ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕಿರುಮನೆ, ನಡುಮನೆ....

July 30, 2007 - 9:13am — ವೈಭವ

ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು  ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ ಊರೇ ಕಡೆ ನಿಲುಗಡೆ( ಅದೇ ನಮ್ಮ ಕೆಂಪು ಬಸ್ಸು Smiling ). ಅದು ಒಂದು ಪುಟ್ಟ ಊರು. ಹೆಸರು ತರದಲೆ (ತರದೆಲೆ). ಮೊದಲ ಬಾರಿ ಆ ಊರಿಗೆ ಹೋಗುತ್ತಿದುದರಿಂದ ಬಸ್ಸಿಳಿದು ನಮ್ಮ ನೆಂಟರ ಮನೆಗೆ ದಾರಿ  ಕೇಳಿ ಕೊನೆಗೆ ಮನೆ ತಲುಪಿದೆ. ಹಳ್ಳಿಗಳಲ್ಲಿ ವಾಡಿಕೆಯಂತೆ ಕಾಲಿಗೆ ನೀರು, ಕೈಯಿಗೆ ನೀರು ಕೊಟ್ಟರು. ಮಾತುಕತೆಯಾಯ್ತು. ಅಲ್ಲಿರುವ ನಮ್ಮ ಅಜ್ಜಿ "ನಡ್ಮನೆ(ನಡುಮನೆ)ಗೆ ನಡಿಯಪ್ಪ. ಊಟ ಮಾಡಕ್ಕೆ" ಅಂದರು. ಏನಿದು ನಡುಮನೆ? ಒಮ್ಮೆ ಉಂಕಿಸಿದೆ. .....ಹೊಳೆಯಿತು ಅವರು ಹೇಳಿದುದು ಅದು ಡೈನಿಂಗ್ ರೂಮ್/ಹಾಲ್ ಅಂತ.  Smiling . ಸರಿ ಊಟ ಆಯ್ತು. ವಸಿ ಹೊತ್ತು ಹೊಲದ ಕಡೆ ಅಡ್ಡಾಡಿ ಬಂದೆ. ಮತ್ತೆ ನಮ್ಮಜ್ಜಿ 'ನಡೀ ಕಿರ್ಮನೆಗೆ(ಕಿರುಮನೆ), ವಸಿ ಹೊತ್ತು ಮಲಕ್ಕೊ" ಅಂದರು. ಒಹೊ ಇವರು ಬೆಡ್ರೂಮ್ ಗೆ ಕಿರುಮನೆ ಅಂತಾರೆ ಅಂತ ತಿಳಿಯಿತು. ಆ ಊರಿನಲ್ಲಿ ಎಲ್ಲರೂ ನಡುಮನೆ, ಕಿರುಮನೆ ಅಂತಾರೆ ಅಂತ ಆಮೇಲೆ ತಿಳಿಯಿತು. 
ಸಂಪದದಲ್ಲಿ 'ಕನ್ನಡದ ಕಾನ್ಸೆಪ್ಚುಯಲೈಸೇಸನ್' ಬಗೆಗಿನ ಮಾತುಗಳು ನನಗೆ ಮೇಲಿನ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿತು. ಹಾಗು ಹಳ್ಳಿಗರ ನಡುಮನೆ, ಕಿರುಮನೆ ಕಾನ್ಸೆಪ್ಟ್ ಗಳಿಗೆ ನಾನು ತಲೆದೂಗಿದೆ.

  • ಕಿರು ನಡು ತರದಲೆ ನಂಜನಗೂಡು ಮೈಸೂರು
~.~
  • ವೈಭವ ರವರ ಬ್ಲಾಗ್
  • Login or register to post comments
  • 431 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 30, 2007 - 10:30am — mahesha

ಉ: ಕಿರುಮನೆ, ನಡುಮನೆ....

mahesha's picture

ಚನ್ನಾಗಿದೆ....

ನಾವು ಹಾಲ್ಗೆ ತೊಟ್ಟಿ ಅನ್ನೋದು Smiling. 'ತೊಟ್ಟಿ'ಗೆ ನೀರ್ತೊಟ್ಟಿ ಅನ್ನೋದು. 'ರೂಮ್" ಕೋಣೆ. 'ಕಾಂಪೌಂಡ್' ಗೋಡೆಬೇಲಿ. 'ನಡುಮನೆ' ಇದರ ಬಳಕೆ ಕೇಳಿದ್ದೀನಿ, ಆದರೆ ಕಿರುಮನೆ ಕೇಳಿರನಿಲ್ಲ.

ನನ್ನಿ!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2007 - 10:54am — ವೈಭವ

ಉ: ಕಿರುಮನೆ, ನಡುಮನೆ....

ವೈಭವ's picture

ಹಳ್ಳಿಗಳ ಕಡೆ ಈ ತೊಟ್ಟಿ ಮನೆ ಎಲ್ಲಿ ಹೋದರೊ ಸಿಗುತ್ತೆ. ಅದರಲ್ಲೊ ಹದಿನಾರು ಕಂಬದ ಮನೆ ನೋಡಕೆ ಬಲು ಚೆಂದ. ಈ ತೊಟ್ಟೀಲೇ ನಾನು ಚಿಕ್ಕವನಿದ್ದಾಗ 'ಗಟ್ಟೆಮನೆ', ಅಳಿಗುಳಿ ಮನೆ ಆಟಗಳನ್ನ ಆಡುತ್ತಿದ್ದೆ. ಹಾಗೆ ಬೆಳದಿಂಗಳು ತೊಟ್ಟಿಯಿಂದ ನೋಡಕೆ ಸೊಗಸಾಗಿರುತ್ತೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2007 - 2:47pm — ಕರಿ ತವಳೆ

ಉ: ಕಿರುಮನೆ, ನಡುಮನೆ....

ಕರಿ ತವಳೆ's picture

ನಮ್ ಕಡೆ 'ಹಾಲ್'(ಅಥವಾ drawing room) ಅನ್ನು ನಡು ಮನೆ ಅಂತ ಹೇಳ್ತೀವಿ.
ಬೇರೆ ಇನ್ನೆಲ್ಲೋ 'dining-room'ಅನ್ನೂ ನಡು ಮನೆ ಅಂತಾರೆ ಅಂತ ಇವತ್ತೇ ಗೊತ್ತಾಗಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2007 - 3:12pm — mahesha

ಉ: ಕಿರುಮನೆ, ನಡುಮನೆ....

mahesha's picture

dining room = ಊಟದ ಮನೆ! Smiling
ಅಲ್ಲಿ ತಿಂಡೀನೂ ತಿನ್‌ಬೋದು! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2007 - 10:45pm — kishorpatwardhan

ಉ: ಕಿರುಮನೆ, ನಡುಮನೆ....

kishorpatwardhan's picture

’ ಒಳಮನೆಯಲಿ ನೀರಾಯಿತು ..”
ರಾಯರು ಬಂದರು ಮಾವನ ಮನೆಗೆ .. ಹಾಡಿನಲ್ಲಿ ಬರುವ ಈ ’ ಒಳಮನೆ ’ ಅಂದರೇನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2007 - 11:46pm — mahesha

ಉ: ಕಿರುಮನೆ, ನಡುಮನೆ....

mahesha's picture

ಒಳ ಅನ್ನೋದಕ್ಕೆ ಹಲವು ತಿಳಿವುಗಳಿವೆ

ಒಳ = private, inner,
Ka. uḷ the inside; oḷ id.; in, into; oḷa, oḷavu the inside; oḷagu that is inside, the inside; heart; in, into; oḷage in the inside, in, into. Koḍ. oḷï the inside; uḷḷï inner thought, that which is in the mind.
Ka. uḷi to conceal oneself, hide; n. hiding, ambush, lurking-place, hunter's hut; a thief; uḷiga man who hides or lurks; uḷita hiding or sheltering oneself; oḷavu, oḷagu a secret.

ಒಳಮನೆ = inner room, private room, inner house.

ಅಂದ್ರೆ ಒಳಮನೆಯಲ್ಲಿ ನೀರಾಯ್ತು Smiling

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 2, 2007 - 12:36pm — ವೈಭವ

ಉ: ಕಿರುಮನೆ, ನಡುಮನೆ....

ವೈಭವ's picture

ಒಳಮನೆ ಬಳಕೆಯಲ್ಲಿಲ್ಲ...ಅದರೆ ನೀರಮನೆ ಬಳಕೆಯಲ್ಲಿದೆ.( ನಂಜನಗೂಡು ದಾಟಿ ಗುಂಡ್ಲುಪೇಟೆ ಕಡೆಯಿರುವ ಹಳ್ಳಿಗಳಲ್ಲಿ ).

ನೀರಮನೆ = ಬಚ್ಚಲುಮನೆ ಅಚ್ಚಸಕ್ಕದದಲ್ಲಿ 'ಸ್ನಾನಗೃಹ' Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 2, 2007 - 12:56pm — mahesha

ಉ: ಕಿರುಮನೆ, ನಡುಮನೆ....

mahesha's picture

ವೈಬವ

ಒಳಮನೆ ಬಳಕೆಯಲ್ಲಿದೆ...!!

ವಾರಂಡದಲ್ಲಿ ಕುಂತು, "ನಮ್ಮಾಕೆ ಒಳಮನೆಯಾಗವ್ಳೆ" ಅನ್ನೋದು ಕೇಳಿದಂಗಿದೆ.

ಮನೆ ಒಳಗೆ = ಒಳಮನೆ! ಇದು ಸರಿ.

ಇಲು/ಮನೆಯ ಹಿಂದು = ಹಿಂದಿಲು/ಹಿತ್ತಿಲು
ಇಲು/ಮನೆಯ ಮುಂದು = ಮುಂದಿಲು
ಕೈಯ ಮುಂದೆ = ಮುಂಗೈ ( ಮುಂದಿನ ಕೈ ಅಲ್ಲ Smiling )
ಅಡಿಯ ಹಿಂದೆ = ಹಿಮ್ಮಡಿ ( ಹಿಂದಿನ ಅಡಿ ಅಲ್ಲ )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 2, 2007 - 1:00pm — Sunil Jayaprakash

ಉ: ಕಿರುಮನೆ, ನಡುಮನೆ....

Sunil Jayaprakash's picture

ನಮ್ಮ ಮನೆಯಲ್ಲಿ ಮೊನ್ನೆ ಮೊನ್ನೆವರೆಗೂ ನಡುಮನೆ ಅಂತಾ ಬಳಕೆ ಮಾಡ್ತಾ ಇದ್ರು. ಈಗ ಎಲ್ಲಾ ಹಾಲ್ ಅಂತಾರೆ. ಡೈನಿಂಗ್ ರೂಮಿಗೆ ಕೆಲವೆಡೆ ನಡುಮನೆ ಅಂತಾರೆ ಅಂದಾಗ ನನಗೂ ತುಸು ಸೋಜಿಗವಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೀಗು ಉಂಟೆ ನಮ್ಮಜ್ಜಿ...!!
  • ಬೈಟೊ ಕಾಫಿ !!! - ೧
  • ಬೇಸ್ತು ಬಿದ್ದ ಪ್ರಸಂಗ
  • ಮನಸೆಳೆದ ಸುಚರಿತ್ರಾ
  • ಮುಯ್ಯಿಗೆ ಮುಯ್ಯಿ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator