿರು ಬಿಡುತ್ತಾನೆ.

ಹಾಗೆಯೇ ಕಂಡ ಕಂಡ ಬೆಳೆಗಳನ್ನು ಬೆಳೆಯುವಾಗ ಯಾರ ಸಲಹೆಯನ್ನೂ ಪಡೆಯದೇ ಬೆಳೆದು, ತೊಂದರೆಯಾದಾಗ ಸರ್ಕಾರ ರೈತನನ್ನು ಮರೆತಿದೆ, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಬೆಳೆ ನಾಶವಾಗುತ್ತಿದೆ, ಕೀಟಭಾದೆ ಮಿತಿಮೀರಿದೆ, ಸರ್ಕಾರ MSP ಹೆಚ್ಚಿಸಿ ಬೆಳೆ ಖರೀದಿಸಲಿ, ಸಾಲ ಮನ್ನ ಮಾಡಲಿ ಎಂದು pressure ತರ್ತಾರೆ. Populist agenda ಹಿಡ್ಕಂಡು ಜಗ್ಗಾಡುವ ರಾಜ್ಯ ಸರ್ಕಾರ ಇದಕ್ಕೆ ಪುಸುಕ್ಕನೆ ಮಣಿಯುತ್ತದೆ.

ಬೆಳೆ ಹಾಕಕ್ಕಿಂತ ಮುಂಚೆ ಈ ಸಲ ನಮ್ಮ ದೇಶದಲ್ಲಿ ಅಕ್ಕಿ ಉತ್ಪಾದನೆ ಸಾಕಾಗತ್ತ? ಈರುಳ್ಳಿ ಜಾಸ್ತಿ ಬೆಳೆದರೆ ಪ್ರತಿಸಲದ ತರಹ ಕೈಸುಟ್ಟ್ಕೊಳೋ ಪರಿಸ್ಥಿತಿ ಬರಬಾರದು, ಯಾವ ಬೆಳೆ ನಮ್ಮ ಸೀಮೆಗೆ ಸೂಕ್ತ, ಯಾವುದರಲ್ಲಿ ಪೋಷಕಾಂಶ ಹೆಚ್ಚು ಹೀಗೆ ಜವಾಬ್ದಾರಿಯಿಂದ ಯೋಚಿಸುವ ಬದಲು ವೆನಿಲ್ಲಾಗೆ ಬೆಲೆಯಿದೆ, ಶುಂಠಿಗೆ ಬೆಲೆಯಿದೆ ಅಂತ ಯಾರ ಬಗ್ಗೆಯೂ ಯೋಚಿಸದೇ ನಿರ್ಧರಿಸುವವ ರೈತ, ಮುಗ್ಧನೇ ಅಶಕ್ತನೇ ಅಥವ ಕೇವಲ ಸ್ವಾರ್ಥಿಯೇ ಅನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಇಷ್ಟೇ ಅಲ್ಲ, ಗ್ಯಾಟ್ ವಿರುದ್ಧ, ಟ್ರಿಪ್ಸ್ ವಿರುದ್ಧ ಮುಕ್ತ ಮಾರುಕಟ್ಟೆ ವಿರುದ್ಧ ಸಮರ ಸಾರುವುದು (ಅದು ಸರಿಯೇ), ವಿದೇಶಿ ಕಂಪನಿಗಳ ಸಹಯೋಗದಿಂದ ತಯಾರಿಸಿದ ಗೊಬ್ಬರ, ಬೀಜ ಕ್ರಿಮಿನಾಶಕಗಳನ್ನು ಕಮಕ್-ಕಿಮಕ್ ಅನ್ನದೇ ಕೊಂಡು ತರುವುದು ರೈತನ ಹಿಪಾಕ್ರಿಸಿಯಲ್ಲದೇ ಮತ್ತೇನು?

ಹಾಗೆ ನೋಡಿದರೆ, ಈಗಲೂ ಕೂಡ, ಪಾಳೇಕರ್ ವಿಧಾನವನ್ನೋ ಅಥವ ಮತ್ತೊಂದು ವಿಧಾನವನ್ನೇನು ಸರ್ಕಾರದವರಾಗಲೀ ಖಾಸಗೀ ಕಂಪನಿಗಳಾಗಲಿ ಬಂದು ಮಾರಿದ್ದಲ್ಲ, ಹೇಳಿಕೊಟ್ಟಿದ್ದಲ್ಲ, ರೈತನೇ ಇವುಗಳನ್ನು ಹುಡುಕಿಕೊಂಡು ಹೋಗಿ ಅವುಗಳ ಯಶಸ್ಸನ್ನು ನೋಡಿ ಅಳವಡಿಸಿಕೊಂಡದ್ದು. ಮನಸ್ಸು ಮಾಡಿದರೆ ತನ್ನ ಕಷ್ಟಗಳನ್ನು ತಾನಾಗಿಯೇ ನಿವಾರಿಸಿಕೊಳ್ಳಬಹುದೆಂದು ರೈತ ಇಲ್ಲಿ ತೋರಿಸಿಕೊಟ್ಟಿದ್ದಾನೆ.

ಆದರೆ ತನ್ನ ಕೆಲಸವನ್ನು ಬೇರೆಯವರ್ಯಾರಾದರೂ ಮಾಡಲಿ, ಕಾರ್ಖಾನೆಗಳಲ್ಲಿ ಅಲ್ಲಿ ಗುಂಡಿ ಒತ್ತಿ ಇಲ್ಲಿ ಉತ್ಪನ್ನಗಳನ್ನು ತೆಗೆದಂತೆ ಕೃಷಿಯಿರಬೇಕು, ಮುಂದೆ ತೊಂದರೆಯಾದರೆ, ಇವ ರೈತನೆಂದು ಮರ್ಯಾದೆ ಕೊಟ್ಟು ಸರ್ಕಾರದವರೂ ಮತ್ತಿನ್ಯಾರೋ ನೋಡಿಕೊಳ್ಳಬೇಕೆಂದು ಆಶಿಸುವವರು ಹೆಚ್ಚು ಮಂದಿಯೆನಿಸುತ್ತದೆ.

ಸರ್ಕಾರ, ನಗರಗಳ ಶ್ರೀಮಂತ ಜನರು ರೈತರನ್ನು ಕಡೆಗಾಣಿಸಿದ್ದಾರೆ ನಿಜ. ಸರ್ಕಾರದ ಕೃಷಿ ನೀತಿಗಳಿಂದ ಹಾಗು ಇತರೆ ಉದ್ಯಮಗಳ ಪ್ರೋತ್ಸಾಹದಿಂದ ರೈತರಿಗೆ ನೇರವಾಗಿಯೂ ಹಾಗು ಪರೋಕ್ಷವಾಗಿಯೂ ಅನ್ಯಾಯವಾಗಿದೆ ನಿಜ, ಸರ್ಕಾರದ ಧೋರಣೆಗಳಿಂದಾಗುವ ಹಾನಿಗಳನ್ನು ಮಾಧ್ಯಮಗಳು ಸಮರ್ಪಕವಾಗಿ ಇತ್ತಿಹಿಡಿದಿವೆ, ಇನ್ನೂ ಚೆನ್ನಾಗಿ ಆ ನೀತಿಗಳ ಪ್ರತಿಕೂಲತೆಗಳನ್ನು ಪರಿಶೀಲಿಸಬಹುದು, ಆದರೆ ರೈತರೇನು ದೋಷಮುಕ್ತರಲ್ಲ ಅಂತ ನನ್ನ ಬಲವಾದ ಅನಿಸಿಕೆ. ಜನಸಾಮಾನ್ಯರಿಗೆ ಮತ್ತು ರೈತರಿಗೆ, ರೈತನ ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಆಗಿಯೇ ಇಲ್ಲ. ಸುಮ್ಮನೆ ರೈತನನ್ನು ಕನಿಕರದಿಂದ ನೋಡಿದರೆ ಚಪ್ಪಾಳೆ ಗಿಟ್ಟಿಸಬಹುದೇ ವಿನಃ ರೈತನಿಗಾಗಲೀ ಪರಿಸರ ಸಂರಕ್ಷಣೆಗಾಗಲಿ ಅಥವ ಶ್ರೀಸಾಮಾನ್ಯನಿಗಾಗಲೀ ಒಂದು ಸುಸ್ಥಿರ ದಾರಿ ತೋರಿದಂತಾಗುವುದಿಲ್ಲ. ತಲೆಮಾರು ಹಿಂದಿನ ಹಸಿರುಕ್ರಾಂತಿಯ ತೊಂದರೆಗಳನ್ನು ಈಗ ನಾವು ಅನುಭವಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಹೀಗಿರುವ ಸಂದರ್ಭದಲ್ಲಿ ಮಾತೆತ್ತಿದರೆ ಮುಷ್ಕರ, ಜಾಥ ಎಂದು ಜನಜೀವನ ಅಸ್ತವ್ಯಸ್ಥ ಮಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ.

Ornamental seperator
  • ಶ್ಯಾಮ ಕಶ್ಯಪ ರವರ ಬ್ಲಾಗ್
  • Login or register to post comments
  • 600 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 20, 2006 - 10:33pm — kannadiga_1956

Re: ಮೈಸೂರಿನ ಬಹುರೂಪಿ: Culture - Agriculture

kannadiga_1956's picture

ಶ್ಯಾಮ್ ಅವ್ರೆ, ತುಂಬಾ ಚೆನ್ನಾಗ್ ಹೇಳಿದಿರ.

ನಮ್ಮಲ್ಲಿ ಈಗ ಏನಾಗಿದೆ ಅಂದ್ರೆ ಎಲ್ಲದ್ರಲ್ಲೂ Reservationನು, Sentimentಉ. ಸ್ವಲ್ಪ ದಿನದ್ ಹಿಂದೆ, ಚಲನಚಿತ್ರದ ನಾಯಕಿ ಪ್ರೇಮ ಯಾವುದೋ ತೆಲುಗು ಹಾಲಿನ ಬ್ರಾಂಡ್ಗೆ ಜಾಹಿರಾತು ಕೊಟ್ಳು ಅಂತ, ರೈತ್ರೆಲ್ಲಾ ದೊಡ್ ರಂಪ ಮಾಡಿದ್ರು. ದುರಾದ್ರುಷ್ಟ ಅಂದ್ರೆ ಪತ್ರಿಕೆಅವ್ರೂ ಕೂಡ ರೈತ್ರ ಪರ ಮಾತಾಡಿದ್ದು. ಜಾಹಿರಾತು ಕೊಡೋಕ್ಕೆ, ಪ್ರೇಮಗೆ ಹಕ್ಕಿದೆ. ನಮ್ಮ "ನಂದಿನಿ" ಬ್ರಾಂಡ್ ಹಾಲು ನಿಜವಾಗ್ಲು ಉಳಿಬೇಕಂದ್ರೆ, ಅದರ Quality Improve ಮಾಡ್ಲಿ, ಇವರೂ ಜಾಹಿರಾತ್ ಕೊಡ್ಲಿ. ಅದನ್ನ ಬಿಟ್ಟು, ಕನ್ನಡದ sentiment ತೋರ್ಸಿ, ವ್ಯವಹಾರ ಮಾಡೊದೆ ? ಈ ತರ ವ್ಯವಹಾರ ಮಾಡುದ್ರೆ ಎಷ್ಟು ದಿನ ನೆಡೆಯುತ್ತೆ ಈಗಿನ್ ಕಾಲ್ದಲ್ಲಿ ? ನಮ್ಮ ಕನ್ನಡ ಸಿನಿಮಾದವ್ರೂ ಅದೇ ತರ , ಒಳ್ಳೆ Quality ಸಿನಿಮಾ ತೆಗೆಯೊದ್ ಬಿಟ್ಟು, ಬರೀ sentimental ಜಾಹಿರಾತ್ ಕೊಡೊದು - ಕನ್ನಡ ಕಾಪಾಡಲು ಸಿನಿಮಾಗಲನ್ನು ನೋಡಿ ಅಂತ. ಸರ್ಕಾರದ ಹುದ್ದೆಗಳ ಬರ್ತಿಲ್ಲೂ ಕೂಡ, ಬರಿ ಜಾತಿ sentimentಉ. ಕನಿಷ್ಟ ಪಕ್ಷ, ತುಂಬಾ ಜವಾಬ್ದಾರಿ ಇರೋ IAS, IPS ಈ ತರ ಹುದ್ದೆಗಾದ್ರೂ ಮುಲಾಜ್ ಕೊಡೊಲ್ಲ.

ನಮ್ಮ Officeಅಲ್ಲಿ ಒಬ್ರು ಹೆಳ್ತಾಯಿದ್ರು. "All it takes is one good government". 'ಒಂದು' ಒಳ್ಳೆ ಸರ್ಕಾರ ಸಾಕು, ಎಲ್ಲಾ ಜವಾಬ್ದಾರಿ ಹುದ್ದೆಗಳ್ಗೆ ಶಿಸ್ತಾಗಿರೋ, ಪಲಿತಾಂಶ ತೆಗೆಯೋ ಆಫೀಸರ್ಗಳನ್ನ ಹಾಕಿ, ಅವ್ರಿಗೆ ತಕ್ಕ ಸಹಕಾರ ಕೊಟ್ರೆ, ಎಲ್ಲಾ ಅಲ್ದಿದ್ರೂ ಬಹಳಶ್ಟು ತೊಂದರೆಗಳು Solve ಅಗತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಬೀಜ ಮಸೂದೆ," ರೈತರ ಹಕ್ಕಿಗೆ ಮುಳುವಾಗಿದೆಯೇ?
  • ರೈತ ಮತ್ತು ಅವನ ಸಮಸ್ಯೆಗಳು
  • ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್
  • ಗೋ ಸಮ್ಮೇಳನ
  • ರೈತರ ಆತ್ಮಹತ್ಯೆ
Syndicate content

ಲೇಖಕರು

ಶ್ಯಾಮ ಕಶ್ಯಪ's picture

ಪೂರ್ಣ ಹೆಸರು
ಶ್ಯಾಮ ಕಶ್ಯಪ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator