ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಸಾಹಿತಿಗಳ ವೈಚಾರಿಕ ಜಗಳ

February 27, 2007 - 9:07pm — ವೈಭವ

ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.
ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ ನಮ್ಮ ಕನ್ನಡವನ್ನು ಶ್ರೀಮಂತಗೊಳಿಸಿದವು ಎಂಬುದನ್ನು.

ಒಂದು ದಂತ ಕಥೆಯ ಪ್ರಕಾರ ಆಗಿನ ಕಾಲದ ವಿಜಯನಗರದ ಸಾಮಂತ(?)ದೊರೆ ಪ್ರೌಢದೇವರಾಯನು ಚಾಮರಸ ಮತ್ತು ಕುಮಾರವ್ಯಾಸನಿಗೆ 'ಮಹಾಭಾರತ'ವನ್ನು ಕನ್ನಡದಲ್ಲಿ ಬರೆಯಲು ಹೇಳಿದಾಗ, ಇಬ್ಬರು ತಮ್ಮದೇ ರೀತಿಯಲ್ಲಿ ಮಹಾಭಾರತದ ಕೆಲವು ಭಾಗಗಳನ್ನು ಕಾವ್ಯದಲ್ಲಿ ರಚಿಸುತ್ತಾರೆ. ಅದನ್ನು ಪಂಡಿತೋತ್ತಮರು ವಿಮರ್ಶಿಸಿ ಚಾಮರಸನ ಕಾವ್ಯ ರಸವತ್ತಾಗಿದೆಯೆಂದು ತೀರ್ಪು ಕೊಡುತ್ತಾರೆ. ಇದರಿಂದ ಕುಮಾರವ್ಯಾಸನಿಗೆ ಮುಖಭಂಗವಾದಂತಾಗಿ ಆತನು ತನ್ನ ಮಡದಿಯ(ಈಕೆ ಚಾಮರಸನ ತಂಗಿ) ಜೊತೆಗೆ ಹೇಳಿಕೊಂಡಾಗ ಅವಳು'ಪತಿಭಕ್ತಿ'ಯನ್ನು ಮೆರೆದು ತನ್ನ ಅಣ್ಣನ ಕೃತಿಯನ್ನೇ ಸುಟ್ಟು ಹಾಕುತ್ತಾಳೆ. ಇದರಿಂದ ವ್ಯಸನಗೊಂಡ ಚಾಮರಸ ಗದುಗನ್ನು ಬಿಟ್ಟು ವೀರಶೈವ ಧರ್ಮದ ದೀಕ್ಷೆ ಪಡೆದು ನಂತರ 'ಪ್ರಭುಲಿಂಗ ಲೀಲೆ'ಎಂಬ ವಿಭಿನ್ನ ಕಾವ್ಯವನ್ನು ರಚಿಸುತ್ತಾನೆ. ಇದರ ಉತ್ಕೃಷ್ಟತೆಯನ್ನು ಮನಗಂಡ ಇತರ ಭಾಷೆಗಳ ಕವಿಗಳು(ತೆಲುಗು, ಮರಾಠಿ) ತಮ್ಮ ಭಾಷೆಗಳಿಗೆ ಭಾಷಾಂತರಿಸಿಕೊಂಡಿದ್ದಾರೆ.

ಏನೇ ಆದರೂ ಇವರಿಬ್ಬರ ಆರೋಗ್ಯಕರ ಪೈಪೋಟಿಯಿಂದ ಕನ್ನಡಕ್ಕೆ ವಿಭಿನ್ನ ಕಾವ್ಯಸಿರಿಗಳು ಒದಗಿದವು.
 
ಆಸಕ್ತರು 'ಪ್ರಭುಲಿಂಗಲೀಲೆ'  ಸಂಪಾದಿತ ಕೃತಿಗಳನ್ನು ೧, ೨ ಪಡೆಯಬಹುದು.

-ಜೈ ಕರ್ನಾಟಕ

~.~
  • ವೈಭವ ರವರ ಬ್ಲಾಗ್
  • Login or register to post comments
  • 688 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 27, 2007 - 10:14pm — Sunil Jayaprakash

ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

Sunil Jayaprakash's picture

ಎಷ್ಟು ಕಾವ್ಯವಿದೆ ಕನ್ನಡದಲ್ಲಿ, ಎಲ್ಲವನ್ನೂ ಯಾವಾಗ ಓದುತ್ತೇವೆಯೋ ತಿಳಿಯದು. ಹೀಗೆ ನಿಮ್ಮ ಗಮನಕ್ಕೆ ಬರುವ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾ ಇರಿ. ನಮ್ಮ ಕನ್ನಡದ ಅರಿವು ಹೆಚ್ಚುವುದರೆ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 28, 2007 - 2:18am — Shyam Kishore

ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

Shyam Kishore's picture

ಮಾಹಿತಿ ಚೆನ್ನಾಗಿದೆ. ಸುನಿಲ್ ಹೇಳಿದಂತೆ, ಆಗಾಗ ಈ ರೀತಿಯ ವಿಚಾರಗಳು ಮೇಲಿಂದ ಮೇಲೆ ನಮ್ಮ ಅರಿವಿಗೆ/ಗಮನಕ್ಕೆ ಬರುತ್ತಿದ್ದರೆ, ಇಂದಲ್ಲ ನಾಳೆ, ಹೇಗಾದರೂ ಬಿಡುವು ಮಾಡಿಕೊಂಡು ಇವನ್ನೆಲ್ಲ ಓದಬಹುದು.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2007 - 4:22am — hamsanandi

Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

hamsanandi's picture

ವೈಭವ ಅವರೆ,

ಈ ದಂತಕಥೆಯ ಮೂಲ ಎಲ್ಲಿಂದ ಎಂಬುದು ನಿಮಗೇನಾದರೂ ಗೊತ್ತೆ?

ಪ್ರೌಢದೇವರಾಯ ವಿಜಯ ನಗರದ ಅರಸನೇ. ಸಾಮಂತನಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2007 - 4:57pm — ವೈಭವ

Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

ವೈಭವ's picture

ಆತ್ಮೀಯ  ಹಂಸಾನಂದಿಯವರೆ,

ನಾನು ಈಗಾಗಲೆ ಕೊಟ್ಟಿರುವ ಕೊಂಡಿಗಳಲ್ಲಿರುವ(೧, ೨) ಪುಸ್ತಕಗಳಲ್ಲೆ ಈ ದಂತಕಥೆಗಳಿವೆ.

ಇನ್ನು ಪುಸ್ತಕ ೧ ರಲ್ಲಿ ಪ್ರೌಢದೇವರಾಯನು ವಿಜಯನಗರದ ದೊರೆ ಎನ್ನುತ್ತಾರೆ.  ೨ ರಲ್ಲಿ ಅವನು ಗದುಗಿನ ದೊರೆ ಎನ್ನುತ್ತಾರೆ.

ಆದ್ದರಿಂದ ನಾನು ಗೊಂದಲಕ್ಕೊಳಗಾದೆ. ಆದ್ದರಿಂದ ಸಾಮಂತ ಪದದ ನಂತರ ಒಂದು ಪ್ರಶ್ನಾರ್ಥಕ ಚಿಹ್ನೆ ಕೂಡ ಹಾಕಿದ್ದೆ.

------

"ಕಾಡಿದ್ದರೆ ನಾಡು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 12:18pm — csomsekraiah

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

csomsekraiah's picture

ಚಾಮರಸನ ’ಪ್ರಭುಲಿಂಗಲೀಲೆ’ ಕುಮಾರ ವ್ಯಾಸನ ’ ಕರ್ನಾಟ ಭಾರತ ಕಥಾ ಮಂಜರಿ’ ಎರಡನ್ನೂ ಓದಿದ ನಂತರ ,ಈ ದಂತ ಕಥೆಯನ್ನು ನಂಬುವುದು ಎಂದರೆ, ದಂತ ಕಥೆ ನಿರ್ಮಿಸಿದ ಮಹಾನುಭಾವನ ಬಗ್ಗೆ ಕನಿಕರ ಮಾತ್ರ ಮೂಡಬಲ್ಲದು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 7:36pm — muralihr

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

muralihr's picture

ಅ೦ತಹ ಕತೆಯನ್ನು ಗಾಳಿಯಲ್ಲಿ ಹರಡುವರ ಮೇಲೆ ಕೂಡಾ ಸ್ವಲ್ಪ ಕನಿಕರ ತೋರಿಸಿ ಸಾರ್ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2008 - 11:11am — savithru

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

savithru's picture

ಅಯ್ಯೋ ಮುರುಳೀ..... ಹಾಗೆ ಅನುಕಂಪ ತೋರಿಸೋಕ್ಕೆ ಹೋಗ್ಬ್ಯಾಡಿ ಬುದ್ದೀ!

ಹಾಗೆ ಒಮ್ಮೆ ಶುರು ಮಾಡಿದ್ರೆ , ನಮ್ಮ "ದೊಡ್ಡ" ಸಂಸ್ಕೃತಿಯ ಗುತ್ತೆಗೆದಾರರೆಲ್ಲರಿಗೂ ಅನುಕಂಪ ತೋರಿಸಕ್ಕೆ ಶುರುಮಾಡಬೇಕಾಗುತ್ತೆ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 8:12pm — ವೈಭವ

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

ವೈಭವ's picture

ದಂತಕತೆಯನ್ನು ನಂಬಕ್ಕಾಗಲ್ಲ. ಅದಕ್ಕೆ ಅದನ್ನು 'ದಂತಕತೆ'ಅನ್ನೋದು Smiling

ಚಾಮರಸ ಯಾಕೆ ಮತ ಬದಲಾಯಿಸಿದ,ಯಾಕೆ ಗದುಗನ್ನ ಬಿಟ್ಟ ಅನ್ನೋದು ಇನ್ನು ನಿಕ್ಕುವ ಓಸುಗರಗಳು ಸಿಕ್ಕಿಲ್ಲ.
ಆದರೂ ಗದುಗಿನ ನಾರಾಣಪ್ಪನಶ್ಟೆ ತಕ್ಕುಮೆಯುಳ್ಳವನಾಗಿದ್ದರೂ ಚಾಮರಸ ಯಾಕೆ ಅಶ್ಟು ಹೆಸರುವಾಸಿಯಾಗಿಲ್ಲ ಅನ್ನುವ ಅಯ್ಬು ಕಾಡುತ್ತಿದೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2008 - 9:45pm — Ennares

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

Ennares's picture

ಚರಿತ್ರೆಯನುಸಾರ ಆರಾಧ್ಯ ಬ್ರಾಹ್ಮಣನಾಗಿದ್ದ ಚಾಮರಸ ವೀರಶೈವನಾಗಿ ಮತಾಂತರ ಹೊಂದಿದನಂತೆ. ಬಹುಶಃ ನಿಮ್ಮ ಕಥೆಯೂ ಕಾರಣವಿರಬಹುದು ಅಥವಾ ಕುಮಾರವ್ಯಾಸ ಮತ್ತು ಅವನ ವೈಷ್ಣವ ಹಿಂಬಾಲಕರ ಕಾಟ ತಾಳಲಾರದೆಯೂ ಇರಬಹುದು.

ವೀರಶೈವನಾದೊಡನೆಯೇ ಚಾಮರಸನಿಗೆ ಅನೇಕ ಬೆಂಬಲಿಗರು ದೊರಕಿರಬಹುದು. ವಿಜಯನಗರದ ಎಲ್ಲ ರಾಜರ ಆಸ್ಥಾನಗಳಲ್ಲೂ ವೈಷ್ಣವ ಮತ್ತು ವೀರಶೈವ ಕವಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದದ್ದು ವರದಿಯಾಗಿದೆ.
(http://en.wikipedia.org/wiki/Kannada_literature_in_Vijayanagara_empire )

ಅವನ ಪ್ರಭುಲಿಂಗಲೀಲೆ ಸಂತ ಅಲ್ಲಮಪ್ರಭುವಿನ ಜೀವನ ವೃತ್ತಾಂತವಾದರೂ ಅವರನ್ನು ಗಣಪತಿಯ ಅವತಾರ ಎಂದು ಬಿಂಬಿಸಲಾಗಿತ್ತಂತೆ. ಪಾರ್ವತಿಯನ್ನು ರಾಜಕುಮಾರಿ ಬನವಾಸಿಯಾಗಿ ರೂಪಿಸಲಾಗಿತ್ತು ಅಂತ ವರ್ಣನೆ ಇದೆ.

ವೈಷ್ಣವರ ( ಅಥವಾ ಕುಮಾರವ್ಯಾಸನ) ಮೇಲೆ ಹಗೆ ತೀರಿಸಲು ಚಾಮರಸ “ಇದು ಬರಿ ಪಾಮರರ ಕಥೆಯಲ್ಲ" ಅಂತ ಮಹಾಭಾರತ ಮತ್ತು ರಾಮಾಯಣಗಳನ್ನು ಹೀಯಾಳಿಸಿದ್ದ ಎಂದು ಉಲ್ಲೇಖವಿದೆ.

ವಿಷಯ ಹೀಗಿರುವಾಗ, ಪೈಪೋಟಿ “ಆರೋಗ್ಯಕರ” ಅನ್ನೋದು ಎಷ್ಟರ ಮಟ್ಟಿಗೆ ಸಮರ್ಪಕ ವೈಭವ?

- ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2008 - 8:05am — ವೈಭವ

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

ವೈಭವ's picture

ನಾನು 'ಆರೋಗ್ಯಕರ' ಅಂತ ಹೇಳಿದ್ದು ಈ ಪಯ್ಪೋಟಿಯಿಂದ ಕನ್ನಡಕ್ಕೆ ಪ್ರಬುಲಿಂಗಲೀಲೆಯಂತ ಕ್ರುತಿ ಸಿಕ್ಕಿದೆಯಲ್ಲ ಅದಕ್ಕೆ.(ಇದರಲ್ಲಿ ಆ ಕಾಲದಲ್ಲೇ ಬಳಕೆಗೆ ತಪ್ಪಿದ ಕನ್ನಡದ್ದೆ ಆದ ಪದಗಳನ್ನು ಬಳಸಲಾಗಿದೆ).
ನನಗೆ ಚಾಮರಸನ ಬಗ್ಗೆ ಮೆಚ್ಚುಗೆಯಿದೆ ಏಕೆಂದರೆ ಅವನು ಅದೇ ಮಾಬಾರತವನ್ನೊ, ರಾಮಾಯಣವನ್ನೊ ಬರೆಯದೆ ತನ್ನ ಕಲ್ಪನಾ ಶಕುತಿಯನ್ನು ಬಳಸಿ ಆವರೆಗೂ ಯಾರೊ ಹೇಳಿರದ ಕತೆಯನ್ನು 'ಪ್ರಬುಲಿಂಗಲೀಲೆ'ಯಲ್ಲಿ ಅರುಹಿದ. ಇದರಿಂದಲೇ ಅವನು ಹೇಳಿರುವುದು ತಾನು ಬೇರೆಯವರ ಕತೆಯನ್ನು ಕನ್ನಡಯ್ಸಿಲ್ಲ. ಇದು ತನ್ನದೇ ಕತೆ ಅಂತ.

ನೀವು ಹೇಳಿರುವ ಹಾಗೆ ವಯ್ ಶ್ಣವ v/s ವೀರಶಯ್ವ ಪಯ್ಪೋಟಿಯ ಹಿನ್ನಲೆಯೂ ಇರಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
  • ಸುಭಾಷಿತ ಮಂಜರಿ
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
  • ಪ್ರಭು ಲಿಂಗ ಲೀಲೆ - DLI ಹೊತ್ತಗೆಸಿರಿ
  • ತುಳುವಿನಲ್ಲಿ ಪುರಂದರದಾಸರ ಕೀರ್ತನೆಗಳು !
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator