ಯಾವ ಕನ್ನಡ ಸಿನಿಮಾ ನೋಡಲಿ?
ವೀಕೆಂಡ್ ಬಂದಿದೆ.ಎಂದಿನಂತೆ ಗೆಳೆಯರ ಜೊತೆ ಬೀರು(beer) ಕುಡಿಯುವ ಪ್ರೋಗ್ರಾಮ್ ಇದೆ.ಹಾಗೇ ಕನ್ನಡ ಸಿನಿಮಾ ನೋಡುವ ಅಂತನೂ ಯೋಚಿಸ್ತಾ ಇದ್ದೆ.ಕಳೆದ ಎರಡು ವಾರಗಳಲ್ಲಿ ರಿಲೀಸ್ ಆದ ಕನ್ನಡ ಸಿನಿಮಾಗಳನ್ನು ನ್ಯೂಸ್ ಪೇಪರ್ ನಲ್ಲಿ ನೋಡಿದ ಮೇಲೆ,ಈಗ ಸಿನಿಮಾ ನೋಡುವ ಪ್ರೋಗ್ರಾಮನ್ನು ಕೈ ಬಿಟ್ಟಿದ್ದೇನೆ.
ಕಳೆದ ಎರಡು ವಾರಗಳಲ್ಲಿ ಬಿಡುಗಡೆಯ ಭಾಗ್ಯ(?)ಕಂಡ ಸಿನಿಮಾಗಳು:ಗುಡ್ ಬ್ಯಾಡ್ ಅಗ್ಲಿ(ಹೀರೊ:ದಿ|ಟೈಗರ್ ಪ್ರಭಾಕರ್),ಲವ್ ಸ್ಟೋರಿ(೮೦ರ ದಶಕದಲ್ಲಿ ತೆರೆ ಕಂಡ ಹಿಂದಿ ಸಿನಿಮಾವೊಂದರ ರಿಮೇಕ್),ನಮ್ಮಣ್ಣ(ವಚನಕ್ಕೆ ಬಸವಣ್ಣ ಆದ್ರೆ,ನ್ಯಾಯಕ್ಕೆ ನಮ್ಮಣ್ಣ ಅಂತೆ!!!),ಅಣ್ಣ ತಂಗಿ. ಯಾರಾದ್ರು ಈ ಸಿನಿಮಾಗಳನ್ನು ನೋಡುವ ತಪ್ಪು ಮಾಡಿದ್ರೆ ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಬರೆಯಿರಿ.ಈ ಸಿನಿಮಾಗಳನ್ನು ಯಾರು ನೋಡ್ತಾರೆ ಅನ್ನುವ ಕುತೂಹಲ.ಇತ್ತೀಚೆಗೆ ಕನ್ನಡ ನ್ಯೂಸ್ ಪೇಪರ್ ಗಳಲ್ಲಿ ಬರುವ ವಿಮರ್ಶೆಯನ್ನು ಓದೋದು ಬಿಟ್ಟಿದ್ದೇನೆ.ಅವರ ಪ್ರಕಾರ ರಿಲೀಸ್ ಆದ ಎಲ್ಲಾ ಕನ್ನಡ ಸಿನಿಮಾಗಳು ಚೆನ್ನಾಗಿವೆ!
ಸಿನಿಮಾ ನೋಡುವ ಪ್ರೋಗ್ರಾಮ್ ಸಧ್ಯಕ್ಕೆ ಮುಂದೂಡಲ್ಪಟ್ಟಿದೆ .ಎಲ್ಲಿಯವರೆಗೆ,ಗೊತ್ತಿಲ್ಲ..

- ಶಿವ ರವರ ಬ್ಲಾಗ್
- Login or register to post comments
- 1592 hits
- Email this blog




RSS:
ಪ್ರತಿಕ್ರಿಯೆಗಳು
ನಾಟಕ ನೋಡ ಬಹುದು.
ನಾಟಕ ನೋಡ ಬಹುದು.ನಾಳೆ NATIONAL COLLEGE JAYANAGAR ದಲ್ಲಿ ಗೋಕುಲ ನಿರ್ಗಮನ ನಾಟಕ ಇದೆ. ಸಂಜೆ ಆರು ಘಂಟೆಗೆ. ಇವತ್ತು ಕಲಾ ಗಂಗೋತ್ರಿ ತಂಡದವರಿಂದ ದೊರೆ ಈಡಿಪಸ್ ನಾಟಕ ಇತ್ತು. ಚೆನ್ನಾಗಿತ್ತು.
ಕಿರುತೆರೆಯಲಲಿ ಮಾಡುವ ಕೆಲವು ರಂಗಭೂಮಿ ಕಲಾವಿದರು ಕೂಡ ನಟಿಸಿದ್ದರು. ಹಾಸ್ಯ ಪಿತಾಮಹ ವೈ.ಎಂ.ಎನ್ ಮೂರ್ತಿ ಬಂದಿದ್ದ್ರು.
ಉ: ಯಾವ ಕನ್ನಡ ಸಿನಿಮಾ ನೋಡಲಿ?
ಶಿವ, ಈ ಬ್ಲಾಗ್ ಬರೆದು ಬರೋಬ್ಬರಿ ೨ವರ್ಷದ ಮೇಲಾಗಿದೆ. ಈಗಲೂ ಇದೇ ಅಭಿಪ್ರಾಯ ಹೊಂದಿದ್ದೀರಾ ? ಏಕೆಂದರೆ ಈ ಎರಡು ವರ್ಷಗಳಲ್ಲಿ ಅನೇಕ ಒಳ್ಳೆಯ ಸಿನಿಮಾಗಳು ತೆರೆಕಂಡಿವೆ.