21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಜೀವ ಕೇಂದ್ರ

February 24, 2006 - 11:32am
ಶ್ರೀಶಕಾರಂತ
ಬಂದೆನರಿಯದೆ ಧರೆಗೆ ಅರಿಯದೇ ಹೊರಡುವೆನು ಬಾಳ್ವೆನರಿಯದ ಬಾಳ ಇರುವಶ್ಟು ದಿನ ಆಕರ್ಶಿಪ ಕೇಂದ್ರ ಬಾಳನರಿಯುವ ತುಡಿತವೋ ಪಂಡಿತ ಪುತ್ರ|| ---ನನಗರಿವಿಲ್ಲದೆಯೇ ಈ ಭೂಮಿಗೆ ಬಂದೆ,ಇಲ್ಲಿಂದ ಹೊರಡುವಾಗಲೂ ತಿಲಿಯುವುದಿಲ್ಲ , ಇರುವಶ್ಟು ದಿನ ಯಾವ ಕಾರಣ ನಮ್ಮನ್ನು ಹಿಡಿದಿರುತ್ತದೆ ಅಂದರೆ.....ಈ ಬಾಳನ್ನು ಅರಿಯುವ ತುಡಿತವಶ್ಟೆ......
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by bhatpp on
ಪಂಡಿತ ಪುತ್ರ ತಮ್ಮ ಅಂಕಿತವೋ? ತಿಳಿವ ಕುತೂಹಲ ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
[http://sampada.net/n...| ಸೋಮೇಶ್ವರ ಶತಕ ]ದಲ್ಲಿದ್ದಂತೆ,  ಶ್ರೀಶ ಕಾರಂತರವರದು "ಪಂಡಿತ ಪುತ್ರ" ಅಂಕಿತವಿರಬಹುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀಶಕಾರಂತ on
ಹಾ ಒಂಥರಾ ಹಾಗೆ... ಗುಂಡಪ್ಪ ನವರು ಮಂಕುತಿಮ್ಮ ಅನ್ನುತ್ತಾರಲ್ಲಾ ಹಾಗೆ ಪಂಡಿತಪುತ್ರ ಅಂತ ನನ್ನದು... ಹಾಗೆ ಒಂದು ತಪ್ಪಾಗಿದೆ. ಬಾಳ್ವೆನರಿಯದ ಬಾಳ ಬದಲು ಬಾಳ್ವೆಯರಿಯದ ಬಾಲ ಆಗಬೇಕಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಹೇಶ ಭೋಗಾದಿ on

ಪಂಡಿತ ಪುತ್ರ ಅಂದರೆ ಪೆದ್ದ ಎಂದು ಅರ್ಥ ತಾನೆ.

ಇರುವಶ್ಟು - ಇದು "ಇರುವಷ್ಟು" ವಾಗಬೇಕು

ಆಕರ್ಶಿಪ - ಇದು "ಆಕರ್ಷಿಪ" ವಾಗಬೇಕು

ತುಡಿತವಶ್ಟೆ - ಇದು "ತುಡಿತವಷ್ಟೆ" ವಾಗಬೇಕು.

ಬಹುಶಃ ಇವು ಅಚ್ಚು ತಪ್ಪುಗಳಿರಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhatpp on
ಇವೆಲ್ಲ ಕವಿಗಿರುವ ಸ್ವಾತಂತ್ರ್ಯ ಸ್ವಾಮಿ -:) (ಇದಕ್ಕೆ ಒಂದು ಪದವುಂಟು, ಆದರೆ ಅದು ಈಗ ನೆನಪಿಗೆ ಬರುತ್ತಿಲ್ಲ)! ನಮ್ಮ ಪಂಡಿತ ಪುತ್ರರು 'ಷ'-ಕಾರದ ಬದಲು 'ಶ'-ಕಾರ ಪ್ರಿಯರು (ಅವರ ಮೇಲಿನ ಉತ್ತರವನ್ನು ನೋಡಿದರೆ, ಅವರು 'ಳ'-ಕಾರದ ಬದಲು 'ಲ'-ಕಾರ ಪ್ರಿಯರು ಅಂತಲೂ ಕಾಣುತ್ತಾರೆ -:) ..) ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀಶಕಾರಂತ on
ಮೊದಲನೇ ಕಗ್ಗ, ಹಾಗಾಗಿ ತಪ್ಪನ್ನು ದಯವಿಟ್ಟು ಹೊಟ್ಟೆಗೆ ಹಾಕ್ಕೊಳಿ.... ದೊಡ್ಡ ಶ ಬರೆಯೋದು ಹೇಗೆ....ನಾನು ಬರಹ ಡೈರೆಕ್ಟ್ ಉಪಯೋಗಿಸುತ್ತಿದ್ದೀನಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಹೇಶ ಭೋಗಾದಿ on
ironically - ಇದಕ್ಕೆ ಯಾವ ಪದ ಸೂಕ್ತ. ೧) ವ್ಯಂಗ್ಯ ೨) ಕುಹುಕ ೩) ಅಣಕ ೪) ಹಾಸ್ಯ ಈ ಪದಗಳ ಅರ್‍ಥ ವ್ಯತ್ಯಾಸಗಳೇನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhatpp on
ನೀವು ನೀಡಿದ ನಾಲ್ಕೂ ಅರ್ಥಗಳು ಸಮಂಜಸವೆನ್ನಿಸುವುದಿಲ್ಲ! ironically ಎಂದರೆ ವಿಪರ್ಯಾಸವೆನ್ನಬಹುದೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಹೇಶ ಭೋಗಾದಿ on
ironically ಪದಕ್ಕೆ ಸಮನಾಗಿ ವಿಡಂಬನೆ/ವಿಪರ್‍ಯಾಸ ಪದಗಳನ್ನು ಬಳಸಬಹುದೆನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Gopinath Rao on
ದೊಡ್ಡದೊಂದು ಪೆನ್ನು ತೆಗೆದು ಕೊಳ್ಳಿ, ದೊಡ್ಡ ಹಾಳೆ ಕಾಗದ ತೆಗೆದುಕೊಳ್ಳಿ. ಚಾಪೆಯ ಹಾಗೆ ಕಾಗದ ಬಿಡಿಸಿ ಒಂದು ಬದಿಯಿಂದ ಆರಂಭ ಮಾಡಿ. ಇಡೀ ಕಾಗದಕ್ಕೆ ಕೈ ಎಟುಕದಿದ್ದರೆ ನಿಂತುಕೊಳ್ಳಿ.... (ತಮಾಷೆಗೆ ಬರೆದೆ ಅಷ್ಟೇ..ದಯವಿಟ್ಟು ಕೋಪಿಸಿಕೊಳ್ಳಬೇಡಿ ಮತ್ತೆ!) ಕ್ಯಾಪಿಟಲ್ "ಎಸ್" ಟೈಪಿಸಿ ಆಮೇಲೆ ಸ್ಮಾಲ್ "ಎಚ್" ಟೈಪಿಸಿ.. ಪಟ್ಟೆ ಷ ನಿಮ್ಮ ಸ್ಕ್ರೀನಿನಲ್ಲಿ! ಗೋಪೀನಾಥ ರಾವ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀಶಕಾರಂತ on
ಷ ಬರೆಯುತ್ತೇನೆ ಇನ್ಮೇಲೆ.. irony ಅಂದ್ರೆ ವ್ಯಂಗ್ಯ ಅಂತ ಆಗ್ಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಹೇಶ ಭೋಗಾದಿ on

ಶ್ರೀಶರೆ,

ironically - irony ಪದಗಳ ಅರ್‍ಥ ವ್ಯತ್ಯಾಸದ ಬಗ್ಗೆ ಚರ್‍ಚಿಸೋಣವೆಂದು ಹಾಗೆ ಬರೆದೆನು.

irony - The use of words to express something different from and often opposite to their literal meaning

ironically - Characterized by or constituting irony.

ಆದ್ದರಿಂದ irony ವ್ಯಂಗ್ಯವಾದರೆ, ironically ಏನು?

 ಒಂದು ಸಲಹೆ:  ನಾನು "ನುಡಿ" ಬಳಸುವುದರಿಂದ d ಕೀಲಿಯನ್ನು ಒತ್ತಿದರೆ "ದ" ಎಂದು ಬರುವುದು ಹೊರತು "ದ್" ಎಂದು  "ಬರಹ"ದ ತರಹ ಬರದು. ಕನ್ನಡದಲ್ಲಿ ಪೂರ್‍ಣಾಕ್ಷರಗಳು ಅರ್‍ಧಾಕ್ಷರಗಳಿಗಿಂತ ಹೆಚ್ಚಿರುವುದರಿಂದ ನುಡಿಯ ಅಂದರೆ ಕಗಪದ ಕೀಲ್ಮಣೆ ಕನ್ನಡ ಬೆರಳಚ್ಚಿಸಲು (type) ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ. ಈ ಸೌಲಭ್ಯವನ್ನು "ಬರಹ"ದಲ್ಲಿ "KGP_KBD"ನ್ನು ಆಯ್ದು ಪಡೆಯಬಹುದು.

ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pavanaja on
[quote=mahesh_b_s]

ಶ್ರೀಶರೆ,

ironically - irony ಪದಗಳ ಅರ್ಥ ವ್ಯತ್ಯಾಸದ ಬಗ್ಗೆ ಚರ್ಚಿಸೋಣವೆಂದು ಹಾಗೆ ಬರೆದೆನು.

[/quote] ಈ ಪದ(ಗಳ) ಪ್ರಾಕ್ಟಿಕಲ್ ಉದಾಹರಣೆ ಬೇಕಿದ್ದರೆ [http://vishvakannada...|ಇದನ್ನು ಓದಿ]. ಕನ್ನಡ ಪತ್ರಿಕೆಗೆ "ಇಂಗ್ಲೀಷ್ ಭಾಷೆಯ 'ಪಿತ್ತ' ಬೇಕಿಲ್ಲ" ಎಂದು ಬರೆದ ಲೇಖನಕ್ಕೆ ಸಂಭಾವನೆ ಕಳುಹಿಸುವಾಗ ಜೊತೆಗೆ ಲಗತ್ತಿಸಿದ ಪತ್ರ ಇಂಗ್ಲೀಷಿನಲ್ಲಿ! ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಹೇಶ ಭೋಗಾದಿ on
ಬರಹ = Sh ನುಡಿ = x L = ಳ (ಎರಡರಲ್ಲಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸ್ಮಿತಾ on
ಶ್ರೀಶ,
 
ನಿನ್ನ ಟೈಪೋ ಸರಿಪಡಿಸಿದ್ದೇನೆ :
 
ಬಂದೆನರಿಯದೆ ಧರೆಗೆ
 ಅರಿಯದೇ ಹೊರಡುವೆನು
ಬಾಳ್ವೆಯರಿಯದ ಬಾಳ
ಇರುವಷ್ಟು ದಿನ ಆಕರ್ಷಿಪ ಕೇಂದ್ರ
ಬಾಳನರಿಯುವ ತುಡಿತವೋ ಪಂಡಿತ ಪುತ್ರ||
---ನನಗರಿವಿಲ್ಲದೆಯೇ ಈ ಭೂಮಿಗೆ ಬಂದೆ,ಇಲ್ಲಿಂದ ಹೊರಡುವಾಗಲೂ ತಿಳಿಯುವುದಿಲ್ಲ ,
ಇರುವಷ್ಟು ದಿನ ಯಾವ ಕಾರಣ ನಮ್ಮನ್ನು ಹಿಡಿದಿರುತ್ತದೆ ಅಂದರೆ.....ಈ ಬಾಳನ್ನು
ಅರಿಯುವ ತುಡಿತವಷ್ಟೇ......

ಮೊದಮೊದಲು ಕನ್ನಡದಲ್ಲಿ  ಟೈಪಿಸುವಾಗ ಕೀಬೋರ್ಡ್ ಲೇಔಟ್ ನೋಡಿಕೊಂಡು ಮಾಡಿದರೆ ಒಳ್ಳೆಯದು.
ಸಂಪದದ ಯುನಿಕೋಡ್ ಕನ್ವರ್ಟರ್ (http://sampada.net/c...) ಉಪಯೋಗಿಸಿದರೂ ತಪ್ಪುಗಳನ್ನು ಕಂಡುಹಿಡಿಯುವುದು ಸುಲಭ.
ಪ್ರಯತ್ನಿಸಿ ನೋಡು.
 
- ಸ್ಮಿತಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.