ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಹರ್ಷ ರವರ ಬ್ಲಾಗ್

ಕನ್ನಡದ ಅಳಿವು-ಉಳಿವು

August 28, 2007 - 10:26pm — ಹರ್ಷ

ಇದು ಒಟ್ಟಾರೆ ನನ್ನ ಮೊದಲ ಬ್ಲಾಗ್, ಇ೦ಗ್ಲೀಷಿನಲ್ಲೂ ನಾನಿನ್ನು ಯವುದೇ ಬ್ಲಾಗ್ ಬರೆದಿಲ್ಲ.

ನು ಚೀನಾಕ್ಕೆ ಬ೦ದು ಸುಮಾರು ೨ ತಿ೦ಗಳು ಆಗಿವೆ.ಇಲ್ಲಿನ ಜನ ತಮ್ಮ ಭಾಷೆಗೆ ಕೊಡುವ ಮಹತ್ವ ಅಸಾಧಾರಣ. ನಾನು ಒಬ್ಬ software engineer.
ನನ್ನ ಓದಿನ ಬಹುಪಾಲು ಮಾಧ್ಯಮ ಇ೦ಗ್ಲೀಷಿನಲ್ಲಿ,ಉದ್ಯೊಗದಲ್ಲ೦ತೂ ಕನ್ನಡದ ಬಳಕೆ ಇಲ್ಲವೇ ಇಲ್ಲ.

ಆದರೆ ಇಲ್ಲಿ ಚೀನಿ ಭಾಷೆ ಬಿಟ್ಟರೆ ಬೇರೆ ಇಲ್ಲ. ವ್ಏದ್ಯಕೀಯ, ತಾ೦ತ್ರಿಕ ಅಧ್ಯಯನಗಳನ್ನು ಅವರ ಭಾಷೆಯಲ್ಲೆ
ಮುಗಿಸುತ್ತಾರೆ. ಇ೦ಗ್ಳೀಷಿನಲ್ಲಿ ಮುದ್ರಿತವಾಗುವ ಎಲ್ಲ ಪುಸ್ತಕಗಳು ಅವರ ಭಾಷಗೆ ತಕ್ಶಣ ಭಾಷ೦ತರ ವಾಗುತ್ತದೆ.
ಅಲ್ಲದೆ ಬಹಳ ಸ್ಠಳೀಯ ಲೇಖಕರು, ಸ್ವ್೦ತ ಪುಸ್ತಕಗಳನ್ನೂ(ತಾ೦ತ್ರಿಕ) ಬರೆಯುತ್ತಾರೆ.

C ಭಾಷೆಯಲ್ಲಿ ಬರೆಯುವ comments ಚೀನಿ ಭಾಷೆಯಲ್ಲಿ ಇರುತ್ತವೆ. technical ಪದಗಳಾದ "macro", "for loop",
ಇತರೆ ಪದಗುಚ್ಚಗಳು ಸಹ ಚೀನಿ ಭಾಷೆ ಯಲ್ಲಿ ಇರುತ್ತವೆ.ಎಲ್ಲಾ ಕಡೆಯೂ ಚೀನಿ ಭಾಷೆಗೆ ಸಿದ್ದಮಾಡಿದ ಗಣಕ ಯ೦ತ್ರಗಳನ್ನು ಉಪಯೋಗಿಸುತ್ತಾರೆ.

ಯಾವ ಭಾಷೆಗೆ ಉಪಯುಕ್ತತೆ ಇಲ್ಲವೊ ಅದು ಕಾಲಕ್ರಮೇಣ ನಾಶವಗುತ್ತದೆ, ಉದಾಹರಣೆಗೆ ಪಾಲಿ, ಸಿ೦ಧಿ... ಕನ್ನಡ ಇದಕ್ಕೆ ಹೊರತಲ್ಲ.

ಕನ್ನಡ ಭಾಷೆಯ ಉಳಿವಿಗಾಗಿ, ಮತ್ತು ನಮ್ಮ ಮನಸ್ಸ್೦ತೋಷಕ್ಕಾಗಿ, ನಾವು ಸ೦ಪದ ಮು೦ತಾದ site ಗಳಿಗೆ ಸದಸ್ಯರಾಗುತ್ತೇವೆ.
ಅದು ಸ್ವಸ್೦ತೋಷಕ್ಕಾಗಿ ಮಾತ್ರ. ಅವಶ್ಯಕತೆ ಗಾಗಿ ಅಲ್ಲ.

ಎಲ್ಲಿ ತನಕ ಕನ್ನಡ, ಅವಶ್ಯಕವಲ್ಲವೋ ಅಲ್ಲೀ ತನಕ ಕನ್ನಡ ಬೆಳೆಯುವುದಿಲ್ಲ.ಕನ್ನಡ ಬೆಳೆಯದಿದ್ದರೆ ಕನ್ನಡ ಮನೆ ಮಾತಾಗಿ ಉಳಿಯುತ್ತದೆ.

ಕನ್ನಡ ಭಾಷೆಯ ಉಳಿವು, ಕನ್ನಡ ಭಾಷ ಬೆಳೆಯುವದರೊ೦ದಿಗೆ ಅತ್ಯ೦ತ ಬಿಗಿಯಾಗಿ ಹೊ೦ದಿಕೊ೦ಡಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಎಷ್ತು ಪದಗಳು ಸೇರಿವೆ?
ಎಷ್ಟು ಪದಗಳಿಗೆ ಎರಡೆನೆ ಅರ್ಥ ಬ೦ದಿದೆ?

ಕನ್ನಡವನ್ನು ಹೆಚ್ಹಾಗಿ ವ್ಯಾಹವಾರಿಕವಾಗಿ ಉಪಯೋಗಿಸ ಬೇಕು.ಕನ್ನಡದ ಪದಗಳು ಹೆಚ್ಹಾಗ ಬೇಕು.

ಇದನ್ನು ಇ೦ಗ್ಲೀಷಿನಲ್ಲೂ ಬರೆಯುತ್ತೇನೆ...ಕೇವಲ ನನ್ನ ಸ೦ತೋಷಕ್ಕಾಗಿ, ಓದುಗರಿಗೆ ಸಿಟ್ಟು ಬ೦ದರೆ .. I cannot help it.

A language which does not increase its vocabulary, a language that does not reinvent itself will become
dormant.

Example:
1) English is successful because of its constant growth. It takes input from all languages and becomes more powerful!! It is more flexible also. It has new words like wikipedia, bangalored,googling,stethescope etc. that were added during past one centuries!!

2) have we invented new words like that in kannada? It never became a necessity..
Have we used words like "mouse" to refer alternatively something else(a device used in computing)?
Here, a word got new meaning, and language is growing )

3) Kannada grew when it wಅs a necessity...halegannada became nadugannada and then hosagannada..it became rich and strong...but now no more growth and its going down!!!

Alas i had to give examples in English.

It is just my sheer inneficiency to explain the same in kannada!!

And I am a kannadiga.

ಸರ್ಕಾರ, ಮತ್ತು ಬುದ್ಧಿ ಜೀವಿಗಳು ಇದರೆ ಬಗ್ಗೆ ಆಗಲೆ ಯೋಚಿಸದೆ ಇರಲಾರರು, ಎ೦ಬ ಆಶಾಭಾವನೆಯಿ೦ದ, ನನ್ನ ಮೊದಲ ಬ್ಲ್ಲಾಗನ್ನು ಮುಕ್ತಾಯ ಮಾಡುತ್ತೇನೆ.

  • ಭಾಷೆ
~.~
  • ಹರ್ಷ ರವರ ಬ್ಲಾಗ್
  • Login or register to post comments
  • 466 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2007 - 10:47pm — mahesha

ಉ: ಕನ್ನಡದ ಅಳಿವು-ಉಳಿವು

mahesha's picture

Smiling

ಒಳ್ಳೆಯ ಯೋಚನೆ...

ಶಂಕರಭಟ್ಟರ ಹೊತ್ತಗೆಗಳನ್ನು ಓದ್ರಿ. ನಿಮಗೆ ಹಿಸಿಸಬೋದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 11:26pm — ಸಂಗನಗೌಡ

ಉ: ಕನ್ನಡದ ಅಳಿವು-ಉಳಿವು

ಸಂಗನಗೌಡ's picture

ನಾವು ಇಂಡಿಯನ್ಸಗೆ ಬದಲಾವಣೆಯ ಬಗ್ಗೆ ಸಿಕ್ಕಾಪಟ್ಟೆ ಅಂಜಿಕೆ, ಇವೊತ್ತು ಕೆಲಸದ ನಿಮಿತ್ತ ಕೋರ್ಟಿಗೆ ಹೋಗಿದ್ದೆ, ವಿಚಿತ್ರ ಅನಿಸಿತು, ಬ್ರಿಟಿಸರು ಬಿಟ್ಟು ಹೋದ ಅದೇ ಹಳೆಯ ಪದ್ದತಿಗಳು. ನಾವು ಬ್ರಿಟೀಸರಿಂದ ಬಿಡುಗಡೆ ಬರೀ ಆಡಳಿತದಲ್ಲಿ ಪಡೆದೆವೋ ಹೊರತು ದಿಟವಾದ ಅರಿತದಲ್ಲಿ ಅಲ್ಲ. ಬರೀ ಕೋರ್ಟಿನಲ್ಲಿ ಅಲ್ಲ, ಎಲ್ಲದರಲ್ಲೂ, ಅವರು ರೋಡುಗಳಿಗೆ ಕೊಟ್ಟ ಹೆಸರುಗಳನ್ನು ಕೂಡ ಬದಲು ಮಾಡುವ ಸೌರ್ಯಕ್ಕೆ ನಾವು ಕೈ ಹಾಕಿಲ್ಲ.

ನಾವು ಗೊಡ್ಡು ಆಚರಣೆ, ಪದ್ದತಿಗಳಿಗೆ ಅಂಟಿಕೊಂಡು ಬಿಡುತ್ತೇವೆ. ಬರೀ ಹಿಂದೂ ಆಚರಣೆಗಳ ಬಗ್ಗೆ ನಾ ಹೇಳುತ್ತಿಲ್ಲ, ತಮ್ಮ ಅನುಕೂಲಗಳ ಸಲುವಾಗಿ ಬ್ರೀಟೀಸರು ಮಾಡಿಕೊಂಡ ಪದ್ದತಿಗಳನ್ನು ಹಾಗೆಯೇ ಕಾಯ್ದುಕೊಂಡು ಹೋಗುತ್ತಿದ್ದೇವೆ ನಾವು. ಇವುಗಳನ್ನು ಬಿಡಿಸಲು ಮತ್ತೆ ಯಾರು ಬರಬೇಕೋ?

ಈಗಲೂ ಕ್ರಿಸ್ಚಿಯನ್ ಕಾನ್ವೆಂಟಿಗೆ ಸೇರಿಸಿದರೇನೇ ನಮ್ಮ ಮಕ್ಕಳು ಚುರುಕಾಗುತ್ತಾರೆ ಅನ್ನುವ ನಂಬಿಕೆ. ಹಿಂದೂ ಆಡಳಿತವಿದ್ದೂ ಕ್ರಿಸ್ಟಿಯನ್ ಸನ್ಯಾಸಿ/ಸನ್ಯಾಸಿನಿಗಳ ಹೆಸರಿಟ್ಟುಕೊಂಡು ನಡೆಯುತ್ತಿರುವ ಸಾಲೆಗಳಿದಾವೆ ಅಂದರೆ ನೋಡಿ ಯಾವ ಮಟ್ಟಿಗಿದೆ ನಮ್ಮ ಮಳ್ಳತನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 9:19am — createam

ಉ: ಕನ್ನಡದ ಅಳಿವು-ಉಳಿವು

createam's picture

>> "ಹಿಂದೂ ಆಡಳಿತವಿದ್ದೂ ಕ್ರಿಸ್ಟಿಯನ್ ಸನ್ಯಾಸಿ/ಸನ್ಯಾಸಿನಿಗಳ ಹೆಸರಿಟ್ಟುಕೊಂಡು ನಡೆಯುತ್ತಿರುವ ಸಾಲೆಗಳಿದಾವೆ ಅಂದರೆ ನೋಡಿ ಯಾವ ಮಟ್ಟಿಗಿದೆ ನಮ್ಮ ಮಳ್ಳತನ."
ಭಾರತ ಒಂದು ಜಾತ್ಯಾತೀತ ರಾಷ್ಟ್ರ ಅನ್ನೋದನ್ನಾ ನೀವು ಮರಿತಾ ಇದಿರ. ಹಿಂದು ಆಡಳಿತ? ಅರ್ಥ ಆಗ್ಲಿಲ್ಲ ನನಗೆ!! ಈ comment ನನಗೆ ತುಂಬಾ offesnsive ಅನ್ನಿಸ್ತಾ ಇದೆ. ಕನ್ನಡದ ಬಗ್ಗೆ ಮಾತಾಡುವಾಗ ಇಲ್ಲಿ ಧರ್ಮದ ಮಾತು ಯಾಕೆ ಬಂತು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 9:28am — mahesha

ಉ: ಕನ್ನಡದ ಅಳಿವು-ಉಳಿವು

mahesha's picture

"ನಾವು ಗೊಡ್ಡು ಆಚರಣೆ, ಪದ್ದತಿಗಳಿಗೆ ಅಂಟಿಕೊಂಡು ಬಿಡುತ್ತೇವೆ. ಬರೀ ಹಿಂದೂ ಆಚರಣೆಗಳ ಬಗ್ಗೆ ನಾ ಹೇಳುತ್ತಿಲ್ಲ, ತಮ್ಮ ಅನುಕೂಲಗಳ ಸಲುವಾಗಿ ಬ್ರೀಟೀಸರು ಮಾಡಿಕೊಂಡ ಪದ್ದತಿಗಳನ್ನು ಹಾಗೆಯೇ ಕಾಯ್ದುಕೊಂಡು ಹೋಗುತ್ತಿದ್ದೇವೆ ನಾವು. ಇವುಗಳನ್ನು ಬಿಡಿಸಲು ಮತ್ತೆ ಯಾರು ಬರಬೇಕೋ?

ಈಗಲೂ ಕ್ರಿಸ್ಚಿಯನ್ ಕಾನ್ವೆಂಟಿಗೆ ಸೇರಿಸಿದರೇನೇ ನಮ್ಮ ಮಕ್ಕಳು ಚುರುಕಾಗುತ್ತಾರೆ ಅನ್ನುವ ನಂಬಿಕೆ. ಹಿಂದೂ ಆಡಳಿತವಿದ್ದೂ ಕ್ರಿಸ್ಟಿಯನ್ ಸನ್ಯಾಸಿ/ಸನ್ಯಾಸಿನಿಗಳ ಹೆಸರಿಟ್ಟುಕೊಂಡು ನಡೆಯುತ್ತಿರುವ ಸಾಲೆಗಳಿದಾವೆ ಅಂದರೆ ನೋಡಿ ಯಾವ ಮಟ್ಟಿಗಿದೆ ನಮ್ಮ ಮಳ್ಳತನ."

ಸ್ವಾಮಿ...

ತುಸು ಇನ್ನೊಮ್ಮೆ ಓದಿರಿ....

ಅವರು ಹೇಳ್ತಾ ಇರೋದು. ಸಾಲೆಯನ್ನು ಹಿಂದುಗಳು ನಡೆಸ್ತಿದ್ರು, ಹೆಚ್ಚು ರೊಕ್ಕ ಇರೋ ಮಂದಿ ಬಂದು ಸೇರ್ಲಿ ಅಂತ ಅದಕ್ಕಾ ಕ್ರಿಸ್ತಾನ್ರ ಹೆಸರು ಮಡಗ್ತಾರೆ ಅಂತ.

ಇದು ಅವರು ಹೇಳ್ತಾ ಇರೋ ಗೊಡ್ಡು ಇದಕ್ಕೆ ಮಾದರಿ, ಆಟೇಯ!
ಅಲ್ಲಿ ಯಾವ ಕೆರಳಿಸೊಂತ/offensive ಮಾತಿಲ್ಲ.

ಇನ್ನೊಂದು ಬಾರತ ಜಾತಿಯಾತೀತ/ಜಾತಿಬಿಟ್ಟ(ಜಾತಿಯಿಲ್ಲದ) ದೇಸ ಅಲ್ಲ. ನಾವು secular ಅನ್ನು ಎಲ್ಲಜಾತಿಯ/ಸರ್ವಧರ್ಮೀಯ ಅಂತ ಅರಿತ ಮಾಡಿಕೊಂಡಿರೋದು. ಆದುದರಿಂದಲೇ ಇಲ್ಲಿ ಎಲ್ಲಾ ಜಾತಿಗಳಿಗೂ ಸಮಸಮ ಜಾಗ ಇರೋದು.

ಆದ್ರೂ ಸಂಗನ,
ಇಲ್ಲಿ ಹಿಂದು,ಕ್ರಿಸ್ತಾನದ ಮಾದರಿ ಬೇಕಿರಲಿಲ್ಲ. ಬೇರೊಂದು ಮಾದರಿ ಕೊಟ್ಟಿದ್ರೆ ಚಂದಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 9:41am — gc

ಉ: ಕನ್ನಡದ ಅಳಿವು-ಉಳಿವು

gc's picture

ಸಂಗನಗೌಡರು ಹೇಳಿದ್ದು ಕೆಲ ಶಾಲೆಗಳ ಆಡಳಿತದ ಬಗ್ಗೆ. ನಾಡು ಅಥವಾ ದೇಶದ ಆಡಳಿತದ ಬಗ್ಗೆಯಲ್ಲ. ನಮ್ಮ ಹಳ್ಳಿಗಳಿಗೂ ಹಬ್ಬಿರುವ ಹಿಂದೂಗಳೆ ನಡೆಸುವ "ಕಾನ್ಮೆಂಟು"ಗಳ ಬಗ್ಗೆ ಅವರ ಈ ಅನಿಸಿಕೆ ಎಂದು ನನ್ನ ಅನಿಸಿಕೆ. ಇದರಲ್ಲಿ offesnsive ಏನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 12:23pm — ಸಂಗನಗೌಡ

ಉ: ಕನ್ನಡದ ಅಳಿವು-ಉಳಿವು

ಸಂಗನಗೌಡ's picture

ಅಯ್ಯಾ, ನಾನು ಹೇಳಿದ್ದು ನಿಮಗೆ ತಿಳಿದಿಲ್ಲ. ನಾವು ಅಂಟಿಸಿಕೊಳ್ಳುವ ತಿಳಿವಿಲ್ಲದ ಕುರುಡು ನಂಬಿಕೆಗಳ ಬಗ್ಗೆ ನಾ ಹೇಳಿದ್ದು. ಬ್ರೀಟಿಸರು ಇಂಡಿಯಾದಲ್ಲಿದ್ದಾಗ, ಚರ್ಚುಗಳನ್ನು ಕಟ್ಟಿದರು, ಅವುಗಳೊಂದಿಗೆ ಶಾಲೆಗಳನ್ನು ತೆರೆದರು. ಆ ಸಾಲೆಗಳಿಗೆ ಅವರು ಕ್ರಿಸ್ಟಿಯನ್ ಸನ್ಯಾಸಿಗಳ ಹೆಸರುಗಳನ್ನು ಕೊಡುತ್ತಿದ್ದರು, ಏಕೆಂದರೆ ಅವರ ಭಕ್ತಿ.

ಆದರೆ ಈಗಿನ ಸಾಲೆಗಳಿಗೆ ಅವೇ ತರದ ಹೆಸರುಗಳನ್ನೇಕೆ ಕೊಡುತ್ತಾರೆಂದರೆ ಭಕ್ತಿಗಲ್ಲ, ಮಂದಿ ತಮ್ಮ ಮಕ್ಕಳನ್ನು ಸೇರಿಸಲಿ ಅಂತ. ಯಾಕಂದರೆ ನಮ್ಮ ಮಂದಿಗೆ ಕ್ರಿಸ್ತಿಯನ್ ಸಾಲೆಗಳಲ್ಲಿ ತಮ್ಮ ಮಕ್ಕಳು ಕಲಿತರೆ ಜಾಣರಾಗುತ್ತಾರೆ ಅಂತ ನಂಬಿಕೆ, ಬ್ರೀಟಿಸರ ಕಾಲದಲ್ಲಿ ಅದು ದಿಟವಾಗಿತ್ತು ಕೂಡ.

ನಾನು ಕೋರ್ಟಿನಲ್ಲಿ ನೋಡಿದ್ದು, ಅದೇ ಹಳೆಯ ಉಡುಗೆ-ತೊಡುಗೆ, ಸರಕಾರಿ ನೌಕರರಿಗೆ ಭಾರತೀಯ ಉಡುಗೆ ಏಕೇ ಉಟ್ಟುಕೊಳ್ಳಲು ಸರಕಾರ ಹುಮ್ಮಸ್ಸು ಕೊಡಬಾರದು? ಬ್ರೀಟಿಸರ ಬಗೆಯಲ್ಲೇ ಉಡುಗೆ-ತೊಡುಗೆ ಏಕೆ? ನಮ್ಮದೇ ಭಾರತೀಯ ಉಡುಗೆ ತೊಡಲು ನಮಗೆ ಯಾರೂ ಅಡ್ಡಿಯಂತೂ ಇಲ್ಲವಲ್ಲಾ!! ಅಂದರೂ ನಾವು ಬದಲಾಗಲ್ಲ, ನಮಗೆ ಬದಲಾವಣೆಯೆಂದರೆ ಹೆದರಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 1:06pm — mahesha

ಉ: ಕನ್ನಡದ ಅಳಿವು-ಉಳಿವು

mahesha's picture

ಸಂಗನ!

ಕನ್ನಡದ ಅಳಿವು-ಉಳಿವು ಇರೋದು... ಸುಸಂಸ್ಕೃತರಿಂದಲ್ಲ, ಶಿಷ್ಟರಿಂದಲ್ಲ. ಕನ್ನಡದ ಉಳಿಯೋದು ನಮ್ಮ ಹಳ್ಳಿಗಾಡಿನ, ಬೆಟ್ಟಗಾಡಿನ ಮಂದಿಯಿಂದಲೇ. ನಾವು ಇಂದು ಹೊಟ್ಟೆಹೊರೆಯಕ್ಕೆ ಈ ಹೊಳಲಿಗೆ ಬಂದಿರಬೋದು, ಆದ್ರೆ ನಾವು ಈ ಸೋಗಿನ ಸುಸಂಸ್ಕೃತರಾಗಬೇಕಿಲ್ಲವಲ್ಲ.

ನಮ್ಮ ಕನ್ನಡವೇ ಸವಿಗನ್ನಡ. ನಮಗೆ ಐತೆ, ಅವೆ, ಮಾಡಕ್ಕಿಲ್ಲ ಇವೇ ಬೇಕು, ಅಂತ ನಾವು ನಮ್ ನಮ್ ಕನ್ನಡವನ್ನು ಆಡಿಕೊಂಡು ಇದ್ರೆ, ಕನ್ನಡ ಉಳಿತಯ್ತೆ. ಯಾವ ಸರಕಾರದ ಹೆಸರಹಲಗೆಯಲ್ಲಿ ಕನ್ನಡ ಐತೆ? ದಿಟವಾಗಿ ಇವೊತ್ತು ಕನ್ನಡ ಇರೋದೇ ಮಂದಿ ಬಾಯಲ್ಲಿ ಹೊರತು ಸರಕಾರದಿಂದ ಕನ್ನಡ ಉಳಿತಯ್ತೆ ಅನ್ನೋದು ದೊಡ್ಡ ಮರಳು.

ನಮ್ ಹಳ್ಳಿ ಮಂದಿ ಎಲ್ಲವನ್ನು ಬರೀ ಕನ್ನಡದಲ್ಲೇ ಹೇಳ್ತಾರಲ್ಲ, ಅವರಿಗೆ ಯಾರಪ್ಪ ಹೇಳಿಕೊಟ್ರೂ ಆ ಜಾಣತನವಾ? ಈ ಹೊಳಲೊರಿಗೇ ಇಂಗ್ಲೀಸು ಸಕ್ಕದ ಇಲ್ದೇ ಮಾತಾಡಕ್ಕೇ ಆಗಕ್ಕಿಲ್ವಂತೆ. ಅದನ್ನೆ ದೊಡ್ಡಸ್ತಿಕೆ ಅಂತ ಸೋಗು ಹೊಡೆದುಕೊಂಡು ತಿರ್ಗ್ತಾರೆ, ಇವರೇ ಎಲ್ಲಾ ಟೀವಿ, ಸಿನಿಮ, ಬರಹದಾಗೂ ಮೆರೆಯೋರು. ಆದ್ರೆ ಕೆಲವು ಬರಹಗಾರರು ಬರೀ ಕನ್ನಡವನ್ನೇ ಹಚ್ಚಾಯ ಬಳಸಿ ಚಂದವಾಗೇ ಬರೆದವ್ರೆ, ಮಾದರಿಯಾಗಿ ಶಿ.ರಾ.ಕಾರಂತರು... ಬರೀ ಕನ್ನಡದಲ್ಲೇ ಎಲ್ಲ ಬರೆಯಕ್ಕೆ ಆಯ್ತದೆ, ಯಾಕೆ ಆಗಕ್ಕಿಲ್ಲ. ಈ ಬೆಂಗಳೂರೊರಿಗೆ ಹಂಗೆ ಬರೆಯಕ್ಕೆ ಬರಕ್ಕಿಲ್ಲ, ತಮ್ಮ ಅರಿವಿನ ಕೊರೆತೆಯಿಂದ, ಕನ್ನಡದಲ್ಲೇ ಕೊರೆತೆ ಐತೆ ಅಂತಾರೆ.

ಮೊನ್ನೆ ನಮ್ ಮನೆಯಾಗೇ ಒಂದು ಸೀಡಿ ತಂದಿದ್ರು, "ಕನ್ನಡ ಶಿಷ್ಟ ಜಾನಪದ ಹಾಡುಗಳು" ಅಂತ. ಅದರಾಗೆ ಈ ಬೀಮನಮಾಸೆ, ಗವರೀ ಹಬ್ಬ, ಮಂಗಳಗವರೀ ರೊತ, ಈ ಹಬ್ಬಗಳಲ್ಲಿ ಹಾರ್ಬರ ಹೆಂಗಸರು ಹೇಳೋ ಹಾಡುಗಳವು. ಇದರ ಹೆಸರನ್ನು ನೋಡಿ ಕೆಂಡಕೆಂಡ ಆದ ನನ್ ಚಿಕ್ಕಪ್ಪನ ಮಗ "ಲೋ ಮಾಯ್ಸ, ನೋಡಿ ಈ ನನ್ ಮಕ್ಳು ಈ ಹಾಡುಗಳನ್ನ ಶಿಷ್ಟ ಜಾನಪದ ಅಂದ್ರೆ, ಮಿಕ್ಕವು ಏನು ಶಿಷ್ಟವಲ್ಲದ ಅಶಿಷ್ಟವೇ?" ಅಂದ ಉರಿತಿದ್ದ.... ನಾನು ಅವನಿಗೆ "ನೋಡಲಾ, ಅದು ಹಂಗೇಯ, ಅದಕ್ಕೆಲ್ಲ ಸುಮ್ನೆ ತಲೆಗೆಡಿಸ್ಕೋ ಬಾರ್ದು, ಈ ಹಾಡುಗಳನ್ನು ಬೇಕಾದ್ರೆ ಪರಮಶಿಷ್ಟಜಾನಪದ ಅಂದುಕೊಳ್ಳಿ, ಆದ್ರೆ ಇದನ್ನ ಕೇಳೋರು ಏಟ್ ಮಂದಿ ಅವ್ರೆ, ಯಾವಾಗ್ಲೂ ನಮ್ ಚಲ್ಲಿದರೋ ಮಲ್ಲೀಗೆಯಾ, ನಿಂಬೇಯ ಬನದ ಮ್ಯಾಗಣ, ಈ ಹಾಡೇ ನಡೆಯೋದು. ಸುಮ್ನೆ ಬೆರಳೆಣಿಕೆಯಸ್ಟು ಮಂದಿ ತಮ್ದೇ ಶಿಷ್ಟ, ತಮ್ದೇ ದೊಡ್ದು, ಅಂದ್ರೆ, ಅಂದಕೊಳ್ಳಿ, ಬ ಬಾ. ಅವ್ರು ಅಂದ್ರು ಅಂತ ಅದು ದಿಟವಾಯ್ತದ?" ಅಂದು ತಣ್ಣಗೆ ಮಾಡ್ದೆಂ.

ಮಾಸ್ತಿಯವರ ಗೌಡರ ಮಲ್ಲೀ ಓದ್ತಾ ಇವ್ನಿ.. ಅಚ್ಚಗನ್ನಡದ ನೆಲದ ನರುಗಂಪಿನ ಇಂಪಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 1:42pm — Khavi

ಉ: ಕನ್ನಡದ ಅಳಿವು-ಉಳಿವು

Khavi's picture

ಮಹೇಶ,
ನಿಮ ಹತ್ರ ಈ ಹಾಡುಗಳು ಸಿಗುತ್ತಾ.

- ಚಲ್ಲಿದರೋ ಮಲ್ಲೀಗೆಯಾ,
- ನಿಂಬೇಯ ಬನದ ಮ್ಯಾಗಣ
- ಚೆನ್ನಪ್ಪ ಚೆನ್ನಗೌಡ ಕುಂಬಾರ ಮಾಡಿದ ಕೊಡನವ್ವ
- ....ಬಲ್ಲಿದ ರಂಗನ ಒಲ್ಲಿಯ ಮೇಲೆ ಚೆಲ್ಲಿದರೋಕುಳಿಯೋ... (ಇದರ ಮೊದಲು ಗೊತ್ತಿಲ್ಲ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 1:53pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕನ್ನಡದ ಅಳಿವು-ಉಳಿವು

ಶ್ರೀನಿವಾಸ ವೀ. ಬ೦ಗೋಡಿ's picture

Khavi wrote:
ಬಲ್ಲಿದ ರಂಗನ ಒಲ್ಲಿಯ ಮೇಲೆ ಚೆಲ್ಲಿದರೋಕುಳಿಯೋ... (ಇದರ ಮೊದಲು ಗೊತ್ತಿಲ್ಲ)

ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಗೆನುತ...
ಬಲ್ಲಿದ ರಂಗನ ಒಲ್ಲಿಯ ಮೇಲೆ ಚೆಲ್ಲಿದರೋಕುಳಿಯೋ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 2:22pm — mahesha

ಉ: ಕನ್ನಡದ ಅಳಿವು-ಉಳಿವು

mahesha's picture

ಇದನ್ನ

ಗಲ್ಲು ಗಲ್ಲೆನುತ ಗೆಜ್ಜೆ ಗಲ್ಲು ತಾದಿಮಿತ
ನಮ್ಮ ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚಲ್ಲಿದರೋಕುಳಿಯೋ.

ಅರೆದರು ಅರಿಸಿನವ ಅದಕೆ ಬೆರೆದರು ಸುಣ್ಣವ
ನಮ್ ಒಪ್ಪವೊಳ್ಳ ರಂಗನ ಮೇಲೆ ರಂಗಿನೋಕುಳಿಯೋ

ವಲ್ಲಿ ಅಂದ್ರೆ ಹೊದೆಯುವ ಬಟ್ಟೆ
ಓಕುಳಿ ಬಣ್ಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 2:23pm — mahesha

ಉ: ಕನ್ನಡದ ಅಳಿವು-ಉಳಿವು

mahesha's picture

ಈ ಹಾಡುಗಳು ಉದ್ಬವ ಇಲ್ವೇ ಕನ್ನಡಾಡಿಯೋ.ಕಾಮ್ ಅಲ್ಲಿ ಸಿಕ್ಕಬೋದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 9:53pm — hamsanandi

ಉ: ಕನ್ನಡದ ಅಳಿವು-ಉಳಿವು

hamsanandi's picture

ಖವಿಯವರೆ,
ಇವೆಲ್ಲ ಹಾಡುಗಳೂ (ಚೆಲ್ಲಿದರು ಮಲ್ಲಿಗೆಯಾ .. ಇತ್ಯಾದಿ) ಕನ್ನಡಆಡಿಯೋ.ಕಾಮ್ ನಲ್ಲೋ , ಉದ್ಭವ.ಕಾಮ್ ನಲ್ಲೋ ಇರಬೇಕ್ರೀ.

ಆಮೇಲೆ, ಆ ’ಶಿಷ್ಟ ಜಾನಪದ ಹಾಡು’ಗಳಿಗೆ, ಅವರ ನಾಮಕರಣ ಸರಿಯಿಲ್ಲ ಅಷ್ಟೆ.
ಅವಕ್ಕೆ ಸಂಪ್ರದಾಯದ ಹಾಡುಗಳೆಂದು ಹೇಳಿದರೆ ಸರಿಯಾಗತ್ತೆ.
ಮತ್ತೆ, ಅವೂ ಜನಪದವೇ - ಜನಪದ ಸಾಹಿತ್ಯದ ಮುಖ್ಯ ಅಂಶ ಎಂದರೆ, ಬರೆದವರು ಯಾರೆಂದು ತಿಳಿಯದೇ, ಬಾಯಿಂದ ಬಾಯಿಗೆ ಹೋಗಿರುವುದು. ಸಂಪ್ರದಾಯದ ಹಾಡುಗಳು (ಆರತಿ ಹಾಡು, ಹಸೆಗೆ ಕರೆಯುವ ಹಾಡು, ಮಂಗಳಗೌರಿ ಹಾಡು) ಕೂಡಾ ಆ ಗುಂಪಿಗೇ ಸೇರುವುವು. ಹಾರ್ವರ ಹೆಂಗಸರು ಹೇಳಿದರೆ ಜನಪದವಲ್ಲ ಅಂತ ಎಲ್ಲಿ ಹೇಳಿದೆ?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2007 - 10:09pm — mahesha

ಉ: ಕನ್ನಡದ ಅಳಿವು-ಉಳಿವು

mahesha's picture

"ಹಾರ್ವರ ಹೆಂಗಸರು ಹೇಳಿದರೆ ಜನಪದವಲ್ಲ ಅಂತ ಎಲ್ಲಿ ಹೇಳಿದೆ?"

ಇದೇ ಹಂಸಾನಂದಿ ಸಾರ್‍. ನಾನು ಅವರಿಗೆ ಹೇಳಿದೆ. ನೋಡಿ ಹೀಗೆ ಶಿಷ್ಟಜನಾಪದ ಅಂತ ಕರೆಯಬೇಡಿ, ಬದಲಿಗೆ ವ್ರತದ ಹಾಡುಗಳು, ಇಲ್ವೇ ಸಂಪ್ರದಾಯದ ಹಾಡುಗಳು ಇದೇ ಚನ್ನಾಗಿದೆ ಅಂತ.

ಹೀಗೆ ಹಾರ್ವರಲ್ಲಿ ಆರತಿ ಹಾಡುಗಳು, (ಹೆಣ್ಣನ್ನು)ಮನೆತುಂಬಿಸುವ ಹಾಡುಗಳು, ಮುಂತಾದವುಗಳಿವೆ. ಇವನ್ನೆಲ್ಲ ಒಂದು ಕಡೆ ಕಲೆ ಹಾಕುವ ಕೆಲಸ ಹಲವರು ಮಾಡ್ತಾ ಇದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 12:02pm — ವೈಭವ

ಉ: ಕನ್ನಡದ ಅಳಿವು-ಉಳಿವು

ವೈಭವ's picture

ಸ್ವಾಮಿ ಹರ್ಶರೆ,
ಇದಕ್ಕಾಗಿಯ ಸಿರಿ ಶಂಕರಬಟ್ಟರು ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಅವರು ಹೇಳಿರುವುದರ ತಿರುಳು
೧) ಕನ್ನಡಕ್ಕೆ ತನ್ನದೇ ಆದ ಸೊಗಡು, ಬೇಕರಣ(ವ್ಯಾಕರಣ) ಇದೆ. ಅದನ್ನು ಗುರುತಿಸಿ ಮತ್ತು ಕಾಪಾಡಿಕೊಳ್ಳಿ
೨) ಕನ್ನಡಕ್ಕೆ ಬರಹದಲ್ಲಿ ಬದಲವಾಣೆ(ಪದಕ್ರಾಂತಿ) ಆಗಬೇಕಿದೆ.
೩) ಕನ್ನಡ ಹೆಚ್ಚು ಹೆಚ್ಚು ಮಂದಿಗೆ ತಲುಪಬೇಕಿದ್ದರೆ ಕನ್ನಡ ತನ್ನತನವನ್ನು ಉಳಿಸ್ಕೊಳ್ಳಬೇಕಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Rajkumar -namma kannada meshtru('maaLpa')
  • ಭಾಷೆಗೆ ಬ್ರಾ೦ಡ್ ಇಮೇಜ್ ಬೇಕೆ ??
  • An Operating system completely in Kannada
  • ಕಾಲು ಕೆರೆಯೋದು ಅಂದ್ರೆ ಹೀಗೆ
  • ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
Syndicate content

ಲೇಖಕರು

ಹರ್ಷ's picture

ಪೂರ್ಣ ಹೆಸರು
ಹರ್ಷ ಮಠಾಧಿಕಾರಿ

ಪರಿಚಯ

ನನ್ನ ಸ್ವ೦ತ ಊರು ಶಿವಮೊಗ್ಗ, ಕೆಲಸದ ಸಲುವಾಗಿ ಬೆ೦ಗಳೂರಿಗೆ ಬ೦ದು, ಸಧ್ಯ ಚೀನ ದಲ್ಲಿ ಇದ್ದೇನೆ..
ಕನ್ನಡ ಪ್ರೇಮಿ, ಕನ್ನಡ ದ ಬಗ್ಗೆ ಚರ್ಚಿಸಲು ಸದಾ ತಯಾರಿರುತ್ಥೇನೆ.

ಕನ್ನಡ ಸಾಹಿತ್ಯ ಒದುತ್ತೇನೆ(ಕಾದ೦ಬರಿಗಳಿಗೆ ಸೀಮಿತ), ಕನ್ನಡ ಚಲನ ಚಿತ್ರಗಳು ರುಚಿಸುವುದಿಲ್ಲ.
ಕುವೆ೦ಪು, ಎಸ್. ಎಲ್. ಬ್ವೆರಪ್ಪ, ಅನ೦ತಮೂರ್ತಿ, ಮಾಸ್ತಿ - ಇವರುಗಳ ಕೆಲವು ಕಾದ೦ಬರಿಗಳನ್ನು ಒದಿದ್ದೇನೆ.
ಕುವೆ೦ಪು, ಮತ್ತು ದು೦ಡಿರಾಜ್ - ಇವರ ಕವಿತೆಗಲನ್ನು ಒದಿದ್ದೇನೆ.
ಕನ್ನಡದ ವಾರ ಪತ್ರಿಕೆಗಳಾದ ಸುಧಾ ಮತ್ಥು ಓ ಮನಸೇ ಬಹಳ ಇಷ್ಟ.

ಧನ್ಯವಾದಗಳು
ವ೦ದನೆಗಳೊ೦ದಿಗೆ,
ಹರ್ಷ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator