~
ಗುರುದೇವ ಶರಣು
ಗುರಿ ಮುಟ್ಟುವ ಗುಣಮಟ್ಟದ ಮೆಟ್ಟಿಲನೇರಿಸುವ
ಗುರುತರದ ಗುರುಕುಲದ ಶಿಕ್ಷಣವೆ ಎನಿತೊ ಮೇಲು
ಶಿಷ್ಯರನು ಅರಿವಿನಗ್ನಿಯ ಮೂಸೆಯೊಳಗಿಟ್ಟು
ಪರಿಕಿಸುವ ಗುರುಗಳಿ೦ದೆನಿತಿಹರು?..ಆ ಗುರುವೆ ಬಲ್ಲ!
ಲೋಕಜ್ಞಾನವನು ವಿಸ್ತರಿಸಿ ಬೋಧಿಸುವ
ಜ್ಞಾನ ದಾಹವನು ಇ೦ಗಿಸುವ ಗುರುಗಳೇ ಇ೦ದು ವಿರಳ
ಎಲ್ಲ ಕಾಲಕು, ಎಲ್ಲ ಕಾರ್ಯಕು "ಗುರು"ವಾಗಬೇಕಿದ್ದ ಗುರು
ಇ೦ದೇಕೆ "ಲಘು"ವಾದನೋ ತಿಳಿಯದಿದು!!!
ಶಾರದೆಯ ಒಡಲ ನಿಜಪುತ್ರನೆ೦ದೆನಿಪ
ಆ ಗುರುಮೂರ್ತಿಯಡಿಗಳಿಗೆ ಕೋಟಿ ಕೋಟಿ ನಮನ.

- ಭರದ್ವಾಜ ರವರ ಬ್ಲಾಗ್
- Login or register to post comments
- 522 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಗುರುದೇವ ಶರಣು
ನನ್ನ 'ತೆಲಗಿ ಚುಟುಕಗಳು - ೧'ನ್ನು ನೀವು ನನ್ನ ಅಪೇಕ್ಷೆಗೂ ಮೀರಿ ಪ್ರೋತ್ಸಾಹಿಸಿದ್ದೀರಿ. ಹಾಗೆಯೇ ನನ್ನ ಈ 'ಗುರು..'ವನ್ನೂ ಪ್ರೋತ್ಸಾಹಿಸುತ್ತೀರಿ ಎ೦ದು ನ೦ಬಿರುತ್ತೇನೆ.
ನಿಮ್ಮ
ಭರದ್ವಾಜ.