ಈಗಿನಂತೆ 5 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ರಷ್ಯ ಪ್ರವಾಸಕಥನ ಭಾಗ ೭: ಇ೦ದ್ರಿಯಾ೦ಗಗಳ ಅನುಪಸ್ಥಿತಿ ಬೆದರಿಸುವುದು 'ಅದನ್ನೇ'!
anilkumar's picture
ಎಚ್.ಎ. ಅನಿಲ್ ಕುಮಾರ್
09
Oct
2006
ಪುಟ
ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,263
ಪ್ರೊಡಕ್ಷನ್ ನಂ -೧ ಭಾಗ-೧
manjunath s reddy's picture
ಮಂಸೋರೆ
19
May
2011
ಲೇಖನ

ವಿಶಾಲವಾದ ಗಾಜಿನ ಕಿಟಕಿಯ ಬಳಿ ನಿಂತಿದ್ದ ಸುಮತಿ ಕೈಯಲ್ಲಿದ್ದ ಫೋಟೋನ ದಿಟ್ಟಿಸಿ ನೋಡುತ್ತಿದ್ದಳು...

ಮುಂದಿನ ಕಿಟಕಿಯೊಳಗೆ ಇಡೀ ನಗರದ ಟ್ರಾಫಿಕ್, ನೆಲದ ಮೇಲೆ ಹರಡಿರುವ...

ಪ್ರತಿಕ್ರಿಯೆಗಳು: 5
ಹಿಟ್ಸ್ : 604
ಕೊಂಕಣಿಗಳು ಮತ್ತು ಸಂಘನಿಷ್ಟೆ
gurubaliga's picture
ಗುರು ಬಾಳಿಗ
16
Jun
2009
ಪುಟ

ದಕ್ಷಿಣ ಕನ್ನಡದಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಕೋಮು ಸಂಬಂಧಿ ಸ್ಥಿತ್ಯಂತರಗಳ ಹಿನ್ನೆಲೆಯಾಗಿ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ...

ಪ್ರತಿಕ್ರಿಯೆಗಳು: 22
ಹಿಟ್ಸ್ : 2,141
ಗುಮ್ಮನೆಲ್ಲಿಹ ತೋರಮ್ಮ!
avikamath77's picture
ಅವಿನಾಶ್ ಕಾಮತ್
26
Mar
2011
ಲೇಖನ

ಕರ್ನಾಟಕದ ಒಳನಾಡಿನ ಹಾಗೆಯೇ ಹೊರನಾಡಿನಲ್ಲೂ ಕೂಡ ಹಲವಾರು ಕನ್ನಡ ನಾಟಕ ತಂಡಗಳಿವೆ, ಅವುಗಳಲ್ಲಿ ಬಹುತೇಕ ತಂಡಗಳು ಸಕ್ರಿಯವಾಗಿವೆ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ. ಈ ಎಲ್ಲ...

ಪ್ರತಿಕ್ರಿಯೆಗಳು: 4
ಹಿಟ್ಸ್ : 643
ಅನುಕರಣೆ ಹಾದಿಯಲ್ಲಿ ನಿಮ್ಮತನ ಅಳಿಯದಿರಲಿ
addoor's picture
ಅಡ್ಡೂರು ಕೃಷ್ಣ ರಾವ್
23
Jan
2012
ಲೇಖನ

ಮೋಹನ್ ಎರಡು ತಿಂಗಳ ಮುಂಚೆ ಬ್ಯಾಂಕ್ ಸಾಲ ಪಡೆದು ಬೇಕರಿಯೊಂದನ್ನು ಆರಂಭಿಸಿದ್ದ. ವ್ಯಾಪಾರ ಆಗಿನ್ನೂ ಕುದುರುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯವರ ಕೆಂಪು ಮಾರುತಿ ಕಾರು ಕಣ್...

ಪ್ರತಿಕ್ರಿಯೆಗಳು: 2
ಹಿಟ್ಸ್ : 208
ಶಿವರಾತ್ರಿಯ ನೆನಪುಗಳು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
17
Feb
2012
ಬ್ಲಾಗ್ ಬರಹ

 

"ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದಲ್ಲಿ ಬೆಂಕಿ ಕಾಣುತ್ತೆ"
ನಿಜ, ನಮ್ಮ ಮನೆಯಿಂದ ಹೊರಬಂದು ನೋಡಿದರೆ,...
ಪ್ರತಿಕ್ರಿಯೆಗಳು: 4
ಹಿಟ್ಸ್ : 238
ದಯೆ ತೋರು ತಾಯೇ!
benaka's picture
ಬೆನಕ
29
May
2006
ಪುಟ
ದಯೆ ತೋರು ತಾಯೇ! ಮುಚ್ಚಂಜೆಯೇಕೋ ಮಬ್ಬಿರುಳು ಮುಚ್ಚಿ ಬಾನನು ಹೊಗೆಯು ಹಚ್ಚ ಹಸಿರಲು ಬೂದಿಯೆರಚಿ ಎಚ್ಚರಗೊಂಡ ಬೆಂಕಿಬೆಟ್ಟವದಿತ್ತು! ತಟ್ಟಿ ತೂಗುತ ಮಗುವ...
ಪ್ರತಿಕ್ರಿಯೆಗಳು: 7
ಹಿಟ್ಸ್ : 1,472
ಶ್ರೀವತ್ಸ ಜೋಶಿಯವರ ಎರಡು ಪುಸ್ತಕಗಳು ನಾಳೆ...
hpn's picture
ಹರಿ ಪ್ರಸಾದ್ ನಾಡಿಗ್
01
Jan
2010
ಪುಟ

ಸಂಪದಿಗ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ನಾಳೆ....

ಪ್ರತಿಕ್ರಿಯೆಗಳು: 3
ಹಿಟ್ಸ್ : 1,169
ಬೆಳ್ಳಕ್ಕಿಯ ಕೆಲವು ಚಿತ್ರಗಳು
palachandra's picture
ಪಾಲಚಂದ್ರ
17
Feb
2010
ಬ್ಲಾಗ್ ಬರಹ
ಪ್ರತಿಕ್ರಿಯೆಗಳು: 10
ಹಿಟ್ಸ್ : 1,211
ಇದ್ದ ಮೂವರಲ್ಲಿ ಗೆದ್ದವರು ಯಾರು?‌
uniquesupri's picture
ಸುಪ್ರೀತ್.ಕೆ.ಎಸ್
03
Mar
2012
ಲೇಖನ

ಸಿವಿಲ್ ಕೋರ್ಟ್ ಆವರಣದಲ್ಲಿ, ಹೈಕೋರ್ಟ್ ಹಾಗೂ ರಾಜ್ಯದ ಅಧಿಕಾರ ಶಕ್ತಿ ಕೇಂದ್ರ ವಿಧಾನ ಸೌಧದಿಂದ ಕೂಗಳತೆ ದೂರದಲ್ಲಿ ಹಾಡಹಗಲಲ್ಲಿ ವಕೀಲರು ಟಿವಿ ಚಾನೆಲ್ಲಿನ ಕೆಮರಾ ಹುಡುಗರನ್ನು...

ಪ್ರತಿಕ್ರಿಯೆಗಳು: 7
ಹಿಟ್ಸ್ : 443

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!

ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!

ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ.

ಮಹರಾಸ್ಟ್ರ ಅಂತು ದಿನೆ ದಿನೆ ಇಂಚಿಂಚಾಗಿ ಕರುನಾಡನ್ನು ಕಬಳಿಸುತ್ತಿದೆ. ಕನ್ನಡ ಮನಸ್ಸುಗಳನ್ನು ತಿರುಚಿ ಮಹಾರಸ್ಟ್ರಕ್ಕೆ ಹೋಗಲು ರಚ್ಚೆ ಹಿಡಿಯುವಂತೆ ಮಾಡುತ್ತಿದೆ. ದೆವ್ವ ಮೆಟ್ಟಿದವ ದೇವರನ್ನು ಬಯ್ಯುವ ಹಾಗೆ!!

http://maps.live.com/default.aspx?v=2&cp=15.013769~77.678833&style=r&lvl=6&tilt=-90&dir=0&alt=-1000&sp=Point.mc9yqvq7txxh_Kannada_A%20place%20name%20in%20maharastra.__~Point.kzc3xdqd9wfz_Basavakalyan_Once%20center%20of%20Karunadu.__&encType=1

ಇಲ್ಲಿ ನಾನು ಎರಡು ಊರುಗಳನ್ನು ಪಿನ್ ಮಾಡಿದ್ದೇನೆ ನೋಡಿ, ಮಹಾರಸ್ಟ್ರದ ಗೋದಾವರಿ ಹೊಳೆಗೂ ಆಚೆ ಕನ್ನಡ ಎನ್ನುವ ಊರಿದೆ. ಮತ್ತು ಬಸವಕಲ್ಯಾಣ, ಅಲ್ಲಿ ಪಿನ್ ಮಾಡಲಾದ ಎರಡನೆ ಊರು.

ವರ್ಚುಅಲ್ ಮರಾಟಿಗರು

ಇಲ್ಲಿ ನೋಡಿ,

http://www.dailypion...

ಎಲ್ಲೂರು ಅಪ್ಪಟ ಕನ್ನಡ ಹೆಸರು, ಇಲ್ಲಿ ೯೫% ಮಂದಿ ಮರಾಟಿಯಂತೆ. ಇವರು ಕನ್ನಡವನ್ನೇ ಮರೆತ ಕನ್ನಡಿಗರು, ಅದಕ್ಕೇ ಇವರನ್ನು ವರ್ಚುಅಲ್ ಮರಾಟಿಗರು ಅಂದಿದ್ದು. ಮರಾಟಿಗರಲ್ಲಿ ಒಂದು ನಂಬಿಕೆ ಇದೆ, ಅದೆಂದರೆ ಕನ್ನಡಿಗರು ಅಂದರೆ ಹಿಂದುಳಿದವರು, ಮರುಳರು ಅಂತೆ :D

ಗಡಿಗಳಲ್ಲಿ ಪರಿಸ್ತಿತಿ ಇದಕ್ಕೆ ಪೂರಕವಾಗಿಯೇ ಇದೆ, ನಮ್ಮ ಸ್ಟೇಟ್ ಸಿಲೆಬಸ್ ತುಂಬಾ ಸರಳವಾಗಿದೆ. ನಮ್ಮ ಸಿಲೆಬಸ್‍ನ್ನು ಬಿಗುಗೊಳಿಸಬೇಕಿದೆ. ಗಡಿಗಳಲ್ಲಿ ಕನ್ನಡ ಮೀಡಿಯಮ್ ಸಾಲೆಗಳಿಗೆ ಒತ್ತು ಕೊಡಬೇಕಿದೆ.

ನನ್ನ ಗೆಳೆಯನೊಬ್ಬ ಸೊಲ್ಲಾಪುದವ, ಅಪ್ಪಟ ಕನ್ನಡಿಗರ ಕುಟುಂಬ. ಅವರ ತಾಯಿಗೆ ಕನ್ನಡದ ಬಗ್ಗೆ ಬಲು ಹೆಮ್ಮೆ. ಅವಂದು ಮರಾಟಿ ಮೀಡಿಯಮ್, ಅವನಿಗೆ ಕನ್ನಡ ಸರಿಯಾಗಿ ಆಡೋಕೆ ಬರುತ್ತಿರಲಿಲ್ಲ, ನಮ್ಮ ಜೋಡಿ ಕೂಡಿ ಕಲಿತ ಅನ್ನಿ :) ಅವನಿಗೆ ಕನ್ನಡಿಗ ಅಂತ ಹೇಳಿಕೊಳ್ಳಲು ಹಿಂಜರಿಕೆ, ತಾನು ಮಹಾರಾಸ್ಟ್ರಿಯನ್ ಅಂತ ಹೇಳಿಕೊಳ್ಳುತ್ತಿದ್ದ.

ಬಸವಕಲ್ಯಾಣ, ಒಂದೊಮ್ಮೆ ವಚನ ಕ್ರಾಂತಿಯಿಂದ ಕನ್ನಡಕ್ಕೆ ಬರಹಗಳ ಹೊಳೆಯನ್ನೇ ಹರಿಸಿದ ಕನ್ನಡದ ನೆಲ. ಇಂದು ಅಲ್ಲಿಗೆ ಹೋದರೆ ಎಲ್ಲಾ ಕಡೆ ಹಿಂದಿ, ಮರಾಟಿನೇ ರಾಚುತ್ತದೆ. ಅಲ್ಲಿಯ ಹೆಚ್ಚಿನವರಿಗೆ ಕನ್ನಡಾನೇ ಬರಲ್ಲ. ಬಸವಣ್ಣನವರು ಬದುಕಿದ್ದು ಇಲ್ಲೇನಾ ಅನ್ನಿಸಬೇಕು.

ವರ್ಚುಅಲ್ ತೆಲುಗರು

ಕರುನಾಡಲ್ಲಿ ಕನ್ನಡಿಗರನ್ನು ಬಿಟ್ಟರೆ ತೆಲುಗರ ಸಂಕೆಯದೇ ಮೇಲುಗೈ. ಎ.ಪಿ.ಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೆಲುಗರು ಹೆಚ್ಚಿನ ಸಂಕೆಯಲ್ಲಿದ್ದಾರೆ. ತೆಲುಗು ಸನಿಮಾಗಳನ್ನು ಕನ್ನಡಿಗರು ಮುಗಿ ಬಿದ್ದು ನೋಡುತ್ತಿದ್ದಾರೆ. ಆ ರೀತಿ ಕನ್ನಡಿಗರು ತೆಲುಗು ಕಲಿಯುತ್ತಿದಾರೆ, ಆದರೆ ತೆಲುಗರು ಕನ್ನಡ ಕಲಿಯುವ ಪ್ರಮೇಯವೇ ಬರಲ್ಲಾ.

ಏ.ಪಿ ಗಡಿಗಳಲ್ಲಿ ಕನ್ನಡ ಬರದೇ ಇರೋರು ಬಹಳ ಇದಾರೆ. ಮಹಾರಸ್ಟ್ರದಂತೆ ಎ.ಪಿ. ನಮ್ಮ ನೆಲೆ ಕೇಳುತ್ತಿಲ್ಲವಾದರೂ ಗಡಿಗಳಲ್ಲಿ ಅಸ್ಟೇ ಅಲ್ಲ ಇಡೀ ಕರುನಾಡಲ್ಲಿ ಸಿನಿಮಾ ಮೂಲಕ ತೆಲುಗು ನುಗ್ಗುತ್ತಿದೆ. ನಾನು ಡಬ್ಬಿಂಗ್‍ಗೆ ಅವಕಾಸ ಕೊಡಬೇಕು ಅಂತ ಬಡಕೋತಿರುವದು ಇದಕ್ಕಾಗೇ.

ಟಿ.ವಿ9 ನಲ್ಲಿ ತೆಲುಗಿನ ಹೀರೋಗಳಾದ ಚಿರಂಜೀವಿಯಿಂದ ಹಿಡಿದು, ಅರುಣ್ ಪಾಂಡ್ಯಾವರೆಗೆ, ಅವರಿಗೆ ನಗಡಿಯಾದರೂ ಇಲ್ಲಿ ಅದು ಹೆಡ್ ಲೈನ್ಸ್ ಸುದ್ದಿ. ಇದೊಂದು ವರ್ಚುಅಲ್ ತೆಲುಗು ಚಾನೆಲ್!!

ಏನು ಮಾಡಬೇಕು?

೧) ಗಡಿಗಳಲ್ಲಿ ಕನ್ನಡವನ್ನು ಉಳಿಸಬೇಕು, ಕನ್ನಡ ಮೀಡಿಯಮ್ ಸಾಲೆಗಳಿಗೆ ಸರಿಯಾದ ಟೀಚರ್‍ಗಳನ್ನು ನೇಮಿಸಬೇಕು.

೨) ಸ್ಟೇಟ್ ಸಿಲಾಬಸ್ ನ್ನು ರಿವೈಸ್ ಮಾಡಬೇಕು, ಸಿ.ಬಿ.ಎಸ್.ಸಿ ಸಿಲೆಬಸ್‍ಗೆ ಕೊಂಚ ಮಟ್ಟಿಗಾದರು ಸಾಟಿಯಾಗುವಂತಿರಬೇಕು.

೩) ಡಬ್ಬಿಂಗ್ ಸಿನಿಮಾಗೆ ಅವಕಾಸ ನೀಡಬೇಕು, ಇದರಿಂದ ಒಳ್ಳೊಳ್ಳೆ ಇಂಗ್ಲೀಶ್ ಸಿನಿಮಾಗಳು ಕನ್ನಡದಲ್ಲಿ ಬರತೊಡಗಿದರೆ ಆ ನೆಪದಲ್ಲಿ ಮರಾಟಿಗರು, ತೆಲುಗರು ಕನ್ನಡ ಕಲಿತಾರೆ.

೪) ಒಳ್ಳೊಳ್ಳೇ ಕನ್ನಡ ಸಿನಿಮಾಗಳನ್ನು ಮಾಡಬೇಕು, ಗಡಿಗಳಲ್ಲಿ ಬಿಡುಗಡೆ ಮಾಡಬೇಕು.

ಏನು ಮಾಡಬಹುದು ಅಂತ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ನನ್ನಿ.

Average: 2 (1 vote)
1855 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
gc's picture
22
Aug
2007
9:17

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ದಕ್ಷಿಣ ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳು ಮತ್ತು ಊರಿನ ಹೆಸರುಗಳು ಹೇರಳವಾಗಿ ಸಿಗುತ್ತವೆ. ಎಲ್ಲೂರಿನಂತೆ ಶಿರೂರು ಇದೆ. ಕೊಲ್ಲಾಪುರ, ಜತ್ತ, ಅಕ್ಕಲಕೋಟೆ ಮತ್ತು ಸೊಲ್ಲಾಪುರ ನಮ್ಮ ಕೈತಪ್ಪಿದವು. ಪಾಟೀಲ ಪುಟ್ಟಪ್ಪನವರು ಹೇಳುವಂತೆ ಬ್ರಿಟಿಷರ ಕಾಲದಲ್ಲಿ ಪಶ್ಚಿಮದಲ್ಲಿರುವ ಸಿಂಧೂದುರ್ಗದಲ್ಲಿ ಕನ್ನಡ ಮಾತಾಡುವವರಿದ್ದರು. ನಾವು ಇತಿಹಾಸದಿಂದ ಸರಿಯಾದ ಪಾಠಗಳನ್ನೇ ಕಲಿತಿಲ್ಲ. ನೀವು ಹೇಳುವ ಹಾಗೆ ನಮ್ಮ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಬೇಕು. ಆದರೆ ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ ಗಳನ್ನು ಅಳತೆಗೋಲಾಗಿ ನೋಡುವುದು ಬೇಡ. ನನ್ನ ಸಂಬಂಧಿಕರಲ್ಲಿ ಕೆಲವರು ಈ ಶಾಲೆಗಳಿಗೆ ಹೋಗ್ತಾರೆ. ನನ್ನ ಅಭಿಪ್ರಾಯದಲ್ಲಿ ಈ ಶಾಲೆಗಳಲ್ಲಿ ಸಿಗೋದು quantitative knowledge ಮಾತ್ರ. ಇದರ ಬದಲು quality ಯತ್ತ ನಮ್ಮ ಗಮನವಿರಲಿ. ನಮ್ಮ ಸ್ಟೇಟ್ ಸಿಲೇಬಸ್ ಈಗಾಗಲೆ ರಿವೈಸ್ ಆಗಿದೆ!! ಅಂಕಗಳ ಮಹತ್ವ ಹೋಗಿ ಗ್ರೇಡ್ ವ್ಯವಸ್ಥೆ ಬಂದಿದೆ (SSLC ಹೊರತಾಗಿ). ಸೃಜನಶೀಲತೆ, ಪಠ್ಯೇತರ ಚಟುವಟಿಕೆ, project work, ಮುಂತಾದವುಗಳಿಗೆ ಮಹತ್ವ ನೀಡಲಾಗುತ್ತಿದೆ. ಇವುಗಳ ಅನುಷ್ಠಾನ ಸರಿಯಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. Our goal should be to eliminate the rote learning system and build a new system that encourages creativity, critical and independent thinking skills. ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ ಶಾಲೆಗಳಲ್ಲಿ ನಮ್ಮ ರಾಜ್ಯದ ಇತಿಹಾಸ, ನುಡಿ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಇತಿಹಾಸ, ಭೂಗೋಳವನ್ನು ಸರಿಯಾಗಿ ಕಲಿಸುವುದಿಲ್ಲ. ವಿಜ್ಞಾನ ಮತ್ತು ಗಣಿತಕ್ಕಿರುವ ಮಹತ್ವ humanitiesಗೂ ಇರಬೇಕು.
hamsanandi's picture
22
Aug
2007
10:02

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ದಕ್ಷಿಣ ಮಹಾರಾಷ್ಟ್ರ (ಅಂದರೆ ಸೊಲ್ಲಾಪುರ, ಕೊಲ್ಹಾಪುರ, ಸಾಂಗ್ಲಿ, ಲಾತೂರ್ ಮೊದಲಾದ ಜಿಲ್ಲೆಗಳಲ್ಲಿ) ಬಹಳ ಕನ್ನಡಿಗರಿದ್ದಾರೆ - ಆದರೆ ಆ ಸನುಗೂ ತಿಳಿಯದಂತಿರುತ್ತದೆ. ಬೆಳಗಾವಿಯಲ್ಲಿ ಎಲ್ಲಾ ಕಡೆ ಕನ್ನಡದ ಜೊತೆ ಮರಾಠಿ ಬೋರ್ಡ್ ಗಳು ರಾರಾಜಿಸುತ್ತಿದ್ದರೆ, ಕೊಲ್ಲಾಪುರದಲ್ಲಿ, ಸೊಲ್ಲಾಪುರದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡರೂ ಒಂದು ಕನ್ನಡ ಅಕ್ಷರಗಳು ಕಾಣಸಿಗದು. ಇನ್ನು ಕರ್ನಾಟಕದೊಳಗೇ ಇರುವ ನಿಪ್ಪಾಣಿಯಲ್ಲಿ ಔಷಧಿಗೆ ಅಂತ ಕೇಳಿದರೂ ಒಂದು ಕನ್ನಡ ಬೋರ್ಡ್ ಸಿಗಲಾರದು. ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿರುವ ನಿಪ್ಪಾಣಿ ಎಂಬ ಹೆಸರಿಗೆ ಕಪ್ಪು ಬಳಿದು, निपाणी ಎಂಬ ಭಾರೀ ಗಾತ್ರದ (೬ ಅಡಿ ಎತ್ತರದ) ಹೆಸರು ಹೊಳೆಯುತ್ತಿದೆ. ಇದರ ಕಾರಣಗಳಲ್ಲಿ ಕರ್ನಾಟಕ ಸರ್ಕಾರದ ನಿರ್ಲಕ್ಷಯವೂ ಸೇರಿದೆ. ಗಡಿನಾಡಿನ ಜನಕ್ಕೆ ಬೇಕಾದ ಸೌಕರ್ಯಗಳನ್ನು ಕೊಡುವಲ್ಲಿ ಅದು ಸೋತಿದೆ. ಈಗ ಹೇಗಿದೆಯೋ ಗೊತ್ತಿಲ್ಲ. ಹಿಂದೆ, ಬೆಳಗಾವಿ-ಕೊಲ್ಲಾಪುರ ರಸ್ತೆಯಲ್ಲಿ ( ಅದೇ ರೀತಿ, ಕರ್ನಾಟಕದ ಇನ್ನೊಂದು ತುದಿಯ ಚಾಮರಾಜನಗರದಿಂದ ಸತ್ಯಮಂಗಲಕ್ಕೆ ಹೋಗುವ ದಾರಿಯಲ್ಲೂ) ಹೋದರೆ, ಕರ್ನಾಟಕ ಎಲ್ಲಿಗೆ ಮುಗಿಯಿತು ಎಂದು ಕಣ್ಣು ಮುಚ್ಚಿ ಹೇಳಬಹುದಾಗಿತ್ತು. ರಸ್ತೆಯ ಹೊಂಡಗಳಿಂದ ಜಗ್ಗುನುಗ್ಗಾಗುತ್ತಿರುವ ಮೈಗೆ,ಬಸ್ ಸದ್ದಿಲ್ಲದೆ ಹೋಗುತ್ತಿದೆ ಎಂದರೆ, ಕರ್ನಾಟಕದ ಗಡಿ ದಾಟಿದ್ದೇವೆ ಎಂದೇ ಅರ್ಥವಾಗಿತ್ತು :( -ಹಂಸಾನಂದಿ
ಸಂಗನಗೌಡ's picture
22
Aug
2007
10:22

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮರಾರಾಸ್ಟ್ರ ಒಳನಾಡುಗಳಲ್ಲಿ ರೋಡುಗಳು ನೋಡಲಾಗದಂತಿದ್ದರೂ, ಗಡಿಯಲ್ಲಿ ಅಸ್ಟೇ ಅಗದಿ ಲಕ ಲಕ ಹೊಳೆಯುವಂತೆ ಮಾಡಿಕೊಂಡಿದ್ದಾರವರು. ಜಮಕಂಡಿಯಿಂದ ಅತ್ನಿ ಮೇಲೆ ಹಾಯ್ದು, ಮಿರಜಿಗೆ ಹೋಗುವ ರೋಡಿನ ಕತೆಯೂ ಅದೇ. ಮಹಾರಸ್ಟ್ರ ಸುರು ಆದಂತೆ ರೋಡು ಇದ್ದಕ್ಕಿದ್ದಂತೆ ಅಗಲಗೊಂಡು, ಒಳ್ಳೆ ತುಪ್ಪ ಬಿದ್ದರೂ ಬಳಿದುಕೊಳ್ಳಬಹುದು, ಆಟೊಂದು ಚೆಂದವಾಗುತ್ತದೆ. ಬೋರ್ಡುಗಳಂತೂ ಕಾಗವಾಡದಿಂದಲೇ ಮರಾಟಿ ಸುರು. ಅದನ್ನು ದಾಟಿದ ಮೇಲೆ ದುರ್ಬೀನ್ ಹಾಕಿ ಹುಡುಕಬೇಕು ಕನ್ನಡವನ್ನು. ಆದರೆ ಅಲ್ಲಿನ ದಿಟ್ಟ ಕನ್ನಡಿಗರು ಈ ಎಲ್ಲ ದಬಾಳಿಕೆಯ ನಡುವೆ ತಿಳಿಗನ್ನಡವನ್ನು ಉಳಿಸಿಕೊಂಡಿದ್ದಾರೆ. ಮಹಾರಸ್ಟ್ರದ ಜತ್‍ನಲ್ಲಿ ಪಿ.ಯು.ಸಿ ಕೂಡ ಕನ್ನಡ ಮೀಡಿಯಮ್‍ನಲ್ಲಿದೆ. ಗಡಿಯಲ್ಲಿನ ರೋಡುಗಳನ್ನು ನಮ್ಮ ಸರಕಾರ ಚೆಂದಗೊಳಿಸಬೇಕು, ಕೇಳಿಸಿಕೊಳ್ಳಬೇಕಾದವರು, ಕೇಳುತ್ತಿದ್ದಾರೇನು?
mahesha's picture
22
Aug
2007
10:48

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ನಾನಂತೂ ನನ್ನ ಬದುಕಲ್ಲಿ ಚಿಕ್ಕಮಗಳೂರು ಸೀಮೊಗ್ಗೆ ದಾಟಿಲ್ಲ. ನಾನು ನೋಡಿರೋ ಊರುಗಳಲ್ಲಿ ಕನ್ನಡ ಮರೇತಾ ಇದೆ, ಬೆಂಗಳೂರು ಬಿಟ್ಟು. ನಮ್ಮ ಮೈಸೂರು ಬಳಿ ಮಾನಂದವಾಡಿ ಅಂತ ಇದೆ, ಈ ಮಾನಂದವಾಡಿ, ಬಂಟ್ವಾಳ ಕೇರಳದ ಗಡಿ, ಹಾಗೆ ಆನೆಕಲ್ಲು, ಕೊಳ್ಳೇಗಾಲ, ಚಾಮರಾಜನಗ್ರ, ಇವು ತಮಿಳು ನಾಡಿನ ಗಡಿ, ಹಾಗೇ ಬಳ್ಳಾರಿಯ ಹಗರಿ, ಕೋಲಾರದ ಬಾಗೇಪಲ್ಲಿ, ತುಮಕೂರು, ಮೊಣಕಾಲ್ಮೂರು, ಇವೆಲ್ಲವೂ ಗಡಿಗಳೇ, ಆದ್ರೆ ಇಲ್ಲೆಲ್ಲ ಕನ್ನಡ ಸಕ್ಕತ್ತಾಗಿದೆ. ಅದ್ರಲ್ಲೂ ಚಾಮರಾಜನಗ್ರ, ತುಮಕೂರು, ಇಲ್ಲೆಲ್ಲ ನಾವು ಗಡಿಯಲ್ಲಿ ಇದ್ದೀವಿ ಅಂತ ತಿಳಿಯದೇ ಇಲ್ಲ. ಬೆಂಗಳೂರಲ್ಲೂ ಆನೆಕಲ್ಲು, ಇಲ್ಲೆಲ್ಲ ಯಾವ ಪಜೀತಿ ಇಲ್ಲ. ಹಾಗೆ ನೋಡಿದ್ರೆ, ಪಾಪ ತಮಿಳು ನಾಡಿಂದ ನಾವು ಪಡೆದ ಕೊಳ್ಳೇಗಾಲ, ದಕ, ಇಲ್ಲೆಲ್ಲೂ ತಮಿಳರ ಗದ್ದಲ ಮೊದಮೊದಲಿತ್ತು, ಈಗಂತು ಕೊಳ್ಳೇಗಾಲದ ತಮಿಳರೂ ಕೂಡ ಕಾವೇರಿ ಚಳುವಳಿಯಲ್ಲಿ ಬಂದು ನಾವು ಕನ್ನಡಿಗರೇ ಅಂತಾರೆ. ನಮಗೆ ತಮಿಳು, ತೆಲುಗು, ಮಳಯಾಳಿಗಳು( ಕಾಸರಗೋಡರ ಗೊಡವೆ ಇದ್ರೂ, ಪಾಪಾ ಅಲ್ಲಿ ಕನ್ನಡದ ಬೋರ್ಡುಗಳನ್ನು, ಶಾಲೆಗಳನ್ನು, ಬಿಟ್ಟಿದ್ದಾರೆ, ಅದೂ ಅಲ್ಲದೇ, ಕಾಸರಗೋಡಿನ ಮೂರು ತಾಲ್ಲೂಕಲ್ಲಿ ಕನ್ನಡದೊರು ಇರೋದು, ಪಂಜೇ ಮಂಗೇಶರಾಯರ ಕಟ್ಟಡ ಕೇರಳ ಸರಕಾರ ಕಟ್ಟಿದೆಯಂತೆ ), ಇವರ ತಕರಾರೇ ಇಲ್ಲ. ಈ ಮರಾಟಿ, ಕೊಂಕಣಿ ಮಂದಿಯ ಕಿರಿಕಿರಿ ಯಾಕೋ ಬಲು ಆಯ್ತು!! ವಸಿ ಬಡಗಣದೋರು, ಜೋರಾಗಿ!! ಸುಮ್ನೆ ಹಿಂಗೆ ಮೈಮೇಲೆ ಎರಗಕ್ಕೆ ಬಿಡಬ್ಯಾಡಿ. ನಮ್ ವಾಟಾಳ್ ಹಂಗೆ ಆ ಕಡೆಯೂ ಮಂದಿ ಬರಬೇಕು. ಒಂದು ಒಳಗುಟ್ಟು ಗೊತ್ತಾ ವಾಟಾಳಪ್ಪ ಗೆಲ್ಲೋದು ತಮಿಳ ಓಟಿಂದ ಅಂತೆ!! :) ಈ ತೆಂಕಣದಲ್ಲಿ ಕನ್ನಡದ ಮಂದಿ ತುಸು ಬಿಗಿ ಜಾಸ್ತಿ!! ಅದ್ರಲ್ಲೂ ಚಾಮರಾಜನಗ್ರ, ಚಿತ್ರದುರ್ಗ ತುಮಕೂರಲ್ಲಿ ಸಕ್ಕತ್. ಈ ತೆಂಕಣದ ಮಂದಿಗೆ ಪಕ್ಕದ ತಮಿಳರ ಬಗ್ಗೆ ಯಾವಾಗಲೂ ಸಿಟ್ಟು. ಇದು ಇವೊತ್ತಿನದಲ್ಲ ಶಬ್ದಮಣಿದರ್ಪಣದಲ್ಲೇ "ಕಾವೇರಿಯನ್ನು ಈ ತಿಗಳೇನು ಕಡಕ್ಕೆ, ಇಲ್ವೇ ಬಡ್ಡಿ ಕೊಟ್ಟಿದ್ದಾನೇನೋ" ಎಂಬ ಕೆಚ್ಚು ಹೇಳಿದೆ. ಈ ಸಿಟ್ಟೇ ನಮ್ಮ ತೆಂಕಣದ ಗಡಿಯನ್ನು ಕಾದಿದು! :) ಅವರು ಸದ್ದಿಲ್ಲದೇ ಕಬಳಿಸಲು ಎಣಿಸಿದರೆ, ನಾವು ಸದ್ದು ಮಾಡಿ ಅವರು ಕಾಲ್ತೆಗೆಸಬೇಕು!! ಹಿಂಗೇ ಆದ್ರೆ ನಮ್ಮ ತಿರುೞ್ಗನ್ನಡ ನಾಡು ಗೋವಿಂದಾ ಗೋವಿಂದಾ!! ಕರ್ನಾಡಲ್ಲಿ ಬರೀ ನಮ್ಮ ಎಮ್ಮೆನಾಡೇ ನಿಕ್ಕುವ!! :(
ಸಂಗನಗೌಡ's picture
22
Aug
2007
11:37

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಬೆಂಗಳೂರನ್ನು ರಾಜದಾನಿ ಮಾಡಿರುವದರಿಂದ ನೀವು ಜೋರಾಗಿದ್ದೀರಿ, ಆದರೂ ಬೆಂಗಳೂರಲ್ಲಿ ಕನ್ನಡ ಎನ್ನಡ ಆಗಿರೋದು ಎಲ್ಲರಿಗೂ ಗೊತ್ತು, ರಾಜದಾನಿ ನಮ್ ಕಡೆ ಇರಬೇಕಾಗಿತ್ತು, ತೋರಿಸ್ತಾ ಇದ್ದೆವು, ನಾವೂ. :D
mahesha's picture
23
Aug
2007
12:24

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಅಲ್ರೀ... ರಾಜಧಾನಿ ಬರೀ ಇರೋದ್ರಿಂದ ಅಂದ್ರೆ ಹಂಗೆ? ನಿಮ್ಮಿಷ್ಟ!! ಬೇಕಾದ್ರೆ ಉತ್ರದಲ್ಲೇ ರಾಜಧಾನಿಯನ್ನೂ ಮಾಡಿಸಿಕೊಳ್ರಿ! ಈ ಬೆಂಗಳೂರು ಕನ್ನಡ ನಾಡಿನ ರಾಜಧಾನಿ ಆಗಕ್ಕೆ ನಾಲಾಯಕ್ಕಾಗಿದೆ. ಕನ್ನಡವೇ ಇಲ್ಲ ಇಲ್ಲಿ!! ಯಾವ ಹೆಮ್ಮೆಯ ಕನ್ನಡದೊನಿಗೆ ಬೇಕು ಇಂತ ರಾಜದಾನಿ ಕನ್ನಡ ರಾಜ್ಯಕ್ಕೆ. ದಾವಣಗೆರೆಯನ್ನೂ, ಸೀಮೊಗ್ಗೆಯನ್ನೋ, ಗದಗ, ಕೊಪ್ಪಳವನ್ನೂ ಮಾಡಿಸಿಕೊಳ್ಳಿ, ನಾವು ಬರೋಣ ನಿಮ್ಮ ಜೊತೆ.. ಒಟ್ನಲ್ಲಿ... ನೀವು ಜೋರಾಗಲ್ಲ!! :) ಜಗದಲ್ಲಿ ಯಾರು ಬಂದು ನಮಗೆ ಒಳ್ಳೇದು ಮಾಡಲ್ಲ, ನಾವೇ ನಮಗೆ ಒಳ್ಳೇದು ಮಾಡಿಕೋಬೇಕು...!!
Khavi's picture
23
Aug
2007
12:49

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮಹೇಶ ನಾವು ಜೋರಾಗಲ್ಲ ಅಂತ ಯಾರು ಹೇಳಿದರು. ನಮ್ಮನ್ನ ಕಡೆಗಣಿಸಿದಿರಾ ನೀವು (ರಾಜಕಾರಣಿಗಳು) ಅಂತ ನಾವೆಲ್ಲ ಹೋರಟ ಮಾಡಲಿಲ್ವ. ಹಿಂದುಳಿದಿರೋ ನಮಗೆ ಮುಂದೆ ತನ್ನಿ ಅಂತ ಎಷ್ಟು ಜೋರಾಗಿ ಕೂಗಿದರೂ 650ಕಿ.ಮೀ. ದೂರದ ಬೆಂಗಳೂರಿನಲ್ಲಿ ಏ.ಸಿ. ರೂಮಿನಲ್ಲಿ ನಿದ್ದೆ ಹೊಡಿತಿರೋ ಅವರಿಗೆ ಕೇಳಿಸ್ತದೆ ಹ್ಯಾಗೆ. ಅಲ್ಲಿವರೆಗೂ ದುಡ್ಡು ಹಾಕಿ ಹೋಗೋಕಾದರೂ ಆಗುತ್ತ ಅದೂ ಇಲ್ಲ. ಅವರಿಗೆ ನಾವು ನೆನಪಾಗೋದು 5 ಏಡುಗಳ ನಂತರವೇ... ಅದಕ್ಕೆ ಉತ್ತರ ಕರ್ನಾಟಕ ನಮಗೆ ಕೊಡಿ ಅಂತ ಕೇಳಿದ್ವು ... ಈಗ ನೋಡು ಗುಲ್ಬರ್ಗದಲ್ಲಿ ಮೂರು ದೊಡ್ಡ ರಾಜಕಾರಿಣಿಗಳಿದ್ದರೂ ಅದರಪಾಡು ಎಸ್ಟು ಕೆಟ್ಟದಾಗಿದೆ ಅಂತ ಅವರ ಮನೆ ಮುಂದಿನ ರಸ್ತೆನೂ ಸರಿಯಿಲ್ಲ ಅಂದ ಮೇಲೆ ಬೇರೆ ಜನರ ಬಗ್ಗೆ ಅವರಿಗೆ ದಯ ಹೇಗೆ ಬರುತ್ತೆ ಇದಕ್ಕೆ ನಮ್ಮ ಜನಗಳೂ ಕೂಡ ಕಾರಣ ಅನ್ನಬೇಕು.. ರಾಜಕಾರಣಿಗಳು ಓಟು ಕೇಳಲು ಬಂದಾಗ ಸರಿಯಾಗಿ ಬೆದರಿಕೆ ನೀಡಿದರೆ ತಾನೇ ಸರಿಹೋಗ್ತಾರೆ. ತಮಿಳರಂತೆ ಆಗಬೇಕು... ಡೆಲ್ಲಿ ಅಷ್ಟು ದೂರ ಇದ್ದರೂ ಎಲ್ಲ ಗಿಟ್ಟಿಸಿಕೊಳ್ಳಲ್ಲವೆ.. ಹಾಗೆ. ನೀನು ಹೇಳಿದ ಹಾಗೆ ರಾಜಧಾನಿ ದಾವಣಗೆರೆ, ಶಿಮೊಗ, ಧಾರವಾಡದಲ್ಲಿ ಅದರೆ ಪರವಾಗಿಲ್ಲ.
mahesha's picture
23
Aug
2007
1:05

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!"ಬೆಂಗಳೂರಿನಲ್ಲಿ ಏ.ಸಿ. ರೂಮಿನಲ್ಲಿ ನಿದ್ದೆ ಹೊಡಿತಿರೋ ಅವರಿಗೆ ಕೇಳಿಸ್ತದೆ ಹ್ಯಾಗೆ." ಅವರಿಗೆ ಕೇಳಿಸೋ ಹಾಗೆ ಮಾಡಕ್ಕೆ ದಾರಿಗಳಿವೆ.. ನಮ್ಮ ಕಡೆ ನೋಡಿ ನಾವು ನಮ್ಮ ರಾಜಕಾರಣಿಗಳು ಕಿವಿ ಹಿಂಡಿ ಕೇಳ್ತೀವಿ. ಒಬ್ಬನೇ ಹಲವು ಸರತಿ ತೆಂಕಲ್ಲಿ ಗೆಲ್ಲೋದು ಬಲು ಎಡರು, ಆದ್ರೆ ಅತ್ತ ದರಮ ಸಿಂಗ, ಕರ್ಗೆ, ದೇಶಪಾಂಡೆ ಇವರೆಲ್ಲ ಎಸ್ಟು ಎಸ್ಟು ಸರತಿ ಗೆದ್ದು ಬಂದವ್ರೆ. ಎಸ್. ಎಂ. ಕೃಷ್ಣ ತಮಿಳುನಾಡಿಗೆ ನೀರುಬಿಟ್ಟ, ಅದಕ್ಕೆ ಮಂಡ್ಯ ಜಿಲ್ಲೆ, ಹಾಸನ, ಚಾಮರಾಜನಗ್ರ, ಮೈಸೂರು ಇಲ್ಲಿ ಕಾಂಗ್ರೆಸ್ ಸೋತಿತು. ಕೃಷ್ಣನ ತವರಾದ ಮಂಡ್ಯದಲ್ಲಿರುವ ೮ MLA ಸೀಟುಗಳಲ್ಲಿ ಕಾಂಗೈ ಎರಡನ್ನೇ ಗೆದ್ದಿದ್ದು, ಮಿಕ್ಕವು ಜೆಡಿ ಎಸ್ ಪಾಲಾಯ್ತು. ಹಾಗೇ ಹಾಸನದಲ್ಲೂ, ಮೈಸೂರಲ್ಲೂ. ಹೀಗೆ ಹಿಂದೆ ಬಂಗಾರಪ್ಪ ನೀರು ಬಿಟ್ಟಾಗ ಕಾಂಗೈ ಸರಕಾರವನ್ನು ಉರುಳಿಸಿ, ದೇವೇಗೌಡರು ಪಟ್ಟಕ್ಕೆ ಬಂದುದು ಅಲ್ವಾ!! ಆಗ ನಮ್ಮ ಕಡೆ ನಡೆದ ಗಲಾಟೆ ಹೇಗಿತ್ತು ಅಂದ್ರೆ, ನಮಗೆಲ್ಲ ೧ ತಿಂಗಳ ಸ್ಕೂಲ್ ರಜೆ. ಬಂಗಾರಪ್ಪ ಇಳಿಯುವ ತನಕ ಮಂದಿ ಪಟ್ಟು ಹಿಡಿದು ಹೋರಾಟ ಮಾಡಿದ್ರು. ಆಗಂತೂ ಎಷ್ಟು ರೊಚ್ಚಿಗೆದ್ದಿದ್ದರು ಮಂದಿ ಅಂದ್ರೆ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಹಲವೆಡೆ, ಅಡ್ಡಡ್ಡ ನೇಗಲಿಂದ ಉತ್ತಿದ್ದರು, ರೈಲ್ವೇ ನಿಲ್ದಾಣಗಳಲ್ಲೇ ಪೀಸ್ ಪೀಸ್. ಕೇಂದ್ರ ಸರಕಾರ ಒಂದೂ ಆಪೀಸು ನಡೆಯಲು ಬಿಟ್ಟಿಲ್ಲ, ಮೊದಲ ಕೇಂದ್ರದ ಆಪೀಸಿಗೆ ಮುತ್ತಿಗೆ. ಹೀಗೆ ಜೋರಾಗಬೇಕು!! ನಮ್ಮ ಕಿವುಡು ಮುಂದಾಳುಗಳಿಗೆ ಹೀಗೇ ತಲೆಗೆ ಇಳಿಯೋದು.!! ಈ ಸರತಿಯ ಒಳ್ಳೆಯ ಬೆಳವಣಿಗೆ ಅಂದ್ರೆ ಬೆಳಗಾವಿಗಾಗಿ, ನಮ್ಮ ಮೈಸೂರ ಕಡೆ ಜೋರಾಗಿ ಬಂದ್ ನಡೆಯಿತು, ಹಾಗೇ ಕಾವೇರಿಗಾರಿ ಆ ಕಡೆ ಹೋರಾಟವಾಯ್ತು!! ನಮಗಂತೂ ಬೆಳಗಾವಿಯಲ್ಲಿ ಆ ಕೇಸರಿ ಬಾವುಟ ಇಳಿಸಿ, ಕನ್ನಡ ಬಾವುಟ ಹಾರಿಸಿದ ಪೋಟೋಗಳನ್ನು ನೋಡಿ ಬಲು ಸಂತೋಸವಾಯ್ತು. ಹೀಗೆ ಬೆಳಗಾವಿಗಾಗಿ ವರುಸ/ವರುಸ ಒಂದೊಂದು ಬಂದ್ ಮಾಡಿದ್ರೆ ನಮ್ ಸರಕಾರ, ಕೇಂದ್ರ ಬುದ್ದು ಬತ್ತದೆ.! ಸಾಧುಗೆ ಸಾಧುವಾಗಿರಬೇಕು, ಆದ್ರೆ ಮೊಂಡರಿಗೆ ಮೊಂಡತನವೇ ಉತ್ರ, ಬಂಡರಿಗೆ ಬಂಡತನವೇ ಶಾಸ್ತಿ!
ಸಂಗನಗೌಡ's picture
24
Aug
2007
1:12

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಈಗ ಎರಡು ಹೊಸ ಜಿಲ್ಲೆಗಳನ್ನು ಮಾಡಿದರು, ತೆಂಕಣದಲ್ಲಿ ಹೆಜ್ಜೆ ಹೆಜ್ಜೆಗೊಂದು ಜಿಲ್ಲೆ, ಬಡಗಣದಲ್ಲಿ ದೊಡ್ಡ ದೊಡ್ಡ ಜಿಲ್ಲೆಗಳು, :( ಮೊನ್ನೆ ಮೊನ್ನೆವರೆಗೂ ತುಂಬಾ ದೊಡ್ಡ ಜಿಲ್ಲೆ ಬಿಜಾಪುರ ಹಾಗೆ ಇತ್ತು. ಗೋಕಾಕನ್ನು ಜಿಲ್ಲೆ ಮಾಡಿ ಅಂತ, ಹಾರಾಡಿದ್ರು, ಏನಾಯ್ತು? ನಾವು ಏನ್ ಮಾಡ್ತೀವೋ ಅದರಿಂದ ಬೆಂಗಳೂರಿಗೆ ಬಿಸಿ ಮುಟ್ಟಬೇಕು, ಅಂದರೆ ಕೆಲಸವಾಗುತ್ತೆ, ನಿಮಗೆ ಆ ತರ ಅವಕಾಸಗಳಿದಾವೆ, ನಮಗಿಲ್ಲ. ನಿಮ್ಮ ಮಾತಲ್ಲು ದಿಟ ಇದೆ, ನಾವು ಕಿರುಚೋದನ್ನು ಕಲಿಬೇಕಿದೆ....
mahesha's picture
24
Aug
2007
9:01

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಸಂಗನ ಗೋಕಾಕು ಕಂಪಣ/ಜಿಲ್ಲೆ ಮಾಡ್ತೀನಿ ಅಂತ ಕುಮಾರಸಾಮಿ ಹೇಳಿದ್ರೆ, ಚಿಕ್ಕೋಡಿ ಕಂಪಣ ಮಾಡಿ ಅಂತ ಚಿಕ್ಕೋಡಿಯವರು ಪಟ್ಟು. ಅಲ್ಲಿ ಯಾದಗಿರ ಜೊತೆ ಇನ್ನಾವುದೋ ಊರು ಕಚ್ಚಾಟ. ಹೆಸರಿಗೆ ಯಾಕೆ ಹೊಡೆದಾಡ್ತಿದ್ದಾರೆ ಅಲ್ಲಿ? ಇತ್ತ ತೆಂಕಲ್ಲಿ ನೋಡಿದ್ರೆ ರಾಮನಗರಕ್ಕಿಂತ ಚನ್ನಪಟ್ಣ ದೊಡ್ದು, ಆದ್ರೆ ರಾಮನಗರವೇ ಕಂಪಣ ಹೆಸರಾಯ್ತು. ಹಾಗೇ ಹಲವು ಇವೆ. ಒಕ್ಕಟ್ಟು ಅಂತ ಬೇಕಲ್ಲ. ತೆಂಕಲ್ಲಿ ಇನ್ನೂ ಒಂದು ತಿಪಟೂರು ಕಂಪಣಗಳು ಮಾಡಬೋದು, ಅದಕ್ಕೆ ಹಾಸನ ಅರಸೀಕೆರೆ ಸೇರಿಸಬೋದು. ಆ ಕಲ್ಬುರ್ಗಿ, ಬೆಳಗಾವಿ ಇವೆಲ್ಲ ಎಸ್ಟು ದೊಡ್ಡವು. ಬಳ್ಳಾರಿಯನ್ನೇ ಹರಿದು ಮೂರು ಕಂಪಣ ಮಾಡಿದ್ರು.
gc's picture
24
Aug
2007
10:56

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಎಲ್ಲದ್ದಕ್ಕೂ ಉತ್ತರ ಕರ್ನಾಟಕದಲ್ಲಿ ಹೋರಾಟವೇಕೆ? ಇಂತಹ ಕೆಲ ವಿಷಯಗಳನ್ನು ಐತಿಹಾಸಿಕ ಚೌಕಟ್ಟಿನಲ್ಲಿ ನೋಡಬೇಕು. ವಿಜಯನಗರದ ಪತನದವರೆಗೆ ಉತ್ತರ ಕರ್ನಾಟಕದ ಭಾಗಗಳು ದಖನ್ನಿನ ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ಮತ್ತೆ ರಾಜಕೀಯ ಶಕ್ತಿ ಬಂದಿರುವುದು ಏಕೀಕರಣದ ನಂತರ. ಆದರೆ ಹಳೆ ಮೈಸೂರಿನ ಭಾಗಗಳಿಗೆ ರಾಜಕೀಯ ಶಕ್ತಿ ಓಡೆಯರ ಕಾಲದಿಂದಲೂ ಇದೆ. ಆದ್ದರಿಂದ ಅಲ್ಲಿ ಎಲ್ಲದ್ದಕ್ಕೂ ಹೋರಾಡುವ ಅಗತ್ಯವಿಲ್ಲ. ತಮ್ಮ ರಾಜಕೀಯ ಶಕ್ತಿ ಕಡಿಮೆಯಾಗಬಹುದೆಂದು ಕೆಲ ಹಳೆ ಮೈಸೂರಿನ ನಾಯಕರು ಕರ್ನಾಟಕದ ಏಕೀಕರಣವನ್ನು ವಿರೋಧಿಸಿದ್ದರು!!. ನಂತರ ಏಕೀಕರಣವಾಗಲು ಕೆಲ ಶರತ್ತುಗಳನ್ನು ಹಾಕಿದ್ದರು - ರಾಜ್ಯದ ಹೆಸರು ಮೈಸೂರು ಮತ್ತು ರಾಜಧಾನಿ ಬೆಂಗಳೂರು ಆಗಬೇಕೆಂದು. ಇಂತಹ ಭಾವನೆಗಳ hangover ಇನ್ನೂ ಕೆಲ ರಾಜಕಾರಣಿಗಳಲ್ಲಿದೆ. ಉತ್ತರದ ಪ್ರಗತಿಗೆ ಅಡ್ಡಗಾಲು ಹಾಕುವ ಅನೇಕ ನಾಯಕರು ಮತ್ತು ಅಧಿಕಾರಿಗಳಿದ್ದಾರೆ. ಅದರ ವಿರುದ್ಧ ಉತ್ತರದಲ್ಲಿ ಹೋರಾಟ ನಡೆಯುತ್ತದೆ. ಇತ್ತೀಚೆಗೆ ಕಲಬುರ್ಗಿಯ ಜನ ಕೇಂದ್ರೀಯ ವಿ.ವಿ. ಸ್ಥಾಪನೆಗಾಗಿ ಹೋರಾಡಲು ಶುರು ಮಾಡಿದ್ದಾರೆ. ಯಾಕೆ? ನಂಜುಂಡಪ್ಪನವರ ವರದಿಯ ಶಿಫಾರಸಿನ ಪ್ರಕಾರ ಕಲಬುರ್ಗಿ ವಿಭಾಗದಲ್ಲಿ ಕೇಂದ್ರೀಯ ವಿ.ವಿ. ಸ್ಥಾಪನೆಯಾಗಬೇಕಿತ್ತು. ಆದರೆ ಸಚಿವ ಶಂಕರಮೂರ್ತಿಯ ಶಿಕ್ಷಣ ಇಲಾಖೆ ಮೈಸೂರು ಅಥವಾ ಹಾಸನದಲ್ಲಿ ಕೇಂದ್ರೀಯ ವಿ.ವಿ. ಸ್ಥಾಪನೆಗೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು!! ಕಲಬುರ್ಗಿಯಲ್ಲಿ ಹೋರಾಟ ಶುರುವಾಗುತ್ತಿದ್ದಂತೆ ಸರ್ಕಾರ ಈಗ ತಾಳ ಬದಲಾಯಿಸಿದೆ. ಹೊಳೆ ನರಸೀಪುರವೇ ಜಗತ್ತಿನ ಕೇಂದ್ರವೆಂದುಕೊಂಡಿರುವ ಸಚಿವ ರೇವಣ್ಣ ಧಾರವಾಡದ ಟಾಟಾ ಮೋಟಾರ್ ಕಂಪನಿಯ ಯೋಜನೆಗೆ ಅಡ್ಡಗಾಲು ಹಾಕಲು ಯತ್ನಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ರೇವಣ್ಣರ ವಿರುದ್ಧ ಸಚಿವ ಜಗದೀಶ ಶೆಟ್ಟರ್ ದನಿಯೇರಿಸಬೇಕಾಯಿತು. ಕಳೆದ ೫೦ ವರ್ಷಗಳಲ್ಲಿ ನಡೆದ ಇಂತಹ ಘಟನೆಗಳೆಷ್ಟು? ಇದನ್ನೆಲ್ಲಾ ನೋಡಿದಾಗ ಉತ್ತರ, ದಕ್ಷಿಣ ಮತ್ತು ಕರಾವಳಿಯ ಜನ ಭಾವನಾತ್ಮಕವಾಗಿ ಮೊದಲು ಒಗ್ಗೂಡಬೇಕು. ಇಲ್ಲಿಯವರೆಗೆ ನಾವೇ ನಮ್ಮ ವೈರಿಗಳಂತೆ ನಡೆದುಕೊಂಡಿದ್ದೇವೆ.
ವೈಭವ's picture
24
Aug
2007
11:12

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!"...ಇದನ್ನೆಲ್ಲಾ ನೋಡಿದಾಗ ಉತ್ತರ, ದಕ್ಷಿಣ ಮತ್ತು ಕರಾವಳಿಯ ಜನ ಭಾವನಾತ್ಮಕವಾಗಿ ಮೊದಲು ಒಗ್ಗೂಡಬೇಕು. ಇಲ್ಲಿಯವರೆಗೆ ನಾವೇ ನಮ್ಮ ವೈರಿಗಳಂತೆ ನಡೆದುಕೊಂಡಿದ್ದೇವೆ.." ತೆಂಕಣದವರಿಗೋಸ್ಕರ ಬಡಗಣರು ಮತ್ತು ಬಡಗಣರಿಗೋಸ್ಕರ ತೆಂಕಣದವರು ಹೋರಾಡಬೇಕು, ಆಗಲೇ ಕನ್ನಡ ನಾಡು ಉಳಿಯುವುದು ಬೆಳೆಯುವುದು. ಈಗ ಪರ್ವಾಗಿಲ್ಲ ಬೆಳಗಾವಿಲಿ ಏನಾದ್ರೂ ಆದ್ರೆ ಬೆಂಗಳೂರು ಎಚ್ಚತ್ತುಕೊಳ್ಳುತ್ತೆ.
mahesha's picture
24
Aug
2007
11:38

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!gc ನಾನೊಂದು ಹೇಳ್ತೀನಿ ನೇರವಾಗಿ.. ಮೊದಲು ಬಡಗಣದೊರಿಕೆ ಮೈಸೂರಿನ ತೆಂಕಣದೊರು ಅಡ್ಡಗಾಲು ಹಾಕ್ತೀವಿ, ಅವರನ್ನು ಕಡೆಗಾಣಿಸ್ತೀವಿ, ಅವರನ್ನ ಬೆಳೆಯಕ್ಕೆ ಬಿಡಲ್ಲ, ಇಂತ ಅನಿಸು/ಭಾವನೆ ತಪ್ಪು. ಮೈಸೂರಿನಲ್ಲಿ ರಾಜಕೀಯವಾಗಿ ಹಲವು ಚಳುವಳಿಗಳು ನಡೆದಿವೆ, ಅದರಲ್ಲೂ ಒಕ್ಕಲಿಗರೇ ಮುಂದಾಳುಗಳ. ನಮ್ಮ ದೇಸದಾಗೆ ಮೊದಲು ಮೀಸಲು ತಂದುದು ಮೈಸೂರು. ಈ ಹೋರಾಟ ನಡೆದುದೇ ಒಕ್ಕಲಿರಿಗೆ ರಾಜಕೀಯದಲ್ಲಿ ಪಾಲಿಗಾಗಿ. ಅಂದು ಎಚ್ಚೆತ್ತ, ಎದ್ದ ಒಕ್ಕಲಿಗ ಈ ಉಂಕು/ಯೋಚನೇ ಇನ್ನೂ ಹಾಗೇ ಇದ್ದು, ಬೆಳೆದು ಹೆಮ್ಮರವಾಗಿದೆ. ಇವರು ಯಾವಾಗಲೂ ನೆಲದ ಆಡಳಿತವನ್ನು ತಮ್ಮ ಕೈಯಲ್ಲೇ ಹಿಡಿದುಕೊಳ್ಳಲು ದುಡಿಯುವವರು. ಹಾಗೇ ತಮ್ಮ ತಮ್ಮ ನೆಲವನ್ನು ಬಲು ಎಚ್ಚರದಿಂದ ಕಾಯುವರು. ಈ ಕಡೆ ಮೈಸೂರ ಮಾರಾಜ ಏನೇ ಮಾಡಿದ್ರು, ಆಮೇಲೆ ಬಂದ ಒಕ್ಕಲಿಗ ರಾಜಕಾರಣಿಗಳೇ ಹೆಚ್ಚು ದುಡಿದಿರೋದು. ಕೆಂಗಲ್ ಹನುಮಂತಯ್ಯ, - ಎಸ್.ಎಂ.ಕೃಷ್ಣ - ಈಗ ಕುಮಾರಸ್ವಾಮಿ ಇವರೆಲ್ರೂ ತಮ್ಮ ತಮ್ಮ ಊರನ್ನು ಚನ್ನು ಮಾಡಿದವರೇ!! ಆದ್ರೆ ಬಡಗಿನ ಮಂದಿಗೆ ಈ ಬುದ್ದಿ ಯಾಕಿಲ್ಲ? ಎಸ್ಟು ಮಂದಿ ಅಲ್ಲಿಂದ ನಮ್ಮ ಶಾಸನಸಭೆ ಬತ್ತಾರೆ. ಎಸ್ಟು ಮಂದಿ ಮುಕ್ಯಮಂತ್ರಿ ಆಗವ್ರೆ. ಅವರಿಗೆ ಬೇಕಲ್ವಾ ತಮ್ಮ ತಮ್ಮ ಊರು ಕೇರಿ ಉದ್ದಾರ ಮಾಡೋ ಕಾಳಜಿ, ಹೊಣೆಗಾರಿಕೆ, ಚುರುಕತನ. ಅದಿಲ್ಲದಿದ್ರೆ ಅದಕ್ಕೆ ಈ ಕಡೆಯವರ ಮೇಲೆ ಯಾಕೆ ದೂರಬೇಕು!! ಬೆಳಗಾವಿಯಲ್ಲಿ ಅದಿವೇಸನ ಮಾಡಿಸಿದ್ದು ದರಮಸಿಂಗ ಅಲ್ಲ, ಕುಮಾರಸ್ವಾಮಿ. ಹಾಗೇ ನಂಜುಂಡಪ್ಪ ವರದಿ ಬಗ್ಗೆ ವಾಟಾಳ್, ಮುಖ್ಯಮಂತ್ರಿ ಚಂದ್ರು ಯಾವಾಗ್ಲೂ ಮಾತಾಡ್ತಾನೆ ಇರ್ತಾರಲ್ಲ. ಗಡಿನಾಡ ಹೋರಾಟ ಅಂದ್ರೆ ಅದು ಯಾವಾಗ್ಲೂ ವಾಟಾಳು, ಮುಕ್ಯಮಂತ್ರಿ ಚಂದ್ರು ಮುಂತಾದ ಈ ಕಡೆಯೊರು ಇದ್ದೇ ಇರ್ತಾರೆ. ನನಗೆ ಹೀಗೆ ಒಬ್ರ ಮೇಲೊಬ್ರೂ ಬೆಟ್ಟು ಮಾಡೋದು, ತಮ್ಮ ತಮ್ಮ ಹೊಣೆಯಿಂದ ಜಾರಿಕೊಳ್ಳೋ ಒಂದು ಸುಲಬವುಪಾಯ ಅನ್ನಿಸ್ತದೆ. ಗಮನಿಸಿರಿ, ಕಾವೇರಿ-ಹೇಮಾವತಿ ಸೀಮೆಯ ಮಂದಿಯಾಗಲಿ, ಮುಂದಾಳುಗಳಾಗ್ಲಿ, ಯಾವೊತ್ತು ಕೆಲಸ ಆಗ್ಲಿಲ್ಲ ಅಂದ್ರೆ ಬೇರೆಯೊರನ್ನ ದೂರೊದು ಕಮ್ಮಿ, ಬದಲಿಗೆ ಅದು "ಯಾಕೆ ಆಗಲ್ಲ, ಮಾಡಲ್ಲ ನೀನು ಅಂತ ಪಟ್ಟು ಹಿಡಿಯೋದೇ ಹೆಚ್ಚು". ನೀವು ರೇವಣ್ಣ ಹೊಳೆನರಸೀಪುರಕ್ಕೆ ಕೈಗಾರಿಕೆ ತಂದದ್ದು ಏನೋ ಬಡಗಣದೊರಿಗೆ ( ಬೇರೆ ಕಡೆಯೋರಿಗೆ ) ಮಾಡಿದ ಮೋಸ ಎಂಬಂತೆ ( ನನ್ನ ಅನಿಸಿಕೆ) ಹೇಳೀರಿ. ಆದ್ರೆ ನಾನು ಅದನ್ನ ಮತ್ತೆ ಬೇರೆಯವರನ್ನು ದೂರಿ ಹೊಣೆಯಿಂದ ನುಣಿಚಿಕೊಳ್ಳೂ ಸುಲಬವುಪಾಯ ಅಂತೀನಿ. ರೇವಣ್ಣನ ಹತ್ರ ಹಿಡಿತವಿದೆ, ಅದಿಕಾರವಿದೆ, ತನ್ನ ಊರು ಕೇರಿ ಉದ್ದಾರ ಮಾಡೊ ಬುದ್ದಿ ಇದೆ, ಕಾಳಜಿ, ಅಕ್ಕರೆ ಇದೆ, ಅದಕ್ಕೆ ಮಾತಾಡ್ತಾರೆ. ಆದ್ರೇ ಇದೇ ಬುದ್ದಿ ಜೆ.ಹೆಜ್ ಪಟೇಲ್ರಿಗೆ, ದರಮ ಸಿಂಗರಿಗೆ, ಕರ್ಗೆಗೆ, ದೇಸಪಾಂಡೆಯವರಿಗೆ, ಇನ್ನು ಮುಂತಾದ ಹಳೆ ಹಳೆ ತಲೆಗಳಿಗೆ ಯಾಕೆ ಇಲ್ಲ. ರೇವಣ್ಣನ ವಯಸ್ಸಿಗೆ ಆಯಪ್ಪ ಹಾಸನ ಹೊಳೆನರಸೀಪುರಕ್ಕೆ ಸಕ್ಕತ್ತಾಗೇ ದುಡಿದವ್ರೆ. ಅವರಪ್ಪನೂ ಹಂಗೆ ಏಸಿಯದಲ್ಲೇ ದೊಡ್ಡದಾದ aquaduct/ಮೇಲ್ಕಾಲುವೆ ಅನ್ನು ದೇವೇಗೌಡ್ರು ಹೊಳೆನರಸೀಪುರದಲ್ಲಿ ಕಟ್ಟಿಸಿದ್ರು, ಆಗಲೇ ಅದರ ಎರಡನೇ ಹಂತವೂ ಮುಗಿತು. ಇನ್ನು ಕುಮಾರಸ್ವಾಮಿ ಏನು ಕಡಮೆ ಮಾಡವ್ರೆ ರಾಮನಗರಕ್ಕೆ. ಆಗಲೇ ರಾಮನಗರ ಜಿಲ್ಲೆ ಆಯ್ತು. ಇವರನ್ನೆಲ್ಲ ಯಾಕೆ ಬಡಗಣದೊರು ಮಾದರಿಯಾಗಿ ತಕ್ಕೋ ಬಾರ್ದು? ಗಮನಿಸಿ: ಯಾವಾಗ್ಲು ಬಡಗಣದಿಂದಲೇ ಹೆಚ್ಚು ಮಂತ್ರಿಗಳು ಸಾಸಕರು ಬರೋದು!! ಆದ್ರೂ ಕೆಲಸ ಮಾಡಕ್ಕಿಲ್ಲ ಅಂದ್ರೆ ಅದು ರೇವಣ್ಣ-ಕುಮಾರಸ್ವಾಮಿ ತಪ್ಪಲ್ಲ!!
mahesha's picture
24
Aug
2007
11:57

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ವಿಸಯಕ್ಕೆ ಕಬಳಿಕೆ ನಿಲ್ಲಿಸೊದಕ್ಕೆ ಮೊದಲು ಆ ಆ ಊರೋರು ಎಚ್ಚೆತ್ತುಕೊಳ್ಳಬೇಕು. ಅದು ಬಡಗೋ, ತೆಂಕೂ, ಮೂಡೋ, ಪಡುವೋ, ಒಟ್ಟಿನಲ್ಲಿ, ನಾವು ಗಡಿಯನ್ನು ಹಿಡಿತದಲ್ಲಿ ಇಟ್ಟುಕೋಬೇಕು. ಇದನ್ನ ನಾವು ಆಂದ್ರ, ತಮಿಳುನಾಡು, ಕೇರಳದೊರ ಜೊತೆ ಚನ್ನಾಗೇ ಹಿಡಿತದಲ್ಲಿ ಇಟ್ಟುಕೊಂಡಿದ್ದೇವೆ. ಗೊಡವೆ ಇರೊದು ಬರೀ ಬೆಳಗಾವಿ ಮತ್ತು ಕಾರವಾರದಲ್ಲಿ. ಇದು ಹಾಗೆ ನೋಡಿದ್ರೆ ಅಂತ ದೊಡ್ಡ ತೊಂದರೆ ಏನಲ್ಲ. ಅಲ್ಲಿನ ಕನ್ನಡದೊರು ಹಿಡಿತ ಬಿಗಿ ಮಾಡಬೇಕು ಅಸ್ಟೇ! KGF ಅಲ್ಲಿ ತಮಿಳರು ಅದನ್ನು ತಮಿಳು ನಾಡಿಗೆ ಸೇರಿಸಿ ಅಂತ ಹೋರಾಟ ಮಾಡಿ ಮೂರು ಮಂದಿ ಸತ್ರು. ಆದ್ರೆ, ಕೋಲಾರದ ಮಂದಿ ತಮಿಳರನ್ನ ಸಕ್ಕತ್ತಾಗಿ ಬಗ್ಗ ಬಡಿದ್ರು. ಕೋಲಾರದಲ್ಲಿ ೩೦ ಏಡು ಆಯ್ತಂತೆ ಒಂದು ತಮಿಳು ಸಿನಿಮ ಸಿನಿಮನೆಯಲ್ಲಿ ತೋರಿಸಿ!| ಅಸ್ಟು ಹಿಡಿತದಲ್ಲಿ ಮಡಗವ್ರೆ!
Khavi's picture
24
Aug
2007
1:20

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮಹೇಶ, ಗೋಕಾಕ ಚಳುವಳಿ ಗೊತ್ತಲ್ಲ. ಅದು ಬರೋಕೆ ಮುಂಚೆ ಕರ್ನಾಟಕದ ಗಡಿಯ 300 ಮೈಲು ಒಳಗಿನವರೆಗೂ ಬರೀ ಮರಾಟಿಯೇ ತುಂಬಿತ್ತು. ನಮ್ಮ ತಂದೆ, ತಾತ ಎಲ್ಲ ಮೂರನೆಯ ಇಯತ್ತೆವರೆಗೂ ಮರಾಟಿಯಲ್ಲಿ ಕಲಿತರು. ಅಲ್ಲದೆ ನಾನು ಚಿಕ್ಕನೋರಿವಾಗೂ ನೋಡಿದಿನಿ.. ಅಂಗಡಿಗೆಲ್ಲ ಹೋದರೆ ಏಕ, ಬಾರಾ, ತೇರಾ, ಅಂತೆಲ್ಲ ಹಿಂದಿ ಮರಾಟಿಲೇ ಎಲ್ಲ ನಡೀತಿತ್ತು ಈಗಲೂ ಕೂಡ ಸಾಡೆ ಬಾರ, ಪೋಣೆ ಚಾರ, ಡೇಡ ತಾಸ ಅಂತೆಲ್ಲ ಬಳಸೋದು ಇದೆ. ಆದರೆ 20 ಏಡುಗಳಿಗಿಂತಲೂ ಹಿಂದೆ ನೋಡಿದರೆ ಈಗ ಪರವಾಗಿಲ್ಲ. ಅಲ್ಲೆಲ್ಲ ಕನ್ನಡ ಮೀಡಿಯಂ ಶಾಲೆಗಳಿವೆ. ಮರಾಟಿ ಮೀಡಿಯಂ ಎಲ್ಲ ಮುಚ್ಚಿ ಹೋಗಿವೆ. ಇದಕ್ಕೆಲ್ಲ ಗೋಕಾಕ್ ಚಳುವಳಿನೇ ಕಾರಣ. ಹೀಗೆ ಮತ್ತೊಂದು ಚಳುವಳಿ ಆಗ ಬೇಕು... ಆದರೆ ಅದು ಮರಾಟಿಗರಿಗಾಗಿ ಅಲ್ಲ... ನಿದ್ದೆ ಹೊಡಿತಿರೋ ನಮ್ಮ ರಾಜಕಾರಣಿಗಳಿಗೋಸ್ಕರ (ಅದರಲ್ಲೂ ಕತ್ತೆ ಚರ್ಮದ ಉತ್ತರ ಕರ್ನಾಟಕದ ಎಡ್ಡ ರಾಜಕರಣಿಗಳಿಗೋಸ್ಕರ) ಮಾಡಬೇಕು.
mahesha's picture
24
Aug
2007
2:43

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಗೋಕಾಕ ಚಳುವಳಿಯೋ, ಬೀದರ ಚಳುವಳಿಯೋ ಒಟ್ನಲ್ಲಿ ಏಡಿಗೊಂದು ಬಂದ್‌ಉ ಹೋರಾಟ ಚಳುವಳಿ ಇದ್ರೆ ಅಲ್ಲಿ ರಾಜಕಾರಣಿ ಎದ್ದಿರ್ತಾರ. ತೆಂಗಡೆ ಈ ಕಾವೇರಿ ಗೊಡವೆ ಈ ನೋಟದಾಗೆ ಒಂದು ವರವೇ!! ಮಂದಿಗೆ ಕೂಗಕ್ಕೆ, ರಾಜಕಾರಣಿಗಳಿಗೆ ಚುರುಕು ಮುಟಿಸಕ್ಕೆ ಒಂದು ಸಕ್ಕತ್ ಅವಕಾಸ! :)
ಸಂಗನಗೌಡ's picture
24
Aug
2007
3:13

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ನಿಮ್ಮ ಮಾತು ಅಗದಿ ಸರಿ. ಹಿಂದೆ ಮರಾಟಿಯ ಬರಾಟಿ ಬಾಳ ಇತ್ತು. ಹಾಂಗ್ ನೋಡಿದರ ಕನ್ನಡದ ಒರೆಗಳು ಮತ್ತೆ ಎದ್ದು ಬರತೊಡಗಿವೆ. ಹಳೆಯ ಮರ ಮತ್ತೆ ಚಿಗುರೊಡೆಯತೊಡಗಿದೆ. ಸಂಪದದಲ್ಲಿ ಹುಟ್ಟಿಕೊಂಡ ಅಚ್ಚಕನ್ನಡದ ಗಾಳಿಯೂ ಇಂತ ಒಂದು ಬೆಳವಣಿಗೆಯ ರೆಂಬೆ ಅನ್ನಬಹುದು. ಬ್ರಿಟೀಸರು ಇಂಡಿಯಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಮೇಲೆ, ಇಂಡಿಯಾವನ್ನು ನಾಕು ಝೋನ್‍ಗಳಾಗಿ ಮಾಡಿಕೊಂಡರು. ದಿಲ್ಲಿ, ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್. ಅವುಗಳದೇ ಗಾಳಿ ಇಂದಿಗೂ ಕೊಂಚ ಮಟ್ಟಿಗೆ ಉಳಿದುಕೊಂಡಿರುವದು. ಬ್ರಿಟಿಶರು ಇದ್ದಾಗ ಮರಾಟಿಯದೇನು ಗಲಾಟಿ ಇರಲಿಲ್ಲ. ಅವರು ಹೋದ ಮೇಲೆ, ನಮ್ಮ ನೆಲಗಳು ಅದೇ ಮುಂಬೈನ ನೆರಳಲ್ಲೇ ಉಳಿದವು, ಮುಂಬೈ ಮರಾಟಿಗರ ಕೈಗೆ ಬಂತು, ನಮ್ಮ ನೆಲ ಮರಾಟಿಗರ ನೆರಳಲ್ಲಿ ಉಳಿಯಿತು. ನಮ್ಮ ನಾಡು ಅಂತ ಆದ ಮೇಲೆ, ಮತ್ತೆ ಕನ್ನಡ ಉಸಿರು ಪಡಕೊಂಡಿತು ಅನ್ನಬಹುದು. ಬ್ರೀಟಿಸರ ಆಳ್ವಿಕೆಯಲ್ಲೂ ಮೈಸೂರನ್ನು, ಒಂದು ಸ್ಟೇಟ್ ಆಗಿಯೇ ನೋಡಲಾಗುತ್ತಿತ್ತು, ಅದು ಈ ನಾಕು ಝೋನ್‍ಗಳಿಗೆ ಒಳಗಾಗಲಿಲ್ಲ, ಹಾಗಾಗಿ ಅವರು ಆರಾಮಾಗಿ ಉಳಿದರು.
mahesha's picture
24
Aug
2007
3:37

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!"ಬ್ರೀಟಿಸರ ಆಳ್ವಿಕೆಯಲ್ಲೂ ಮೈಸೂರನ್ನು, ಒಂದು ಸ್ಟೇಟ್ ಆಗಿಯೇ ನೋಡಲಾಗುತ್ತಿತ್ತು, ಅದು ಈ ನಾಕು ಝೋನ್‍ಗಳಿಗೆ ಒಳಗಾಗಲಿಲ್ಲ, ಹಾಗಾಗಿ ಅವರು ಆರಾಮಾಗಿ ಉಳಿದರು." ಸಂಗನ ಅಲ್ಲಿ ಮೈಸೂರು ಸ್ಟೇಟ್ ಅಂದ್ರೆ ಮೈಸೂರು ದೇಸ ಅಂತ ತಕ್ಕೋಬೇಕು. ಅದಕ್ಕೆ ತನ್ನದೇ ಆದ ಪಡೆ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ ಎಲ್ಲ ಇತ್ತು. ನೀವು ಹೇಳೋ ಮುಂಬಯಿ ಮತ್ತು ಮದ್ರಾಸಿನ ಕನ್ನಡದ ನೆಲ 1799 ಅಲ್ಲಿ ಟಿಪ್ಪಿವನ್ನು ಮರಾಟರು+ಬ್ರಿಟೀಸರು+ನಿಜಾಮನ ಪಡೆ ಸೋಲಿಸಿ ಕಸಿದುಕೊಂಡಿದ್ದು. ಅದೂ ಮೈಸೂರು ದೇಸದ್ದೇ ನೆಲ. ಅಲ್ಲಲ್ಲಿ ಕೆಲ ಚಿಕ್ಕಪುಟ್ಟ ಅರಸರಿದ್ದರು. ಆದುದರಿಂದ ಬಡಗಣ ಕರ್ನಾಟಕವೇನು ಬೇರೆ ಪ್ರಾಂತ್ಯವೇನಲ್ಲ. ಮೈಸೂರಿಂದ ದೂರವಾದವರು, ಮತ್ತೆ ವಾಪಸ್ಸು ಬಂದ್ರು. ಈಗ ಈ ಇತಿಹಾಸ ಇರಲಿ... ಆದ್ರೆ ನಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳೋದು ಬರಬೇಕು. !! :)
ಸಂಗನಗೌಡ's picture
24
Aug
2007
3:45

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಅಣ್ಣಾ, ಶಿವಮೊಗ್ಗೆಯಿಂದ ಮೇಲಿನ ಕರ್ನಾಡು ಯಾವತ್ತೂ ಮೈಸೂರಿಗೆ ಸೇರೇ ಇಲ್ಲ. ಇಲ್ಲಿ ನೋಡಿ, http://upload.wikime... ಮರಾಟರ ಆಳ್ವಿಕೆಗೆ ಒಳಗಾಗುವ ಮೊದಲು ನಮ್ಮ ಕಡೆಯ ನೆಲ, ಚೆನ್ನಮ್ಮ ಮುಂತಾದ ಲಿಂಗಾಯತ ಮನೆತನಗಳಿಂದ ಆಳಲ್ಪಡುತ್ತಿತ್ತು.
ಸಂಗನಗೌಡ's picture
24
Aug
2007
4:00
mahesha's picture
24
Aug
2007
4:27

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!http://www.india-his... ಸರಿ! ಆದ್ರೆ ಅಲ್ಲಿ ನೋಡಿ ಮದ್ರಾಸಿಂದ ವಾಪಸ್ ಬಂದವೆಲ್ಲ ನಮ್ಮ ಮೈಸೂರಲ್ಲೇ ಇದ್ದ ನೆಲ. ಮೈಸೂರಿಂದ ಎರಡೆರಡು ಜಿಲ್ಲೆಗಳು ಮರಾಟರ ಮತ್ತು ನಿಜಾಮ ಕೈಗೆ ಹೋಗಿತ್ತು. ಸರಿ ಬಿಡಿ!! :) ಒಟ್ನಲ್ಲಿ ನೀವು ಮೈಸೂರು ಕಡೆಯೋರಿಂತ ಬೇರೆ. ಒಪ್ಪಿದೆ!
gc's picture
24
Aug
2007
9:57

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮಹೇಶರೆ, ನಾನು ಬರೆದದ್ದನ್ನ ನೀವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾನು Big Pitcure ಬಗ್ಗೆ ಹೇಳ್ತಾ ಇದೀನಿ. ರೇವಣ್ಣ ಮತ್ತು ಶಂಕರಮೂರ್ತಿ ಯವರದ್ದು small examples ಮಾತ್ರ. ರೇವಣ್ಣ ಅವರೂರಿಗೆ ಏನಾದರೂ ಮಾಡ್ಲಿ ಆದರೆ ಬೇರೆಯೂರಿನ ಪ್ರಗತಿಗೆ ಅಡ್ಡಗಾಲೇಕೆ ಹಾಕಬೇಕು? ಟಾಟಾ ಕಂಪನಿಯ ಹೊಸ ಯೋಜನೆ ಬರ್ತಾ ಇದ್ದದ್ದು ಧಾರವಾಡಕ್ಕೆ, ಹೋಳೆನರಸೀಪುರಕ್ಕಲ್ಲ!! ಇದನ್ನೇ ನಾನು ಸಂಕುಚಿತ ಮನೋಭಾವ ಅಂತೀನಿ. ಇತ್ತೀಚೆಗೆ ವಿಧಾನಸಭೆಯಲ್ಲಿ "ಆಡು ಮುಟ್ಟದ ಸೊಪ್ಪಿಲ್ಲ ರೇವಣ್ಣ ಮುಟ್ಟದ ಇಲಾಖೆಯಿಲ್ಲ"!! ಎಂದು ಯಾರೋ ಹೇಳಿದ್ರು. ವಾಸ್ತವವಾಗಿ ಇಂತವರ ಸಂಖ್ಯೆ ಕಡಿಮೆಯಾಗ್ತಿದೆ. ಕಾವೇರಿ ವಿಷಯದಲ್ಲಿ ಅನ್ಯಾಯವದರೆ ಮಂಡ್ಯ/ಮೈಸೂರಿನವರಿಗೆ ಕೃಷ್ಣಾ ಕೊಳ್ಳದವರ ಬೆಂಬಲಿವಿರುತ್ತದೆ. MES ಮುಖಂಡನೊಬ್ಬ ನಿಪ್ಪಾಣಿಯಲ್ಲಿ ಗುಟುರಿಸಿದರೆ ಬೆಂಗಳೂರಿನಲ್ಲಿ ಗರ್ಜನೆ ಕೇಳಿಸುತ್ತದೆ. ನಿಧಾನ ಗತಿಯಲ್ಲಿ ರಾಜ್ಯದ ಎಲ್ಲಾ ಭಾಗಗಳು ಭಾವನಾತ್ಮಕವಾಗಿ ಹತ್ತಿರ ಬರುತ್ತಿವೆ. ಇದೆಲ್ಲಾ ಒಳ್ಳೆಯದು. ಇನ್ನು Big Pitcure - ರಾಜಕೀಯ ಹಕ್ಕುಗಳು ಸಿಕ್ಕ ತಕ್ಷಣ ಹಕ್ಕುಗಳ ಬಗ್ಗೆ ಅರಿವು, ಪ್ರಭುದ್ದತೆ ಮತ್ತು ಕೆಲಸ ಮಾಡಿಕೊಳ್ಳುವ ಚಾಕಚಕ್ಯತೆ ಬರಬೇಕೆನ್ನುವುದು ಹಾಸ್ಯಾಸ್ಪದ. ನಮ್ಮ ದೇಶ ಹುಟ್ಟಿ ೬೦ ವರ್ಷಗಳಾದವು. ಪ್ರಜಾಪ್ರಭುತ್ವದ ವ್ಯವಸ್ಥೆ ಮತ್ತು ಹಕ್ಕುಗಳ ಬಗ್ಗೆ ನಮ್ಮಲ್ಲಿ ಅರಿವು ಇನ್ನೂ ಕಡಿಮೆ ಇದೆ. ಕಾಲ ಕಳೆದಂತೆ ಜನರಲ್ಲಿ ಹೆಚ್ಚುವ ರಾಜಕೀಯ ಅರಿವು ಮತ್ತು ಅನುಭವದಿಂದ ಪ್ರಭುದ್ಧತೆ ಮತ್ತು ಚಾಕಚಕ್ಯತೆ ಹೆಚ್ಚುತ್ತವೆ. ಅದೇ ರೀತಿ ಎಲ್ಲಾ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಲಿ ಎನ್ನುವುದು ನುಣುಚಿಕೊಳ್ಳುವ ಉಪಾಯ. ಈ ನಿಟ್ಟಿನಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಜನ ಕರಾವಳಿಯ ಉದ್ಯಮಶೀಲ ಜನರಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಪಟೇಲರಿದ್ದಾಗ ಅನೇಕ ಜಿಲ್ಲೆಗಳ ವಿಭಜನೆಯಾಯಿತು. ಜತ್ತಿ, ಕಂಠಿಯವರ ಕಾಲದಲ್ಲಾಗದ ಕೆಲಸಗಳು ಇಂದು ಧರಮ್ ಸಿಂಗ್ ಮತ್ತು ಖರ್ಗೆಯವರ ಕಾಲದಲ್ಲಿ ಕೃಷ್ಣಾ ನೀರಾವರಿ ಯೋಜನೆಯಡಿ ಆಗುತ್ತಿವೆ. ಬೊಮ್ಮಾಯಿಯವರು ಧಾರವಾಡಕ್ಕೆ ಟಾಟಾ ಕಂಪನಿ ತಂದರು (ಅದಕ್ಕೂ ಕೆಂದ್ರದ ಅಡ್ಡಗಾಲಿತ್ತು!!). ದೇಶಪಾಂಡೆಯವರು ತಮ್ಮ ಕ್ಷೇತ್ರಕ್ಕೆ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಇವೆಲ್ಲ ನಿಮಗೆ ಗೊತ್ತಿಲ್ಲದಿದ್ದರೆ ಆ ನಾಯಕರ ತಪ್ಪಲ್ಲ!! ಏಕೀಕರಣದ ನಂತರ ಕನ್ನಡ ಉ.ಕರ್ನಾಟಕದಲ್ಲಿ ಮತ್ತೆ ಗಟ್ಟಿಯಾಗುತ್ತಿದೆ. ಸರ್ಕಾರದ ಮೊರೆ ಹೋಗದೆ ಮಠಗಳು ಮತ್ತು ಸಾರ್ವಜನಿಕ ಸಂಘ/ಸಂಸ್ಥೆಗಳೇ ಸಾವಿರಾರು ಶಾಲೆ ಮತ್ತು ಕಾಲೇಜುಗಳನ್ನು ನಡೆಸುತ್ತಿವೆ. ಯಾವದೇ ರಾಜಕಾರಣಿಗೆ credit ಕೊಡಲಾಗದಂತಹ ನೂರಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಇನ್ನು ಮಾನವ ಅಭಿವೃದ್ಧಿ ಸೂಚ್ಯಂಕವನ್ನು (Human Development Index) ಅಳತೆಗೋಲಾಗೆ ನೋಡಿದರೆ, ಉ.ಕನ್ನಡ, ಬೆಳಗಾವಿ, ಧಾರವಾಡ ಜಿಲ್ಲೆಗಳು ಮೈಸೂರು, ಮಂಡ್ಯ, ಕೋಲಾರ ಮತ್ತು ಹಾಸನ ಜಿಲ್ಲೆಗಳಿಗಿಂತ ಉತ್ತಮ ಸ್ಥಿತಿಯಲ್ಲಿವೆ (http://planning.kar....). ಚಾಮರಾಜ ನಗರ, ಬೀದರ, ಕೊಪ್ಪಳ, ಕೋಲಾರ, ರಾಯಚೂರು ಮತ್ತಿತರ ಜಿಲ್ಲೆಗಳು ಹಿಂದುಳಿಯುವುದಕ್ಕೆ ಹಲವಾರು ಕಾರಣಗಳಿವೆ. ಈ ಹಿಂದುಳಿದ ಜಿಲ್ಲೆಗಳು ಬೆಂಗಳೂರಿನಂತೆ ಲಕಲಕ ಹೊಳೆಯಲಿ ಎಂದು ಯಾರೂ ಕೇಳುತ್ತಿಲ್ಲ. ಆದರೆ ಪ್ರಗತಿಯ ಕಂದರ ಹೆಚ್ಚಾಗಬಾರದು. ಇದೇ ಸ್ಥಿತಿ ಮುಂದುವರಿದರೆ ನಮ್ಮ ನಾಡು ಹೋಳಾಗಲು ಹೊರಗಿನ ವೈರಿಗಳ ಸಹಾಯ ಬೇಕಿಲ್ಲ. PS: "ಗಮನಿಸಿ: ಯಾವಾಗ್ಲು ಬಡಗಣದಿಂದಲೇ ಹೆಚ್ಚು ಮಂತ್ರಿಗಳು ಸಾಸಕರು ಬರೋದು!! ಆದ್ರೂ ಕೆಲಸ ಮಾಡಕ್ಕಿಲ್ಲ ಅಂದ್ರೆ ಅದು ರೇವಣ್ಣ-ಕುಮಾರಸ್ವಾಮಿ ತಪ್ಪಲ್ಲ!!" ತಪ್ಪು ತಪ್ಪು!! ಉ.ಕ ಜನಸಂಖ್ಯೆ ರಾಜ್ಯದ ಶೇ.೪೨ ಮಾತ್ರ. ಅದೇಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಬರಲು ಸಾಧ್ಯ?
mananthprabhu's picture
23
Aug
2007
12:16

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮಾಯ್ಸಣ್ಣಾ "ಈ ಮರಾಟಿ, ಕೊಂಕಣಿ ಮಂದಿಯ ಕಿರಿಕಿರಿ ಯಾಕೋ ಬಲು ಆಯ್ತು!! ವಸಿ ಬಡಗಣದೋರು, ಜೋರಾಗಿ!! ಸುಮ್ನೆ ಹಿಂಗೆ ಮೈಮೇಲೆ ಎರಗಕ್ಕೆ ಬಿಡಬ್ಯಾಡಿ." ಈ ಮರಾಟಿ ಮ೦ದಿಯ ಕಿರಿಕಿರಿ ಗೊತ್ತಾಯ್ತು. ಆದರೆ ಕೊಂಕಣಿ ಮಂದಿ ಏನು ಮಾಡಿದ್ರು ಅ೦ತ ಗೊತ್ತಾಗಿಲ್ಲ. ಸ್ವಲ್ಪ ಹೇಳುವಿರಾ. ಅನ೦ತ
mahesha's picture
23
Aug
2007
12:26

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮಾಪ್ರಭಗಳೇ. ಕಾರವಾರ, ಜೋಯಿಡ, ಹಳಿಯಾಳ ಕೇಳ್ತಾ ಇರೋದು ಕೊಂಕಣಿಗಳು ಅಲ್ವಾ? ಗೋವೆಯಲ್ಲಿ ಕನ್ನಡಗರನ್ನು ಒಕ್ಕಲೆಬ್ಬಿಸಿದ್ದು ಕೊಂಕಣಿಗರು ಅಲ್ವಾ? ನಾವು ಕನ್ನಡದೊರು ಹಾಗೆ ಮಾಡಿದ್ದೀವ ಕೊಂಕಣಿಗಳಿಗೆ ಇಲ್ಲಿ? ಇದು!! ಒಮ್ಮೆ ಗೋವೆಯ ಕೊಂಕಣಿ ಮಂದಿ ಬರೆದ ಬರಹಗಳನ್ನು ಓದ್ರಿ. ಅವರು ಆರ್ಯರಂತೆ, ನಾವು ದ್ರಾವಿಡರಂತೆ... ದ್ರಾವಿಡ ಕನ್ನಡವನ್ನು ಆರ್ಯ ಕೊಂಕಣಿಗರ ಮೇಲೆ ಹೇರಿಕೆಯಂತೆ. ಲಿಂಕುಗಳು ಇಲ್ಲೆಲ್ಲೋ ಇವೆ. ಕನ್ನಡ ಲಿಪಿಯಲ್ಲಿ ಗೋವೆಯಲ್ಲಿ ಕೊಂಕಣಿ ಯಾಕೆ ಬರೆಯಲ್ಲ? ಬಲು ಹೆಚ್ಚು ಕೊಂಕಣಿ ಬರಹಗಳು ಸುದ್ದಿಯೋಲೆಗಳು ನಮ್ಮ ಮಂಗಳೂರಲ್ಲೇ ಕನ್ನಡ ಲಿಪಿಯಲ್ಲೇ ಅಚ್ಚಾಗುದು ಅಲ್ವಾ!! ಗೋವೆ ಕೊಂಕಣಿ ಮಂದಿ ಮರಾಟಿ ಲಿಪಿ ಓಕೆ, ಕನ್ನಡ ಲಿಪಿ ಬೇಡ ಯಾಕೆ? ಇವನ್ನು ಈ ಮಂದಿ ಚನ್ನಾಗಿ ಬರೆದವ್ರೆ ವಸಿ ನೋಡಿಕೊಳ್ಳಿ!! http://enguru.blogsp...
mananthprabhu's picture
23
Aug
2007
1:33

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಮಾಯ್ಸಣೋರೆ "ಕೊಂಕಣಿ" ಅ೦ತ ಹೇಳಿದ್ರೆ ಎಲ್ಲರಿಗೂ ಅನ್ವಯಿಸುತ್ತೆ, ಕರುನಾಡಲ್ಲಿ ಇರುವವರಿಗೂ ಗೋವಾದಲ್ಲಿ ಇರುವವರಿಗೂ. ಆದ್ದರಿ೦ದ "ಗೋವ ರಾಜ್ಯ ಏಕೀಕರಣ ಮಂಚ್" ಇಲ್ಲ ಬೇರೆ ಯಾವ ಸ೦ಘಟನೆಗಳು ಇ೦ತಹ ಕಿತಾಪತಿ ಶುರು ಮಾಡಿರುವರೋ ಅವರನ್ನು ಹೆಸರಿಸುವುದು ಒಳ್ಳೆಯದು ಎ೦ದು ನನ್ನ ನ೦ಬಿಕೆ. "ತುಳುನಾಡ ಸ೦ಘ" ಅ೦ತ ಒ೦ದು ಸ೦ಘಟನೆ, ನಮಗೆ ಬೇರೆಯೇ ತುಳುವರ ರಾಜ್ಯ ಬೇಕೆ೦ದು ಒ೦ದು ಕಾಲದಲ್ಲಿ ಬೋಬ್ಬೆ ಹಾಕಿತ್ತು. ಈಗ ಏನಾಗಿದೆ ಎ೦ದು ಗೊತ್ತಿಲ್ಲ. ಇದು ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಸ್ವ೦ತ ಉದ್ಡೇಶ ಸಾಧಿಸಲು ಮಾಡುತ್ತಿರುವ ಸಾಹಸ. ಇ೦ತಹ ಸ೦ದರ್ಭದಲ್ಲಿ ತುಳುವರೆಲ್ಲರೂ ಕರುನಾಡನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎ೦ದರೆ ಸರಿಯೇ? ಹೀಗೆಯೇ ಕೊಡವರ ಯಾವುದೋ ಸ೦ಘ "ಕೊಡವ ರಾಜ್ಯ" ಕ್ಕೆ ಬೇಡಿಕೆ ಸಲ್ಲಿಸಿತ್ತು. ಹೆಚ್ಚಿನ ಇ೦ತಹ ಬೇಡಿಕೆಗಳು ಕೆಲವು ವ್ಯಕ್ತಿಗಳು ತಮ್ಮ ಸ್ವ೦ತ ಲಾಭಕ್ಕೋಸ್ಕರ ಮಾಡುವ ಕಾರ್ಯಗಳಾಗಿರುತ್ತವೆ. ಅನ೦ತ
mahesha's picture
23
Aug
2007
2:03

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಸರಿ... ಅವರು "ಗೋವೆ ರಾಜ್ಯ ಏಕೀಕರಣ ಮಂಚ್" ಮಾಡಿದ್ದಕ್ಕೆ ನಮ್ಮ ನಾವು ಹೇಳಿದ್ದು!! ಸುದ್ದಿಯೋಲೆಗಳು ಹೀಗೆ "ಕೊಂಕಣಿಗರು" ಅಂತ ಬರೆದಿದ್ವು!! ಒಟ್ಟಿನಲ್ಲಿ ಕೊಂಕಣಿಗಳ ಒಂದು ಪಂಗಡ ಈ ಕಿತಾಪತಿ ಮಾಡಯ್ತೆ, ಅಂದ ಹೇಳಬೋದು! ನಮ್ಮ ಕರ್ನಾಡಿನ ಕೊಂಕಣಿಗಳು ಈ ಬಗ್ಗೆ ಮುಂದೆ ನಿಂತು ಬೇಗ ರಿಪೇರಿ ಮಾಡಿದ್ರೆ ಒಳ್ಳೇದು. ಇಲ್ಲ ಅಂದ್ರೆ ಸುಮ್ನೆ ಎಲ್ಲ ಕೊಂಕಣಿಗಳೂ ಹಿಂಗೇ ಅಂತ ಅನ್ನಿಸಕ್ಕೆ ಸುರುವಾಯ್ತದೆ!
prapancha's picture
23
Aug
2007
2:25

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!"ಹೀಗೆಯೇ ಕೊಡವರ ಯಾವುದೋ ಸ೦ಘ "ಕೊಡವ ರಾಜ್ಯ" ಕ್ಕೆ ಬೇಡಿಕೆ ಸಲ್ಲಿಸಿತ್ತು." ಬಹುಶಹ ನಮ್ಮ ರಾಜ್ಯದಲ್ಲಿ ಕೇಳಿಬರುತ್ತಿರುವಷ್ಟು ಪ್ರತ್ಯೇಕ ರಾಜ್ಯಗಳ ಕೂಗು ಯಾವ ರಾಜ್ಯದಲ್ಲೂ ಕೇಳಿ ಬರುತ್ತಿಲ್ಲವೇನೂ?. ಹೈದರಾಬಾದ್ ಕರ್ನಾಕ, ಕೊಡಗು ರಾಜ್ಯಗಳ ಬೇಡಿಕೆ, ಬೆಳಗಾವಿಯನ್ನ ಮಹಾರಾಷ್ಟ್ರದವರು ಕೇಳುತ್ತಿರುವುದು, ಉತ್ತರ ಕನ್ನಡ ಜಿಲ್ಲೆಯ ಕೆಲವು ಬಾಗಗಳನ್ನ ಗೋವಾಕ್ಕೆ ಸೇರಿಸಿ ಎ೦ದು ಕೂಗುತ್ತಿರುವ ಕೆಲವು ಕೊ೦ಕಣಿಗರು!!!. ಇನ್ನು ಎಶ್ಟು ಕೂಗುಗಳು ಬರುತ್ತವೆಯೋ?
gc's picture
23
Aug
2007
10:37

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಕೆಲ ತಿಂಗಳುಗಳ ಹಿಂದೆ ಮಹಾರಾಷ್ಟ್ರದ ರಾಜ್ಯಪಾಲ SMK ಸೊಲ್ಲಾಪುರಕ್ಕೆ ಬಂದಿದ್ದರು. ಇಂಗ್ಲೀಷನಲ್ಲಿ ಭಾಷಣ ಶುರು ಮಾಡಿದಾಗ ಅಲ್ಲಿಯ ಜನ ಕನ್ನಡದಲ್ಲೇ ಮಾತಾಡಲು ಒತ್ತಾಯಿಸಿದರು. ಇದಕ್ಕೆ ಮಣಿದ SMK ಕನ್ನಡದಲ್ಲೆ ಭಾಷಣ ಮುಗಿಸಿದರು!! ಅಲ್ಲಿಯ ಬೋರ್ಡಗಳಲ್ಲಿ ಕನ್ನಡ ಕಾಣದಿರಬಹುದು. ಆದರೆ ಅಲ್ಲಿಯ ಜನರಲ್ಲಿ ಇನ್ನೂ ಕನ್ನಡತನವಿದೆ. ವಿಜಯನಗರದ ಪತನದ ನಂತರ ಉತ್ತರ ಕರ್ನಾಟಕದಲ್ಲಿ ರಾಜಾಶ್ರಾಯ ಕಳೆದುಕೊಂಡಿದ್ದ ಕನ್ನಡ ಏಕೀಕರಣದ ನಂತರ ಸ್ವಲ್ಪ ಚೇತರಿಸಿಕೊಂಡಿದೆ. ಗಡಿ ಭಾಗಗಳಲ್ಲಿ ಕನ್ನಡವನ್ನು ಬಲಪಡಿಸಿದರೆ ನಿಜಾಮ, ಪೇಶ್ವೆ ಮತ್ತು ಬ್ರಿಟಿಶರ ಕಾಲದಲ್ಲಾದ ನೋವು ಸ್ವಲ್ಪ ಕರಗಬಹುದು.
Khavi's picture
23
Aug
2007
12:34

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಜನೆವರಿಯಲ್ಲಿ ಸೊಲ್ಲಾಪುರಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ದೊಡ್ಡಪ್ಪನವರು ಇರತಾರೆ. ಅಲ್ಲೇ ಮನೆ ಮಾಡಿದ್ದಾರೆ. ಅಲ್ಲಿ ನಮ್ಮ 12ನೆಯ ಶತಮಾನದ ಸಿದ್ಧರಾಮೇಶ್ವರರು ಇದ್ದರು ಅಂತ ಕೇಳಿದ್ದೆ. (ಇದರ ಬಗ್ಗೆ ಪ್ರಭುಲಿಂಗ ಲೀಲೆ ಯಲ್ಲಿ ಬಂದಿದೆ. ರಾಜರತ್ನಂ ಬರೆದ ಹೊತ್ತಿಗೆ ಓದಿ), ಅವರಿಗಾಗಿ ಕಟ್ಟಿದ ದೊಡ್ಡದಾದ ಮಂದಿರ ಕೂಡ ಇದೆ. ಅದು ತುಂಬಾ ಚೆನ್ನಾಗಿದೆ, ವಾರದ ಕೊನೆಯಲ್ಲಿ ತುಂಬಾ ಜನರಿರ್ತಾರೆ. ಆ ಮಂದಿರದಲ್ಲಿ ಅಲ್ಲಿ ಕನ್ನಡ ಮತ್ತು ಮರಾಟಿಯಲ್ಲಿ ಬೋರ್ಡುಗಳು ಕಾಣಸಿಗುತ್ತವೆ. ಕನ್ನಡ ಹೊತ್ತಿಗೆಗಳೂ ಸಿಗುತ್ತವೆ. ನಾನೂ ಒಂದು ಸಿಧ್ಧರಾಮೇಶ್ವರರ ಹೊತ್ತಿಗೆ ಕೊಂಡುಕೊಂಡೆ. ಅಲ್ಲಿ ನಿಮಗೆ ಮರಾಟಿ ಬರದಿದ್ದರೆ, ಕನ್ನಡಲ್ಲಿ ಕೇಳಿ ಎಲ್ಲ ಮಾತಾಡ್ತಾರೆ (ಹೆಚ್ಚು ಕಡಿಮೆ ಆಗುತ್ತ ಆದರೂ ಪರವಾಗಿಲ್ಲ). ಅದರಂತೆ ಹೊರ್ತಿ, ಕರ್ಜಗಿ ಬೇರೆ ಬೇರೆ ಕಡೆ ಹೋದರೆ ಕನ್ನಡದಲ್ಲೇ ಮಾತಾಡೋದು.. ಆದರೆ ಬೋರ್ಡು ಮಾತ್ರ ಮರಾಟಿಯಲ್ಲೇ ಇರುತೆ.
muralihr's picture
23
Aug
2007
1:40

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಆ ಊರು (ಶೋಲಾಪುರ )ನಮ್ಮ ಸಿದ್ಧರಾಮನ ಊರು , ಅವನೇ ಅದನ್ನು ಎರಡನೇ ಕೈಲಾಸ ಅ೦ತಾ ಹೇಳಿ ಕಟ್ಟಿಸುದ್ದು.
gc's picture
23
Aug
2007
1:58

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಸೊಲ್ಲಾಪುರದ ಹಳೆಯ ಹೆಸರು ಸೊನ್ನಲಿಗೆ - ಸಿದ್ಧರಾಮನ ಊರು. ಇಂದಿನ ಸೊಲ್ಲಾಪುರ ನಮ್ಮ ಕೈಯಲ್ಲಿಲ್ಲ. ಕಲ್ಯಾಣವನ್ನಾದರು ಉಳಿಸಿಕೊಳ್ಳೋಣ.
mahesha's picture
23
Aug
2007
2:04

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!‌ಅಲ್ಲಮರೂ ಸೊನಲಾಪುರ/ಸೊನ್ನಲಿಗೆ/ಸೊಲ್ಲಾಪುರದವರೇ ಅಲ್ವಾ!
gc's picture
23
Aug
2007
2:35

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಇಲ್ಲ!! ಅಲ್ಲಮನ ತಂದೆಯ ಊರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿ. ಇತ್ತೀಚೆಗೆ ಪ್ರೊ. ಸಿದ್ಧಲಿಂಗಯ್ಯನವರು ಹೇಳಿದ ಹಾಗೆ ಅಲ್ಲಮ ಹುಟ್ಟಿದ್ದು ಬಳ್ಳಿಗಾವಿಗೆ ಸಮೀಪದ ಅವನ ತಾಯಿಯ ಊರಾದ ಕರುವೂರಿನಲ್ಲಿ [??, ಹೆಸರು ಸರಿಯಗಿ ನೆನಪಿಗೆ ಬರ್ತಿಲ್ಲ್ :( ]. ತಂದೆಗೆ ಮಹತ್ವ ನೀಡುವ ನಮ್ಮ ಸಂಸ್ಕೃತಿಯಲ್ಲಿ ಅಲ್ಲಮನ ಹುಟ್ಟೂರು ಬಳ್ಳಿಗಾವಿ ಆಯಿತು!!
mahesha's picture
23
Aug
2007
2:49

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!gc ನನಗೆ ಈ ಸೊಲ್ಲಾಪುರ, ಬೆಳಗಾವಿ, ಈ ಮಾತುಕತೆಗಳು ಯಾವಾಗಲೂ ಲಿಂಗಾಯತ, ವೀರಶೈವದ ಕಡೆ ಹೋಗೋದು ಒಂದು ಸೋಜಿಗ!! ಆ ಪಾಟಿ ಲಿಂಗಾಯತರು ಅವ್ರಾ ಅಲ್ಲೆಲ್ಲ? ನಮ್ ಕಡೆ, ಅದ್ರಾಗೂ ನಮ್ ಊರಾಗೇ ಲಿಂಗಾಯತ ಮಂದಿ ಬಲು ಕಡಮೆ!! ಅದಕ್ಕೆ ಇವುಗಳ ಬಗ್ಗೆ ನಂಗೆ ಸಂದಾಕ್ ಅರಿವಿಲ್ಲ!! ನನಗೆ ನೀವು ಹೇಳೋ ಸಿದ್ದರಾಮ ಇವರೆಲ್ಲ ಅಸ್ಟು ಗುರುತಿಲ್ಲ!
Khavi's picture
23
Aug
2007
3:25

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಲಿಂಗಾಯತರು/ವೀರಶೈವರು ಇರೋದು ಅಂದ್ರೆ ಉ. ಕರ್ನಾಟಕದಲ್ಲಿ ಜಾಸ್ತಿ. ಅದು ಬಿಟ್ಟರೆ ಬೇರೆ ಕಡೆಗ ತುಂಬಾ ಇರೋದು ಕಮ್ಮಿ.
mahesha's picture
23
Aug
2007
3:30

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಚಾಮರಾಜನಗ್ರ, ತುಮಕೂರು, ಇಲ್ಲೆಲ್ಲ ತುಂಬ ಲಿಂಗಾಯತ್ರು ಅವ್ರೆ! ಚಿತ್ರದುರ್ಗ, ದಾವಣಗೆರೆಯಲ್ಲೂ ಕೂಡ!!
ಸಂಗನಗೌಡ's picture
22
Aug
2007
10:09

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಹೌದು ಜಿ.ಸಿ, ಕನ್ನಡ ಹುಡುಗರು humanities ಕಲಿಯಬೇಕು, ಆದರೆ ಗಣಿತ, ಬಿನ್ನಣ(ವಿಜ್ಞಾನ)ದಲ್ಲಿ ಹಿಂದೆ ಉಳಿಯಬಾರದು. ಇಂದು ಇವುಗಳಿಂದಲೇ ಅನ್ನ ದೊರಕುತ್ತಿದೆ ಅಂದರೂ ತಪ್ಪಿಲ್ಲ. ನಾವು ಆರ್ತಿಕವಾಗಿ ಉಳ್ಳವರಾಗಿದ್ದಾಗಲೇ ನಮ್ಮ ನಾಡನ್ನು ಒಳ್ಳೆ infrastructure ಹೊಂದಿದ ನಾಡಾಗಿಸಬಹುದು, ಮಂದಿ ಒಳ್ಳೆ ತರದಲ್ಲಿ ಬದುಕುವ ಅನುಕೂಲತೆ ತರಬಹುದು ಅಲ್ಲವೇ. ಎಲ್ಲಕ್ಕಿಂತ ಮೊದಲು ಗಡಿಗಳಲ್ಲಿ ಮಂದಿ ಕನ್ನಡ ಮಾತಾಡುವಂತೆ ನೋಡಿಕೊಳ್ಳುವದು. ಕನ್ನಡದ ಬಗೆಗೆ ಹೆಮ್ಮೆ, ಹುರುಪು ಮೂಡಿಸುವ ಇಚಾರಗಳನ್ನು ಪಾಟಗಳಲ್ಲಿ ಅಳವಡಿಸುವದು.
prapancha's picture
23
Aug
2007
1:06

ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!ಕೆಲವು ತಿ೦ಗಳುಗಳ ಹಿ೦ದೆ ಪ್ರಸಿದ್ದ ನಟರೂ ಮತ್ತು ರಾಜಕಾರಣಿಗಳೂ ಆದ ಮುಖ್ಯ ಮ೦ತ್ರಿ ಚ೦ದ್ರು ಅವರು ಗಡಿನಾಡ ಜನರ ಸಮಸ್ಯೆಗಳನ್ನ ಅರಿಯಲು ಒ೦ದು ದೊಡ್ಡ ಜಾತ್ರೆಯನ್ನ ಮಾಡಿಕೊ೦ಡು ಒ೦ದು ಸುತ್ತು ಹೋಗಿ ಬ೦ದರು. ಆಮೇಲೆ ಒ೦ದು ರೆಪೋರ್ಟ್ನ್ನ ಸಿ.ಎಮ್ ಕೈಗೆ ಕೊಟ್ಟು ತೆಪ್ಪಗಾದರು ಅಷ್ಟೆ!. ಈ ಸುಖಕ್ಕೆ ಸುತ್ತೋಕ್ಯಾಕೆ ಹೋಗ್ಬೇಕಾಗಿತ್ತು?. ಉತ್ತರ ಕರ್ನಾಟಕದಲ್ಲಿ ಎಲ್ಲೆಡೆ ಕನ್ನಡ ಶಾಲೆಗಳಿ ಸ್ಥಿತಿಗತಿ ಸರಿಯಾಗಿಲ್ಲ, ಅದಕ್ಕೆ ಸರ್ಕಾರ ಒತ್ತು ಕೊಡಬೇಕು. ಮೊನ್ನೆ ಈ ಟೀ.ವಿ ಯ ಒ೦ದು ವರದಿಯಲ್ಲಿ ಬೆಳಗಾವಿಯ ಒ೦ದು ಕನ್ನಡ ಶಾಲೆಗೆ ಕಟ್ಟಡವೇ ಇಲ್ಲ, ಇದ್ದ ಬಾಡಿಗೆ ಕಟ್ಟಡದ ಬಾಡಿಗೇ ಕಟ್ಟಲಿಲ್ಲವಾದ್ದರಿ೦ದ ರಸ್ತೆಯಲ್ಲೇ ಶಾಲೆ ನಡೆಸಬೇಕಾಗಿರುವ ಸ೦ಗತಿಯನ್ನ ತೋರಿಸಿದರು!. ಮುದಲು ಈ ರೀತಿಯ ಸಮ್ಸ್ಯೆಗಳನ್ನ ಹೋಗಲಾಡಿಸಬೇಕಾಗಿದೆ.