ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

January 22, 2007 - 4:53pm — ವೈಭವ

ಅಥವ ಇಂಗ್ಲಿಷ್ ತರಹ ಇರುವ ಕನ್ನಡ ಪದಗಳು.......ಏನಾದರೂ ಅಂದುಕೊಳ್ಳಿ.....ಈ ವಿಚಿತ್ರ ಆಲೋಚನೆ ಏಕೆ ಬಂತು ಅಂದರೆ ಈ ಕೆಳಗಿನ ಪದಗಳು ನನ್ನ ತಲೆಯಲ್ಲಿ ಕೊರಿತ ಇದ್ದವು:-

ದಬಾಕಳ್  - debacle ( ಉದಾ: ನಮ್ಮವರೆಲ್ಲ ದಬಾಕೊಂಡರು )
ಕೊಲ್ಲು     - kill
ಮಾರುಕಟ್ಟೆ - market
ಸಂತ      - Saint, Santa(ಇದು ಅಮೆರಿಕದಲ್ಲಿ ಪ್ರಚಲಿತದಲ್ಲಿದೆ ಉದಾ: Santa Clara, Santa Barbara)

ನನಗೆ ತಿಳಿದ ಮಟ್ಟಿಗೆ ಮೇಲಿನ ಕನ್ನಡ ಪದಗಳು, ಇಂಗ್ಲಿಷ್ ಪದಗಳ ಅರ್ಥವನ್ನೆ ಹೊಂದಿವೆ . ತಪ್ಪಿದ್ದರೆ ತಿದ್ದಿ.

ನಿಮ್ಮ ತಲೆಯಲ್ಲಿ ಇಂಥ ಪದಗಳು ಕೊರಿತ ಇದ್ದರೆ ಹಂಚಿಕೊಳ್ಳಿ Smile

- ಜೈ ಕರ್ನಾಟಕ

~.~
  • ವೈಭವ ರವರ ಬ್ಲಾಗ್
  • Login or register to post comments
  • 1285 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 22, 2007 - 5:21pm — Sunil Jayaprakash

ದನಿಗೂಡು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

Sunil Jayaprakash's picture

ನನಗೆ ತಿಳಿದಿರುವ ಮತ್ತೊಂದು ಅಚ್ಚ ಕನ್ನಡ ಪದ. ಬೊಬ್ಬುಳಿ - Bubble

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2007 - 3:53pm — Sunil Jayaprakash

ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

Sunil Jayaprakash's picture

ನೀಟು, ನೀಟ = neat.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 25, 2007 - 2:47pm — vikashegde

ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

vikashegde's picture

ನೀಟು (neat) ಎನ್ನುವುದು ಇಂಗ್ಲೀಷ್ ಪದವೇ ಬಳಕೆಗೆ ಬಂದಿರುವುದು ಅಲ್ಲವೆ?
ಕನ್ನಡದಲ್ಲಿ ನೀಟು ಅನ್ನೋ ಪದ ಇದೆಯಾ?!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 25, 2007 - 3:39pm — mahesha

ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

mahesha's picture

ಇದೆ...

"ನೀಟಾಗಿ ಸೀಟು" ಅಂದ್ರೆ "ಚನ್ನಾಗಿ ಒರೆಸು/ಸಾರಿಸು" ಅಂತ...

ಇಲ್ಲಿ ನೋಡ್ರಿ.
http://dsal.uchicago.edu/cgi-bin/philologic/getobject.pl?c.1:1:1155.burr...

nīṭa, nīṭu straightness, state of standing upright; properness, neatness, elegance, beauty, tidiness;
nīṭugāṟa a tidy man; fem. nīṭugāti;
nēṭu straightness, directness, truth.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 24, 2007 - 5:56pm — shreekant.mishrikoti

ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

shreekant.mishrikoti's picture

’ವಿದುರನ ಭಾಗ್ಯವಿದು ’ ಈ ಪುರಂದರದಾಸ(ಕ್ರಿ.ಶ. ೧೪೮೪-೧೫೮೦ ) ರ ಕೃತಿಯಲ್ಲಿ ನೀಟು ಬಳಕೆ ಆಗಿದೆ .

ಅಲ್ಲಿನ ಸಾಲುಗಳು ಹೀಗಿವೆ

ಆಟಕೆ ಲೋಕಗಳೆಲ್ಲಾ ಸೃಜಿಸುವ |

ನಾಟಕಧರ ತನ್ನ ಲೀಲೆಯಲಿ ||

ನೀಟಾದವರ ಮನೆಗಳ ಜರೆದು |

ಕುಟೀರದಲಿ ಬಂದು ಹರಿ ಕುಳಿತ

ಕ್ರಿ.ಶ. ೧೪೮೪-೧೫೮೦ ಸಮಯದಲ್ಲಿ ಇಂಗ್ಲೀಷು ನಮ್ಮಲ್ಲಿ ಇರಲಿಲ್ಲ ಎಂಬುದನ್ನು ಗಮನಿಸಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 25, 2007 - 10:42am — mahesha

ಉ: ಮತ್ತೊಂದು: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

mahesha's picture

ಹೌದೌದು..

ನೀಟು ಕನ್ನಡದ್ದೆ... ನಮ್ಮ ಹಳ್ಳಿಯಲ್ಲಿ ಬಳಕೆಯಲ್ಲಿದೆ...

ನೀಟುಗಾರ ಅಂದ್ರೆ ತುಂಬಾ ಓಜೆ, ಓಗರಣೆಯನ್ನು ಮಾಡುವಾತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 26, 2007 - 9:13am — Sunil Jayaprakash

Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

Sunil Jayaprakash's picture

ಈ ಕನ್ನಡ-ಇಂಗ್ಲೀಷ್ ಇದ್ದಂತಯೇ ಕನ್ನಡ-ಹಿಂದಿಯಲ್ಲಿಯೂ ಕೂಡ ಇದೆ. ಈ ದಿನ ಸೋಮೇಶ್ವರ ಶತಕ ಬರೆಯುವಾಗ ಮತ್ತೊಮ್ಮೆ ಅರಿವಿಗೆ ಬಂತು.

ಪದ ಭಾಷೆ ಅರ್ಥ
ಬೇಟ ಕನ್ನಡ ಲೈಂಗಿಕ ಮೋಹ
ಬೇಟ (ಬೇಟಾ ??) ಹಿಂದಿ ಮಗ

ಹೀಗಿಯೇ ಕನ್ನಡ-ಸಂಸ್ಕೃತದಲ್ಲಿಯೂ ಸಾಕಷ್ಟು ಇವೆ. ಸದ್ಯದ ಒಂದು ಉದಾಹರಣೆ,
ಹರಿ(ಕ) - ಮುಂದುವರಿಯುವ ಅರ್ಥದಲ್ಲಿ,
ಹರಿ(ಸಂ) - ಕೋತಿ, ಮಂಗ, ವಿಷ್ಣು.

ಭಾಷಾ ವೈವಿಧ್ಯ ಅಂದರೆ ಇದೇ ಇರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2007 - 10:06pm — hamsanandi

Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

hamsanandi's picture

ಮಾರುಕಟ್ಟೆ  ಎಂಅ ಪದವನ್ನು ಇಂಗ್ಲಿಷ್ ಅನ್ನು ಅನುಸರಿಸಿಯೇ ಕನ್ನಡದಲ್ಲಿ ಸೃಷ್ಟಿ ಮಾಡಿದಹಾಗೆ ತೋರುತ್ತದೆ. ಬಹಳ ಹಿಂದೆ ಈ ಪದದ ಬಳಕೆ ಇದ್ದಿದ್ದಂತೆ ಕಾಣುವುದಿಲ್ಲ. ಸಂತೆ ಎಂಬ ಪದ ಈ ಅರ್ಥದಲ್ಲಿ ಪ್ರಯೋಗವಾಗುತ್ತಿತ್ತು.

ಇನ್ನು ಸಂತ, ಸಂಸ್ಕೃತ ಮೂಲವಾದ ಭಾಷೆಯೊಂದರಿಂದ ಬಂದಂತಿದೆ. (ಸಂಸ್ಕೃತದಲ್ಲೇ ಇದರ ಪ್ರಯೋಗ ಕಂಡ ನೆನಪಿಲ್ಲ). ಇಂಡೋ-ಆರ್ಯನ್ ಭಾಷೆಗಳಿಗೂ, ಯೋರೊಪ್ ನ ಭಾಷೆಗಳಿಗು ಕೆಲವು ಸಮಾಂತರ ಪದಗಳಿದುವುದರಿಂದ, ಅದರಲ್ಲಿ ಅಷ್ಟೇನೂ ಆಶ್ಚರ್ಯ ಕಾಣದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2007 - 10:31pm — ವೈಭವ

Re: ಮಾರುಕಟ್ಟೆ - ಅಚ್ಚಕನ್ನಡ

ವೈಭವ's picture

ಮಾರುವ + ಕಟ್ಟೆ = ಮಾರುಕಟ್ಟೆ ...ಇಲ್ಲಿ 'ಮಾರುವ', 'ಕಟ್ಟೆ' ಎರಡು ಕೂಡ ಅಚ್ಚ ಕನ್ನಡದ ಪದವಲ್ಲವೆ?  ಇಲ್ಲಿ ಇಂಗ್ಲಿಷಿನ ಪ್ರಭಾವ ಇಲ್ಲ ಅನ್ಸುತ್ತೆ?  ಏನಂತೀರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2007 - 11:11pm — hamsanandi

Re: ಮಾರುಕಟ್ಟೆ - ಅಚ್ಚಕನ್ನಡ

hamsanandi's picture

ಮಾರುವ ಕಟ್ಟೆ ಮಾರುಕಟ್ಟೆಯಾದರೂ, ಆ ಪದವನ್ನು ಸೃಷ್ಟಿಸಲು market ಕಾರಣವಾಗಿರಬೇಕೆಂದು ನಾನು ಹೇಳಿದ್ದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2007 - 11:54pm — mahesha

Re: ಮಾರುಕಟ್ಟೆ - ಅಚ್ಚಕನ್ನಡ

mahesha's picture

Ka. māṟu to be opposite, be hostile, oppose, take or give one thing for another, barter, sell, be sold, sell (intr.), be changed into another form, change; n. state of being other, different or next, that of being changed or altered, that which is given in exchange, that which is put for sale, selling, sale, state of being opposite or hostile, state of being reflected;
māṟuḷi another business or affair; māṟāḷi barterer, seller, Vaiśya;
māṟisu to cause to sell, exchange, change;
mārpu exchange, change;
mārma, marma an opponent;
mātu, māta word, saying, language, promise, slander, rumour, antidote, remedy;
mātāḷi a talkative, garrulous man;
mātuga, mātugāṟa a talkative man; fem. mātugārti; mātugāṟike, mātugāṟatana loquacity.

’ಪದಾರ್ಥ ಚಿಂತಾಮಣಿ’ ಹೊತ್ತಗೆ ಮಾರು ಮೊದಲಿಗೆ ಬರಿ ’barter/change' ಎಂದು ಇತ್ತು ಎಂದು ಹೇಳುತ್ತದೆ.

ಅಲ್ಲದೆ ಇಂದು ಕಟ್ಟೆಯ ಮೇಲೆ ನಿಂತು/ಕುಳಿತು/ಇದ್ದು ಸರಕುಗಳ ’ಮಾರು’( barter ) ನಡೆಯುವುದಿಲ್ಲ.Smiling

ಅದಕ್ಕೆ ಕಾಲಕ್ಕೆ ತಕ್ಕಂತೆ

market = ಮಾರುವೋಣಿ( ಮಾರುವ ಓಣಿ[lane] ) ಅಂತ ಮಾಡಿಕೊಂಡು ಬಿಡೋಣ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 12:15am — hamsanandi

Re: ಮಾರುಕಟ್ಟೆ - ಅಚ್ಚಕನ್ನಡ

hamsanandi's picture

’ಮಾರು’ ಪದದ ಮೂಲಾರ್ಥ ಬದಲಾಯಿಸು ಎಂದು, ಇಂದಿಗೂ ಬಳಕೆಯಲ್ಲಿರುವ ಪದಗಳಲ್ಲೇ ತಿಳಿದುಬರುತ್ತದೆ . ಉದಾಹರಣೆಗೆ ಮಾರ್ಪಾಡು; ತಮಿಳಿನಲ್ಲ್ಯ್ ಮಾರು ಎಂಬ ಪದವನ್ನು ಕೇವಲ ಬಹಲಾಯಿಸು ಎಂಬ ಅರ್ಥದಲ್ಲಿ ಮಾತ್ರ ಉಪಯೋಗಿಸುತ್ತಾರೆ. ಕನ್ನಡದಲ್ಲಿ ಈ ಪದ ಸ್ವಲ್ಪ overloaded ಆಗಿ ಇತರ ಅರ್ಥಗಳನ್ನು ಒಳಗೊಳ್ಳುತ್ತಿದೆ. Smile

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 9:13am — mahesha

Dhole = ತೋಳ

mahesha's picture

http://en.wikipedia.org/wiki/Dhole

ಜೊತೆ...

