ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › ಕೊಳ್ಳೇಗಾಲ ರವರ ಬ್ಲಾಗ್

ಪತ್ರಿಕೆಗಳಿಗೆ ದುರ್ದೆಸೆ ಬಂದಿದೆಯೇ?

March 31, 2007 - 1:37pm — ಕೊಳ್ಳೇಗಾಲ

ಮೊನ್ನೆ ಮಣಿಪಾಲದಲ್ಲಿ ನಡೆದ ಮುದ್ರಕರ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಎಂ . ವಿ. ಕಾಮತ್‌, ನಾಳಿನ ದಿನಗಳಲ್ಲಿ ಪತ್ರಿಕೆಗಳ ಭವಿಷ್ಯದ ಬಗ್ಗೆ ಮಾತನಾಡುತ್ತ "ಇನ್ನು ಮುಂದೆ ನಾವು ಎಲ್ಲವನ್ನೂ ಕೇಳುತ್ತೇವಷ್ಟೆ, ನೋಡಲಾಗುವುದಿಲ್ಲ," ಎಂದು ಕಳಕಳಿಯನ್ನು ವ್ಯಕ್ತ ಪಡಿಸಿದ್ದಾರೆ (ಡೆಕ್ಕನ್‌ ಹೆರಾಲ್ಡ್‌, ೩೧.೩.೨೦೦೭).

ಪತ್ರಿಕೆಗಳೇ ಇಲ್ಲದಿದ್ದ ಪ್ರಪಂಚ ಹೇಗಿದ್ದೀತು? ಬಹುಶಃ, ಬೆಳಗಿನ ಕಾಫಿ ತುಸು ರುಚಿ ಕೆಡಬಹುದು. ನಿತ್ಯ ಸಂಡಾಸಿಗೆ ಪತ್ರಿಕೆ ಹೊತ್ತೊಯ್ಯುವವರಿಗೆ ಕಾಂಸ್ಟಿಪೇಶನ್‌ ಹೆಚ್ಚಾಗಬಹುದು! ಸವಿ ನಿದ್ರೆಯ ಹೊತ್ತಿನಲ್ಲಿ ಧಡ್ಡನೆ ಕಿಟಕಿಯ ಮೇಲೆ ಪತ್ರಿಕೆ ಬಿಸಾಡುವ ಹುಡುಗನಿಗೆ ಬಯ್ಗುಳ ಕಡಿಮೆ ಆದೀತು. ಸಂಪಾದನೆಯೂ ಇಲ್ಲವಾದೀತು. 'ಕೈಯಲ್ಲಿ ಪೇಪರು ಇದ್ದರೆ ಸಾಕು, ಪ್ರಪಂಚವೇ ಮರೆತು ಹೋಗುತ್ತದೆ. ಮನೆಯಲ್ಲಿ ಹಾಲಿಲ್ಲ. ಡೈರಿಗೆ ಹೋಗಿ ಬನ್ನಿ' ಎನ್ನುವ ಸುಪ್ರಭಾತ ಸೊರಗಿ ಹೋದೀತು.  ಅಂತಹ ದಿನಗಳು ಬಂದಾವೇ?

ಮೊನ್ನೆ ಯಾವುದೋ ಮಾತಿಗೆ ಇದೇ ವಿಷಯವನ್ನು ಖ್ಯಾತ ವಿಜ್ಞಾನ ಬರೆಹಗಾರ ಅಡ್ಯನಡ್ಕ ಕೃಷ್ಣಭಟ್ಟರೂ ಚರ್ಚಿಸಿದ್ದರು. ಮಾಧ್ಯಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಓದುಗರ, ಅದರಲ್ಲೂ ವಿಶೇಷವಾಗಿ ಕನ್ನಡ ಓದುಗರ, ಸಂಖ್ಯೆ ಕಡಿಮೆ ಆಗಲಿದೆಯೇ? ಕನ್ನಡ ಪತ್ರಿಕೆಗಳ ಸಂಖ್ಯೆ ಕಡಿಮೆ ಆಗಲಿದೆಯೇ?

ಸುಮಾರು ೨೫ ವರುಷಗಳ ಹಿಂದೆ ಪ್ರಸಾರಭಾರತಿ (ಅಂದಿನ ದೂರದರ್ಶನ) ಟೀವಿ ಪ್ರಸಾರವನ್ನು ಆರಂಭಿಸಿದಾಗಲೂ ಇದೇ ಕಳವಳ ಇತ್ತು. ಅಮೆರಿಕೆಯಲ್ಲಿ ಜಾನ್‌ ಬೇರ್ಡ್‌ ಮೊದಲ ಬಾರಿಗೆ ಚಿತ್ರವನ್ನು ಪ್ರಸಾರ ಮಾಡಿದಾಗ, ಅಲ್ಲಿಯೂ ಇದೇ ಪ್ರಶ್ನೆ ಎದ್ದಿತ್ತು. ಅಂದಿನಿಂದ ಇಂದಿಗೆ ಸುಮಾರು ೮೦ ವರುಷಗಳು ಕಳೆದಿವೆ. ಪತ್ರಿಕೆಗಳು ಇನ್ನೂ ಅಸ್ತಿತ್ವದಲ್ಲಿವೆ. ಆದರೆ ಪತ್ರಿಕೆಗಳ ಪ್ರಸಾರ ಕಡಿಮೆಯಾಗುತ್ತಿರುವುದಂತೂ ನಿಜ. ವೀಕಿಪೀಡಿಯಾದಲ್ಲಿನ ಲೇಖನದ ಪ್ರಕಾರ ಅಮೆರಿಕೆಯಲ್ಲಿ ೧೯೨೦ರ ಸುಮಾರಿನಲ್ಲಿ ಪ್ರತಿ ಮನೆಯೂ ಸರಾಸರಿ ೧.೩ ಪತ್ರಿಕೆಗಳನ್ನು ತರಿಸುತ್ತಿತ್ತು. ಇಂದು (೨೦೦೦ನೇ ಇಸವಿಯಲ್ಲಿ) ಅದು ೦.೫ಕ್ಕೆ ಕುಸಿದಿದೆ. ಅಂದರೆ ಎರಡು ಮನೆಗಳಲ್ಲಿ ಒಂದು ಮನೆಯವರು ಮಾತ್ರ ಪತ್ರಿಕೆಯನ್ನು ಕೊಳ್ಳುತ್ತಿದ್ದಾರೆ. ಇದಕ್ಕೆ ಟೀವಿ, ಇಂಟರ್‌ನೆಟ್‌ಗಳಂತಹ ಹೊಸ ಮಾಧ್ಯಮಗಳ ಬೆಳೆವಣಿಗೆ ಮತ್ತು ಅವುಗಳ ಜೊತೆಗಿನ ಸ್ಪರ್ಧೆ ಕಾರಣ ಎನ್ನಲಾಗಿದೆ.

ಆದರೆ ಪತ್ರಿಕೆಗಳು ಡೈನೋಸಾರ್‌ಗಳಂತೆ ಮರೆಯಾಗಿಬಿಡುವುವೇ? ಇದು ತುಸು ನಂಬಲಾಗದ ವಿಷಯ. ಮಾನವ ಸಮಾಜದಲ್ಲಿ ಬಳಕೆಯಲ್ಲಿರುವ ಪ್ರತಿಯೊಂದು ಮಾಧ್ಯಮವೂ, ಮತ್ತೊಂದು ಮಾಧ್ಯಮಕ್ಕೆ ಪೂರಕವಾಗಿ ಬೆಳೆದಿರುವುದನ್ನು ನಾವು ಕಾಣಬಹುದು. ಇದಕ್ಕೆ ವಿಶೇಷ ಅಧ್ಯಯನವೇನೂ ಬೇಕಿಲ್ಲ. ಉದಾಹರಣೆಗೆ, ಪತ್ರಿಕೆಗಳು ಬೆಳೆಯುತ್ತಿದ್ದ ಕಾಲದಲ್ಲಿ ಮೊದಲಿಗೆ ಬಂದ ರೇಡಿಯೋ ಎಲ್ಲರ ಕೈಗೆಟುಕುವಂತಾದಾಗ, ಪತ್ರಿಕೆಗಳು ಮರೆಯಾಗಲಿಲ್ಲ. ಆದರೆ ರೇಡಿಯೋಗಳ ಪ್ರಚಾರ, ರೇಡಿಯೋ ಕಾರ್ಯಕ್ರಮಗಳ ವಿಮರ್ಶೆ ಮಾಡುವ ಪರಿಪಾಠ ಬೆಳೆಯಿತು. ಅರ್ಥಾತ್‌, ರೇಡಿಯೊ ಮಾಧ್ಯಮ ಪತ್ರಿಕಾ ಮಾಧ್ಯಮದ ನೆರವು ಪಡೆಯಿತು ಎನ್ನಬಹುದು.

ಇಂದಿನ ಟೀವಿಯನ್ನೂ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಸುದ್ದಿಯನ್ನು ಬಿತ್ತರಿಸುವ ನ್ಯೂಸ್‌ ಚಾನಲ್‌ಗಳು ಪತ್ರಿಕೆಗಳನ್ನು ಅರೆದು ತಿಂದೆವೆಯೇ? ಇಲ್ಲ. ಇವುಗಳಲ್ಲಿಯೂ, ಅಂದಿನ ದಿನಪತ್ರಿಕೆಗಳ ಪ್ರಮುಖ ಸುದ್ದಿಗಳು ಬಿತ್ತರಗೊಳ್ಳುತ್ತವೆ. ಪತ್ರಿಕೆಗಳಲ್ಲಿ ಟೀವಿ ಚಾನೆಲ್‌ಗಳಲ್ಲಿನ ಕಾರ್ಯಕ್ರಮಗಳಿಗಾಗಿಯೇ ಪುಟವನ್ನು ಮೀಸಲಾಗಿಡಲಾಗುತ್ತದೆ.

ಮಾಧ್ಯಮಗಳ ನಡುವಣ ಈ ಪೂರಕ ಸಂಬಂಧವನ್ನು ಇಂದಿನ ಇಂಟರ್‌ನೆಟ್‌ ನಲ್ಲಿಯೂ ಕಾಣಬಹುದು. ಪತ್ರಿಕೆಗಳನ್ನಷ್ಟೆ ಪ್ರಕಟಿಸುತ್ತಿದ್ದವರು ಇಂದು ಇಂಟರ್‌ನೆಟ್‌ನಲ್ಲಿ ಈ-ಪತ್ರಿಕೆಯನ್ನು ಆರಂಭಿಸಿದ್ದಾರೆ. ಈ ಪತ್ರಿಕೆಗಳ ಸ್ವರೂಪ, ಮುದ್ರಿಸಿದ ಪತ್ರಿಕೆಗಳಿಗಿಂತಲೂ ತುಸು ಭಿನ್ನವಾಗಿತ್ತಷ್ಟೆ. ಅದು ಎಲ್ಲರಿಗೂ ಹಿತವಾಗಲಿಲ್ಲವೆಂದೋ ಏನೋ? ಮುದ್ರಿತ ಪತ್ರಿಕೆಯ ಸ್ವರೂಪವನ್ನೇ ತೋರುವ ಇ-ಪತ್ರಿಕೆಗಳು (ಉದಾ: ದಿ ಹಿಂದೂ, ಹಿಂದೂಸ್ತಾನ ಟೈಂಸ್‌ ಇತ್ಯಾದಿ) ಬಂದಿವೆ.  ಓದುವ ಸ್ಥಳ ಕಂಪ್ಯೂಟರ್‌ ಮಾನಿಟರ್‌ ಇರಬಹುದು. ಆದರೆ ಸಂಪೂರ್ಣ ಮುದ್ರಿತ ಪತ್ರಿಕೆಯಂತೆಯೇ ಇವು ಕಾಣುತ್ತವೆ.

ಚಾಪೆಯಂತೆ ಸುರುಳಿ ಸುತ್ತಿಡಬಲ್ಲ ಮಾನಿಟರ್‌ಗಳು ತಯಾರಾಗುತ್ತಿವೆ. ಕೆಲವೇ ವರುಷಗಳಲ್ಲಿ ಅವು ಮಾರುಕಟ್ಟೆಯಲ್ಲಿ ಲಭ್ಯವಾಗಬಲ್ಲುವು. ಆಗ ಬಹುಶಃ ಇಂಟರ್‌ನೆಟ್‌ ಪತ್ರಿಕೆಗಳನ್ನೂ ನಾವು ಸಂಡಾಸಿಗೆ ಕೊಂಡೊಯ್ಯಬಹುದು!

ಒಟ್ಟಾರೆ ಮಾಧ್ಯಮಗಳ ಬೆಳೆವಣಿಗೆಗೂ, ತಂತ್ರಜ್ಞಾನದಲ್ಲಿನ ಸುಧಾರಣೆಗೂ ನೇರ ಸಂಬಂಧವಿದೆ. ಮಾಧ್ಯಮಗಳು ಸಮುದಾಯಿಕ ಸಂವಹನದ ಸಾಧನಗಳಷ್ಟೆ.  ಒಂದು ಮತ್ತೊಂದಕ್ಕೆ ಪೂರಕವಾಗಿ ಇವು ಬೆಳೆಯುವುದು ಸಹಜ ಮತ್ತು ಅನಿವಾರ್ಯ ಎನ್ನಿಸುತ್ತದೆ.

~.~
  • ಕೊಳ್ಳೇಗಾಲ ರವರ ಬ್ಲಾಗ್
  • Login or register to post comments
  • 329 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 1, 2007 - 10:35am — ASHOKKUMAR

Re: ಪತ್ರಿಕೆಗಳಿಗೆ ದುರ್ದೆಸೆ ಬಂದಿದೆ ಎನ್ನುವುದು ಮಿಥ್ಯೆಯಲ್ಲವೇ?

ASHOKKUMAR's picture

"ಪತ್ರಿಕೆಗಳ ಪ್ರಸಾರ ಸಂಖ್ಯೆ ಏರುತ್ತಿದೆ" ಎನ್ನುವ ಈ ಸುದ್ದಿ ತುಣುಕು ಪರಿಸ್ಥಿತಿ ನಾವು ತಿಳಿದಷ್ಟು ನಿರಾಶಾದಾಯಕವಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಆದರೆ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ ಎನ್ನುವುದು ನಿಜ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
  • ಪತ್ರಿಕೆಯ ಸುಡೋಕು ಸ್ಥಳ
  • ವಿವೇಕ್ ಶಾನಭಾಗ್ ಸಂದರ್ಶನ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ಇನ್ಫೋಸಿಸ್‌ಗೆ ಮುತ್ತಿಗೆ
Syndicate content

ಲೇಖಕರು

ಕೊಳ್ಳೇಗಾಲ's picture

ಪರಿಚಯ

ಕನ್ನಡದಲ್ಲಿ ವಿಜ್ಞಾನವನ್ನು ತಿಳಿ ಹೇಳುವ ಹಾಗೂ ಸಂವಹಿಸುವ ಆಸಕ್ತಿಯಿಂದ ಕಳೆದ ಇಪ್ಪತ್ತು ವರುಷಗಳಿಂದ ಬರೆಹದಲ್ಲಿ ತೊಡಗಿದ್ದೇನೆ. ಕನ್ನಡ ಜಾನಪದ, ಭಾವಗೀತೆ, ಸಾಹಿತ್ಯ ಇತರೆ ಆಸಕ್ತಿಯ ವಿಷಯಗಳು. ಬಿ.ಜಿ.ಎಲ್‌. ಸ್ವಾಮಿ ಪ್ರೇರಕ ಶಕ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
  • Aravinda
    ಉ: ತಿಳಿ ಹಾಸ್ಯ ಮರೆತಿಲ್ಲ!
    August 30, 2008 - 8:34am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator