ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › ಶ್ರೀಶಕಾರಂತ ರವರ ಬ್ಲಾಗ್

ಜೀವ ಕೇಂದ್ರ

February 24, 2006 - 11:32am — ಶ್ರೀಶಕಾರಂತ

ಬಂದೆನರಿಯದೆ ಧರೆಗೆ ಅರಿಯದೇ ಹೊರಡುವೆನು

ಬಾಳ್ವೆನರಿಯದ ಬಾಳ ಇರುವಶ್ಟು

ದಿನ ಆಕರ್ಶಿಪ ಕೇಂದ್ರ

ಬಾಳನರಿಯುವ ತುಡಿತವೋ ಪಂಡಿತ ಪುತ್ರ||

---ನನಗರಿವಿಲ್ಲದೆಯೇ ಈ ಭೂಮಿಗೆ ಬಂದೆ,ಇಲ್ಲಿಂದ ಹೊರಡುವಾಗಲೂ ತಿಲಿಯುವುದಿಲ್ಲ , ಇರುವಶ್ಟು ದಿನ ಯಾವ ಕಾರಣ ನಮ್ಮನ್ನು ಹಿಡಿದಿರುತ್ತದೆ ಅಂದರೆ.....ಈ ಬಾಳನ್ನು ಅರಿಯುವ ತುಡಿತವಶ್ಟೆ......

~.~
  • ಶ್ರೀಶಕಾರಂತ ರವರ ಬ್ಲಾಗ್
  • Login or register to post comments
  • 751 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 26, 2006 - 2:46am — bhatpp

ಅಂಕಿತ?

bhatpp's picture

ಪಂಡಿತ ಪುತ್ರ ತಮ್ಮ ಅಂಕಿತವೋ? ತಿಳಿವ ಕುತೂಹಲ ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2006 - 9:20am — Sunil Jayaprakash

ಹರ ಹರಾ ಚನ್ನಸೋಮೇಶ್ವರಾ

Sunil Jayaprakash's picture

ಸೋಮೇಶ್ವರ ಶತಕದಲ್ಲಿದ್ದಂತೆ,  ಶ್ರೀಶ ಕಾರಂತರವರದು "ಪಂಡಿತ ಪುತ್ರ" ಅಂಕಿತವಿರಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 28, 2006 - 2:20pm — ಶ್ರೀಶಕಾರಂತ

ಜೀವ ಕೇಂದ್ರ

ಶ್ರೀಶಕಾರಂತ's picture

ಹಾ ಒಂಥರಾ ಹಾಗೆ...
ಗುಂಡಪ್ಪ ನವರು ಮಂಕುತಿಮ್ಮ ಅನ್ನುತ್ತಾರಲ್ಲಾ ಹಾಗೆ ಪಂಡಿತಪುತ್ರ ಅಂತ ನನ್ನದು...

ಹಾಗೆ ಒಂದು ತಪ್ಪಾಗಿದೆ.

ಬಾಳ್ವೆನರಿಯದ ಬಾಳ ಬದಲು ಬಾಳ್ವೆಯರಿಯದ ಬಾಲ ಆಗಬೇಕಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 28, 2006 - 4:48pm — ಮಹೇಶ ಭೋಗಾದಿ

ಪಂಡಿತ ಪುತ್ರ ಅಂದರೆ ಪೆದ್ದ

ಮಹೇಶ ಭೋಗಾದಿ's picture

ಪಂಡಿತ ಪುತ್ರ ಅಂದರೆ ಪೆದ್ದ ಎಂದು ಅರ್ಥ ತಾನೆ.

ಇರುವಶ್ಟು - ಇದು "ಇರುವಷ್ಟು" ವಾಗಬೇಕು

ಆಕರ್ಶಿಪ - ಇದು "ಆಕರ್ಷಿಪ" ವಾಗಬೇಕು

ತುಡಿತವಶ್ಟೆ - ಇದು "ತುಡಿತವಷ್ಟೆ" ವಾಗಬೇಕು.

ಬಹುಶಃ ಇವು ಅಚ್ಚು ತಪ್ಪುಗಳಿರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 28, 2006 - 10:21pm — bhatpp

ಕವಿಗಿರುವ ಸ್ವತಂತ್ರತೆ! (ಉ: ಜೀವ ಕೇಂದ್ರ)

bhatpp's picture

ಇವೆಲ್ಲ ಕವಿಗಿರುವ ಸ್ವಾತಂತ್ರ್ಯ ಸ್ವಾಮಿ -:) (ಇದಕ್ಕೆ ಒಂದು ಪದವುಂಟು, ಆದರೆ ಅದು ಈಗ ನೆನಪಿಗೆ ಬರುತ್ತಿಲ್ಲ)! ನಮ್ಮ ಪಂಡಿತ ಪುತ್ರರು 'ಷ'-ಕಾರದ ಬದಲು 'ಶ'-ಕಾರ ಪ್ರಿಯರು (ಅವರ ಮೇಲಿನ ಉತ್ತರವನ್ನು ನೋಡಿದರೆ, ಅವರು 'ಳ'-ಕಾರದ ಬದಲು 'ಲ'-ಕಾರ ಪ್ರಿಯರು ಅಂತಲೂ ಕಾಣುತ್ತಾರೆ -:) ..) ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 4:30pm — ಶ್ರೀಶಕಾರಂತ

ದೊಡ್ಡ ಶ ಹೇಗೆ ಬರೆಯೋದು

ಶ್ರೀಶಕಾರಂತ's picture

ಮೊದಲನೇ ಕಗ್ಗ, ಹಾಗಾಗಿ ತಪ್ಪನ್ನು ದಯವಿಟ್ಟು ಹೊಟ್ಟೆಗೆ ಹಾಕ್ಕೊಳಿ....

ದೊಡ್ಡ ಶ ಬರೆಯೋದು ಹೇಗೆ....ನಾನು ಬರಹ ಡೈರೆಕ್ಟ್ ಉಪಯೋಗಿಸುತ್ತಿದ್ದೀನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 4:35pm — ಶ್ರೀಶಕಾರಂತ

ಹೌದು ಪಂಡಿತ ಪುತ್ರ ಅಂದರೆ ಪೆದ್ದ ಎಂದರ್ಥ

ಶ್ರೀಶಕಾರಂತ's picture

ironically ಹೇಳೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 6:15pm — ಮಹೇಶ ಭೋಗಾದಿ

ironically

ಮಹೇಶ ಭೋಗಾದಿ's picture

ironically - ಇದಕ್ಕೆ ಯಾವ ಪದ ಸೂಕ್ತ.

೧) ವ್ಯಂಗ್ಯ
೨) ಕುಹುಕ
೩) ಅಣಕ
೪) ಹಾಸ್ಯ

ಈ ಪದಗಳ ಅರ್‍ಥ ವ್ಯತ್ಯಾಸಗಳೇನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 10:59pm — bhatpp

ironically = ವಿಪರ್ಯಾಸ?

bhatpp's picture

ನೀವು ನೀಡಿದ ನಾಲ್ಕೂ ಅರ್ಥಗಳು ಸಮಂಜಸವೆನ್ನಿಸುವುದಿಲ್ಲ! ironically ಎಂದರೆ ವಿಪರ್ಯಾಸವೆನ್ನಬಹುದೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 3, 2006 - 10:07am — ಮಹೇಶ ಭೋಗಾದಿ

ವಿಡಂಬನೆ

ಮಹೇಶ ಭೋಗಾದಿ's picture

ironically ಪದಕ್ಕೆ ಸಮನಾಗಿ ವಿಡಂಬನೆ/ವಿಪರ್‍ಯಾಸ ಪದಗಳನ್ನು ಬಳಸಬಹುದೆನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 4:42pm — Gopinath Rao