ಸಂಸ್ಕೃತದ "ಪುತ್ರ"/"ಪುತ್ರಿ" ಇದು ತಮಿಳು-ಕನ್ನಡದಿಂದ ಹೋಗಿದೆ ಎಂದು "ಪದಾರ್ಥ ಜಿಂತಾಮಣಿ" ಹೇಳುತ್ತದೆ.

ಅದು ಹೀಗೆ ಇರಬಹುದು.

ಪುಟ್ಟು/ಪುಟ್ರು => ಹುಟ್ಟು
ಪುಟ್ಟ/ಪುಟ್ರ => ಹುಟ್ಟಿದವನು ( ಕಣ್ಣ - ಕಣ್ಣಿರುವವನು )=> ಪುತ್ರ

ಪುಟ್ಟಿ/ಪುಟ್ರಿ => ಪುತ್ರಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 9:17am — ಸಂಗನಗೌಡ

Re: ಮಾರುಕಟ್ಟೆ - ಅಚ್ಚಕನ್ನಡ

ಸಂಗನಗೌಡ's picture

ಹೌದು, ನೀವು ಹೇಳೋದು ಸರಿಯಾಗಿದೆ. 'ಸಂತೆ' ಪದವೇ ಸರಿಯಾಗಿದೆ. ಹಳ್ಳಿಗಳ ಕಡೆ 'ಸಂತೆ'ನೇ ಅನ್ನುತ್ತಾರೆ. 'ಮಾರುವ ಕಟ್ಟೆ' ಸರಿನೇ ಆದರೂ ಇದು ಪುಸ್ತಕದ ಭಾಷೆಯಲ್ಲಿ ಹುಟ್ಟಿಸಿ ಸೇರಿಸಿರುವ ಪದ. 'ಮಾರುವ ಓಣಿ' = ಮಾರೋಣಿ Smiling ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 9:22am — mahesha

ವಾರದ ಸಂತೆ

mahesha's picture

ಇದು ವಾರಕ್ಕೊಮ್ಮೆ ನಡೆಯುವ ಸಂಗತಿ. ಸಂತೆಗಾಗಿಯೇ ಒಂದು ಬಯಲು ಮೀಸಲು. ಅದನ್ನು "ಸಂತೆ ಮಾಳ" ಅಂತಾರೆ.

ಇದನ್ನು ನಾವು ಈಗಿನ "ವೀಕೆಂಡ್ ಸೇಲ್"ಗೆ ಹೋಲಿಸಿಕೊಳ್ಳಬಹುದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 11:48am — hamsanandi

Re: ವಾರದ ಸಂತೆ

hamsanandi's picture

ಸಂತೆ ವಾರಕ್ಕೊಮ್ಮೆಯೇ ಇರಬೇಕೋ ಇಲ್ಲವೋ ತಿಳಿಯದು. ನಿತ್ಸ ನೆರಯುವ ಸಂತೆಗೇ ಪೇಟೆ ಅನ್ನುವುದು ಅಂತ ಕಾಣತ್ತೆ!

ಪೇಟೆಯೂ ಅಚ್ಚಕನ್ನಡಪದವೇ. ಅರಳೆ ಪೇಟೆ, ಬಳೆಪೇಟೆ ಇತ್ಯಾದಿ ಪದಗಳನ್ನು ಗಮಸಿಸಿ. ಅಲ್ಲದೇ, ತಮಿಳಿನಲ್ಲೂ ಇದಕ್ಕೆ ಸಮಾಂತರವಾದ ಪೇಟ್ಟೈ ಇದೆ. ಹಾಗಾಗಿ ಇದು ದ್ರಾವಿಡ ಮೂಲವೇ ಇರಬೇಕು...ಮತ್ತು ಮಾರುಕಟ್ಟೆಗಿಂತ ಬಹಳ ಹಳೆಯ ಪದವೇ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 10:43am — Sunil Jayaprakash

ಕನ್ನಡದಲ್ಲಿರುವ ಮಾರುಗಳು

Sunil Jayaprakash's picture

ಕನ್ನಡದಲ್ಲಿ ನಾಲ್ಕು ಮಾರುಗಳು ಇಂದಿಗೂ ಬಳಕೆಯಲ್ಲಿವೆ. ಮಾರುಕಟ್ಟೆ ಹೊಸತಿರಬಹುದು ಆದರೆ ಮಾರು ಹೊಸತಲ್ಲ.

೧. ಮಾರುಹೋಗು - ಮರುಳಾಗು.
೨. ಮಾರು - ಮಾರಿ ಬದುಕುತ್ತಿದ್ದರು ಎಂಬ ಬಳಕೆ ಗಮನಿಸಿ.
೩. ಮಾರು - ಅಳತೆ, ಹೂವನ್ನು ಕೊಳ್ಳುವಾಗ ಬಳಸುವಂಥದ್ದು.
೪. ಮಾರ್ಪಾಟಿನಲ್ಲಿರುವ - ಮಾರ್, ಮಾರುಲಿ - ಬೇರೆಯದು ಎಂದು ಬಳಸುವ ಬಗೆಯಲ್ಲಿ.

ಇದಕ್ಕೆ ಮುಖ್ಯ ಕಾರಣ, ಕನ್ನಡದಲ್ಲಿ ಎರಡು ರ ಇದ್ದದ್ದು, ರ ಮತ್ತು ಱ. ಹಿಂದೆ ಇವುಗಳ ವ್ಯತ್ಯಾಸ ಎಲ್ಲರಿಗೂ ತಿಳಿಯುತ್ತಿತ್ತು ಅನಿಸುತ್ತದೆ. ಆದರೆ ನಾವು ಇಂದು "ಱ"ಅನ್ನು ಬಳಸುತ್ತಿಲ್ಲ.

ಮಾರುಕಟ್ಟೆಯಲ್ಲಿರುವ ರ "ರ" ಅಲ್ಲ "ಱ".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 11:44am — hamsanandi

Re: ಕನ್ನಡದಲ್ಲಿರುವ ಮಾರುಗಳು

hamsanandi's picture

ಸುನಿಲ್ ಅವರೆ,

ನೀವು ಹೇಳಿದ ಶಕಟರೇಫದ (ಱ) ವಿಷಯವೇನೋ ಸರಿ.  ಆದರೆ ನೀವು ಕೊಟ್ಟಿರುವ ಉದಾಹರಣೆಯಲ್ಲಿ , ೧ ಮತ್ತು ೪ ಒಂದೇ ಮೂಲಾರ್ಥವುಳ್ಳದ್ದೆಂದು ನನ್ನ ಭಾವನೆ. ಮಾರು ಹೋಗಿ, ಮರುಳಾಗುವುದು ಬದಲಾವಣೆಯಿಂದ ತಾನೆ? ನಿಮ್ಮ ೨ನೆ ಉದಾಹರಣೆ ಅಷ್ಟು ಅರ್ಥವಾಗಲಿಲ್ಲ.

 

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 11:48am — mahesha

ಶಕಟರೇಫ

mahesha's picture

ಇದನ್ನು ಕನ್ನಡ/ತೆಲುಗಲ್ಲಿ 'ಬಂಡಿ ರ' ಅಂತಾರೆ.

ಕಿಟ್ಟಲ್ ರೋಡು ಅಂತ ಬರೆಯೋ ಬದಲು, ಱೋಡು ಅಂತ ಬರೆದರೆ ಹೆಚ್ಚು ಸರಿ ಅಂದಿದ್ದರಂತೆ!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 11:54am — hamsanandi

Re: ಶಕಟರೇಫ

hamsanandi's picture

 

 

Quote:
ಇದನ್ನು ಕನ್ನಡ/ತೆಲುಗಲ್ಲಿ 'ಬಂಡಿ ರ' ಅಂತಾರೆ.

ತೆಲುಗಲ್ಲಿ ಹೇಳೋದು ಕೇಳಿದ್ದೀನಿ. ಅವರ ವರ್ಣಮಾಲೆಯಲ್ಲಿ ಇನ್ನೂ ಈ ವರ್ಣವನ್ನು ಇಟ್ಟುಕೊಂಡಿದ್ದಾರೆ ಅನ್ನಿಸತ್ತೆ. ಕನ್ನಡದಲ್ಲಿ, ಅಷ್ಟಾಗಿ ಕೇಳಿಲ್ಲ.

ಅರ್ಥ ಒಂದೇ. ಈ ವರ್ಣವನ್ನು ನೋಡಿದರೇ, ಎರಡುಗಾಲಿಗಳ ಗಾಡಿಯಂತೆ ಕಾಣುವುದರಿಂದಲೇ ಈ ಹೆಸರು. (ಶಕಟ = ಗಾಡಿ, ಬಂಡಿ. ರೇಫ: ರ ಕಾರ)

ಶಕಟರೇಫ ಅನ್ನೋ termninology ಯನ್ನ ಯಾರೋ ಕನ್ನಡದ ವೈಯಾಕರಣಿಯೇ ಮಾಡಿರಬೇಕೆಂಬುದು ನನ್ನ ಗುಮಾನಿ. ಏಕೆಂದರೆ, ಈ ಅಕ್ಷರ ಸಂಸ್ಕೃತ, ಹಿಂದಿಯಲ್ಲಿ ಇಲ್ಲ. ತಮಿಳು ಮಲೆಯಾಳದಲ್ಲಿ, ಇದ್ದರೂ, ಅಲ್ಲಿ ಅದು ಬಂಡಿಯಂತೆ ಕಾಣೋದಿಲ್ಲ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 1:15pm — mahesha

ಬಂಡಿ ರ

mahesha's picture

ಱ'ಬಂಡಿ ರ'ಕ್ಕೆ ಶಕಟರೇಫ ಅಂತ ತೆಲುಗಿನವರೂ ಮಾಡಿರಬಹುದು.

ಅದೇನೇ ಇರಲಿ.

ಸುನಿಲ ಜಯಪ್ರಕಾಶ ಏನು ಹೇಳಿದರು ಅಂದು ಇಂಪಾರ್ಟೆಂಟು. ಹಿಂದೆ 'ಮಾರು' ಮತ್ತು 'ಮಾಱು', 'ಕುೞಿ'/'ಕುಳಿ', ಕುರಿ/ಕುಱಿ ಇವು ಬೇರೆ ಬೇರೆ ಪದಗಳಾಗಿದ್ದವು. ಅವುಗಳ ಉಲಿ ಬೇರೆ ಹಾಗೆ ತಿಳಿವೂ ಬೇರ

ಆದರೆ ಇವು ಯಾವ ಕಾರಣದಿಂದ ಕನ್ನಡದವರ ಬಾಯಿಂದ ಅಳಿಯಿತೋ ಗೊತ್ತಿಲ್ಲ.!

ಆದರೂ ನನಗೆ ತಿಳಿದಂತೆ

ಅರಿತು(ಅಱಿತು)[ತಿಳಿದು] ಮತ್ತು ಅರಿದು[ಜಜ್ಜಿ] ಈ ಎರಡು ಪದಗಳನ್ನು ಹೇಳಿದಾಗ ನಡುವಿನ 'ರಿ' ಅಲ್ಲಿ ಕೊಂಚವಾದರೂ ಸೌಂಡ್-ಡಿಫೆರೆಸ್ಸು ತಿಳಿಯಬಹುದು ಎಂದು.

ಶಬ್ದಮಣಿದರ್ಪಣ 'ಱ'ದ ಉಲಿ ಕುರಿತು ಏನೋ ಹೇಳಿದೆ, ನಾಳೆ ನೋಡಿ ಹೇಳುವೆನು.

ಆದರೆ ೞ ಇದು ಹಿಂದಿಯ ड़, करोड़, खिलाड़ि ಬರುವ 'ಡ' ಎಂದು ಗೊತ್ತು.

ಮಾಡ್ + ಪುದು = ಮಾೞ್ಪುದು
ಕಾಡ್ + ಕಿಚ್ಚ = ಕಾೞ್ಗಿಚ್ಚು

ಮುಂತಾದವು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 7:52pm — mahesha

ಱ ೞ ಳ

mahesha's picture

ಈ ಮೂರರ ಉಲಿಯ ಬಗ್ಗೆ ಶಬ್ದಮಣಿದರ್ಪಣದ ಪದ್ಯ

"ಅತಿಪೀಡನದಿಂ ರೇಪಾ
ಶ್ರಿತಮಾದ ಱಕಾರಮುಂ ಸಮಂತು ಡಕಾರಾ
ಶ್ರಿತಮಾದ ಱೞನುಮಂಗೀ
ಕೃತ ಪದ ಲತ್ವಕ್ಕೆ ಸನೇಮಸಲ್ಲದ ಕುಳನಂ"||

ಅಂದರೆ

"ರ" ಶಬ್ದ ಹುಟ್ಟುವೆಡೆ ಒತ್ತಿ ಉಲಿದರೆ ಱ,
"ಡ" ಶಬ್ದ ಹುಟ್ಟುವೆಡೆ ಒತ್ತಿ ಉಲಿದರೆ ೞ,
"ಲ" ಶಬ್ದ ಹುಟ್ಟುವೆಡೆ ಒತ್ತಿ ಉಲಿದರೆ ಳ, ಹುಟ್ಟುತ್ತವೆ.

ಅಂದರೆ ರ/ಱ, ಡ/ೞ, ಲ/ಳ ಗಳು ಏಕಸ್ಥಾನಿಗಳು(ಒಂದೆಡೆಯಿಂದ ಹುಟ್ಟುವುವು).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 12:32pm — ವೈಭವ

Re: ಮಾರುಕಟ್ಟೆ - ಅಚ್ಚಕನ್ನಡ

ವೈಭವ's picture

ನೀವು 'overload' ಎಂಬ ಪದದಿಂದ ನನಗೆ ಹಿಂದೆ  ಯಾವಾಗಲೊ ಓದಿದ್ದ  object oriented Programming ನಲ್ಲಿ ಬರುವ operator overloading concept ನೆನಪಿಗೆ ಬಂತು. ಅಲ್ಲಿ ನನಗೆ ಗೊತ್ತಿರುವ ಹಾಗೆ ಒಂದೇ ಆಪರೇಟರನ್ನು ಬೇರೆ ಬೇರೆ ಸಂದರ್ಭ ಬೇರೆ ಬೇರೆ ರೀತಿಯಲ್ಲಿ ವರ್ತಿಸುವ ಹಾಗೆ ಮಾಡುವುದು ಅದರ ಉದ್ದೇಶ.  ಹಾಗೆಯೆ ಪದಗಳನ್ನು overload ಮಾಡುವ ಉದ್ದೇಶವೂ ಅದೆ.

ಎತ್ತಣಿಂದೆತ್ತ ಸಂಬಂಧವಯ್ಯಾ?!!!Smile

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 1:30pm — ಕರಿ ತವಳೆ

Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

ಕರಿ ತವಳೆ's picture

ಇನ್ನೂ ಕೆಲವು ಪದಗಳಿವೆ ನೋಡಿ.

೧. ವಾಂತಿ = vomit
೨. ಎಂಟು = eight
೩. ಅಟ್ಟ = attic.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2007 - 1:54pm — mahesha

ವಾಂತಿ

mahesha's picture

ವಾಂತಿ ಇದು ಸಂಸ್ಕೃತ.
http://dsal.uchicago.edu/cgi-bin/romadict.pl?query=vanti&display=simple&table=macdonell

ಸಂಸ್ಕೃತ ಮತ್ತು ಇಂಗಲೀಷು ಗಳು ಒಂದೇ ಕುಲದ ನುಡಿಗಳು. ಅದಕ್ಕೆ ಸಿಕ್ಕಾಪಟ್ಟೆ ಪದಗಳು ಸಂಸ್ಕೃತ ಮತ್ತು ಇಂಗಲೀಷಲ್ಲಿ ಒಂದೇ ತೆರ ಇದೆ.

ಕನ್ನಡದಲ್ಲಿ ವಾಂತಿಗೆ

Ka. kakku, kar̤ku to vomit; n. vomiting, vomit;

ogaḍisu to vomit; ogaḍike vomiting

Ka. ōkari, ōkarike, ōkarisuha, ōkāḷa, ōgaḍike vomiting; ōkarisu, okkarisu, ōgaḍisu to retch, vomit, spit out, emit; vākarisu, vākaḷisu to vomit; vākarike, vākaḷike vomiting.

ಇನ್ನು ಇವೆ ಏನೋ.!!

ಪಡಾವ್(ಹಿಂದಿ) = ಪಡ/ಪಡವು/ಹಡಗು
ಉಗಲ್ (ಹಿಂದಿ) = ಉಗುಳು
ಪಿಲ್ಲ(ಹಿಂದಿ) = ಪಿಳ್ಳೆ/ಪಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 5:36pm — ಕರಿ ತವಳೆ

Re: ವಾಂತಿ

ಕರಿ ತವಳೆ's picture

ಮಹೇಶರೇ, ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು.
ಇಂಗ್ಲೀಶಿನ eight, ಹಾಗೂ ಕನ್ನಡದ ಎಂಟು ಎರಡೂ ಪದಗಳ ನಂಟು ಸಂಸ್ಕೃತದ 'ಅಷ್ಠ'ದೊಂದಿಗೆ ಇರಬಹುದೇನೋ.

ಹೀಗೆ ಇನ್ನೊಂದು ಹೋಲಿಕೆಯಿದೆ.
ಗುಂಪು = group.

ಈ ಹೋಲಿಕೆ ಕಾಕತಾಳೀಯವೋ ಇಲ್ಲವೆ ಈ ಎರಡೂ ಪದಗಳ ನಂಟುಟೋ, ತಿಳಿದವರು ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 5:56pm — mahesha

ಗುಂಮೆ

mahesha's picture

Ka. gumi, gummi, gummu, gumme, gumpu heap, crowd, multitude;
gubaru, guburu thickness, crowdedness, thick foliage of a tree or shrub.

ಇಲ್ಲಿ ಒಂದು ಸಂಗತಿ ನೋಡಿ..

ಗುಮ್ => ಗುಮ್ + ಮೆ = ಗುಮ್ಮೆ, ಗುಮ್ + ಪು = ಗುಂಪು.
ಗುಮ್ ಅಂದರೆ to collect, to gather ಅಂತ ಇರಬೇಕು.

ನೆನೆ( remember ) => ನೆನಪು( memory, one which is rememebered )

mango = ಮಾಂಗಾಯಿ
go = ಪೋ/ಹೋ/ ( ತಮಿಳಲ್ಲಿ ಹ => ಗ ಆಗುತ್ತೆ, ಮಹೇಶ => ಮಗೇಸ Smiling )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 8:27pm — ಕರಿ ತವಳೆ

Re: ಗುಂಮೆ

ಕರಿ ತವಳೆ's picture

mango ಎಂಬುದರ ಮೂಲ ತಮಿಳಿನ ಮಾಂಗಾ(ಯ್). ಇಲ್ಲಿ ನೋಡಿ. http://www.yourdictionary.com/ahd/m/m0077900.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2007 - 11:15pm — Sunil Jayaprakash

ಉ: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

Sunil Jayaprakash's picture

"ನೀಟು" ಎಂಬ ಪದ ಪುರಂದರದಾಸರ ಪದದಲ್ಲಿ ಇರುವುದಾಗಿ ಶ್ರೀಕಾಂತ ಮಿಶ್ರಿಕೋಟಿಗಳು ತಿಳಿಸಿಕೊಟ್ಟಿದ್ದನ್ನು ನೀವೆಲ್ಲರೂ ಓದಿದ್ದೀರಾ. "ನೀಟು" ಪದ ಕನ್ನಡದ್ದೇ ಎನ್ನಲು ಮತ್ತೊಂದು ಆಧಾರ ಸಿಕ್ಕಿತು. ಭರತೇಶ ವೈಭದ "ಪೂರ್ವನಾಟಕ ಸಂಧಿ" ಎಂಬಲ್ಲಿ, ಈ ಒಂದು ಪದ್ಯ ಬರುತ್ತದೆ.

ನೀಟಾದ ತೆರೆಯೊಳು ಸತಿಯರಿದಿರು ಮಂತ್ರಿ
ನಾಟಿ ಗದ್ದುಗೆಯೊಳು ನೃಪತಿ
ನಾಟಕಸತಿಯರೈತರುತಿದ್ದರಿದು ಪೂರ್ವ
ನಾಟಕಸಂಧಿ ಸುಗಂಧಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅ೦ತರ
  • ದುರ್ಗದ ಸೂರ್ಯಾಸ್ತಮಾನ
  • ಕಾಲಚಕ್ರ - ಕನ್ನಡ ಬ್ಲಾಗ್
  • ವಿಮರ್ಶೆ ಮತ್ತು ಮೀಮಾಂಸೆ
  • ಮಳೆಯ ಆಗಮನ!!
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator