ಐ.ಬಿ.ಎನ್ - ಬೆಂಗಳೂರು
ಸಾಮಾನ್ಯವಾಗಿ ಎಲ್ಲಾ ರಾಷ್ಟೀಯ ನ್ಯೂಸ್ ಚಾನೆಲ್ ಗಳು ದಕ್ಷಿಣ ಭಾರತವನ್ನು ಅಲಕ್ಷ್ಯಿಸುತ್ತಿವೆ ಎಂದು ನಾವು ಕೊರಗುತ್ತಿರುವಾಗ, ರಾಜ್ ದೀಪ್ ರವರ ಈ ಲೇಖನ ಓದಿ ಸ್ವಲ್ಪ ಸಮಾಧಾನವಾಯಿತು..
--ಸ್ಮಿತಾ

- ಸ್ಮಿತಾ ರವರ ಬ್ಲಾಗ್
- Login or register to post comments
- 1270 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಐ ಬಿ ಎನ್ - ಡೆಕ್ಕನ್ ಹೆರಾಲ್ಡ್
ಅವರುಗಳು ಡೆಕ್ಕನ್ ಹೆರಾಲ್ಡಿನೊಂದಿಗೆ ಬೆಂಗಳೂರಿನ ಬಗ್ಗೆ ವಿಶೇಷ ಕವರೇಜ್ ಮಾಡುತ್ತಿದ್ದಾರೆ. ಈ ಲೇಖನ ಅದಕ್ಕೆ ಪೀಠಿಕೆ ಇದ್ದ ಹಾಗೆ ಇದೆ.
ಹೌದು, ದಕ್ಷಿಣ ಭಾರತವನ್ನು ಅಷ್ಟೊಂದು ಆಂಗ್ಲ ಚಾನೆಲ್ಲುಗಳು ಕವರ್ ಮಾಡೋದೇ ಇಲ್ಲ. ಎಲ್ಲ ಚಾನೆಲ್ಲುಗಳೂ ಮುಂಬೈ, ದೆಹಲಿಯಲ್ಲೇ ತಮ್ಮ ಮುಖ್ಯ ಶಾಖೆಗಳನ್ನು ಪ್ರಾರಂಭಿಸಿರುವುದರಿಂದಲೂ ಹೀಗಾಗಿರಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸಿ ಎನ್ ಎನ್-ಐ ಬಿ ನ್‌ನಲ್ಲಿ ಬೆಂಗಳೂರು
ಕಳೆದ ೨ ವರ್ಷಗಳಿಂದ ಬೆಂಗಳೂರು ಅಂಗ್ಲ ನ್ಯೂಸು ಚಾನೆಲ್ಲುಗಳಲ್ಲಿ ಸುದ್ದಿಯಲ್ಲಿತ್ತು.ಕೃತಜ್ಞತೆಗಳು ಸಲ್ಲಬೇಕಾದುದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ. ಒಮ್ಮೆ ಎನ್ ಡಿ ಟಿ ವಿಯ 'ಬಿಗ್ ಫೈಟ್" ಕಾರ್ಯಕ್ರಮದಲ್ಲಿ ಪೂರ್ತಿ ೧ ಘಂಟೆ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದರು. ೪-೫ ದಿನಗಳಿಂದ ಸಿ ಎನ್ ಎನ್-ಐ ಬಿ ಎನ್‌ನ ಈ ಕಾರ್ಯಕ್ರಮವನ್ನು ಗಮನಿಸುತ್ತಿದ್ದೆ. ಇಲ್ಲೂ ಸಹ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ,ಮೂಲಭೂತ ಸೌಕರ್ಯಗಳ ಕೊರತೆ,ಪಬ್‌ಗಳನ್ನು ಮುಚ್ಚುವ ಸಮಯ-ಇವುಗಳನ್ನೇ ತೋರಿಸುತ್ತಾ ಇದ್ದರು. ಈಗ ಪರ್ವಾಗಿಲ್ಲ.ಬೆಂಗಳೂರಿನ ಚಿತ್ರಮಂದಿರಗಳು,ನಾಟಕಗಳನೆಲ್ಲಾ ತೋರಿಸುತ್ತಿದ್ದಾರೆ. "Who makes Bangalore proud?" ಎನ್ನುವ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. www.ibnlive.com ಗೆ ಹೋಗಿ ವೋಟು ಹಾಕಬಹುದು. ಸಧ್ಯಕ್ಕೆ ನಾರಾಯಣ ಮೂರ್ತಿ ಮತ್ತು ರಾಹುಲ್ ಡ್ರಾವಿಡ್ ಮುಂದಿದ್ದಾರೆ.ರಾಜ್‌ಕುಮಾರ್ ಎರಡನೆಯ ಸ್ಥಾನದಲ್ಲಿದ್ದಾರೆ.
ಕುರುಬನಿಗೇನು ಗೊತ್ತು ಮುರುಗದ ಗಮನ
"ಸದ್ಯಕ್ಕೆ ನಾರಾಯಣ ಮೂರ್ತಿ ಮತ್ತು ರಾಹುಲ್ ಡ್ರಾವಿಡ್ ಮುಂದಿದ್ದಾರೆ.ರಾಜ್‌ಕುಮಾರ್ ಎರಡನೆಯ ಸ್ಥಾನದಲ್ಲಿದ್ದಾರೆ."
ಈ ಮಾತನ್ನು ನೋಡಿದರೆ ನಮ್ಮ ಕಡೆಯ "ಕುರುಬನಿಗೇನು ಗೊತ್ತು ಮುರುಗದ ಗಮನ" ಗಾದೆಯು ನೆನಪಾಗುತ್ತದೆ. "Who makes Bangalore proud?" ಗೆ ಇಡೀ ಭಾರತದಿಂದ ಮತಗಳು ಬಂದಿರುತ್ತವೆ. ಅದರಲ್ಲೂ ಕನ್ನಡೇತರರಿಗೆ ಕರ್ನಾಟಕದ ಬಗ್ಗೆ ಎಳ್ಳಷ್ಟು ಗೊತ್ತಿರದು.
ಈ ಸಂದರ್ಭದಲ್ಲಿ ನನಗೆ ನೆನಪಾಗುವುದು, ನಮ್ಮ ಚಿತ್ರತಾರೆ, ತಾರಾರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ, ಯಾವಳೂ ಮುಂಬೈಯವಳಿರಬೇಕು NDTVಗೆ ಹೀಗೆ ಬರೆದು ಕಳುಹಿಸಿದ್ದಳು "I am very sad that the Ash missed the award". ಅಯ್ಯೋ ಶಿವನೆ, ನೀನು ತಾರಾರವರ ಒಂದೂ ಸಿನಿಮಾ ನೋಡಿರದೆ, ಅವರು ಐಶ್ ಗಿಂತ ಕೆಟ್ಟನಟಿಯಂದುಕೊಳ್ಳುವುದು ಯಾವ ನ್ಯಾಯ?
ಇರಲಿ, ಬಿಡಿ.. ನಮ್ಮ ಹಣೆಬರಹವೇ ಇಷ್ಟು, ನಮಗೆ ಬಂಗಾಳದ ಶರತ್ ಚಂದ್ರ, ಬಂಕಿಮ ಚಂದ್ರ, ರಬೀಂದ್ರ ಮುಂತಾದವರು ಗೊತ್ತು, ಸಂಸ್ಕೃತ ಕಾಳಿದಾಸ, ಭಾಸರು ಗೊತ್ತು, ಹಿಂದಿಯ ಪ್ರೇಂ ಚಂದ್, ಮುಂತಾದವರು ಗೊತ್ತು, ತಮಿಳಿನ ಭಾರತಿಯರ್ ಗೊತ್ತು, ಇಂಗ್ಲೀಷ್ನವರಂತೋ ಗೊತ್ತೇ ಗೊತ್ತು. ಆದರೆ ಇಡೀ ಭಾರತದಲ್ಲಿ ಎಷ್ಟು ಜನರಿಗೆ ಕುವಿಂಪು, ಮಾಸ್ತಿ, ಬೇಂದ್ರೆ ಗೊತ್ತು?
ಕೊಸರು.."ಕುರುಬನಿಗೇನು ಗೊತ್ತು ಮುರುಗದ ಗಮನ" ಎಂಬುದು ಗಾದೆ(ಯಾವ ಜಾತಿಗೂ ಸಂಬಂಧಿಸಿದಲ್ಲ).
CNN-IBN ಗ್ರೇಟ್
ರಾಜ್ ದೀಪ್ ಸರ್ದೇಸಾಯಿ ಅವರ CNN-IBN ತುಂಬಾ ಚೆನ್ನಾಗಿದೆ. ಅವರ ವೆಬ್ ಸೈಟ್ ಕೂಡ ಸಖತ್ತಾಗಿದೆ.
- ಅಸತ್ಯಾನ್ವೇಷಿ
(http://bogaleragale.blogspot.com)
Re: CNN-IBN ಗ್ರೇಟ್
ಇದೇನು ಸತ್ಯಾನ್ವೇಷಣೆಯೋ ಅಥವಾ ಅಸತ್ಯಾನ್ವೇಷಣೆಯೋ? ಏನಾದರೂ ಇರಲಿ ನಿಮ್ಮ ಬ್ಯೂರೋ ರಿಪೋರ್ಟಿನ ಹೊಡೆತಕ್ಕೆ ಸಿಗದಿರಲಿ
ಎನಗಿಂತ ಕಿರಿಯರಿಲ್ಲ
Re: CNN-IBN ಗ್ರೇಟ್
ಸಿ.ಎನ್.ಎನ್ ಐ.ಬಿ.ಎನ್ ರಿಪೋರ್ಟುಗಳು ಯಾವ ಮಟ್ಟಕ್ಕೆ ಇಳಿದು ಹೋಗಿದೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ.
Re: ಐ.ಬಿ.ಎನ್ - ಬೆಂಗಳೂರು
Heyyyyyyy Smitha,
Go back to college days...... MCE.....Do you remember Girija....
)
Yes its me
Ninna photo nodi sakhat khushiyaytu...
Hegidiya?
nanna ID girijamr@gmail.com
Ninna mail ID kalisu.
Bye..
Girija