Gopinath Rao's picture

ದೊಡ್ಡದೊಂದು ಪೆನ್ನು ತೆಗೆದು ಕೊಳ್ಳಿ, ದೊಡ್ಡ ಹಾಳೆ ಕಾಗದ ತೆಗೆದುಕೊಳ್ಳಿ. ಚಾಪೆಯ ಹಾಗೆ ಕಾಗದ ಬಿಡಿಸಿ ಒಂದು ಬದಿಯಿಂದ ಆರಂಭ ಮಾಡಿ. ಇಡೀ ಕಾಗದಕ್ಕೆ ಕೈ ಎಟುಕದಿದ್ದರೆ ನಿಂತುಕೊಳ್ಳಿ....
(ತಮಾಷೆಗೆ ಬರೆದೆ ಅಷ್ಟೇ..ದಯವಿಟ್ಟು ಕೋಪಿಸಿಕೊಳ್ಳಬೇಡಿ ಮತ್ತೆ!)
ಕ್ಯಾಪಿಟಲ್ "ಎಸ್" ಟೈಪಿಸಿ ಆಮೇಲೆ ಸ್ಮಾಲ್ "ಎಚ್" ಟೈಪಿಸಿ.. ಪಟ್ಟೆ ಷ ನಿಮ್ಮ ಸ್ಕ್ರೀನಿನಲ್ಲಿ!
ಗೋಪೀನಾಥ ರಾವ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 6:48pm — ಶ್ರೀಶಕಾರಂತ

ಧ್ನ್ಯವಾದಗಳು ಮಹೇಶ್ ಮತ್ತು ರಾವ್ ಅವರುಗಳಿಗೆ

ಶ್ರೀಶಕಾರಂತ's picture

ಷ ಬರೆಯುತ್ತೇನೆ ಇನ್ಮೇಲೆ..

irony ಅಂದ್ರೆ ವ್ಯಂಗ್ಯ ಅಂತ ಆಗ್ಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 7:22pm — ಮಹೇಶ ಭೋಗಾದಿ

ironically - irony

ಮಹೇಶ ಭೋಗಾದಿ's picture

ಶ್ರೀಶರೆ,

ironically - irony ಪದಗಳ ಅರ್‍ಥ ವ್ಯತ್ಯಾಸದ ಬಗ್ಗೆ ಚರ್‍ಚಿಸೋಣವೆಂದು ಹಾಗೆ ಬರೆದೆನು.

irony - The use of words to express something different from and often opposite to their literal meaning

ironically - Characterized by or constituting irony.

ಆದ್ದರಿಂದ irony ವ್ಯಂಗ್ಯವಾದರೆ, ironically ಏನು?

 ಒಂದು ಸಲಹೆ:  ನಾನು "ನುಡಿ" ಬಳಸುವುದರಿಂದ d ಕೀಲಿಯನ್ನು ಒತ್ತಿದರೆ "ದ" ಎಂದು ಬರುವುದು ಹೊರತು "ದ್" ಎಂದು  "ಬರಹ"ದ ತರಹ ಬರದು. ಕನ್ನಡದಲ್ಲಿ ಪೂರ್‍ಣಾಕ್ಷರಗಳು ಅರ್‍ಧಾಕ್ಷರಗಳಿಗಿಂತ ಹೆಚ್ಚಿರುವುದರಿಂದ ನುಡಿಯ ಅಂದರೆ ಕಗಪದ ಕೀಲ್ಮಣೆ ಕನ್ನಡ ಬೆರಳಚ್ಚಿಸಲು (type) ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ. ಈ ಸೌಲಭ್ಯವನ್ನು "ಬರಹ"ದಲ್ಲಿ "KGP_KBD"ನ್ನು ಆಯ್ದು ಪಡೆಯಬಹುದು.

ಧನ್ಯವಾದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 10:41pm — pavanaja

Re: ironically - irony

pavanaja's picture

mahesh_b_s wrote:

ಶ್ರೀಶರೆ,

ironically - irony ಪದಗಳ ಅರ್ಥ ವ್ಯತ್ಯಾಸದ ಬಗ್ಗೆ ಚರ್ಚಿಸೋಣವೆಂದು ಹಾಗೆ ಬರೆದೆನು.

ಈ ಪದ(ಗಳ) ಪ್ರಾಕ್ಟಿಕಲ್ ಉದಾಹರಣೆ ಬೇಕಿದ್ದರೆ ಇದನ್ನು ಓದಿ. ಕನ್ನಡ ಪತ್ರಿಕೆಗೆ "ಇಂಗ್ಲೀಷ್ ಭಾಷೆಯ 'ಪಿತ್ತ' ಬೇಕಿಲ್ಲ" ಎಂದು ಬರೆದ ಲೇಖನಕ್ಕೆ ಸಂಭಾವನೆ ಕಳುಹಿಸುವಾಗ ಜೊತೆಗೆ ಲಗತ್ತಿಸಿದ ಪತ್ರ ಇಂಗ್ಲೀಷಿನಲ್ಲಿ!

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 2, 2006 - 4:43pm — ಮಹೇಶ ಭೋಗಾದಿ

ಷಣ್ಮುಖ ಷ ಹೀಗೆ ಬರೆಯಿರಿ

ಮಹೇಶ ಭೋಗಾದಿ's picture

ಬರಹ = Sh
ನುಡಿ = x

L = ಳ (ಎರಡರಲ್ಲಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 1, 2006 - 1:14am — ಸ್ಮಿತಾ

ಜೀವ ಕೇಂದ್ರ

ಸ್ಮಿತಾ's picture

ಶ್ರೀಶ,
 
ನಿನ್ನ ಟೈಪೋ ಸರಿಪಡಿಸಿದ್ದೇನೆ :
 
ಬಂದೆನರಿಯದೆ ಧರೆಗೆ
 ಅರಿಯದೇ ಹೊರಡುವೆನು
ಬಾಳ್ವೆಯರಿಯದ ಬಾಳ
ಇರುವಷ್ಟು ದಿನ ಆಕರ್ಷಿಪ ಕೇಂದ್ರ
ಬಾಳನರಿಯುವ ತುಡಿತವೋ ಪಂಡಿತ ಪುತ್ರ||
---ನನಗರಿವಿಲ್ಲದೆಯೇ ಈ ಭೂಮಿಗೆ ಬಂದೆ,ಇಲ್ಲಿಂದ ಹೊರಡುವಾಗಲೂ ತಿಳಿಯುವುದಿಲ್ಲ ,
ಇರುವಷ್ಟು ದಿನ ಯಾವ ಕಾರಣ ನಮ್ಮನ್ನು ಹಿಡಿದಿರುತ್ತದೆ ಅಂದರೆ.....ಈ ಬಾಳನ್ನು
ಅರಿಯುವ ತುಡಿತವಷ್ಟೇ......

 
ಮೊದಮೊದಲು ಕನ್ನಡದಲ್ಲಿ  ಟೈಪಿಸುವಾಗ ಕೀಬೋರ್ಡ್ ಲೇಔಟ್ ನೋಡಿಕೊಂಡು ಮಾಡಿದರೆ ಒಳ್ಳೆಯದು.
ಸಂಪದದ ಯುನಿಕೋಡ್ ಕನ್ವರ್ಟರ್ (http://sampada.net/converter) ಉಪಯೋಗಿಸಿದರೂ ತಪ್ಪುಗಳನ್ನು ಕಂಡುಹಿಡಿಯುವುದು ಸುಲಭ.
ಪ್ರಯತ್ನಿಸಿ ನೋಡು.
 
- ಸ್ಮಿತಾ
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • B-A-D ಹಾಗೂ ರಾಜಕಾರಣ
  • ಹಿಂದಿ ಹೇರುತ್ತ ಬಂದ ಕೇಂದ್ರ ಸರ್ಕಾರ
  • ಏಕೆ ಕರ್ನಾಟಕದೆಡೆಗೆ ತಾತ್ಸಾರ
  • ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು
  • ಅಯೋಧ್ಯೆ ಭಾರತದ ವ್ಯಾಟಿಕನ್ನೇ?
Syndicate content

ಲೇಖಕರು

ಶ್ರೀಶಕಾರಂತ's picture

ಪರಿಚಯ

ಶ್ರೀಶ ಕಾರಂತ...ಶಿವಮೊಗ್ಗದ ಗಂಡು...ಕನ್ನಡಕ್ಕೆ ನಿಜವಾಗಲೂ ಏನಾದರು ಸೇವೆ ಸಲ್ಲಿಸಬೇಕು ಎಂಬುದೆ ಎನ್ನಾಸೆ.....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
  • hamsanandi
    ಉ: ನಿದಾನ, ನಿಧಾನ
    November 20, 2008 - 10:55pm
  • hamsanandi
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 10:49pm
  • kannadakanda
    ಉ: ತರುಣ, ತಱುಣ
    November 20, 2008 - 10:28pm
  • shobha.koppad
    ಉ: ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
    November 20, 2008 - 10:19pm
  • muralihr
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 10:15pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator