....................ನಿಶ್ಯಬ್ಧ
ಮನಸಿನ ಮಾತು......
ಪ್ರಥಮ ಬರಹ
||ಓಂ ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||
ಇದು ನನ್ನ ಪ್ರಥಮ ಬರಹ...

- ಸತೀಶ ರವರ ಬ್ಲಾಗ್
- Login or register to post comments
- 462 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮನಸಿನ ಮಾತು......
||ಓಂ ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||
ಇದು ನನ್ನ ಪ್ರಥಮ ಬರಹ...




ಪ್ರತಿಕ್ರಿಯೆಗಳು
ಉ: ಪ್ರಥಮ ಬರಹ
ಸ್ತೋತ್ರದೊಂದಿಗೆ ಆರಂಭಿಸಿದ ರೀತಿ ಚೆನ್ನಾಗಿದೆ ಸತೀಶ್.
ಸಂಪದದಲ್ಲಿ ನಿಮ್ಮ ಬರಹಗಳು ವಿಜೃಂಭಿಸಲಿ ಎಂದು ಹಾರೈಕೆ.
*ಅಶೋಕ್
ಉ: ಪ್ರಥಮ ಬರಹ
ನಿರ್ವಿಘ್ನ ಅಂತ ಬಳಸುತ್ತೇವೆ ಅಲ್ಲವೇ?
*ಅಶೋಕ್
ಉ: ಪ್ರಥಮ ಬರಹ
ಏನು ನಿಮ್ಮ ಪ್ರಶ್ನೆ? ನಂಗೆ ತಿಳೀಲಿಲ್ಲ.
ಕೆಲವರು ಈ ಶ್ಲೋಕವನ್ನು "ಅವಿಘ್ನಂ" ಎಂದೂ ಹೇಳುವರು.
- ಮಾಯ್ಸ
ಉ: ಪ್ರಥಮ ಬರಹ
ಒಂದು ಸೂರ್ಯನ ಪ್ರಭೆಗೇ ತತ್ತರಿಸಿ
ಮುಂಗಾರು ಮಳೆಗೆ ಪ್ರಾರ್ಥಿಸುತ್ತಿದ್ದೆವು.
ನಿಮ್ಮೆಲ್ಲಾ ಬರಹಗಳೂ ನಿರ್ವಿಘ್ನವಾಗಿ
ಹರಿಯಲಿ
ಶುಭಾಷಯಗಳು
ಉ: ಪ್ರಥಮ ಬರಹ
ಅಲ್ಲಿ
ಕುರಮೇ ಅನ್ನು "ಕುರು ಮೇ" ಎಂದು ಬರೇಬೇಕು ಅಲ್ವಾ?
ಒಳ್ಳೇದಾಗಲಿ!
- ಮಾಯ್ಸ
ಉ: ಪ್ರಥಮ ಬರಹ
ಯಾಕ್ರೀ, ಮಾಯ್ಸ.... ! ಮೊಸರಲ್ಲಿ ಕಲ್ಲು ಹುಡ್ಕೋದು ಅಂದ್ರೆ ಇದೇನಾ?
ಆದ್ರೂ ತಪ್ಪಿದ್ರೆ ...ತಪ್ಪನ್ನ ತಿದ್ಕೋಳ್ಳೋದು ಸಮಂಜಸ...
ಉ: ಪ್ರಥಮ ಬರಹ
೧) ನಾನು ಹೇಳಿದ್ದು "ಮೊಸರಲ್ಲಿ ಕಲ್ಲು ಹುಡುಕಲು ಅಲ್ಲ", ಸಂಸ್ಕೃತ ಒಂದು ಬಹುಸೂಕ್ಷ್ಮಭಾಷೆ, ಅದರಲ್ಲಿ ಇಷಿತ್ತೂ ದೋಷವಾದರೂ, ಅರ್ಥಾಭಾಸವಾಗುವುದು. "ಕುರುಮೇ" ಅಂದರೆ ಏನೇನೋ ಅರ್ಥಗಳು ಬರಲು ಸಾಧ್ಯ. ಜೊತೆ ಅಲ್ಲಿ ದಿಟವಾಗಲೂ "ಕುರು ಮೇ" /"ನನಗಾಗಿ ಮಾಡು" ಸರಿ, ನನ್ನನ್ನು ನಂಬೀ ನಂಬೀ, ದಯವಿಟ್ಟು, ಪ್ಲೀಸ್ ಪ್ಲೀಸ್
ನನ್ನ ಸಂಸ್ಕೃತ ಇಲ್ಲಿ ತುಸು ಜಾಸ್ತಿಯಾತ್ತು ಅಲ್ವಾ !!
ಶಿವಣ್ಣ ಅವರು ತುಸು sportive ಆಗಿ ನನ್ನ ಮಾತುಗಳನ್ನು ತಗೋಬೇಕು, ಆಗ ಅದು "ಮೊಸರಲ್ಲಿ ಕಲ್ಲು" ಅಂತ ಅನ್ನಿಸಲ್ಲ. !!
- ಮಾಯ್ಸ
ಉ: ಪ್ರಥಮ ಬರಹ
ಮೊದಲಾಗಿ ಮೊಸರಲ್ಲಿ ಕಲ್ಲು ಹುಡುಕಿದವ ನಾನು.
*ಅಶೋಕ್
ಉ: ಪ್ರಥಮ ಬರಹ
ಮಹೇಶ್,
ಸಂಸ್ಕೃತದಲ್ಲಿ ಕೊಂಚ ಅಂದರೆ ’ ಈಷತ್ ’ ಅಲ್ಲವೇ? ’ ಇಷತ್ ’ ತಪ್ಪು ಅಂತ ನನ್ನ ಅನಿಸಿಕೆ.
ಸ್ವಲ್ಪ ಬಿಡಿಸಿ ಹೇಳಿ.
ಉ: ಪ್ರಥಮ ಬರಹ
ಅಯ್ಯೋ ಹೌದಲ್ಲ!!
ತಿದ್ದಿದಕ್ಕೆ ನನ್ನಿ..
ಆದರೆ "ಅಭಿಜ್ಞಾನ ಶಾಕುಂಲ"ದಲ್ಲಿ ಆ ಕಡವೆ/ಕೃಷ್ಟಮೃಗವನ್ನು ದುಷ್ಯಂತ ಬೆನ್ನಟ್ಟಿಸಿಕೊಂಡು ಹೋಗುವಾಗ ಒಂದು ಶ್ಲೋಕ ಬರುವುದು.
ಅದರಲ್ಲಿ "ಇಷದಿಷತ್" ಅಂತ ಓದಿದ ನೆನಪು...
ಆದರೂ 'ಈಷತ್' ಬಲು ಒಳ್ಳೆಯ ಪದ...
ತಿದ್ದಿದ್ದಕ್ಕೆ ಮತ್ತೆ ಹೃದ್ಧನ್ಯವಾದ!
- ಮಾಯ್ಸ
ಉ: ಪ್ರಥಮ ಬರಹ
ತಿದ್ದುಪಡಿ.
ಅಭಿಜ್ಞಾನ ಶಾಕುಂಲ = ಅಭಿಜ್ಞಾನ ಶಾಕುಂತಲ
- ಮಾಯ್ಸ
ಉ: ಪ್ರಥಮ ಬರಹ
ಅಯ್ಯೋ
ಅದು "ಈಷದೀಷತ್" ಅಲ್ವಾ?
- ಮಾಯ್ಸ
ಉ: ಪ್ರಥಮ ಬರಹ
ಹೌದು. ಈಷತ್ ಅನ್ನುವುದೇ ಸರಿ. ಆದರೆ ಈ ಚರ್ಚೆಯಿಂದ ನನಗೊಂದು ವಿಷಯ ಹೊಳೆದಿದೆ:
ಕೊಂಚ / ಸ್ವಲ್ಪ / ಅನ್ನುವುದನ್ನೇ ನಾವು ಇಷ್ಟೇ / ಇಷ್ಟು / ಒಂದಿಷ್ಟು ಅನ್ನುತ್ತೇವಲ್ಲ?
ಈ ’ ಇಷ್ಟು ’ ಎಂಬ ಪದ ನಮ್ಮಲ್ಲಿ’ ಈಷತ್ ’ ನಿಂದಲೇ ಬಂದಿರಬಹುದೇ?
ಹೌದೆಂದಾದರೆ ಆಗ ಕನ್ನಡದಲ್ಲಿ ಷಟ್ಕಾರ ಎಲ್ಲಿಂದ ಬಂತೆನ್ನುವ ಪ್ರಶ್ನೆಗೆ ಸಮಾಧಾನ ಸಿಕ್ಕಂತಾದೀತೇ?
ಉ: ಪ್ರಥಮ ಬರಹ
'ಇಷ್ಟು' ಇಲ್ಲ ಷ ಬರಲು ಟ ಕಾರ ಕಾರಣ!!
ಟ ಮುನ್ನ ಬರುವ ಎಲ್ಲ ಶ/ಷಗಳು ಷ..
ಕಷ್ಟ, ನಷ್ಟ, ಪಿಷ್ಟ ಮುಂ.....
ಇಷ್ಟು "ಈಷತ್" ಇಂದ ಬಂದಿದೆ ಅನ್ನೋದು ಸರಿಯಿಲ್ಲ.
ಇಷ್ಟು, ಅಷ್ಟು, ಎಷ್ಟು, ಉಷ್ಟು ಇವು ಪಕ್ಕ ದ್ರಾವಿಡ ಪದಗಳು, ದ್ರಾವಿಡ ವ್ಯಾಕರಣವನ್ನು ಚಾಚುತಪ್ಪದೇ ಪಾಲಿಸಿವೇ. ಆದರೆ 'ಷ' ಎಲ್ಲಿಂದ ಬಂದು ಸೇರಿತೋ ಗೊತ್ತಿಲ್ಲ.
ಹಳೆ-ನಡುಗನ್ನಡದಲ್ಲಿ ಇವು ಇದ್ದಂತೆ ಕಾಣುವುದಿಲ್ಲ. ಅಲ್ಲಿ ಏನಿದ್ದರು "ಅನಿತು, ಇನಿತು, ಉನಿತು, ಎನಿತು" ಗಳಿವೆ .
ಕಿಟ್ಟಲ್ ಗ್ರಾಮರ್ನ ಹೊತ್ತಗೆ ನೋಡಿ, ಈ ಸಂಗತಿಯನ್ನು ಬಿಡಿಸಿ ಹೇಳಿದ್ದಾರೆ.
- ಮಾಯ್ಸ