ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಲಾಲ್ ಬಾಗ್ ನ ಹಕ್ಕಿಗಳು
ನಾನು ಈಚೆಗೆ ಒಂದು ಒಳ್ಳೆ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದೀನಿ. ಪ್ರತಿ ಶನಿವಾರ/ಭಾನುವಾರ ಬೆಳಿಗ್ಗೆ ಲಾಲ್ ಬಾಗಿಗೆ ಹೋಗಿ ಅಲ್ಲಿನ ಹಕ್ಕಿಗಳನ್ನು ಸೆರೆ ಹಿಡಿಯುವುದು !!!!... ಅಯ್ಯೊ ಸ್ವಾಮಿ ಕ್ಯಾಮರಾದಲ್ಲಿ ..!! ಅವುಗಳ ಚಲನ-ವಲನ ಕಂಡು ಬಹಳ ಖುಶಿ ಪಟ್ಟೆ. ಲಾಲ್ ಬಾಗಿನಲ್ಲಿ ಇಷ್ಟೊಂದು ತರ ಹಕ್ಕಿಗಳಿವೆ ಅಂತ ನನಗೆ ಗೊತ್ತಿರಲಿಲ್ಲ......ಇಲ್ಲಿ ತನಕ ಈ ಕೆಳಗಿನವುಗಳನ್ನು ಸೆರೆ ಹಿಡಿದಿದ್ದೇನೆ. ಒಂದು ಬೇಸರವೆಂದರೆ ಇವುಗಳ ಹೆಸರುಗಳು ನನಗೆ ಗೊತ್ತಿಲ್ಲ.....ಬಲ್ಲವರು ತಿಳಿಸಿ...
ಚಿತ್ರಗಳನ್ನು ಇಲ್ಲಿ ನೋಡಿ ಆನಂದಿಸಿ.
-ಜೈ ಕರ್ನಾಟಕ

- ವೈಭವ ರವರ ಬ್ಲಾಗ್
- Login or register to post comments
- 495 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಸಲಹೆ: ಲಾಲ್ ಬಾಗ್ ನ ಹಕ್ಕಿಗಳು
ವೈಭವ್,
ಪೂರ್ಣಚಂದ್ರ ತೇಜಸ್ವಿಯವರು "ಕರ್ನಾಟಕದ ಹಕ್ಕಿಗಳ" ಬಗ್ಗೆ ಒಂದು ಬಹಳ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಹಕ್ಕಿಗಳ ಬಗ್ಗೆ ವಿವರದ ಜತೆಗೆ ಉತ್ತಮ ದರ್ಜೆಯ ಬಣ್ಣದ ಫೋಟೋಗಳೂ ಇವೆ. ಆ ಪುಸ್ತಕವನ್ನು ನಿಮ್ಮ ಜತೆ ತೆಗೆದುಕೊಂಡು ಹೋಗಿ ಪ್ರಯತ್ನಿಸಿ. ನಿಮಗೂ ಇನ್ನೂ ಹೆಚ್ಚು ಆಸಕ್ತಿ ಮೂಡಬಹುದು. ಅಂದಹಾಗೆ ನೀವು ತೆಗೆದಿರುವ ಫೋಟೋಗಳು ಸುಂದರವಾಗಿ ಮೂಡಿಬಂದಿವೆ.
- ಶ್ಯಾಮ್ ಕಿಶೋರ್
ಸವಿಯೊದಗು: ಲಾಲ್ ಬಾಗ್ ನ ಹಕ್ಕಿಗಳು
ಇತ್ತೀಚೆಗೆ ನಾನೂ ಒಂದು ಡಿಜಿಟಲ್ ಕ್ಯಾಮೆರಾ ಕೊಂಡಿದ್ದೇನೆ. ಆದರೆ ಡಿಜಿಟಲ್ ಕ್ಯಾಮೆರಾ ಬಳಸಿ ರೂಢಿಯೇ ಇರದ ನಾನು ಫೋಟೋ ತೆಗೆಯಲು ತುಂಬಾ ಪ್ರಯಾಸ ಪಡುತ್ತಿದ್ದೇನೆ. ಕೈಗಳು ತುಂಬಾ ಅದರುತ್ತವೆಯೇನೋ ಎಂದನಿಸುತ್ತದೆ. ಇನ್ನೂ ಅಭ್ಯಾಸವಾಗಿಲ್ಲ.
ಅಂದ ಹಾಗೆ ನೀವು ಬಳಸಿದ ತಂತ್ರವನ್ನೇ ನಾನೂ ಬಳಸೋಣ ಅಂತ ಇದ್ದೀನಿ. ಏನಪ್ಪಾ ಅಂದರೆ, ಶನಿವಾರ ಮತ್ತು ಭಾನುವಾರಗಳಂದು ಕ್ಯಾಮೆರಾವನ್ನು ಲಾಲ್‌ಭಾಗಿಗೆ ತೆಗೆದುಕೊಂಡು ಹೋಗಿ ಈ ರೀತಿಯ ಉತ್ತಮ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸುವುದು.
Re: ಸವಿಯೊದಗು: ಲಾಲ್ ಬಾಗ್ ನ ಹಕ್ಕಿಗಳು
ಶ್ಯಾಮ್, ನಿಮ್ಮ ಸಲಹೆಯನ್ನು ಕಾರ್ಯ ರೂಪಕ್ಕೆ ತರುತ್ತೇನೆ.
ಸುನಿಲ್, ನೀವು ಡಿಜಿಟಲ್ ಕ್ಯಾಮೆರಾ ಬಗ್ಗೆ ಇರುವ ಈ ತಾಣವನ್ನು ಎಡತಾಕಿ. ನಂತರ ನೀವು ನಿಮ್ಮ ಕೈ ಚಳಕವನ್ನು ಆನಂದಿಸಿ. ಛಾಯಾಗ್ರಹಣಕ್ಕೆ ಲಾಲ್ ಬಾಗ್ ಗಿಂತ ಇನ್ನು ಉತ್ತಮ ಪ್ರಯೋಗಶಾಲೆಯಿಲ್ಲ ಅಂತ ಅನ್ನಿಸುತ್ತದೆ.
-ಜೈ ಕರ್ನಾಟಕ