ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ರಘುನಂದನ ರವರ ಬ್ಲಾಗ್

ನೀರಿನ ಮುಂದೆ ನಾವ್ಯಾರು?

March 24, 2006 - 12:45am — ರಘುನಂದನ

ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು

ನಮ್ಮಮ್ಮ ಕಳಿಸಿದ್ರು. ನಾನು ಕೆಲವು ಸ್ನೇಹಿತರೊಡಗೂಡಿ ತುಂಗಭದ್ರೆಯಲ್ಲಿ ಈಜಲು ಹೋದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿದು, ಮತ್ತೆ ಉತ್ತರ

ವಾಹಿನಿಯಾಗುವ ಜಾಗೆಯಲ್ಲಿ ನಾವು ಸಾಮಾನ್ಯವಾಗಿ ಈಜಾಡುವುದು ರೂಢಿಯಲ್ಲಿತ್ತು. ಮಧ್ಯ ಒಂದು ಮೊನಚಾದ ತುದಿಯ ಬಂಡೆಯೊಂದು ಎದ್ದು ನಿಂತಿತ್ತು.

ಇದಕ್ಕೆ "ಶಿವ್ರಾತ್ರಿಬಂಡಿ" (ಶಿವರಾತ್ರಿ ಬಂಡೆ) ಎಂಬ ಹೆಸರು. ನದಿಯ ಬೇರೆಡೆಗೆ ಹೋಲಿಸಿದಲ್ಲಿ ಆ ಜಾಗದ ವಿಸ್ತಾರ ಕಮ್ಮಿ ಹೀಗಾಗಿ ನೀರಿನ ಸೆಳೆತ ಜಾಸ್ತಿ. ಸ್ವಲ್ಪ

ಮುಂದೆ ಹೋದರೆ ಇದ್ದಕ್ಕಿದ್ದಂತೆ ನದಿಯ ಪಾತ್ರ ವಿಶಾಲವಾಗುತ್ತದೆ, ಅಲ್ಲಿ ನೀರಿನ ವೇಗವೇನೋ ಕಮ್ಮಿ ಆದರೆ ಆಳ ಹಾಗು ಒಳಪ್ರವಾಹ ಅತ್ಯಂತ

ಅಪಾಯಕಾರಿ. ನಾವೆಲ್ಲ ಏನು ಮಾಡ್ತಾ ಇದ್ವಿ ಅಂದ್ರೆ ನದಿಯ ಈ ದಂಡೆಯ ಮೇಲೆ ಬಟ್ಟೆಗಳನ್ನಿಟ್ಟು ನದಿಯಲ್ಲಿ ಧುಮುಕಿ, ನದಿಯ ಸೆಳೆತದೊಂದಿಗೇ ಇನ್ನೊಂದು

ದಡಕ್ಕೆ ಈಜಿಕೊಂಡು ಹೋಗುತ್ತಿದ್ದೆವು. ಹೀಗೆ ಮಾಡುವಾಗ ಅಡ್ಡಡ್ಡವಾಗಿಯೇ ನದಿಯನ್ನು ದಾಟಲಾಗದು, ಪ್ರಾರಂಭಿಸಬೇಕಾದ ದಡದಲ್ಲಿ ಸಾಕಷ್ಟು ಮೇಲ್ಭಾಗಕ್ಕೆ

ಬಂದು ನೀರಿನಲ್ಲಿ ಧುಮುಕಿ, ಓರೆಯಾದ ದಿಕ್ಕಿನಲ್ಲಿ (diagonal) ಈಜುತ್ತ ಹೊರಟರೆ ಇನ್ನೊಂದು ದಡದಲ್ಲಿ ನಾವು ಸೇರಬೇಕಾದ ಜಾಗಕ್ಕೆ ಬರಬಹುದಾಗಿತ್ತು.

ಅದೇ ರೀತಿ ವಾಪಸ್ಸಾಗುವಾಗ ಈ ದಂಡೆಯ ಸಾಕಷ್ಟು ಮೇಲ್ಭಾಗಕ್ಕೆ ಬಂದು ನೀರಿನಲ್ಲಿಳಿದು, ನಮ್ಮ ತಲೆ ಮುಳುಗುವವರೆಗೂ ನೀರಿನಲ್ಲಿ ನಡೆಯುತ್ತ ಬಂದು,

ಯಾವಾಗ ನೀರಿನ ಆಳ ಹೆಚ್ಚಾಗುತ್ತಿತ್ತೋ ಅಲ್ಲಿಂದ ಕರಾರುವಕ್ಕಾದ ಲೆಕ್ಕಾಚಾರದ ಮೇಲೆ ಈಜಲುತೊಡಗಿ ನಮ್ಮ ಜಾಗಕ್ಕೆ ಸೇರಿಕೊಳ್ಳಬೇಕಿತ್ತು. ಈ

ಪ್ರಾರಂಭದ ಜಾಗದ ಆಯ್ಕೆ ಅಥವಾ ಈಜುವ ಲಯವೇನಾದರೂ ಅಂದಾಜು ತಪ್ಪಿತೋ ಅಷ್ಟೇ ಗತಿ. ಶಿವ್ರಾತ್ರಿಬಂಡಿಗೆ ಮೈ ಕೈ ತಾಕಿಸಿಕೊಂಡು

ಗಂಭೀರಗಾಯಗಳನ್ನು ಮಾಡಿಕೊಳ್ಳುವುದೋ ಅಥವಾ ಆಳದ ಪ್ರದೇಶಕ್ಕೆ ಹೋಗಿ ಸಿಲುಕಿಕೊಂಡು ಶಿವನ ಪಾದ ಸೇರುವುದೋ ಆಗುತ್ತಿತ್ತು. ಚೆನ್ನಾಗಿ

ನುರಿತವರಾಗಿದ್ದರೆ ನೀರಿನಲ್ಲಿಯೇ ಮುಳುಗಿ ಸಾಕಷ್ಟು ದೂರವನ್ನು ಈಜಿಕೊಂಡು ಅದು ಹೇಗೋ ಹೊರಗೆ ಬಂದು ಬಿಡುತ್ತಿದ್ದರು. ಆದರೆ ಇದಕ್ಕೆ ಧೈರ್ಯ

ಮಾತ್ರವಲ್ಲಿ ಸಾಕಷ್ಟು ದೈಹಿಕಬಲವೂ ಬೇಕು. ಇರಲಿ. ನಮ್ಮಮ್ಮನ ಹತ್ತಿರ ಬಯ್ಯಿಸಿಕೊಂಡು ನಾನು ನದಿಗೆ ಬಂದೆನಷ್ಟೆ. ಎಲ್ಲರೂ ಮೊದಲು ಈಜಿಕೊಂಡು

ಆಚೆಯ ದಡಕ್ಕೆ ಹೋದೆವು. ನಂತರ ನಂಗ್ಯಾಕೋ ಬೇಗ ಹೋಗೋಣ ಎನ್ನಿಸಿತು. ನಾನೊಬ್ಬನೆ ವಾಪಸ್ಸು ಹೊರಟೆ. ಅಂದು ನದಿಯಲ್ಲಿ ನೀರಿನ ಪ್ರಮಾಣವೂ

ತುಸು ಹೆಚ್ಚಿತ್ತು, ನನಗದರ ಬಗ್ಗೆ ಹೆಚ್ಚು ಗಮನಿಸಲು ಆಗಲಿಲ್ಲ. ಸಾಕಷ್ಟು ರೂಢಿಯಾದ ಸ್ಥಳವಾದರೂ ದುರ್ದೈವದಿಂದ ನಾನು ಅಂದಾಜು ತಪ್ಪಿಯೇ ಬಿಟ್ಟೆ. ಇನ್ನೂ

ಹದಿನೈದು ಹೆಜ್ಜೆಯಾದರೂ ಇಟ್ಟಿಲ್ಲ, ಆಗಲೇ ನನ್ನ ಮೂಗಿನವರೆಗೆ ನೀರು ಬಂದು ಬಿಟ್ಟಿತು, ನಾನು ಅವಿವೇಕದಿಂದ ಈಜಲು ತೊಡಗಿದೆ. ಲಯ ಸಿಗುತ್ತಲೇ ಇಲ್ಲ!.

ನೋಡು ನೋಡುತ್ತಲೇ ನಾವು ಬಟ್ಟೆಯನ್ನಿಟ್ಟಿದ್ದ ಜಾಗವೂ ನನ್ನಿಂದ ದೂರವಾಯಿತು, ಎಡಗಡೆಗೆ ನೋಡುತ್ತಿದ್ದೇನೆ, ಶಿವ್ರಾತ್ರಿಬಂಡಿ ಕ್ಷಣಕ್ಷಣಕ್ಕೂ ಸಮೀಪಿಸುತ್ತಿದೆ.

...... (ಅರೆre ಯಾಕೋ ಕೈ ಸಿಕ್ಕಾಪಟ್ಟೆ ನೋಯ್ತಾ ಇದೆ, ಉಳಿದದ್ದನ್ನು ಟೈಮಾದಾಗ ಬರೀತಿನಿ)

  • ಅನುಭವ ಕಥನ
~.~
  • ರಘುನಂದನ ರವರ ಬ್ಲಾಗ್
  • Login or register to post comments
  • 901 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2006 - 8:59am — ಶ್ರೀನಿಧಿ

ಅಯ್ಯೋ

ಶ್ರೀನಿಧಿ's picture

ನಮ್ಮ ಸೀತಾರಾಂ ಥರ ಸ್ವಾರಸ್ಯಕರವಾದ ಜಾಗದಲ್ಲೇ ನಿಲ್ಲಿಸಿಬಿಟ್ಟರಲ್ಲಾ?? ನೀವು ಬಚಾವ್ ಆಗಿ ಬಂದಿದ್ದೀರಿ ಅಂತ ಊಹೆ ಮಾಡಿಕೊಂಡಿದ್ದೀನಿ. ಅಥವಾ ಶಿವನ ಪಾದದಲ್ಲೂ ಅಂತರ್ಜಾಲ ಸಂಪರ್ಕ ಇದೆಯಾ??

 

 

 

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 24, 2006 - 12:06pm — ಮಹೇಶ ಭೋಗಾದಿ

ಕೈನೋವು!!!

ಮಹೇಶ ಭೋಗಾದಿ's picture

ಅಯ್ಯೋ ಶಿವನೇ ಗತಿ...

ನಿಮ್ಮ ಕೈ ಈಗಲೆ ನೋಯಬೇಕೆ?
ಏನು ಸ್ವಾಮಿ ಈಜುಪಟು ಅಂತೀರ ಇಷ್ಟು ಬೇಗ ಕೈನೋಯಿತೆ?

ಇದು ಕಳ್ಳನೋವು:)

ಇರಲಿ....
ಕಥೆಯು ಬೇಗನೆ ಮುಂದುವರಲಿ, ಎಷ್ಟು ಹೊತ್ತು ಅಂಥ ನೀರಿನಲ್ಲಿ ಹಾಗೆ ಇರುತ್ತೀರ? Smiling !!

ನೀವು ಈಜಹೋಗಿದ್ದನ್ನು ಕೇಳಿ ನನಗೆ ಒಂದು ವಿಷಯ ನೆನಪಾಗುತ್ತಿದೆ..

ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾವೇರಿ ಮತ್ತು ಹೇಮವತಿಯರು ಹರಿದರು ಕೂಡ, ನಮ್ಮ ಮನೆಗಳಲ್ಲಿ ಹೆಚ್ಚು ಮಂದಿಗೆ ಈಜಲು ಬರದು. ಹಾಗು ನಮ್ಮನ್ನು ಈಜಗೊಡರು.

ಬರೀ ಈಜುಗೊಳದಲ್ಲಿ ಈಜಿದ್ದೆ ಆಯಿತು ನಮ್ಮ ಜಾಯಮಾನ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀರಿನ ಮುಂದೆ ನಾವ್ಯಾರು? - ಭಾಗ ಎರಡು
  • ಶಿವಸಮುದ್ರಮ್ ಬಳಿಯ ಪ್ರಪಾತದಲ್ಲಿ ಭೋರ್ಗರೆಯುತ್ತಾ ಧುಮುಕುವ, ಕಾವೇರಿ ನದಿಯ ವಿಹಂಗಮ ನೋಟ !
  • ಬೇಸಿಗೆ
  • ಫೆಬ್ರವರಿ ತಿಂಗಳ ‘ಸಡಗರ’
  • ಛಠ್ ಪೂಜೆ
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator