ದೇವೇ....ಗೌಡ ಯಾಕೆ?
ಗಣೇಶ ಎಂದಾಗ ಗಣೇಶ ರಾವ್/ಪೈ/ಶೆಟ್ಟಿ/ಪ್ರಭು/ಪೂಜಾರಿ ಯಾವುದೂ ಆಗಿರಬಹುದು.ಅದೇ ರಾಮೇ,ತಮ್ಮೇ,ನರಸೇ,ಕಾಳೇ,ರಾಮಲಿಂಗೇ,ದೇವೇ ಆದಮೇಲೆ ಗೌಡನೇ ಯಾಕೆ ಬರುವುದು?(ಅಪರೂಪಕ್ಕೆಂಬಂತೆ ತಿಪ್ಪೇಸ್ವಾಮಿ ಹೆಸರಿದೆ).ಹೆಚ್ಚಿನ ಗೌಡರುಗಳು ರಾಮ,ತಮ್ಮ,ದೇವ ಹೆಸರಿಗೆ’ಏ’ಕಾರ ಸೇರಿಸಿಯೇ ಹೆಸರಿಡುವುದು ಏಕೆ?
ಅಥವಾ, ಗಣ+ಈಶ=ಗಣೇಶ ಎಂಬಂತೆ, ದೇವ+ಈ ಗೌಡ=ದೇವೇಗೌಡ ಸರಿಯೋ?

- ಗಣೇಶ ರವರ ಬ್ಲಾಗ್
- Login or register to post comments
- 474 hits
- Email this blog





RSS:
ಪ್ರತಿಕ್ರಿಯೆಗಳು
ಉ: ದೇವೇ....ಗೌಡ ಯಾಕೆ?
ಇದು ಹಳೆ ಮೈಸೂರಿನಲ್ಲಿ ಮಾತ್ರ ಕಾಣಿಸುತ್ತೆ. ಯಾಕೆ ಗೊತ್ತಿಲ್ಲ...
ಉ: ದೇವೇ....ಗೌಡ ಯಾಕೆ?
ಇದು ದೇವಯ್ಯ + ಗೌಡ ಮಾತಿನಲ್ಲಿ ದೇವೇಗೌಡ ಆಗಿರಬಹುದೇ? ಅರಸುಗಳ ಹೆಸರಿನಲ್ಲೂ ರಾಜೇ ಅರಸು ಅಂತ ಇರುತ್ತೆ.
ಉ: ದೇವೇ....ಗೌಡ ಯಾಕೆ?
ಹೌದು, ಇದೇ ಹೆಚ್ಚು ಸೂಕ್ತವಾದ ವಿವರಣೆ. ಚೆನ್ನಾಗಿ ಊಹಿಸಿದ್ದೀರಿ.
"ಏರಿದವನು ಚಿಕ್ಕವನಿರಬೇಕು"
ಉ: ದೇವೇ....ಗೌಡ ಯಾಕೆ?
ಇರಬೋದು.. ಸರಿ ಅನ್ನಿಸ್ತದೆ.
=====================================
ಮಾಯ್ಸ!
ಉ: ದೇವೇ....ಗೌಡ ಯಾಕೆ?
ಆದ್ರೆ ಗಣೇಶೇ ಗೌಡ, ಸರೇಶೇ ಗೌಡ ಮಹೇಶೇ ಗೌಡ ಅನ್ನೋ ಹೆಸರು ನಾನಂತೂ ಕೇಳಿಲ್ಲ...
ಚಿಕ್ಕೇ ಗೌಡ, ದೊಡ್ಡೇ ಗೌಡ, ಹಿರೇ ಗೌಡ, ನಿಂಗೇ ಗೌಡ(ನಿಂಗ = ಲಿಂಗ), ಬೋರೇ ಗೌಡ(ಬೋರ = ಬೋಳ = ಲಿಂಗ)
ಹಳ್ಳಿಗಳ ಹೆಸರೂ ಹೀಗೆ, ಮಾರೇ ಹಳ್ಳೀ, ಹಿರೇ ಹಳ್ಳೀ, ಹಾರೋ ಹಳ್ಳಿ( ಮೋಸ್ಲಿ ಹಾರುವ ಹಳ್ಳಿ
)
ಇದರ ಜೊತೆಗೆ ’ನ’ ಸೇರುವುದು
ರೂಪೇನ ಅಗ್ರಹಾರ, ಕೊನೇನ ಅಗ್ರಹಾರ, ಹೊಗೇನ ಕಲ್, ಮುನೇನ ಕೊಪ್ಪಲು, ಕಾಳಮುದ್ದೇನ ದೊಡ್ಡಿ
ಇವೆಲ್ಲ.. ಎಮ್ಮ ಎಮ್ಮೆನಾಡಿನವರ ಸ್ಪೆಶಾಲಿಟಿ.. ಎಮ್ಮೆನಾಡು = ಮಯಿಸೂರು
=====================================
ಮಾಯ್ಸ!
ಉ: ದೇವೇ....ಗೌಡ ಯಾಕೆ?
ಎಲ್ಲ ಸರಿ. ಆದರೆ ಅದು ಕಾಳಮುದ್ದನ ದೊಡ್ದಿನೇ... ಮುದ್ದೇನ ದೊಡ್ದಿ ಅಲ್ಲ. ಆದರೆ ನಮ್ಮ ಹೆಮ್ಮೆಯ ವಿಸ್ವೇಸ್ವರಯ್ಯನವರು ಹುಟ್ಟಿದ್ದು ಮುದ್ದೇನಹಳ್ಳಿನೇ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ದೇವೇ....ಗೌಡ ಯಾಕೆ?
ಕೆ.ಎಂ ದೊಡ್ಡಿ
ಕಾಳಮುದ್ದೇನ ದೊಡ್ಡಿ.
=====================================
ಮಾಯ್ಸ!
ಉ: ದೇವೇ....ಗೌಡ ಯಾಕೆ?
ಏ, ಏನ ಸೇರಿಸುವುದು ಎಮ್ಮಯ ಸ್ಪೆಶಾಲಿಟಿ.
ಇರಬಹುದು.
-ಗಣೇಶ.
ಉ: ದೇವೇ....ಗೌಡ ಯಾಕೆ?
ಆಡುಮಾತಲ್ಲಿ ಬೇಗ ಬೇಗ ಹಸರು ಕರೆಯುವಾಗ ದೇವಯ್ಯ ಗೌಡ ದೇವೇಗೌಡ ಆಗುತ್ತದೆ. ದೇವ+ಈಗೌಡ ತಪ್ಪು ಅಂತ್ಲೇ ಹೇಳಬಹುದು. ಹೆಸರಿಡುವಾಗ ಜನಗಳು ಯೋಚಿಸೋದು ಕಡಿಮೆ. ಯಾವ್ದಾದ್ರೂ ಹೆಸರನ್ನ ಮಾದರಿಯಾಗಿಟ್ಕೊಂಡು ಯೋಚಿಸದೆ ಇಡೋದೇ ಸಾಮಾನ್ಯ. ಕವಿತಾ ಅನ್ನೋ ಹೆಸರು ಕೇಳಿ ಕೇಳಿ ಅದರ ಆಧಾರದ ಮೇಲೆ ಸವಿತಾ ಅಂತ ಹೆಸರಿಡ್ತಾರೆ ಹೆಣ್ಮಕ್ಳಿಗೆ. ಸವಿತಾ ಅಂದ್ರೆ ಸೂರ್ಯ. ಅದು ಸಾಧಾರಣವಾಗಿ ಪುಲ್ಲಿಂಗ ಪದ ಮತ್ತು ಗಂಡುಮಕ್ಶು ಇಟ್ಕೊಳ್ಳೋ ಪದ. ಕೆಲವರಿಗೆ ಇಕಾರಾಂತ ಪದ ಆದ್ರೆ ಸ್ತ್ರೀಲಿಂಗ ಅನ್ನೋ ಭಾವನೆ. ವಾಸಕಿ ಅನ್ನೋ ಪದ ಹೆಣ್ಮಕ್ಳಿಗೆ ಇಟ್ಟಿರೋದು ನೋಡಿದೀನಿ. ನಮ್ಮ ಮನೆಯ ಪಕ್ಕದವರು ತಮ್ಮ ಮನೆಗೆ "ಜ್ಞಾನಿನೇ" ಅಂತ ಇಟ್ಟಿದಾರೆ. ಹಾಗಂದ್ರೇನು ಅಂತ ಕೇಳಿದ್ದಕ್ಕೆ ಅದು ಗಣಪತಿಯ ಹೆಸರು ಅಂದ್ರು.
"ಏರಿದವನು ಚಿಕ್ಕವನಿರಬೇಕು"
ಉ: ದೇವೇ....ಗೌಡ ಯಾಕೆ?
ಆಡುಮಾತಲ್ಲಿ ಬೇಗ ಬೇಗ ಹೆಸರು ಕರೆಯುವಾಗ ದೇವಯ್ಯ ಗೌಡ- ದೇವ್ಯಗೌಡ ಅಗದೇ ?
ಹೆಸರಿಡುವಾಗ ಜನಗಳು ಯೋಚಿಸೋದು ಕಡಿಮೆ. ನಿಜ. ತಮ್ಮ ಮಗುವಿನ ಹೆಸರು ಸ್ಪೆಷಲ್ ಆಗಿರಬೇಕೆಂದು ಹೆಸರಿಡುವರು.
ಹೊಸ ಪರಿಚಯವಾದವರ ಹುಡುಗನ ಬಳಿ ಹೆಸರು ಕೇಳಿದೆ.ದುರ್ತುವಾನು ಅಂದ..೧೦ ಸಲ ಕೇಳಿದೆ..ಅರ್ಥ ಆಗಲಿಲ್ಲ. ಕೊನೆಗೆ ಹುಡುಗನ ತಂದೆಯ ಬಳಿಯೇ ಕೇಳಿದೆ.೩ನೇ ಸಲಕ್ಕೆ ಅರ್ಥವಾಯಿತು-ಧೃತ್ವನ್. ವಿಷ್ಣುವಿನ ಹೆಸರಂತೆ. ಸಹಸ್ರನಾಮದಲ್ಲಿ ಬರುವುದಂತೆ,ಓದಲು ಹೇಳಿದರು! ಸಾವಿರ ಹೆಸರಲ್ಲಿ ಇದೇ ಅವರಿಗೆ ಸಿಗಬೇಕೆ?
-ಗಣೇಶ.