ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಕನ್ನಡ ಪದಗೊಳ್
ನನಗೆ ಇಶ್ಟವಾದ ಹಾಡು
ಕನ್ನಡ ಪದಗೊಳ್
ಬರೆದವರು: ಜಿ.ಪಿ. ರಾಜರತ್ನಂ
ಯೆಂಡ ಯೆಡ್ತಿ ಕನ್ನಡ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!
ಬಗವಂತ್ ಏನ್ರ ಬೂಮಿಗ್ ಇಳದು
ನನ್ತಾಕ್ ಬಂದಾಂತ್ ಆನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು !
'ಯೆಂಡ ಕುಡಿಯಾದ್ ಬುಟ್ ಬುಡು ರತ್ನ!'
ಅಂತ್ ಔನ್ ಏನಾರ್ ಅಂದ್ರೆ
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!
'ಯೆಂಡ ಬುಟ್ಟೆ, ಯೆಡ್ತೀನ್ ಬುಟ್ ಬುಡ್!'
ಅಂತ ಔನ್ ಏನಾರ್ ಅಂದ್ರೆ
ಕಳದೋಯ್ತು ಅಂತ ಕುಣದಾಡ್ತೀನಿ
ದೊಡ್ದ್ ಒಂದು ಕಾಟ ! ತೊಂದ್ರೆ!
'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲಿಸ್ ಬುಡ್ ಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಅದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ
ಆಗ್ನೆ ಮಾಡೋ ಐಗೊಳ್ ಎಲ್ಲ
ದೇವ್ರೆ ಅಗ್ಲಿ - ಎಲ್ಲ !
ಕನ್ನಡ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!
ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!
ಯೆಂಡ ವೋಗ್ಲಿ! ಯೆಡ್ತಿ ವೋಗ್ಲಿ!
ಎಲ್ಲ ಕೊಚ್ಕೊಂಡ್ ವೋಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ ಪದಗೊಳ್ ನುಗ್ಲಿ

- ವೈಭವ ರವರ ಬ್ಲಾಗ್
- Login or register to post comments
- 344 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಕನ್ನಡ ಪದಗೊಳ್
ಈ ಹಾಡನ್ನು ಯಾವ ರಾಗದಲ್ಲಿ ಮಾಡಲಾಗಿದೆ ?