ಲೇಸು ಶುನಕದ ಜನ್ಮ
ಧೀ ಶಕ್ತಿಯನು ನೀಡಿ ತಳ್ಳಿಹನು ದೇವ
ಬಾಳ ಮಹಿಮೆಯನರಿವ ಕೂಪದಲಿ ||
ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು
ಸುಖದಿ ಜೀವಿಪುದು ಬಾಳ ಪಂಡಿತಪುತ್ರ ||
-- ಜೀವನದ ಬಗ್ಗೆ ಬಹಳಷ್ಟು ಯೋಚನೆ ಮಾಡಿ , ಪ್ರತಿಯೊಬ್ಬರೂ ಅವರದ್ದೇ ಆದಂತಹ ಜೀವನ ತತ್ವ ಗಳನ್ನು ಹೇಳಿದ್ದಾರೆ...ಅವು ಕೆಲವೊಮ್ಮೆ ಸರಿ ಕೆಲವೊಮ್ಮೆ ಸಮಂಜಸವಾಗಿರುವುದಿಲ್ಲ...ಇಂತಹದ್ದೇ ಸರಿ ಎಂದು ಹೇಳಲಾಗುವುದಿಲ್ಲ...
ಇಷ್ಟೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳುವ ಬದಲು ಹಾಯಾಗಿ ಇರಬಹುದಿತ್ತು ಅನಿಸುತ್ತದೆ....ಅದೇ ಇದರ ಸಾರಾಂಶ...

- ಶ್ರೀಶಕಾರಂತ ರವರ ಬ್ಲಾಗ್
- Login or register to post comments
- 806 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉತ್ತಮ ಚಿಂತನೆ
ನಿಮ್ಮದು ಉತ್ತಮ ಚಿಂತನೆ - ಪಂಡಿತ ಪುತ್ರ ಅಂದ್ರೆ ನೀವೇನಾ?
ಈಗ ನನ್ನ ತಲೆಯಲ್ಲಿ ಒಂದು ಹುಳು ಕೊರೆಯುತ್ತಾ ಇದೆ.
ಪ್ರಾಣಿಗಳಲ್ಲಿ ಚಿಂತನೆಗಳಿಲ್ಲ ಎಂಬುದು ಸಿದ್ಧವಾಗಿದೆಯಾ? ಅಂತಹ ಪ್ರಾಣಿಗಳಲ್ಲಿ ಶುನಕವನ್ನೇ ಏಕೆ ತೆಗೆದುಕೊಂಡಿದ್ದಾರೆ ಪಂಡಿತಪುತ್ರರು?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಸ್ವಾಮೀ ದಯವಿಟ್ಟು ಕ್ಷಮಿಸಿ
ಸ್ವಾಮೀ ದಯವಿಟ್ಟು ಕ್ಷಮಿಸಿ,
ನಾನು ನಮ್ಮ ಮನೆ ನಾಯಿ ಯಾವಾಗಲೂ ಮಲಗಿರುವುದನ್ನು(ಆಗಾಗ ಬೊಗಳುವುದನ್ನು ಬಿಟ್ಟು)...ನೋಡಿ ಹೊಟ್ಟೆ ಉರಿದು ಬರೆದಿರುವುದಿದು...
ಪ್ರಾಣಿಗಳು ಚಿಂತಿಸುವುದಿಲ್ಲ ಎಂಬುದು ಮನುಷ್ಯನ ಚಿಂತನೆಯ ಕೂನೆ ಇರಬಹುದು....
ನಾನು ಉದಾಹರೆಣೆಗಷ್ಟೆ ಶುನಕವನ್ನ ತೆಗೆದು ಕೊಂಡಿರುವುದು ಸ್ವಾಮೀ...
ಹೊಟ್ಟೆಉರಿ
ಓಹ್! ನಿಮ್ಮ ಮನೆ ನಾಯಿ ಸುಮ್ಮನಿರುವುದನ್ನು ನೋಡಿ ನಿಮಗೆ ಹೊಟ್ಟೆ ಉರಿಯುತ್ತಿದೆಯಾ?
ಅದರ ಹೊಟ್ಟೆಗೆ ಊಟ ಹಾಕ್ಬೇಡಿ, ಆಗ ನೋಡಿ ನಿಮ್ಮ ಹೊಟ್ಟೆ ಉರಿ ಶಮನ ಆಗಬಹುದು. (ತಮಾಷೆಗಷ್ಟೆ).
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಅ: ಲೇಸು ಶುನಕದ ಜನ್ಮ
ಎನು ಸ್ವಾಮಿ ಯೋಚಿಸುವುದೆ ಬೇಡವೆ? ಯೋಚಿಸುವುದಕ್ಕಿಂತ ನಾಯಿಜನುಮವು ಲೇಸೆನ್ನುವಿರಲ್ಲ.
ಮನುಷ್ಯನು ತನ್ನ ಯೋಚನಾಸಮರ್ಥ್ಯದಿಂದಲೆ ವಿಭಿನ್ನನು, ಉತ್ತಮನು ಆದದ್ದಲ್ಲವೆ?
ಮತ್ತು ಮೊದಲೆರಡು ಸಾಲುಗಳಲ್ಲಿ "ದೇವರು ಬಾಳನ್ನು ತಿಳಿಯಬೇಕೆಂದು, ಬುದ್ಧಿಶಕ್ತಿಯನ್ನು ಕೊಟ್ಟು ನಮ್ಮನ್ನು ಇಲ್ಲಿಗೆ ಕಳುಹಿಸಿರುವನು" ಎಂದು ಹೇಳಿರುವಿರಿ. ಚಿಂತನೆಮಾಡದೆ, ಯೋಚಿಸದೆ ಹೋದರೆ, ಆ ದೇವದತ್ತ-ಧೀಶಕ್ತಿಯು ವ್ಯರ್ಥವಾಗುವುದಿಲ್ಲವೆ?
ನನಗೆ ಮೊದಲೆರಡು ಸಾಲುಗಳರ್ಥಕ್ಕು, ಕೊನೆಯೆರಡು ಸಾಲುಗಳರ್ಥಕ್ಕು ಅರ್ಥವಿರೋಧವಿರುವಂತೆ ತೋರುತ್ತಿದೆ.
ಹಿಂದೆ ನಾನು ಎರಡನೆ ಪಪೂತ(ಪದವಿ ಪೂರ್ವ ತರಗತಿ)ದಲ್ಲಿ, ಸಂಸ್ಕೃತದಲ್ಲಿ, "ಭೂ ಕೈಲಾಸ"ವೆಂಬ ನಾಟಕದಲ್ಲಿ, ನಾರದನು ರಾವಣನಿಗೆ ಹೇಳಿದ "ದೋಷೈಕದೃಷ್ಟಿಃ ಖಳರಾವಣಃ ತ್ವಂ" ಎಂದು ಓದಿದ ನೆನಪು. ಹಾಗೆಂದರೆ, ರಾವಣನಿಗೆ ಬರಿ ದೋಷಗಳೆ ಕಾಣುವುದೆಂದು ಅರ್ಥ. ನಾನು ಹೇಗೆಂದು ಭಾವಿಸದಿರಿ.
--
ಇನ್ನೊಂದು ರೀತಿ ನೀವು ಹೇಳಿರುವುದು ಸರಿ. ಸುಮ್ಮನೆ ಇಲ್ಲದ ವಿಚಾರಗಳನ್ನು ಯೋಚಿಸಿ ನಾವೇಕೆ ತೆಲೆಕೆಡಿಸಿಕೊಳ್ಳಬೇಕೆಂದು.
ಸ್ವಾಮಿ....
ಕೊನೆಸಾಲಿನಲ್ಲಿ "ಬಾಳ" ಅನ್ನುವ ಬದಲು "ಬಾಳು" ಎನ್ನಿರಿ ಚೆನ್ನಾಗಿರುತ್ತದೆ.
ಲೇಖನ ಚಿಹ್ನೆಗಳನ್ನು ಪದ್ಯದಲ್ಲಿ ಬಳಸಬಹುದಲ್ಲವೆ. ಇವನ್ನು ಹೆಚ್ಚು ಬಳಸಿದರೆ ಓದುವುದು ಸುಲಭವಾಗುವುದು. ಇದು ಕೇವಲ ಅಭಿಪ್ರಾಯ, ಆಕ್ಷೇಪಣೆಯಲ್ಲ.
ಉದಾ:
ಧೀಶಕ್ತಿಯನು ನೀಡಿ, ತಳ್ಳಿಹನು ದೇವ,
ಬಾಳಮಹಿಮೆಯನರಿವ ಕೂಪದಲಿ .
ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು.
ಸುಖದಿ ಜೀವಿಪುದು ಬಾಳು, ಪಂಡಿತಪುತ್ರ.
| ಮತ್ತು || ಸಂಸ್ಕೃತದ ಲೇಖನಚಿಹ್ನೆಗಳು. ಆದರೆ ಕನ್ನಡದಲ್ಲಿಯು ಬಳಕೆಗೆ ಬಂದುಬಿಟ್ಟಿದೆ.
ಟೀಕೆಗಳನ್ನೆದುರಿಸಬೇಕಲ್ಲವೇ
ನಿಮ್ಮ ಮೊದಲನೇ ಟೀಕೆ ಸರಿಯಾಗೆ ಇದೆ...ನನ್ನ ಬುದ್ಡಿ ಮಟ್ಟಕ್ಕೆ ಇತ್ತೀಚೆಗೆ...ಎಲ್ಲಾ ಆಧ್ಯಾತ್ಮ ಚಿಂತನೆಗಳೂ ನಶ್ವರವೆಂದೇ ಅನಿಸುತ್ತಿವೆ...ಭಗವಂತನಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದಿರಲಿ..ನಾನು ಯಾರು .. ಯಂಬುದನ್ನು ತಿಳಿಯಲು ಕೂಡ ನನ್ನ ಬುದ್ಡಿಶಕ್ತಿಯಿಂದ ಸಾಧ್ಯವಾಗುತ್ತಿಲ್ಲ...ನಿಮಗೇನಾದರೂ ತಿಳಿದರೆ ನನಗೂ ಸ್ವಲ್ಪ ತಿಳಿಸಿ...
ಟೀಕೆಗಳನ್ನೆದುರಿಸಲು ಸದಾ ಸಿದ್ಡ..ಅದು ಖುಶಿಯ ವಿಷಯವೂ ಹೌದೆನ್ನಿ....
ಧ: ಟೀಕೆಗಳನ್ನೆದುರಿಸಬೇಕಲ್ಲವೇ
ಒಳ್ಳೆಯ ಭಾವನೆಯಿಂದ ನನ್ನ ಅನಿಸಿಕೆಯನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದ.
ಇದುವೆ ನನಗೆ ಅತಿತರವಾದ ಖುಷಿಯ ವಿಷಯ.
ನೀವು ಟೀಕೆಗಳನ್ನು ಎದುರಿಸುವ ಮಾತಾಡುವಿರಿ, ಕೆಲವರಿಗೆ ಅದನ್ನು ಸಹಿಸುವುದೆ ಕಷ್ಟವಾದಾಗ....