ಬಾಯಪಾಸ ಹತ್ತಿರ
ನಮಗೆ ಹಿತ್ತಲ ಗಿಡ ಮದ್ದು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಹಿತ್ತಲಿನಲ್ಲಿ ಬೆಳೆಯುವ ಗಿಡ ಬೇರೆ ದೇಶಕ್ಕೆ ಹೋಗಿ ಮದ್ದು ಮಾಡಿಸಿಕೊಂಡು, ರೂಪಾಂತರವಾಗಿ ಮತ್ತೆ ನಮ್ಮದೇ ದೇಶಕ್ಕೆ "ಇಂಪೋರ್ಟೆಡ್" ಆಗಿ ಬರುವಬಗೆ ಇಲ್ಲಿದೆ ನೋಡಿ. ಸಂತಸದ ವಿಷಯವೆಂದರೆ ಈ ಗಿಡದಿಂದಲಾದರೂ ಲಂಡನ್ನಿನ ಕಂಪನಿಯೊಂದರ ಸೈಟಿನಲ್ಲಿ ಕನ್ನಡವನ್ನು ನೋಡುವಂತೆ ಆಯಿತಲ್ಲ ಎನ್ನುವುದು!
ಇಲ್ಲಿ ಹತ್ತಿಯನ್ನು ಸಾಗಣೆಮಾಡುತ್ತಿರುವ ಟ್ರಾಕ್ಟರಿನ ಹಾಗು ಸಾಗಣೆ ಮಾಡುತ್ತಿರುವ ಮಾಲಿಕ ಪ್ರಾಯಶಃ ಹುಬ್ಬಳ್ಳಿಯ ಸುತ್ತಮುತ್ತಲಿನ ಯಾವುದೋ ಊರಿನ ಬೈಪಾಸ್ (ರಾಷ್ಟ್ರೀಯ ಹೆದ್ದಾರಿ ಬಳಿ) ಪ್ರದೇಶದವನಿರಬೇಕು.

- ರಘುನಂದನ ರವರ ಬ್ಲಾಗ್
- Login or register to post comments
- 381 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಬಾಯಪಾಸ ಹತ್ತಿರ
ನಾವು ಬೇಡ ಎಂದು ಬಿಸಾಡುತ್ತಿದ್ದೇವೆ - ಅದನ್ನು ಪಾಶ್ಚಿಮಾತ್ಯರು ತೆಗೆದುಕೊಂಡು ಒಳ್ಳೆಯ ಮಾರ್ಕೆಟಿಂಗ್ ಸ್ಟ್ರಾಟೆಜಿ ಇಟ್ಟುಕೊಂಡು ಮೌಲ್ಯ ವರ್ಧಿಸಿ, ಹೊಸ ರೂಪ ನೀಡಿ ನಮಗೇ ಮಾರುತ್ತಾರೆ.
ಬ್ರಾಹ್ಮಿ ಹಾಕಿದ ತಲೆಗೆ ಹಚ್ಚಿಕೊಳ್ಳುವ ಎಣ್ಣೆ, ಪುದೀನ ಇರುವ ಮೌತ್ ಫ್ರೆಶನರ್, ನಮ್ಮ ಅಜ್ಜಿ ತಾತಂದರು ಹೇಳಿಕೊಟ್ಟ ಯೋಗದ ವಿಧಾನ, ಲವಂಗ ಹಾಕಿದ ಟೂತ್ ಪೇಸ್ಟು, ಬೇವು ಹಾಕಿದ ಸೋಪು, ಔಷಧ ಗಿಡಗಳನ್ನು ಹಾಕಿದ ಕ್ರೀಮು - ಇವೆಲ್ಲ ನಾವು ಭಾರತದವರು "ಅಜ್ಜಿ ಕಾಲದ್ದು" ಅಂತ ಬಿಟ್ಟು ಬರುತ್ತಾ ಹೋದೆವು - ಈಗ ನೋಡಿ, ಅವರು ಅದನ್ನೇ ಇಟ್ಟುಕೊಂಡು ಕೋಟ್ಯಂತರ ಹಣ ಮಾಡುತ್ತಿದ್ದಾರೆ
(btw, ನೀವು ಮೇಲೆ ಪ್ರಸ್ತಾಪಿಸಿದ ಸೈಟು ನೋಡಲಾಗಲಿಲ್ಲ - ಹೊಸ ಫ್ಲಾಶ್ ಬೇಕು ಅನ್ನತ್ತೆ!)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಬಾಯಪಾಸ ಹತ್ತಿರ
ನನ್ ಹತ್ರ ಫ್ಲ್ಯಾಶ್ ಪ್ಲಗಿನ್ ೯.೦ ಇದೆ. ನೀವೂ ಟ್ರೈ ಮಾಡಿ ನೋಡಿ. ಸ್ಕ್ರೀನ್ ಶಾಟ್ ಇಲ್ಲಿದೆ.
ಎನಗಿಂತ ಕಿರಿಯರಿಲ್ಲ