....................ನಿಶ್ಯಬ್ಧ
ಮನಸಿನ ಮಾತು......
ಭಾವಗೀತೆಯ ಸೊಗಡು...
ಭಾವಗೀತೆ ಎಂದರೆ ನಂಗೆ ತುಂಬಾ ಇಷ್ಟ. ಭಾವಗೀತೆಗಳನ್ನು ನಮಗೆ ನಾವೆ (ಯಾರಿಗೂ ಕೇಳಿಸದ ಹಾಗೆ ) ಗುಣುಗಿಕೊಂಡರೆ ಮನಸ್ಸಿಗೆ ಏನೋ ಒಂದು ಸಮಾಧಾನ. ..ಕಣ್ಣಲ್ಲಿ ಎರಡು ಹನಿ ನೀರು (ಕೆಲವು ಸಲ ಆನಂದ ಭಾಷ್ಪ) ಬಂದರೆ ಅದಕ್ಕಿನ್ನೂ ಬಹುಮಾನ/ಪ್ರಶಸ್ತಿ ಬೇಕಾ...?
ಈ ಕೆಳಗಿನ ಸಾಲ್ಗಳ ಎತ್ತರ (ಭಾವ) ಗಮನಿಸಿ....ಪ್ರೇಮದಲ್ಲೂ ಎಷ್ಟೂಂದು ಧನಾತ್ಮಕವಾದ
ಆಕಾಂಕ್ಷೆಗಳನ್ನು (ಕವಿ) ವ್ಯಕ್ತಪಡಿಸಿದ್ದಾರೆ.
ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವ(ವು)
ಹಗಲಿರುಳು ತಂದೆ ನೀನು ||೨||
ಎದೆಯಾಸೆ ಎನೋ ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ
ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ
ಒಲವೆಂಬ ಕಿರಣ ಬೀರಿ
ಒಳಗಿರುವ ಕಣ್ಣ ತೆರಿಸಿ
ಒಣಗಿರುವ ಎದೆನೆಲದಲ್ಲಿ
ಭರವಸೆಯ ಜೀವ ಹರಿಸಿ ||೨||
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗೊ
ಹೊಸ ಜೀವೆ ನಿನ್ನಿಂದ ನಾ ಕಾಣುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ
ನೀನಿಲ್ಲದೆ ನನಗೇನಿದೆ
ಮನ್ಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ ನನಗೇನಿದೆ
---------------------
ಸಾಹಿತ್ಯ : ಎಂ. ಎನ್. ವ್ಯಾಸ ರಾವ್
ಸಂಗೀತ : ಸಿ. ಅಶ್ವಥ್
ನಿಮಗಿಷ್ಟವಾದ ಭಾವಗೀತೆಗಳು ಯಾವ್ದು..?

- ಸತೀಶ ರವರ ಬ್ಲಾಗ್
- Login or register to post comments
- 409 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭಾವಗೀತೆಯ ಸೊಗಡು...
ನನಗೆ..
೧) ಅಮ್ಮನಿನ್ನ ಎದೆಯಾಳದಲ್ಲಿ
೨) ಅಂತರಂಗದ ಮೃದಂಗ
೩) ಶ್ರವಣ ಬಂತು ನಾಡಿಗೆ ಬಂತು ಕಾಡಿಗೆ
೪) ಬಳೆಗಾರ ಚನ್ನಯ್ಯ
೫) ತವರ ಸುಖದೊಳಗೆನ್ನ
೬) ಸಿರಿಗೆರೆಯ ನೀರಿನಲಿ
೭) ಯಾವ ಮೋಹನ ಮೊರಳಿ
೮) ಚಿಪುಣ ಅಂದ್ರೆ ಚಿಪುಣ ಈ ಕಾಲ...
- ಮಾಯ್ಸ
ಉ: ಭಾವಗೀತೆಯ ಸೊಗಡು...
ಎಲ್ಲೊ ಹುಟ್ಟಿ ಎಲ್ಲೋ ಬೆಳೆದು .. ಒಳಗೊಳಗೆ ಹರಿಯುತಿಹಳು... ಜೀವ ಹಿಂಡಿ ಹಿಪ್ಪೆ ಮಾಡಿ...ಒಳಗೊಳಗೆ ಕೊರೆಯುತಿಹಳು....ಸದಾ ಗುಪ್ತಗಾಮಿನಿ...
ಭಾವ ಗೀತೆಗಳಿಲ್ಲದೆ ನನ್ನ ದಿನ ಸಾಗುವುದೇ ಇಲ್ಲ. ಪ್ರತಿ ದಿನ ಕಾಲೇಜಿಗೆ ಹೋಗುವಾಗ ಕಿವಿಗೆ ಸಿಕ್ಕಿಸಿಕೊಂಡ ಐಪಾಡಿನಲ್ಲಿ ಭಾವಗೀತೆಗಳದ್ದೇ ಕಲರವ. ಅವುಗಳ ಭಾವಪೂರ್ಣ ಸಾಹಿತ್ಯದೊಂದಿಗೆ ಸುಮಧುರವಾದ ಕಂಠ ಹಾಗೂ ಲಲಿತವಾದ ಸಂಗೀತ ಬೆಳಗಿನ ಮೂಡನ್ನು ಆರೋಗ್ಯಕರವಾಗಿಸುತ್ತದೆ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಭಾವಗೀತೆಯ ಸೊಗಡು...
ಹಾಯ್ ಸತೀಶ್! ಅಂತೂ ತಮ್ಮ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದಿರಿ!
ಸುಪರ್ಬ್! ನಾನು ಆಫೀಸ್ ನಲ್ಲೇ ಗುನುಗಿದೆ.
ನನಗೆ ಇಷ್ಟವಾದ ಭಾವಗೀತೆಗಳೆಂದರೆ:-
೧. ಎದೆ ತುಂಬಿ ಹಾಡಿದೆನು
೨. ಯಾವ ಮೋಹನ ಮುರಳಿ
೩. ಈ ಬಾನು ಈ ಹಕ್ಕಿ
೪. ಹೂದೋಟದ ಹಾದಿಯಾಗೆ ಊರಿನಾಚೆ ತೋಪಿನಾಗೆ
೫. ನೀನಿಲ್ಲದೆ... (ನಿಮ್ ಸೆಕೆಂಡ್ ಇನ್ನಿಂಗ್ಸ್)
ಇತ್ಯಾದಿ, ಇತ್ಯಾದಿ...
ಇನ್ನು ಸ್ಪಲ್ಪ ಭಾವಗೀತೆಗಳ .... ಹರಿಸಿಪ್ಪಾ...!
ಉ: ಭಾವಗೀತೆಯ ಸೊಗಡು...
ಕೆಳಗಿನ ಧ್ವನಿ ಸುರುಳಿಗಳಲ್ಲಿನ ಎಲ್ಲ ಭಾವಗೀತೆಗಳು ನನಗಿಷ್ಟ:
ಬಾರೋ ವಸಂತ
ಭಾವಸಂಗಮ
ಮೈಸೂರು ಮಲ್ಲಿಗೆ
ದೀಪಿಕಾ
ಉ: ಭಾವಗೀತೆಯ ಸೊಗಡು...
ಆಕಾಶದ ನೀಲಿಯಲ್ಲಿ,
ಮೌನ ತಬ್ಬಿತು ನೆಲವ,
ನಾನಳಿದ ಮೇಲೆನ್ನ ಮರೆಯುವೆಯಾ ನೀನು,
ಮಣ್ಣಿನಾಳಗಳಲ್ಲಿ ಕಣ್ಣನೂರಿದ ಜೀವ,
ನೀ ಹಿಂಗ ನೊಡಬ್ಯಾಡ,
ಸದ್ದೆಕ್ ಇಸ್ಟ್ ಹಿಡ್ಕೋರಿ....