ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಮಗ-ಚಿನ್ನ,ಮಗಳು-ಕಂಚು

September 30, 2007 - 11:52pm — ಗಣೇಶ

ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆಗೆ ಬಂದು ಮುಟ್ಟುವುದು ಆ ಹುಡುಗನ ವಿಷಯಕ್ಕೇ. "ದ್ರಾವಿಡ್ ರಾಜಿನಾಮೆ ಬೆಳಗ್ಗೆ ನ್ಯೂಸ್ ನಲ್ಲಿ ನೋಡಿದೆ.ನಮ್ಮ ಅಪ್ಪುಗೆ ಗಂಗೂಲಿ ಅಂದರೆ ಬಹಳ ಇಷ್ಟ.ಈಗ ದ್ರೋಣಿ(ಧೋನಿ)ನೂ ಲೈಕ್ ಮಾಡುತ್ತಾನೆ." "ಸ್ಕೂಲ್ನಿಂದ ಬಂದ ಕೂಡಲೇ ಹೋಮ್ ವರ್ಕ್ ಮಾಡಿ ಮುಗಿಸುವನು.ನಂತರ ಪೋಗೋ ಹಾಕಿ ಕುಳಿತುಕೊಳ್ಳುವನು.ಪೊಗೊದಲ್ಲಿ ಏನೆಲ್ಲಾ ಬರುತ್ತದೆ ಅವನಿಗೆ ಬೈಹಾರ್ಟ್ ಇದೆ.""ಕಂಪ್ಯೂಟರ್ ನಲ್ಲೂ ಇವರಿಗೇನಾದರೂ ಗೊತ್ತಾಗದಿದ್ದರೆ ಅವನನ್ನೇ ಕೇಳುವರು"ಎಂದು ಅವರ ಶ್ರೀಮತಿಯವರೂ ಒಗ್ಗರಣೆ ಹಾಕಿದರು.
ಈ ಸಮಯದಲ್ಲಿ ನಮ್ಮ ಮನೆಯಲ್ಲಿರುವ ಸ್ಠಿರಚರ ವಸ್ತುಗಳನ್ನೆಲ್ಲಾ ಒಂದು ರೌಂಡು ಅಲುಗಾಡಿಸಿ ಬಂದ ಮಗರಾಯ.ಆಗ ಅವರ ಮೊಬೈಲ್ ರಿಂಗಾಯಿತು.ಅವರ ಕೈಯಿಂದ ಮೊಬೈಲ್ ಕಸಿದು ಇವನೇ ಆನ್ ಮಾಡಿ ಮಾತನಾಡಲು ಸುರುಮಾಡಿದ.ಅವರು ಸ್ವಲ್ಪವೂ ಬೇಸರಿಸದೇ ಹೆಮ್ಮೆಯಿಂದ ನಮ್ಮ ಕಡೆ ನೋಡುತಿದ್ದರು.ನಂತರ ಸ್ವಲ್ಪ ಹೊತ್ತಿಗೆ ನನ್ನ ಮೊಬೈಲ್ ಅವನ ಕಣ್ಣಿಗೆ ಸಿಗಬೇಕೆ.ಅದ್ನಾನ್ ಸಾಮಿ ಕೀಬೋರ್ಡ್ ಬಾರಿಸುವುದಕ್ಕಿಂತ fast ಆಗಿ ಗೇಮ್ಸ್ ಆಡಲು ಸುರುಮಾಡಿದ.೧೩,೦೦೦ದ ಮೊಬೈಲ್,ಆಡಲು ನನ್ನ ಮಕ್ಕಳ ಕೈಗೂ ಕೊಟ್ಟಿಲ್ಲ,ಹೊಟ್ಟೆಯೊಳಗೆ ಸಂಕಟವಾದರೂ ಮೇಲಿನಿಂದ ನಗುತ್ತಲಿದ್ದೆ.
ಇನ್ನು ಈ ಮಗರಾಯ ಊಟಮಾಡಿದ ಚಂದ(ನರಕ) ದೇವರೇ...ಪ್ರತೀ ಐಟಮ್ ತಂದಾಗ "ಇದಾ ಬೇಏಏಡಾ" ಮುಖವನ್ನು ಸಗಣಿ ನೋಡಿದಾಗ ಮಾಡುವಂತೆ ಮಾಡುತಿದ್ದ."ಅವನಿಗೆ ಅದು ಇಷ್ಟವಿಲ್ಲಾ,..ಇದು ಇಷ್ಟವಿಲ್ಲ.."ತಾಯಿಯ ವಿವರಣೆ ಊಟಮುಗಿಯುವವರೆಗೆ ಮುಂದುವರಿದಿತ್ತು.ಸಂಜೆ pizza,ಐಸ್ಕ್ರೀಂ ಕೊಡಿಸುತ್ತೇನೆ ಎಂಬ ಅಪ್ಪನ ಆಮಿಷಕ್ಕೆ, ಅನ್ನಕ್ಕೆ ನೀರು(!!)ಹಾಕಿ ಕೆಟ್ಟದಾಗಿ ಸ್ವಲ್ಪ ತಿಂದು ಎದ್ದನು.ಅವರ ಮಗಳು ಬೇಕಾದುದನ್ನು ಬಡಿಸಿಕೊಂಡು ಚಂದ ಊಟ ಮಾಡಿ ಎದ್ದಳು.ಮೊದಲಿಗೆ ಮಾತನಾಡುತ್ತಿರುವಾಗಲೂ ಸೋಫಾದಲ್ಲಿ ಸುಮ್ಮನೆ ಕುಳಿತಿದ್ದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು.
ಈ ೧-೨ಗಂಟೆ ಸಮಯದಲ್ಲಿ ಅವಳನ್ನು ಒಮ್ಮೆಯೂ ಹೊಗಳಲಿಲ್ಲ. ಬದಲಿಗೆ ತೆಗಳಿಕೆ."ಇವಳಿದ್ದಾಳೆ ಬುದ್ದೂಸ್,ಅವನಷ್ಟು ಚುರುಕಿಲ್ಲಾ.ಅವನು ಎಲ್ಲಿ ಹೋದರೂ ಜಗಳಾಡಿ ಗೆದ್ದು ಬರುತ್ತಾನೆ. ಇವಳು ಅಳುತ್ತಾ ಬಂದು ಅಮ್ಮನಲ್ಲಿ ಕಂಪ್ಲೇಂಟ್ ಮಾಡುತ್ತಾಳೆ.ಅವನು ನೋಡಲಿಕ್ಕೆ ಹೀಗಿದ್ದಾನಲ್ಲಾ...ಸ್ಟೀಲ್ ಬಾಡಿ. ಅವನ ಪೆಟ್ಟು ಇವಳಿಗೆ ತಡೆಯಲಿಕ್ಕಾಗುವುದಿಲ್ಲಾ.."ಈ ಮಾತು ಕೇಳಿದ ಕೂಡಲೇ ಅವನು 'ಪೊಗೋ' ನೋಡುತ್ತಿದ್ದವನು ಎದ್ದು ರಿಮೋಟನ್ನು ಟೀಪಾಯಿ ಮೇಲೆ ಬಿಸಾಕಿ (ನಿಜಕ್ಕೂ ಬಿಸಾಕಿ) ಅವಳಿಗೆ ಹೊಡೆಯಲು ಸುರುಮಾಡಿದ.ಅವಳ ಕಣ್ಣು ತುಂಬಿ ಬಂದುದನ್ನು ನೋಡಿ ನನಗೆ ತಡೆಯಲಾಗಲಿಲ್ಲ.ಎದ್ದು ಹೋಗಿ ಅವಳ ಬಳಿ ಕುಳಿತು "ಏನೂ ಹೆದರಬೇಡ,ನಾನಿದ್ದೇನೆ.ಅವನು ಇಷ್ಟು ಹೊಡೆದ ಅಲ್ಲಾ,ನೀನು ಒಂದೇ ಏಟು ಹೊಡಿ. ಮುಖ,ಮೈಗೆ ಬೇಡ,ಕಾಲಿಗೆ ಮಾತ್ರಾ"ಎಂದೆ.ಒಂದು ಏಟು ಕೊಟ್ಟಳು ನೋಡಿ.ನನ್ನ ಲೆಕ್ಕದಲ್ಲಿ ಅದು 3 ಏಟು.ಊರಗಲ ಬಾಯಿ ಮಾಡಿ ಅಳಲು ಸುರುಮಾಡಿದ.
ಇದನ್ಯಾಕೆ ಇಲ್ಲಿ ಹೇಳಿದೆ ಎಂದರೆ -ಬಹಳಷ್ಟು ಜನ ಇದೇ ಸಂತತಿಗೆ ಸೇರಿದವರು.ಗಂಡು ಮಗುವನ್ನು ಹೊಗಳಲಿ,ತಮ್ಮದೇ ಹೆಣ್ಣು ಮಗುವನ್ನು ನಾಲ್ಕು ಜನರೆದುರು ಯಾಕೆ ಹೀಗಳೆಯುತ್ತಾರೆ?ನಾವು ಪರಿಚಿತರೇ ಇರಬಹುದು.ಆ ಹೆಣ್ಣು ಮಗುವಿಗೂ ಒಂದು ಮನಸ್ಸಿದೆ.ಅದೂ ತಂದೆತಾಯಿಯ ಹೊಗಳಿಕೆ ಬಯಸುತ್ತದೆ ಎಂಬ ಯೋಚನೆಯೇ ಇವರಿಗೆ ಬರುವುದಿಲ್ಲವಲ್ಲಾ?ಈ ರೀತಿ ಬೆಳೆಸಿದ ಗಂಡು ಮಕ್ಕಳೇ ಹೆಣ್ಣುಗಳನ್ನು ಕೀಳಾಗಿ ಕಾಣುವುದು.ನನಗೆ ಅರ್ಥವಾಗದೇ ಇರುವುದು ಹೀಗೆ ಕೀಳರಿಮೆಯಲ್ಲಿ ಬೆಳೆದ ಹೆಂಗಸರೇ ತಮ್ಮ ಹೆಣ್ಣು ಮಗಳನ್ನು ಯಾಕೆ ಗಂಡು ಮಗುವಿಗಿಂತ ಕೀಳಾಗಿ ಕಾಣುವರು?

~.~
  • ಗಣೇಶ ರವರ ಬ್ಲಾಗ್
  • Login or register to post comments
  • 451 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 1, 2007 - 2:23am — anivaasi

ಉ: ಮಗ-ಚಿನ್ನ,ಮಗಳು-ಕಂಚು

anivaasi's picture

ಗಣೇಶರೆ,
ಮನಮುಟ್ಟುವಂತೆ ಹೇಳಿದ್ದೀರಿ. ಇದು ನಮ್ಮಲ್ಲಿ ಕಡಿಮೆಯಾಗಿರಬಹುದು ಎಂದು ಆಶಿಸಿದ್ದೆ... ಇಂಡಿಯಾದಲ್ಲಿ ಹೆಣ್ಣು ಸಂತಾನವನ್ನು ಅಬಾರ್ಷನ್ ಮಾಡಿಸುವುದೂ ಸ್ಕಾನಿಂಗ್ ಲಭ್ಯವಿರುವ "ಓದಿದವರ" ಕಡೆಯೇ ಹೆಚ್ಚು ಎಂಬ ಸುದ್ದಿಯೂ ಬಂದಿತ್ತು...
ನೀವು ಆ ಹೆಣ್ಣು ಮಗುವನ್ನು ನಡೆಸಿಕೊಂಡ ರೀತಿ ನನಗೆ ತುಂಬಾ ಹಿಡಿಸಿತು.
ನಿಮ್ಮ ಅನುಭವವನ್ನು ಹಂಚಿಕೊಂಡದ್ದಕ್ಕೆ ತುಂಬಾ ಥ್ಯಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 1, 2007 - 4:54pm — veena

ಉ: ಮಗ-ಚಿನ್ನ,ಮಗಳು-ಕಂಚು

veena's picture

veena.

ಹೌದು, ಗಂಡು ಮಕ್ಕಳು ಮೇಲು, ಹೆಣ್ಣು ಮಕ್ಕಳು ಕೀಳೆಂಬ ಭಾವನೆ ನಮ್ಮ ಸಮಾಜದಲ್ಲಿ ವಿದ್ಯಾವಂತರಲ್ಲೇ ಹೆಚ್ಚಿದೆ. ಬಸಿರು ಇರುವಾಗಲೇ, ಆಶೀರ್ವಾದಿಸುವ ನೆವದಲ್ಲಿ ಗಂಡು ಮಗುವಾಗಲಿ ಎಂದು ಹರಸಿ, ಭಾವಿ ತಾಯಿಯ ಮೇಲೆ ಪರೋಕ್ಷವಾಗಿ ಒತ್ತಡ ಹೇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನಾನು ತಾಯಿಯಾಗಲಿದ್ದಾಗ ನನ್ನ ಸೋದರತ್ತೆಯು "ಸುಖವಾಗಿ ಹೆರಿಗೆಯಾಗಲಿ " ಎಂದು ಆಶೀರ್ವದಿಸಿದುದನ್ನು ನಾನು ಇಂದಿಗೂ ನೆನೆಯುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 3, 2007 - 4:56pm — ಗಣೇಶ

ಉ: ಮಗ-ಚಿನ್ನ,ಮಗಳು-ಕಂಚು

ಗಣೇಶ's picture

ಎಲ್ಲಾ ಹೆಣ್ಣು ಮಕ್ಕಳಿಗೆ ನಿಮ್ಮ ಅತ್ತೆಯಂತಹ ಅತ್ತೆಯಂದಿರೇ ಸಿಗಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 3, 2007 - 4:54pm — ಗಣೇಶ

ಉ: ಮಗ-ಚಿನ್ನ,ಮಗಳು-ಕಂಚು

ಗಣೇಶ's picture

'ಅವರ ಮಕ್ಕಳು,ಅವರು ಇಷ್ಟ ಬಂದಹಾಗೆ ಮಾಡಲಿ' ಎಂದು ಮನೆಯಲ್ಲಿ ತಕರಾರು ಮಾಡಿದರು.ಪರಿಚಿತರೂ ಸಹ ಮೊದಲಿನಂತೆ ಮಾತಿಗೆ ಸಿಗುತ್ತಿಲ್ಲ. ಎಲ್ಲೋ ತಪ್ಪು ಮಾಡಿದೆ ಅನಿಸುತಿತ್ತು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 4, 2007 - 10:01am — roshan_netla

ಉ: ಮಗ-ಚಿನ್ನ,ಮಗಳು-ಕಂಚು

roshan_netla's picture

ನೀವು ಅವರಿಗೆ ಬುದ್ದಿಯಾಕೆ ಹೇಳಲಿಲ್ಲ? ಕಲ್ಪನೆಯ ಉದಾಹರಣೆ ಕೊಟ್ಟು ಅವರಿಗೆ ಆ ಹೆಣ್ಣು ಮಗುವಿನ ಬಗ್ಗೆ ಆಸಕ್ತಿಬರುವಂತೆ ಮಾಡಬೇಕಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಕಂದ
  • ನನ್ನ ಮೊಬೈಲು
  • ಹೊಸ ಮೊಬೈಲ್
  • ಹೀಗು ಉಂಟೆ ನಮ್ಮಜ್ಜಿ...!!
  • ಏನಾಗಿದೆ ಉತ್ತರ ಭಾರತೀಯರಿಗೆ...
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator