~
ವಾರ್ತಾ ಚೇಷ್ಟೆಗಳು
ವಿಷಯವೊಂದನ್ನು ಇನ್ನೊಬ್ಬರೆದುರು ಪ್ರಸ್ತುತಪಡಿಸುವಾಗ ವಿಷಯದ ಗಾಂಭೀರ್ಯವನ್ನು ಕಾಯ್ದುಕೊಳ್ಳುವುದು ಹಾಗು ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಲ್ಲವೇ. ವಾರ್ತೆಗಳನ್ನು ಬಿತ್ತರಿಸುವಾಗ ಪ್ರಕಟ ಮಾಡುವಾಗ ಇದಕ್ಕೆ ಹೆಚ್ಚು ಒತ್ತು ಕೊಡಬೇಕು.
ವೆಬ್ ದುನಿಯಾವನ್ನು ನಂಬಿಕೊಂಡ ಎಮ್ಮೆಸ್ಸೆನ್ನಿನವರ ಪ್ರಕಾರ ಧರ್ಮಸಿಂಹರು ಯಾವ ರಾಜ್ಯದ ಪಾಲಕರಾಗುತ್ತಾರೋ ಗೊತ್ತಿಲ್ಲ, ಆದರೆ ಆಂಧ್ರಪ್ರದೇಶದ "ಮುಖ್ಯಮಂತ್ರಿಗಳಾಗಲಿದ್ದಾರೆ".
ತಪ್ಪು ಮಾಡುವುದು ಸಹಜ. ಆದರೆ ಇವರು ಕೊಡುವ ಮಾಹಿತಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಹುದುದು ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ವಾರ್ತಾವರದಿಯನ್ನು ಮಾಡುವುದು ಉತ್ತಮ. ಅಷ್ಟಕ್ಕೂ ಎಲ್ಲಿಯ ಆಂಧ್ರ? ಎಲ್ಲಿಯ ಕನ್ನಡಿಗರು...? ನಮ್ಮ ನೆರಳನ್ನೇ ಕಂಡರಾಗದವರು ನಮ್ಮವರನ್ನು ತಮ್ಮ ಮಂತ್ರಿಗಳನ್ನಾಗಿಸಿಕೊಂಡಾರೆಯೇ? ಅದೂ ತಮಗೆ ನೀರನ್ನು ಬಿಡದ (?) ಕರ್ನಾಟಕದ ಮಾಜೀ ಮುಖ್ಯಮಂತ್ರಿಯನ್ನು....
ನೀವಾದರೂ ಸ್ವಲ್ಪ ಹೇಳಿ

- ರಘುನಂದನ ರವರ ಬ್ಲಾಗ್
- Login or register to post comments
- 546 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ವಾರ್ತಾ ಚೇಷ್ಟೆಗಳು
ಇಲ್ಲಿ ತೆಲುಗು vs ಕನ್ನಡದ ಮನಸ್ತಾಪ ಬೇಡ ಅನ್ಸತ್ತೆ.
ಆದರೆ ಎಮ್ ಎಸ್ ಎನ್ ಮಾಡಿಕೊಂಡಿರುವ ತರಲೆಯಂತೂ ತಮಾಷೆಯಾಗಿದೆ.
ಕೆಲವು ದಿನಗಳ ಹಿಂದೆ ಯಾಹೂ ಕನ್ನಡ ವೆಬ್ಸೈಟು ಕೂಡ ಓಪನ್ ಆಗಿತ್ತು. ಒಂದೆರಡು ದಿನಗಳಲ್ಲಿ ಮಾಯವೂ ಆಯ್ತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ವಾರ್ತಾ ಚೇಷ್ಟೆಗಳು
ಹೌದು.
ಎನಗಿಂತ ಕಿರಿಯರಿಲ್ಲ