ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಚುಟುಕಗಳು
ಬದುಕಿರಲು ಹಿತವಾಗಬೇಕು
ಮೂರು ಜನಕೆ
ಮಡಿದರೆ ನೆನೆವರು
ನೂರು ಜನರು ನಿನ್ನ ಕಾಣಾ ಭರತೇಶ
---
ಹುಟ್ಟು .......ಸಾವು
ನಡುವೆ ಬಾಳಿನ ನೋವು
ಆಗಾಗ ನಲಿವು
ಇದುವೆ ನಮ್ಮ ಬದುಕು
----
ಬಾಳಿದು ಓಟ
ಆಡುವೆ ಆಟ
ಇರುವತನಕ ಘಟ
ಕೊನೆಗಾಗುವೆ ಮಟ(ಟ್ಟ)
---
ಮನಸೆಲ್ಲ ನೀನು ತುಂಬಿ
ನಾನಾಗಿರುವೆನು ದುಂಬಿ
ಮಾತಾಡದೆ ನಾನಾದೆನು ತಬ್ಬಿಬ್ಬಿ
ನಿನ್ನ ಒಲವನು ನಂಬಿ
---
ವಿರಹ ವಿರಹ ವಿರಹ
ತಿಳಿದಿದ್ದೆ ಓದಿ ಕಬ್ಬ-ಬರಹ
ಈಗ ಅದೆ ನನ್ನ ಹಣೆಬರಹ

- ವೈಭವ ರವರ ಬ್ಲಾಗ್
- Login or register to post comments
- 404 hits
- Email this blog





RSS: